Revelation · chapter 16 · verse 12
Revelation 16:12 in Kannada
ಆರನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಯೂಫ್ರೇಟೀಸ್ ಮಹಾನದಿಯ ಮೇಲೆ ಹೊಯ್ಯಲು ಮೂಡಣ ದಿಕ್ಕಿನಿಂದ ಬರುವ ರಾಜರಿಗೆ ಮಾರ್ಗವು ಸಿದ್ಧವಾಗುವಂತೆ ಅದರ ನೀರು ಬತ್ತಿ ಹೋಯಿತು.
Aaraneya dootanu tanna paatreyalliddaddannu yoophretees mahaanadiya mele hoyyalu moodana dikkininda baruva raajarige maargavu siddhavaaguvante adara neeru batti hoyitu.
Revelation 16:12 in English
- King James Version (KJV)
- And the sixth angel poured out his vial upon the great river Euphrates; and the water thereof was dried up, that the way of the kings of the east might be prepared.
- World English Bible (WEB)
- The sixth poured out his bowl on the great river, the Euphrates. Its water was dried up, that the way might be prepared for the kings that come from the sunrise.
- American Standard Version (ASV)
- And the sixth poured out his bowl upon the great river, the [river] Euphrates; and the water thereof was dried up, that the way might be made ready for the kings that [come] from the sunrising.
- Bible in Basic English (BBE)
- And the sixth let what was in his vessel come out on the great river Euphrates; and it became dry, so that the way might be made ready for the kings from the east.
- Darby Translation (DBY)
- And the sixth poured out his bowl on the great river Euphrates; and its water was dried up, that the way of the kings from the rising of the sun might be prepared.
- Webster's Bible (WBS)
- And the sixth angel poured out his vial upon the great river Euphrates; and the water of it was dried up, that the way of the kings of the east might be prepared.
- Young's Literal Translation (YLT)
- And the sixth messenger did pour out his vial upon the great river, the Euphrates, and dried up was its water, that the way of the kings who are from the rising of the sun may be made ready;
Read in context
- 10ಐದನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಮೃಗದ ಆಸನದ ಮೇಲೆ ಹೊಯ್ಯಲು ಅದರ ರಾಜ್ಯವು ತುಂಬಾ ಕತ್ತಲಾಯಿತು; ಜನರು ತಮಗಾದ ನೋವಿನ ದೆಸೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು
- 11ತಮ್ಮ ಕೃತ್ಯಗಳ ವಿಷಯದಲ್ಲಿ ಮಾನಸಾಂತರ ಮಾಡಿ ಕೊಳ್ಳದೆ ತಮ್ಮ ನೋವಿನ ದೆಸೆಯಿಂದಲೂ ಹುಣ್ಣುಗಳ ದೆಸೆಯಿಂದಲೂ ಪರಲೋಕದೇವರನ್ನು ದೂಷಿಸಿದರು.
- 12ಆರನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಯೂಫ್ರೇಟೀಸ್ ಮಹಾನದಿಯ ಮೇಲೆ ಹೊಯ್ಯಲು ಮೂಡಣ ದಿಕ್ಕಿನಿಂದ ಬರುವ ರಾಜರಿಗೆ ಮಾರ್ಗವು ಸಿದ್ಧವಾಗುವಂತೆ ಅದರ ನೀರು ಬತ್ತಿ ಹೋಯಿತು.
- 13ಘಟಸರ್ಪದ ಬಾಯಿಂದಲೂ ಮೃಗದ ಬಾಯಿಂ ದಲೂ ಸುಳ್ಳು ಪ್ರವಾದಿಯ ಬಾಯಿಂದಲೂ ಕಪ್ಪೆಗಳಂ ತಿದ್ದ ಮೂರು ಅಶುದ್ಧಾತ್ಮಗಳು ಹೊರಗೆ ಬರುವದನ್ನು ನಾನು ಕಂಡೆನು.
- 14ಅವು ಮಹತ್ಕಾರ್ಯಗಳನ್ನು ಮಾಡುವ ದೆವ್ವಗಳ ಆತ್ಮಗಳೇ; ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕೆ ಭೂಲೋಕದ ಮತ್ತು ಪ್ರಪಂಚದ ಎಲ್ಲಾ ರಾಜರನ್ನು ಕೂಡಿಸುವದಕ್ಕಾಗಿ ಅವರ ಬಳಿಗೆ ಹೋಗುವವು.
Cross references
- Revelation 9:14 ಪ್ರಕಟನೆ 9:14ಅದು ತುತೂರಿಯನ್ನು ಹಿಡಿದಿದ್ದ ಆರನೆಯ ದೂತನಿಗೆ--ಯೂಫ್ರೇಟೀಸ್ ಮಹಾ ನದಿಯಲ್ಲಿ ಬಂಧಿಸಲ್ಪಟ್ಟಿರುವ ನಾಲ್ಕು ಮಂದಿ ದೂತರನ್ನು ಬಿಚ್ಚಿಬಿಡು ಎಂದು ಹೇಳಿತು.
- Jeremiah 51:36 ಯೆರೆಮೀಯ 51:36ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನ ನಿಮಿತ್ತ ವ್ಯಾಜ್ಯವಾಡುತ್ತೇನೆ; ನಿನಗೋಸ್ಕರ ಪ್ರತಿದಂಡನೆ ಮಾಡುತ್ತೇನೆ; ಅದರ ಸಮುದ್ರವನ್ನು ಒಣಗಿಸುತ್ತೇನೆ; ಅದರ ಬುಗ್ಗೆಯನ್ನು ಬತ್ತಿ ಹೋಗುವಂತೆ ಮಾಡುತ್ತೇನೆ;
- Isaiah 44:27 ಯೆಶಾಯ 44:27ಅಗಾಧಕ್ಕೆ-- ಒಣಗಿಹೋಗು; ನಿನ್ನ ನದಿಗಳನ್ನು ಒಣಗಿಸಿಬಿಡುವೆನು ಎಂದು ಅನ್ನುವವನೂಕೋರೆಷನ ವಿಷಯ ವಾಗಿ--ಅವನು ನನ್ನ ಕುರುಬನು; ನನ್ನ ಇಚ್ಛೆಯನ್ನೆಲ್ಲಾ ಪೂರೈಸುವವನೂ ಯೆರೂಸಲೇಮಿಗೆ--ನೀನು ಕಟ್ಟಲ್ಪ ಡುವಿ; ದೇವಾಲಯಕ್ಕೆ--ನಿನ್ನ ಅಸ್ತಿವಾರವು ಹಾಕಲ್ಪಡು ವದೆಂದು ಅನ್ನುವವನು ನಾನೇ.
- Isaiah 41:25 ಯೆಶಾಯ 41:25ಉತ್ತರ ದಿಕ್ಕಿನಿಂದ ಒಬ್ಬನನ್ನು ನಾನು ಎಬ್ಬಿಸಿದ್ದೇನೆ, ಸೂರ್ಯೋ ದಯದ ಕಡೆಯಿಂದ ಅವನು ನನ್ನ ಹೆಸರನ್ನು ಸ್ಮರಿಸು ವನು; ಅವನು ಜೇಡಿಮಣ್ಣಿನಂತೆಯೂ ಕುಂಬಾರನು ಮಣ್ಣನ್ನು ತುಳಿಯುವಂತೆಯೂ ಅಧಿಕಾರಸ್ಥರ ಮೇಲೆ ಬರುವನು.
- Jeremiah 50:38–40 ಯೆರೆಮೀಯ 50:38–40ಬೇಗೆಯು ಅವರ ನೀರನ್ನೆಲ್ಲಾ ಹೀರಲಿ; ಅದು ಬತ್ತಿ ಹೋಗುವದು; ಅದು ವಿಗ್ರಹಗಳ ದೇಶವೇ, ಅವರು ವಿಗ್ರಹಗಳಿಂದ ಹುಚ್ಚರಾದರು. ಆದದರಿಂದ ಅರಣ್ಯದ ಕಾಡು ಮೃಗಗಳು, ನರಿಗಳು ಕೂಡ ಅಲ್ಲಿ ವಾಸಮಾಡುವವು. ಗೂಬೆಗಳೂ ಸಹ ಅದರಲ್ಲಿ ವಾಸಮಾಡುವವು; ಅದು ಇನ್ನು ಮೇಲೆ ಎಂದೆಂದಿಗೂ ನಿವಾಸವಾಗುವದಿಲ್ಲ; ತಲತಲಾಂತರಗಳ ವರೆಗೂ ಯಾರೂ ಅದರಲ್ಲಿ ತಂಗುವದಿಲ್ಲ. ದೇವರು ಸೊದೋಮನ್ನೂ ಗೊಮೋರವನ್ನು ಅವುಗಳ ಸವಿಾಪದಲ್ಲಿದ್ದ ಪಟ್ಟಣಗಳನ್ನೂ ಕೆಡವಿಹಾಕಿದಾಗ ಆದ ಹಾಗೆ ಅಲ್ಲಿ ಯಾವ ಮನುಷ್ಯನಾದರೂ ವಾಸಮಾಡುವದಿಲ್ಲ; ಅದರಲ್ಲಿ ಯಾವ ನರಪುತ್ರನಾದರೂ ತಂಗುವದಿ ಲ್ಲವೆಂದು ಕರ್ತನು ಅನ್ನುತ್ತಾನೆ.
- Isaiah 42:15 ಯೆಶಾಯ 42:15ನಾನು ಬೆಟ್ಟ ಗುಡ್ಡಗಳನ್ನು ನಾಶಮಾಡಿ, ಅಲ್ಲಿಯ ಮೇವನ್ನು ಒಣಗಿಸಿ, ನದಿ ಗಳನ್ನು ದ್ವೀಪಗಳನ್ನಾಗಿಯೂ ಕೆರೆಗಳನ್ನು ಬತ್ತಿ ಹೋಗುವಂತೆಯೂ ಮಾಡುವೆನು.
- Isaiah 11:15 ಯೆಶಾಯ 11:15ಕರ್ತನು ಐಗುಪ್ತ ಸಮುದ್ರದ ನಾಲಿಗೆಯನ್ನು ಸಂಪೂರ್ಣವಾಗಿ ನಾಶಮಾಡುವನು; ಆತನು ತನ್ನ ಬಲವಾದ ಗಾಳಿಯಿಂದ ನದಿಯ ಮೇಲೆ ಕೈಯನ್ನು ಜಾಡಿಸಿ ಅದನ್ನು ಏಳು ಹೊಳೆಗಳಾಗಿ ಹೊಡೆದು ಮನುಷ್ಯರ ಕೆರಗಳು ನೆನೆಯದಂತೆ ದಾಟಿಸು ವನು.ಇದಲ್ಲದೆ ಇಸ್ರಾಯೇಲ್ಯರು ಐಗುಪ್ತದೇಶ ದಿಂದ ಹೊರಟುಬಂದ ಕಾಲದಲ್ಲಿ ಅವರಿಗೆ ಹೇಗೆ ಮಾರ್ಗವು ಇತ್ತೋ ಹಾಗೆಯೇ ಅಶ್ಶೂರದಿಂದ ತಪ್ಪಿಸಿ ಕೊಂಡು ಬರುವ ತನ್ನ ಉಳಿದ ಜನರಿಗೆ ವಿಶಾಲ ವಾದ ಮಾರ್ಗವು ಇರುವದು.
- Isaiah 46:11 ಯೆಶಾಯ 46:11ಮೂಡಲಿಂದ ಒಂದು ಕ್ರೂರವಾದ ಪಕ್ಷಿಯೂ ದೂರದೇಶದಿಂದ ನನ್ನ ಆಜ್ಞೆಯನ್ನು ನಡಿ ಸುವ ಮನುಷ್ಯನೂ ಬರಲಿ ಎಂದು ಕರೆದಿದ್ದೇನೆ; ಹೌದು, ನಾನು ನುಡಿದಿದ್ದೇನೆ, ಅದನ್ನು ನಾನು ಈಡೇರಿಸುವೆನು; ನಾನು ನಿರ್ಣಯಿಸಿದ್ದೇನೆ, ಅದನ್ನು ನಾನು ಮಾಡುವೆನು.
- Isaiah 41:2–3 ಯೆಶಾಯ 41:2–3ಮೂಡಣದಿಂದ ನೀತಿವಂತ ನನ್ನು ಎಬ್ಬಿಸಿ, ಅವನನ್ನು ತನ್ನ ಪಾದಸನ್ನಿಧಿಗೆ ಕರೆದು ಜನಾಂಗಗಳನ್ನು ಅವನ ಮುಂದೆ ಕೊಟ್ಟುಬಿಟ್ಟು ಅವ ನನ್ನು ರಾಜರ ಮೇಲೆ ಆಳುವದಕ್ಕೆ ಮಾಡಿದವನು ಯಾರು? ಅವನ ಕತ್ತಿಗೆ ದೂಳನ್ನಾಗಿಯೂ ಅವನ ಬಿಲ್ಲಿಗೆ ಹಾರಿ ಹೋಗುವ ಹೊಟ್ಟಿನಂತೆಯೂ ಅವ ರನ್ನು ಕೊಟ್ಟನು. ತಾನು ಎಂದೂ ಹೆಜ್ಜೆಯಿಡದ ಮಾರ್ಗದಲ್ಲಿ ಸುರಕ್ಷಿತವಾಗಿ ಆತನು ಅವರನ್ನು ಹಿಂದ ಟ್ಟುತ್ತಾ ಹೋದನು.
- Revelation 7:2 ಪ್ರಕಟನೆ 7:2ಇದಲ್ಲದೆ ಮತ್ತೊಬ್ಬ ದೂತನು ಜೀವವುಳ್ಳ ದೇವರ ಮುದ್ರೆಯನ್ನು ಹಿಡಿದುಕೊಂಡು ಮೂಡಲದಿಂದ ಏರಿ ಬರುವದನ್ನು ಕಂಡೆನು. ಅವನು ಭೂಮಿಯನ್ನೂ ಸಮುದ್ರವನ್ನೂ ಕೆಡಿಸುವ ಅಧಿಕಾರ ಹೊಂದಿದ ಆ ನಾಲ್ಕು ಮಂದಿ ದೂತರಿಗೆ--
- Revelation 17:15 ಪ್ರಕಟನೆ 17:15ಅವನು ನನಗೆ--ನೀನು ಕಂಡ ಆ ಜಾರಸ್ತ್ರೀಯು ಕೂತುಕೊಂಡಿರುವ ನೀರುಗಳು ಅಂದರೆ ಪ್ರಜೆಗಳೂ ಸಮೂಹಗಳೂ ಜನಾಂಗಗಳೂ ಭಾಷೆಗಳೂ ಆಗಿವೆ.
- Daniel 11:43–45 ದಾನಿಯೇಲನು 11:43–45ಬಂಗಾರ ಬೆಳ್ಳಿ ಬೊಕ್ಕಸಗಳ ಮೇಲೆಯೂ ಐಗುಪ್ತದ ಎಲ್ಲಾ ಅಮೂಲ್ಯವಸ್ತುಗಳ ಮೇಲೆಯೂ ಅವನಿಗೆ ಅಧಿಕಾರವಿರುವದು. ಲೂಬ್ಯರೂ ಐಥೋ ಪ್ಯರೂ ಅವನನ್ನು ಹಿಂಬಾಲಿಸುವರು. ಮೂಡಣ ದಿಂದಲೂ ಉತ್ತರದಿಂದಲೂ ಬರುವ ಸುದ್ದಿಗಳು ಅವನನ್ನು ಹೆದರಿಸುವವು. ಆದದರಿಂದ ಅವನು ಮಹಾ ಉಗ್ರನಾಗಿ ಅನೇಕರನ್ನು ಸಂಹರಿಸುವದಕ್ಕೂ ನಿರ್ಮೂಲ ಮಾಡುವದಕ್ಕೂ ಹೊರಡುವನು.ಅವನು ತನ್ನ ಅರಮನೆಯ ಗುಡಾರಗಳನ್ನು ಸಮು ದ್ರದ ನಡುವೆ ರಮ್ಯವಾದ ಪರಿಶುದ್ಧ ಪರ್ವತದಲ್ಲಿ ಹಾಕುವನು; ಆದರೂ ಅವನು ಕೊನೆಗಾಣುವನು. ಯಾರೂ ಅವನಿಗೆ ಸಹಾಯ ಮಾಡರು. ಅವನು ತನ್ನ ಅರಮನೆಯ ಗುಡಾರಗಳನ್ನು ಸಮು ದ್ರದ ನಡುವೆ ರಮ್ಯವಾದ ಪರಿಶುದ್ಧ ಪರ್ವತದಲ್ಲಿ ಹಾಕುವನು; ಆದರೂ ಅವನು ಕೊನೆಗಾಣುವನು. ಯಾರೂ ಅವನಿಗೆ ಸಹಾಯ ಮಾಡರು.
Original words (Greek)
- And · G2532καί kaí
- sixth · G1623ἕκτος héktos
- angel · G32ἄγγελος ángelos
- out · G1632ἐκχέω ekchéō
- his · G846αὐτός autós
- vial · G5357φιάλη phiálē
- upon · G1909ἐπί epí
- great · G3173μέγας mégas
- river · G4215ποταμός potamós
- Euphrates · G2166Εὐφράτης Euphrátēs
- and · G2532καί kaí
- water · G5204ὕδωρ hýdōr
- thereof · G846αὐτός autós
- up · G3583ξηραίνω xēraínō
- that · G2443ἵνα hína
- way · G3598ὁδός hodós
- kings · G935βασιλεύς basileús
- of · G575ἀπό apó
- east · G395ἀνατολή anatolḗ
- prepared · G2090ἑτοιμάζω hetoimázō