Jeremiah · chapter 51 · verse 36
Jeremiah 51:36 in Kannada
ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನ ನಿಮಿತ್ತ ವ್ಯಾಜ್ಯವಾಡುತ್ತೇನೆ; ನಿನಗೋಸ್ಕರ ಪ್ರತಿದಂಡನೆ ಮಾಡುತ್ತೇನೆ; ಅದರ ಸಮುದ್ರವನ್ನು ಒಣಗಿಸುತ್ತೇನೆ; ಅದರ ಬುಗ್ಗೆಯನ್ನು ಬತ್ತಿ ಹೋಗುವಂತೆ ಮಾಡುತ್ತೇನೆ;
Aadadarinda kartanu heege heluttaane--igo, naanu ninna nimitta vyaajyavaaduttene; ninagoskara pratidandane maaduttene; adara samudravannu onagisuttene; adara buggeyannu batti hoguvante maaduttene;
Jeremiah 51:36 in English
- King James Version (KJV)
- Therefore thus saith the LORD; Behold, I will plead thy cause, and take vengeance for thee; and I will dry up her sea, and make her springs dry.
- World English Bible (WEB)
- Therefore the LORD says: “Behold, I will plead your cause, and take vengeance for you. I will dry up her sea, and make her fountain dry.
- American Standard Version (ASV)
- Therefore thus saith Jehovah: Behold, I will plead thy cause, and take vengeance for thee; and I will dry up her sea, and make her fountain dry.
- Bible in Basic English (BBE)
- For this reason the Lord has said: See, I will give support to your cause, and take payment for what you have undergone; I will make her sea dry, and her fountain without water.
- Darby Translation (DBY)
- Therefore thus saith Jehovah: Behold, I will plead thy cause, and take vengeance for thee; and I will dry up her sea, and make her spring dry.
- Webster's Bible (WBS)
- Therefore thus saith the LORD; Behold, I will plead thy cause, and take vengeance for thee; and I will dry up her sea, and make her springs dry.
- Young's Literal Translation (YLT)
- Therefore, thus said Jehovah: Lo, I am pleading thy cause, And I have avenged thy vengeance, And dried up its sea, and made its fountains dry.
Read in context
- 34ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನನ್ನನ್ನು ನುಂಗಿಬಿಟ್ಟಿದ್ದಾನೆ; ಜಜ್ಜಿದ್ದಾನೆ; ಬರಿದಾದ ಪಾತ್ರೆಯಾಗಿ ಮಾಡಿದ್ದಾನೆ; ಘಟಸರ್ಪದ ಹಾಗೆ ನುಂಗಿಬಿಟ್ಟಿದ್ದಾನೆ; ನನ್ನ ರಮ್ಯವಾದವುಗಳಿಂದ ತನ್ನ ಹೊಟ್ಟೆ ತುಂಬಿಸಿದ್ದಾನೆ; ನನ್ನನ್ನು ತಳ್ಳಿಬಿಟ್ಟಿದ್ದಾನೆ.
- 35ನನಗೂ ನನ್ನ ಶರೀರಕ್ಕೂ ಮಾಡಿರುವ ಬಲಾತ್ಕಾರವು ಬಾಬೆಲಿನ ಮೇಲೆ ಇರಲಿ ಎಂದು ಚೀಯೋನಿನ ನಿವಾಸಿ ಹೇಳುವನು; ಕಸ್ದೀಯರ ನಿವಾಸಿಗಳ ಮೇಲೆ ನನ್ನ ರಕ್ತವು ಇರಲಿ ಎಂದು ಯೆರೂಸಲೇಮು ಹೇಳುವದು.
- 36ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನ ನಿಮಿತ್ತ ವ್ಯಾಜ್ಯವಾಡುತ್ತೇನೆ; ನಿನಗೋಸ್ಕರ ಪ್ರತಿದಂಡನೆ ಮಾಡುತ್ತೇನೆ; ಅದರ ಸಮುದ್ರವನ್ನು ಒಣಗಿಸುತ್ತೇನೆ; ಅದರ ಬುಗ್ಗೆಯನ್ನು ಬತ್ತಿ ಹೋಗುವಂತೆ ಮಾಡುತ್ತೇನೆ;
- 37ಬಾಬೆಲ್ ದಿಬ್ಬೆಗಳಾಗುವದು; ನಿವಾಸಿಗಳು ಇಲ್ಲದೆ ನರಿಗಳ ವಾಸಸ್ಥಳವೂ ಆಶ್ಚರ್ಯವೂ ಹಾಳೂ ಸಿಳ್ಳಿಡುವಿಕೆಯೂ ಆಗುವದು.
- 38ಅವರು ಸಿಂಹಗಳ ಹಾಗೆ ಒಟ್ಟಾಗಿ ಗರ್ಜಿಸುವರು, ಸಿಂಹದ ಮರಿಗಳ ಹಾಗೆ ಶಬ್ದ ಮಾಡುವರು.
Cross references
- Romans 12:19 ರೋಮಾಪುರದವರಿಗೆ 12:19ಅತಿ ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ--ಮುಯ್ಯಿಗೆ ಮುಯ್ಯಿ ತೀರಿಸು ವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ ಎಂಬದಾಗಿ ಬರೆದದೆ.
- Jeremiah 50:38 ಯೆರೆಮೀಯ 50:38ಬೇಗೆಯು ಅವರ ನೀರನ್ನೆಲ್ಲಾ ಹೀರಲಿ; ಅದು ಬತ್ತಿ ಹೋಗುವದು; ಅದು ವಿಗ್ರಹಗಳ ದೇಶವೇ, ಅವರು ವಿಗ್ರಹಗಳಿಂದ ಹುಚ್ಚರಾದರು.
- Psalm 140:12 ಕೀರ್ತನೆಗಳು 140:12ಕರ್ತನು ದೀನನಿಗೆ ವ್ಯಾಜ್ಯವನ್ನೂ ಬಡವರಿಗೆ ನ್ಯಾಯವನ್ನೂ ತೀರಿಸುವನೆಂದು ನಾನು ಬಲ್ಲೆನು.ನಿಶ್ಚಯವಾಗಿ ನೀತಿವಂತರು ನಿನ್ನ ಹೆಸರಿಗೆ ಉಪಕಾರ ಸ್ತುತಿಯನ್ನು ಮಾಡುವರು; ಯಥಾರ್ಥರು ನಿನ್ನ ಸನ್ನಿಧಿಯಲ್ಲಿ ವಾಸಿಸುವರು.
- Isaiah 44:27 ಯೆಶಾಯ 44:27ಅಗಾಧಕ್ಕೆ-- ಒಣಗಿಹೋಗು; ನಿನ್ನ ನದಿಗಳನ್ನು ಒಣಗಿಸಿಬಿಡುವೆನು ಎಂದು ಅನ್ನುವವನೂಕೋರೆಷನ ವಿಷಯ ವಾಗಿ--ಅವನು ನನ್ನ ಕುರುಬನು; ನನ್ನ ಇಚ್ಛೆಯನ್ನೆಲ್ಲಾ ಪೂರೈಸುವವನೂ ಯೆರೂಸಲೇಮಿಗೆ--ನೀನು ಕಟ್ಟಲ್ಪ ಡುವಿ; ದೇವಾಲಯಕ್ಕೆ--ನಿನ್ನ ಅಸ್ತಿವಾರವು ಹಾಕಲ್ಪಡು ವದೆಂದು ಅನ್ನುವವನು ನಾನೇ.
- Hebrews 10:30–31 ಇಬ್ರಿಯರಿಗೆ 10:30–31ಮುಯ್ಯಿ ತೀರಿಸುವದು ನನಗೆ ಸಂಬಂಧಪಟ್ಟದ್ದು, ನಾನೇ ಪ್ರತಿಫಲವನ್ನು ಕೊಡುವೆ ನೆಂದು ಹೇಳಿದ ಕರ್ತನನ್ನು ನಾವು ಬಲ್ಲೆವು; ಇದ ಲ್ಲದೆ--ಕರ್ತನು ತನ್ನ ಜನರಿಗೆ ನ್ಯಾಯತೀರಿಸುವ ನೆಂತಲೂ ಹೇಳಿಯದೆ. ಜೀವವುಳ್ಳ ದೇವರ ಕೈಯಲ್ಲಿ ಸಿಕ್ಕಿ ಬೀಳುವದು ಭಯಂಕರವಾದದ್ದು.
- Deuteronomy 32:43 ಧರ್ಮೋಪದೇಶಕಾಂಡ 32:43ಓ ಎಲ್ಲಾ ಜನಾಂಗಗಳೇ, ಆತನ ಜನರ ಸಂಗಡ ಹರ್ಷಿಸಿರಿ; ಆತನು ತನ್ನ ದಾಸರ ರಕ್ತಕ್ಕೋಸ್ಕರ ಮುಯ್ಯಿ ತೀರಿಸುತ್ತಾನೆ; ತನ್ನ ಶತ್ರುಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುತ್ತಾನೆ; ತನ್ನ ದೇಶಕ್ಕೋಸ್ಕರವೂ ತನ್ನ ಜನರಿಗೋಸ್ಕರವೂ ಕರುಣೆಯುಳ್ಳವನಾಗಿರುವನು ಎಂಬದೇ.
- Deuteronomy 32:35 ಧರ್ಮೋಪದೇಶಕಾಂಡ 32:35ಮುಯ್ಯಿಗೆ ಮುಯ್ಯಿ ಕೊಡುವದೂ ಪ್ರತಿಫಲ ಕೊಡುವದೂ ನನ್ನದೇ; ತಕ್ಕ ಕಾಲದಲ್ಲಿ ಅವರ ಕಾಲು ಜಾರುವದು; ಅವರ ಕಳವಳದ ದಿವಸವು ಸವಿಾಪ ವಾಗಿದೆ. ಅವರ ಮೇಲೆ ಬರುವವುಗಳು ಬೇಗ ಬರುತ್ತವೆ.
- Revelation 16:12 ಪ್ರಕಟನೆ 16:12ಆರನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಯೂಫ್ರೇಟೀಸ್ ಮಹಾನದಿಯ ಮೇಲೆ ಹೊಯ್ಯಲು ಮೂಡಣ ದಿಕ್ಕಿನಿಂದ ಬರುವ ರಾಜರಿಗೆ ಮಾರ್ಗವು ಸಿದ್ಧವಾಗುವಂತೆ ಅದರ ನೀರು ಬತ್ತಿ ಹೋಯಿತು.
- Isaiah 49:25–26 ಯೆಶಾಯ 49:25–26ಆದರೆ ಕರ್ತನು ಹೀಗ ನ್ನುತ್ತಾನೆ--ಶೂರನ ಸೆರೆಯವರು ತೆಗೆಯಲ್ಪಡುವರು; ಭಯಂಕರವಾದ ಕೊಳ್ಳೆಯು ಬಿಡಿಸಲ್ಪಡುವದು; ನಿನ್ನೊ ಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ ನಿನ್ನ ಮಕ್ಕಳನ್ನು ನಾನು ರಕ್ಷಿಸುವೆನು.ನಿನ್ನ ಹಿಂಸಕರಿಗೆ ಅವರ ಮಾಂಸವನ್ನೇ ಅವರಿಗೆ ತಿನ್ನಿಸುವೆನು ಮತ್ತು ಸಿಹಿಯಾದ ದ್ರಾಕ್ಷಾರಸವನ್ನು ಕುಡಿಯುವಂತೆ ಅವರು ತಮ್ಮ ಸ್ವಂತ ರಕ್ತವನ್ನೇ ಕುಡಿಯುವರು. ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋಚಕನೂ ಯಾಕೋಬ್ಯರ ಶೂರನೂ ಎಂದು ನರಜನ್ಮದವರೆ ಲ್ಲರಿಗೂ ಗೊತ್ತಾಗುವದು. ನಿನ್ನ ಹಿಂಸಕರಿಗೆ ಅವರ ಮಾಂಸವನ್ನೇ ಅವರಿಗೆ ತಿನ್ನಿಸುವೆನು ಮತ್ತು ಸಿಹಿಯಾದ ದ್ರಾಕ್ಷಾರಸವನ್ನು ಕುಡಿಯುವಂತೆ ಅವರು ತಮ್ಮ ಸ್ವಂತ ರಕ್ತವನ್ನೇ ಕುಡಿಯುವರು. ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋಚಕನೂ ಯಾಕೋಬ್ಯರ ಶೂರನೂ ಎಂದು ನರಜನ್ಮದವರೆ ಲ್ಲರಿಗೂ ಗೊತ್ತಾಗುವದು.
- Proverbs 22:23 ಜ್ಞಾನೋಕ್ತಿಗಳು 22:23ಕರ್ತನು ಅವರ ವ್ಯಾಜ್ಯವನ್ನು ನಡಿಸಿ ಸೂರೆ ಮಾಡಿದವರ ಪ್ರಾಣವನ್ನು ಸೂರೆಮಾಡುವನು.
- Jeremiah 50:33–34 ಯೆರೆಮೀಯ 50:33–34ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ-- ಇಸ್ರಾಯೇಲಿನ ಮಕ್ಕಳೂ ಯೆಹೂದನ ಮಕ್ಕಳೂ ಕೂಡ ಹಿಂಸಿಸಲ್ಪಟ್ಟರು; ಅವರನ್ನು ಸೆರೆಗೆ ಒಯ್ಯುವವ ರೆಲ್ಲರು ಅವರನ್ನು ಬಲವಾಗಿ ಹಿಡಿದು, ಕಳುಹಿಸಿ ಬಿಡಲೊಲ್ಲದೆ ಇದ್ದರು. ಅವರ ವಿಮೋಚಕನು ಬಲಿಷ್ಠನೇ, ಸೈನ್ಯಗಳ ಕರ್ತನು ಆತನ ಹೆಸರು; ಆತನು ದೇಶಕ್ಕೆ ಶಾಂತಿಯನ್ನು ಕೊಡುವ ಹಾಗೆಯೂ ಬಾಬೆಲಿನ ನಿವಾಸಿಗಳಿಗೆ ನಡುಗುವಿಕೆಯನ್ನು ಕೊಡುವ ಹಾಗೆಯೂ ಅವರ ವ್ಯಾಜ್ಯವನ್ನು ಪೂರ್ಣವಾಗಿ ತೀರಿಸುವನು.
- Isaiah 47:6–9 ಯೆಶಾಯ 47:6–9ನಾನು ನಿನ್ನ ಜನರ ಮೇಲೆ ರೋಷಗೊಂಡು, ನನ್ನ ಸ್ವಾಸ್ಥ್ಯವನ್ನು ಅಪವಿತ್ರ ಮಾಡಿ, ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಬಿಟ್ಟೆನು; ನೀನು ಅವರಿಗೆ ಕರುಣೆಯನ್ನು ತೋರಿಸದೆ ಮುದುಕರ ಮೇಲೆಯೂ ಬಹು ಭಾರವಾದ ನೊಗವನ್ನು ಹೊರಿ ಸಿದಿ. ನಾನು ಶಾಶ್ವತವಾಗಿ ರಾಣಿಯೆಂದು ನೀನು ಅಂದುಕೊಂಡಿದ್ದರಿಂದ ಈ ಸಂಗತಿಗಳನ್ನು ನಿನ್ನ ಹೃದಯ ದಲ್ಲಿಟ್ಟುಕೊಳ್ಳಲಿಲ್ಲ; ಇಲ್ಲವೆ ಅವರ ಅಂತ್ಯವನ್ನು ನೆನಸ ಲಿಲ್ಲ. ನಾನೇ ಇರುವವಳು ನನ್ನ ಹೊರತು ಇನ್ನು ಯಾರೂ ಇಲ್ಲ. ನಾನು ವಿಧವೆಯಾಗಿ ಕೂತುಕೊಳ್ಳು ವದಿಲ್ಲ; ಪುತ್ರಶೋಕವನ್ನು ಅನುಭವಿಸುವದಿಲ್ಲ ಎಂದು ಅಂದುಕೊಳ್ಳುವವಳೇ, ಭೋಗಾಸಕ್ತಳೇ, ನೆಮ್ಮದಿ ಯಾಗಿ ನೆಲೆಗೊಂಡಿರುವವಳೇ, ಈಗ ಇದನ್ನು ಕೇಳು. ಒಂದೇ ದಿನದೊಳಗೆ ಒಂದು ಕ್ಷಣದಲ್ಲೇ, ಪುತ್ರ ಶೋಕ ಮತ್ತು ವಿಧವಾ ಸ್ಥಿತಿಯು ಇವೆರಡೂ ನಿನಗೆ ಬರುವವು; ನಿನ್ನ ಮಂತ್ರಗಳು ಬಹಳವಾಗಿರುವದ ರಿಂದಲೂ ನಿನ್ನ ಮಾಟಗಳು ಹೆಚ್ಚಾಗಿರುವದರಿಂದಲೂ ಅವು ಸಂಪೂರ್ಣವಾಗಿ ನಿನ್ನ ಮೇಲೆ ಬರುವವು.