Jeremiah · chapter 51 · verse 31
Jeremiah 51:31 in Kannada
ಪಟ್ಟಣವು ಒಂದು ಕಡೆಯಲ್ಲಿ ಹಿಡಿಯಲ್ಪಟ್ಟಿದೆ ಎಂದೂ ದಾಟುವ ಸ್ಥಳಗಳು ವಶವಾದವೆಂದೂ ಬಿದಿರುಗಳು ಬೆಂಕಿಯಿಂದ ಸುಡಲ್ಪಟ್ಟಿವೆ ಎಂದೂ ಯುದ್ಧಸ್ಥರು ಗಾಬರಿ ಪಟ್ಟರೆಂದೂ
Pattanavu ondu kadeyalli hidiyalpattide endoo daatuva sthalagalu vashavaadavendoo bidirugalu benkiyinda sudalpattive endoo yuddhastharu gaabari pattarendoo
Jeremiah 51:31 in English
- King James Version (KJV)
- One post shall run to meet another, and one messenger to meet another, to shew the king of Babylon that his city is taken at [one] end,
- World English Bible (WEB)
- One runner will run to meet another, and one messenger to meet another, to show the king of Babylon that his city is taken on every quarter.
- American Standard Version (ASV)
- One post shall run to meet another, and one messenger to meet another, to show the king of Babylon that his city is taken on every quarter:
- Bible in Basic English (BBE)
- One man, running, will give word to another, and one who goes with news will be handing it on to another, to give word to the king of Babylon that his town has been taken from every quarter:
- Darby Translation (DBY)
- Courier runneth to meet courier, and messenger to meet messenger, to announce to the king of Babylon that his city is taken from end to end;
- Webster's Bible (WBS)
- One post shall run to meet another, and one messenger to meet another, to show the king of Babylon that his city is taken at [one] end,
- Young's Literal Translation (YLT)
- Runner to meet runner doth run, And announcer to meet announcer, To announce to the king of Babylon, For, captured hath been his city — at the extremity.
Read in context
- 29ಆಗ ದೇಶವು ಕದಲಿ ವೇದನೆಪಡುವದು; ಬಾಬೆಲಿನ ದೇಶವನ್ನು ನಿವಾಸಿ ಇಲ್ಲದೆ ಹಾಳುಮಾಡುವ ವಿಷಯವಾಗಿ ಬಾಬೆಲಿಗೆ ವಿರೋಧವಾದ ಕರ್ತನ ಆಲೋಚನೆಗಳು ಮಾಡಲ್ಪಡು ವವು.
- 30ಬಾಬೆಲಿನ ಪರಾಕ್ರಮಶಾಲಿಗಳು ಯುದ್ಧ ಮಾಡುವದನ್ನು ಬಿಟ್ಟಿದ್ದಾರೆ; ಅವರ ಭದ್ರ ಸ್ಥಾನಗಳಲ್ಲಿ ನಿಲ್ಲುತ್ತಾರೆ; ಅವರ ಪರಾಕ್ರಮತನ ತಪ್ಪಿತು; ಅವರು ಹೆಂಗಸರಂತೆ ಅಬಲರಾದರು. ಅದರ ನಿವಾಸಗಳನ್ನು ಸುಟ್ಟಿದ್ದಾರೆ. ಅದರ ಅಗುಳಿಗಳು ಮುರಿಯಲ್ಪಟ್ಟಿವೆ.
- 31ಪಟ್ಟಣವು ಒಂದು ಕಡೆಯಲ್ಲಿ ಹಿಡಿಯಲ್ಪಟ್ಟಿದೆ ಎಂದೂ ದಾಟುವ ಸ್ಥಳಗಳು ವಶವಾದವೆಂದೂ ಬಿದಿರುಗಳು ಬೆಂಕಿಯಿಂದ ಸುಡಲ್ಪಟ್ಟಿವೆ ಎಂದೂ ಯುದ್ಧಸ್ಥರು ಗಾಬರಿ ಪಟ್ಟರೆಂದೂ
- 32ಬಾಬೆಲಿನ ಅರಸನಿಗೆ ತಿಳಿಸುವದಕ್ಕೆ ಓಡುವವನು ಓಡುವವನನ್ನೂ ತಿಳಿಸುವವನು ತಿಳಿಸುವವನನ್ನೂ ಎದುರುಗೊಳ್ಳುವದಕ್ಕೆ ಓಡುವರು.
- 33ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ತುಳಿಯುವ ವೇಳೆಯಲ್ಲಿ ಕಣವು ಹೇಗೋ, ಹಾಗೆಯೇ ಬಾಬೆಲಿನ ಮಗಳು ಇದ್ದಾಳೆ; ಇನ್ನು ಸ್ವಲ್ಪ ಹೊತ್ತಾದ ಮೇಲೆ ಅದಕ್ಕೆ ಸುಗ್ಗೀಕಾಲ ಬರುವದು.
Cross references
- 2 Chronicles 30:6 2 ಪೂರ್ವಕಾಲವೃತ್ತಾಂತ 30:6ಅದೇ ಪ್ರಕಾರ ದೂತರು ಅರಸನ ಕೈಯಿಂದಲೂ ಅವನ ಪ್ರಧಾನರ ಕೈಯಿಂದಲೂ ಪತ್ರಗಳನ್ನು ತಕ್ಕೊಂಡು ಅರಸನ ಅಪ್ಪಣೆಯ ಪ್ರಕಾರ ಸಮಸ್ತ ಇಸ್ರಾಯೇಲ್ ಯೆಹೂದ ದೇಶಗಳ ಮೇಲೆ ಹೋಗಿ--ಇಸ್ರಾಯೇಲ್ ಮಕ್ಕಳೇ, ಅಬ್ರಹಾಮ್ ಇಸಾಕ್ ಇಸ್ರಾಯೇಲ್ ಕರ್ತನಾದ ದೇವರ ಕಡೆಗೆ ತಿರುಗಿರಿ. ಆಗ ಆತನೂ ಅಶ್ಶೂರಿನ ಅರಸುಗಳ ಕೈಗೆ ತಪ್ಪಿಸಿಕೊಂಡ ನಿಮ್ಮ ಉಳಿದವರ ಬಳಿಗೆ ತಿರುಗುವನು.
- 2 Samuel 18:19–31 2 ಸಮುವೇಲನು 18:19–31ಆಗ ಚಾದೋಕನ ಮಗನಾದ ಅಹೀಮಾಚನುಕರ್ತನು ರಾಜನ ಶತ್ರುಗಳ ಮೇಲೆ ಹೇಗೆ ನ್ಯಾಯ ತೀರಿಸಿದ್ದಾನೆಂಬ ವರ್ತಮಾನಗಳನ್ನು ಅರಸನಿಗೆ ತಿಳಿ ಸುವ ಹಾಗೆ ನಾನು ಓಡಿಹೋಗುವದಕ್ಕೆ ಅಪ್ಪಣೆಯಾಗ ಬೇಕು ಅಂದನು. ಯೋವಾಬನು ಅವನಿಗೆ--ನೀನು ಈ ಹೊತ್ತು ವರ್ತಮಾನ ತಕ್ಕೊಂಡು ಹೋಗಬೇಡ; ಮತ್ತೊಂದು ದಿವಸ ವರ್ತಮಾನ ತಕ್ಕೊಂಡು ಹೋಗ ಬಹುದು. ಅರಸನ ಮಗನು ಸತ್ತದ್ದರಿಂದ ಈ ಹೊತ್ತು ನೀನು ವರ್ತಮಾನ ತಕ್ಕೊಂಡು ಹೋಗ ಬೇಡ ಅಂದನು. ಯೋವಾಬನು ಕೂಷ್ಯನಿಗೆ--ನೀನು ಹೋಗಿ ನೋಡಿದ್ದನ್ನು ಅರಸನಿಗೆ ತಿಳಿಸು ಅಂದನು. ಕೂಷ್ಯನು ಯೋವಾಬನಿಗೆ ಅಡ್ಡಬಿದ್ದು ಓಡಿಹೋದನು. ಆಗ ಚಾದೋಕನ ಮಗನಾದ ಅಹೀಮಾಚನು ಯೋವಾಬನಿಗೆ--ನಾನು ಕೂಷ್ಯನ ಹಿಂದೆ ಓಡಿಹೋಗುವ ಹಾಗೆ ಹೇಗಾದರೂ ಅಪ್ಪಣೆ ಕೊಡಬೇಕು ಅಂದನು. ಅದಕ್ಕೆ ಯೋವಾಬನು--ನನ್ನ ಮಗನೇ, ನಿನಗೆ ವರ್ತಮಾನ ಇಲ್ಲದಿರುವಾಗ ನೀನು ಓಡುವದು ಯಾಕೆ ಅಂದನು. ಅವನು ಹೇಗಾ ದರೂ ಓಡಿಹೋಗುತ್ತೇನೆ ಅಂದಾಗ ಓಡು ಅಂದನು. ಆಗ ಅಹೀಮಾಚನು ಬೈಲು ಮಾರ್ಗವಾಗಿ ಓಡಿ ಕೂಷ್ಯನನ್ನು ದಾಟಿಹೋದನು. ಆದರೆ ದಾವೀದನು ಎರಡು ಬಾಗಲುಗಳ ಮಧ್ಯ ದಲ್ಲಿ ಕುಳಿತಿದ್ದನು. ಕಾವಲುಗಾರನು ಗೋಪುರದ ಮಾಳಿಗೆಯ ಮೇಲೆ ಏರಿ ಕಣ್ಣುಗಳನ್ನೆತ್ತಿ ನೋಡಲಾಗಿ ಇಗೋ, ಒಬ್ಬ ಮನುಷ್ಯನು ಒಂಟಿಯಾಗಿ ಓಡಿ ಬರು ತ್ತಿದ್ದನು. ಆಗ ಕಾವಲುಗಾರನು ಕೂಗಿ ಅರಸನಿಗೆ ತಿಳಿಸಿದನು. ಅರಸನು--ಅವನು ಒಬ್ಬನಾಗಿ ಬಂದರೆ ಅವನ ಬಾಯಿಯಲ್ಲಿ ವರ್ತಮಾನ ಇರುವದು ಅಂದನು. ಅವನು ಬಂದು ಸವಿಾಪಿಸಿದನು. ಕಾವ ಲುಗಾರನು ಬೇರೊಬ್ಬನು ಓಡಿ ಬರುವದನ್ನು ಕಂಡು ಬಾಗಲು ಕಾಯುವವನನ್ನು ಕರೆದು--ಇಗೋ, ಮತ್ತೊ ಬ್ಬನು ಒಂಟಿಯಾಗಿ ಓಡಿ ಬರುತ್ತಿದ್ದಾನೆ ಅಂದನು. ಅದಕ್ಕೆ ಅರಸನು--ಅವನು ಸಹ ವರ್ತಮಾನ ತಕ್ಕೊಂಡು ಬರುತ್ತಾನೆ ಅಂದನು. ಕಾವಲುಗಾರನುಮೊದಲನೆಯವನ ಓಟವು ಚಾದೋಕನ ಮಗನಾದ ಅಹೀಮಾಚನ ಓಟದ ಹಾಗೆ ಇರುವದೆಂದು ನನಗೆ ಕಾಣುತ್ತದೆ ಅಂದನು. ಅದಕ್ಕೆ ಅರಸನು--ಅವನು ಒಳ್ಳೆಯವನು, ಒಳ್ಳೇ ವರ್ತಮಾನವನ್ನು ತರುತ್ತಾನೆ ಅಂದನು. ಆಗ ಅಹೀಮಾಚನು ಕೂಗಿ ಅರಸನಿಗೆಎಲ್ಲವೂ ಕ್ಷೇಮ ಎಂದು ಹೇಳಿ ಅರಸನ ಮುಂದೆಅರಸನಾದ ನನ್ನ ಒಡೆಯನಿಗೆ ವಿರೋಧವಾಗಿ ತಮ್ಮ ಕೈಗಳನ್ನೆತ್ತಿದ ಜನರನ್ನು ಒಪ್ಪಿಸಿಕೊಟ್ಟ ನಿನ್ನ ದೇವರಾದ ಕರ್ತನು ಸ್ತುತಿಸಲ್ಪಡಲಿ ಅಂದನು. ಅರಸನು-- ಯೌವನಸ್ಥನಾದ ಅಬ್ಷಾಲೋಮನು ಕ್ಷೇಮವೋಎಂದು ಕೇಳಿದನು. ಅದಕ್ಕೆ ಅಹೀಮಾಚನು ಪ್ರತ್ಯುತ್ತರ ವಾಗಿ--ಯೋವಾಬನು ಅರಸನ ಸೇವಕನನ್ನು ನಿನ್ನ ಸೇವಕನಾದ ನನ್ನನ್ನು ಕಳುಹಿಸಿದಾಗ ದೊಡ್ಡ ಸಮೂಹ ವನ್ನು ಕಂಡೆನು. ಆದರೆ ಅದು ಏನೋ ನಾನರಿಯೆ ಅಂದನು. ಅರಸನು--ನೀನು ಇತ್ತ ಬಂದು ನಿಲ್ಲು ಅಂದನು. ಅವನು ಅತ್ತ ಹೋಗಿ ನಿಂತನು; ಆಗ ಇಗೋ, ಕೂಷ್ಯನು ಬಂದನು. ಕೂಷ್ಯನು--ಅರಸ ನಾದ ನನ್ನ ಯಜಮಾನನಿಗೆ ವರ್ತಮಾನ ಉಂಟು. ಏನಂದರೆ, ಕರ್ತನು ಈ ಹೊತ್ತು ನಿನಗೆ ವಿರೋಧವಾಗಿ ಎದ್ದು ಎಲ್ಲರಿಗೂ ಮುಯ್ಯಿಗೆ ಮುಯ್ಯಿ ತೀರಿಸಿದ್ದಾನೆ ಅಂದನು.
- Daniel 5:30 ದಾನಿಯೇಲನು 5:30ಅದೇ ರಾತ್ರಿಯಲ್ಲಿ ಕಸ್ದೀಯರ ಅರಸನಾದ ಬೇಲ್ಯಚ್ಚರನು ಕೊಲ್ಲಲ್ಪಟ್ಟನು.ಮೇದ್ಯಯನಾದ ದಾರ್ಯಾವೆಷನು ಅರವತ್ತೆರಡು ವರುಷದವನಾಗಿ ರಾಜ್ಯವನ್ನು ವಶಪಡಿಸಿಕೊಂಡನು.
- Jeremiah 50:43 ಯೆರೆಮೀಯ 50:43ಬಾಬೆಲಿನ ಅರಸನು ಅವರ ಸುದ್ದಿಯನ್ನು ಕೇಳಿದ್ದಾನೆ. ಅವನ ಕೈಗಳು ನಿತ್ರಾಣವಾದವು. ಸಂಕಟವೂ ಹೆರುವ ಸ್ತ್ರೀಯ ಹಾಗೆ ನೋವೂ ಅವನನ್ನು ಹಿಡಿದವು.
- Esther 8:14 ಎಸ್ತೇರಳು 8:14ಅಂಚೆಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಓಡಿಸಲ್ಪಟ್ಟ ಕಾರಣ ಹೇಸರ ಕತ್ತೆಗಳ ಮೇಲೆಯೂ ವೇಗವಾದ ಒಂಟೆಗಳ ಮೇಲೆಯೂ ಹೊರಟರು. ಈ ಆಜ್ಞೆಯು ಶೂಷನಿನ ಅರಮನೆಯಲ್ಲಿ ಕೊಡಲ್ಪಟ್ಟಿತು.
- Jeremiah 4:20 ಯೆರೆಮೀಯ 4:20ನಾಶ ನದ ಮೇಲೆ ನಾಶನವು ಕೂಗಲ್ಪಟ್ಟಿದೆ, ದೇಶವೆಲ್ಲಾ ಹಾಳಾಯಿತು; ಫಕ್ಕನೆ ನನ್ನ ಗುಡಾರಗಳೂ ಕ್ಷಣ ಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು.
- Isaiah 47:11–13 ಯೆಶಾಯ 47:11–13ಆದದರಿಂದ ನೀನು ಮಂತ್ರಿಸಿ ನಿವಾರಿಸ ಲಾರದ ಕೇಡು ನಿನ್ನ ಮೇಲೆ ಬರುವದು. ನೀನು ಪರಿಹರಿಸಲಾಗದ ವಿಪತ್ತು ನಿನ್ನ ಮೇಲೆ ಬೀಳುವದು; ನಿನಗೆ ತಿಳಿಯದ ನಾಶನವು ಪಕ್ಕನೆ ನಿನ್ನ ಮೇಲೆ ಬರುವದು. ನಿನ್ನ ಮಾಟಗಳ ಸಂಗಡ ನಿಂತುಕೋ ನಿನ್ನ ಯೌವನದಾರಭ್ಯ ಬೇಸತ್ತು ಅಭ್ಯಾಸಿಸಿರುವ ನಿನ್ನ ಮಂತ್ರತಂತ್ರಗಳನ್ನೂ ನಿನ್ನ ಮಾಟಗಳನ್ನೂ ಲೆಕ್ಕವಿಲ್ಲದೆ ಪ್ರಯೋಗಿಸು; ಇದರಿಂದ ಒಂದು ವೇಳೆ ನಿನಗೆ ಲಾಭವಾದೀತು. ಒಂದು ವೇಳೆ ನೀನು ಎದು ರಾಗಿ ನಿಲ್ಲಬಹುದು. ನೀನು ನಿನ್ನ ಬಹಳವಾದ ಆಲೋಚನೆಗಳಿಂದ ಆಯಾಸಗೊಂಡಿದ್ದೀ. ಖಗೋಲಜ್ಞರು, ಜೋಯಿಸರು, ಪಂಚಾಂಗದವರು ಇವರೆ ಲ್ಲರೂ ನಿಂತುಕೊಂಡು ನಿನಗೆ ಬರುವ ವಿಪತ್ತುಗಳಿಂದ ನಿನ್ನನ್ನು ರಕ್ಷಿಸಲಿ.
- Esther 8:10 ಎಸ್ತೇರಳು 8:10ಅವನು ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆದು ಅರಸನ ಉಂಗುರದಿಂದ ಮುದ್ರೆ ಹಾಕಿ ಪತ್ರಗಳನ್ನು, ಕುದುರೆಗಳನ್ನು, ಸವಾರಿ ಹತ್ತಿ ಕೊಂಡಿದ್ದ ಅಂಚೆಯವರ ಮೂಲಕ ಹೇಸರ ಕತ್ತೆಗಳ ಮೇಲೆಯೂ ಒಂಟೆಗಳ ಮೇಲೆಯೂ ವೇಗವಾಗಿ ಓಡುವ ಎಳೇ ಒಂಟೆಗಳ ಮೇಲೆಯೂ ಕಳುಹಿಸಿದನು.
- 1 Samuel 4:12–18 1 ಸಮುವೇಲನು 4:12–18ಅದೇ ದಿವಸದಲ್ಲಿ ಬೆನ್ಯಾವಿಾನ್ಯನಾದ ಒಬ್ಬ ಮನುಷ್ಯನು ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ತಲೆಯ ಮೇಲೆ ಮಣ್ಣುಹಾಕಿಕೊಂಡು ಯುದ್ಧರಂಗ ದಿಂದ ಶೀಲೋವಿಗೆ ಓಡಿಬಂದನು. ಅವನು ಬರು ವಾಗ ಇಗೋ, ಏಲಿಯು ದೇವರ ಮಂಜೂಷಕ್ಕೋಸ್ಕರ ತನ್ನ ಹೃದಯವು ನಡುಗುತ್ತಾ ಇರುವದರಿಂದ ಆಸನದ ಮೇಲೆ ಮಾರ್ಗದ ಬಳಿಯಲ್ಲಿ ನಿರೀಕ್ಷಿಸುತ್ತಾ ಕುಳಿತಿ ದ್ದನು. ಊರಲ್ಲಿ ವರ್ತಮಾನ ತಿಳಿಸಲು ಆ ಮನು ಷ್ಯನು ಪಟ್ಟಣದಲ್ಲಿ ಪ್ರವೇಶಿಸಿದಾಗ ಪಟ್ಟಣವೆಲ್ಲಾ ಕೂಗಿತು. ಕೂಗುವ ಶಬ್ದವನ್ನು ಏಲಿಯು ಕೇಳಿ ದಾಗ--ಆ ಗುಂಪಿನ ಶಬ್ದ ಏನು ಅಂದನು. ಆಗ ಆ ಮನುಷ್ಯನು ತ್ವರೆಯಾಗಿ ಬಂದು ಏಲಿಗೆ ತಿಳಿಸಿದನು. ಏಲಿಯು ತೊಂಬತ್ತೆಂಟು ವರುಷ ಪ್ರಾಯದವ ನಾಗಿದ್ದನು. ಅವನು ನೋಡದ ಹಾಗೆ ಅವನ ಕಣ್ಣುಗಳು ಮೊಬ್ಬಾಗಿದ್ದವು. ಆ ಮನುಷ್ಯನು ಏಲಿಗೆ--ಯುದ್ಧರಂಗ ದಿಂದ ಬಂದವನು ನಾನೇ; ನಾನು ಈ ಹೊತ್ತು ಯುದ್ಧರಂಗದಿಂದ ಓಡಿಬಂದೆ ಅಂದನು. ಆಗ ಅವನು--ನನ್ನ ಮಗನೇ, ಅಲ್ಲಿ ನಡೆದ ವರ್ತಮಾನವೇನು ಅಂದನು. ಅದಕ್ಕೆ ವರ್ತಮಾನ ತಂದವನು ಪ್ರತ್ಯುತ್ತರವಾಗಿ--ಇಸ್ರಾಯೇಲ್ಯರು ಫಿಲಿಷ್ಟಿಯರ ಮುಂದೆ ಓಡಿಹೋದರು. ಜನರಲ್ಲಿ ದೊಡ್ಡ ಸಂಹಾರ ವಾಯಿತು; ನಿನ್ನ ಇಬ್ಬರು ಮಕ್ಕಳಾದ ಹೊಫ್ನಿಯೂ ಫೀನೆಹಾಸನೂ ಸತ್ತರು; ಇದಲ್ಲದೆ ದೇವರ ಮಂಜೂ ಷವು ಶತ್ರುವಶವಾಯಿತು ಅಂದನು. ಅವನು ದೇವರ ಒಡಂಬಡಿಕೆಯ ಮಂಜೂಷದ ಮಾತನ್ನು ಹೇಳಿದಾಗ ಏಲಿಯು ಆಸನದ ಮೇಲಿನಿಂದ ಬಾಗಲಿನ ಪಾರ್ಶ್ವವಾಗಿ ಹಿಂದಕ್ಕೆ ಬಿದ್ದು ಕುತ್ತಿಗೆ ಮುರಿದು ಸತ್ತನು. ಯಾಕಂದರೆ ಅವನು ಮುದುಕನಾಗಿಯೂ ಭಾರವುಳ್ಳ ವನಾಗಿಯೂ ಇದ್ದನು. ಅವನು ನಾಲ್ವತ್ತು ವರುಷ ಇಸ್ರಾಯೇಲಿಗೆ ನ್ಯಾಯತೀರಿಸಿದನು.
- Esther 3:13–15 ಎಸ್ತೇರಳು 3:13–15ಒಂದೇ ದಿನದಲ್ಲಿ ಅಂದರೆ ಅಡಾರ್ ತಿಂಗಳೆಂಬ ಹನ್ನೆರಡನೇ ತಿಂಗಳ ಹದಿಮೂರನೇ ದಿನದಲ್ಲಿ ಹಿರಿಯರೂ ಕಿರಿಯರೂ ಮಕ್ಕಳೂ ಸ್ತ್ರೀಯರೂ ಸಹಿತವಾಗಿ ಎಲ್ಲಾ ಯೆಹೂದ್ಯರನ್ನು ಸಂಹರಿಸುವದಕ್ಕೂ ಕೊಂದುಹಾಕು ವದಕ್ಕೂ ನಾಶಮಾಡುವದಕ್ಕೂ ಅವರ ಆಸ್ತಿಯನ್ನು ಕೊಳ್ಳೆಹೊಡೆಯುವದಕ್ಕೂ ಅರಸನ ಸಮಸ್ತ ಪ್ರಾಂತ್ಯಗಳಿಗೆ ಅಂಚೆಯವರ ಮೂಲಕ ಪತ್ರಿಕೆಗಳು ಕಳುಹಿಸ ಲ್ಪಟ್ಟವು. ಅವರು ಆ ದಿನಕ್ಕೆ ಸಿದ್ಧವಾಗಿರುವ ಹಾಗೆ ಪ್ರತಿ ಪ್ರಾಂತ್ಯದಲ್ಲಿ ಕಟ್ಟಳೆಯಾಗಿ ಬರೆದ ಪತ್ರಿಕೆಯು ಎಲ್ಲಾ ಜನಗಳಿಗೆ ಪ್ರಸಿದ್ಧ ಮಾಡಲ್ಪಟ್ಟಿತು.ಅಂಚೆ ಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು. ಶೂಷನ್ ಅರಮನೆಯಲ್ಲಿ ಆ ಆಜ್ಞೆಯು ಕೊಡಲ್ಪಟ್ಟಿತು. ಅರಸನೂ ಹಾಮಾನನೂ ಕುಡಿಯಲು ಕುಳಿತುಕೊಂಡರು. ಆದರೆ ಶೂಷನ್ ಪಟ್ಟಣವು ತಳ ಮಳಗೊಂಡಿತು. ಅಂಚೆ ಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು. ಶೂಷನ್ ಅರಮನೆಯಲ್ಲಿ ಆ ಆಜ್ಞೆಯು ಕೊಡಲ್ಪಟ್ಟಿತು. ಅರಸನೂ ಹಾಮಾನನೂ ಕುಡಿಯಲು ಕುಳಿತುಕೊಂಡರು. ಆದರೆ ಶೂಷನ್ ಪಟ್ಟಣವು ತಳ ಮಳಗೊಂಡಿತು.
- Jeremiah 50:24 ಯೆರೆಮೀಯ 50:24ನಾನು ಬೋನನ್ನು ಇಟ್ಟೆನು; ಹೌದು, ಬಾಬೆಲೇ ನೀನು ಹಿಡಿಯಲ್ಪಟ್ಟಿದ್ದೀ; ಆದರೆ ನಿನಗೆ ತಿಳಿಯದಿತ್ತು; ನೀನು ಕರ್ತನಿಗೆ ವಿರೋಧವಾಗಿ ಜಗಳವಾಡಿದ್ದ ರಿಂದಲೇ ಸಿಕ್ಕಿದ್ದೀ; ವಶಮಾಡಲ್ಪಟ್ಟಿದ್ದೀ;
- Job 9:25 ಯೋಬನು 9:25ಆದರೆ ನನ್ನ ದಿವಸಗಳು ಅಂಚೆಯವನಿಗಿಂತಲೂ ತ್ವರೆಯಾಗಿ. ಮೇಲನ್ನು ನೋಡದೆ ಅವು ಓಡಿಹೋಗು ತ್ತವೆ.
Original words (Hebrew)
- post · H7323רוּץ rûwts
- run · H7323רוּץ rûwts
- meet · H7125קִרְאָה qirʼâh
- another · H7323רוּץ rûwts
- messenger · H5046נָגַד nâgad
- meet · H7125קִרְאָה qirʼâh
- another · H5046נָגַד nâgad
- shew · H5046נָגַד nâgad
- king · H4428מֶלֶךְ melek
- Babylon · H894בָּבֶל Bâbel
- city · H5892עִיר ʻîyr
- taken · H3920לָכַד lâkad
- end · H7097קָצֶה qâtseh