2 Chronicles · chapter 36 · verse 18
2 Chronicles 36:18 in Kannada
ಇದಲ್ಲದೆ ದೊಡ್ಡವೂ ಸಣ್ಣವೂ ಆದ ಕರ್ತನ ಮನೆಯ ಎಲ್ಲಾ ಸಾಮಾನುಗಳು ಕರ್ತನ ಆಲಯದ ಬೊಕ್ಕಸಗಳು ಅರಸನ ಬೊಕ್ಕಸಗಳು ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬೆಲಿಗೆ ತರಿಸಿದನು.
Idallade doddavoo sannavoo aada kartana maneya ellaa saamaanugalu kartana aalayada bokkasagalu arasana bokkasagalu avana pradhaanara bokkasagalu ivugalannellaa baabelige tarisidanu.
2 Chronicles 36:18 in English
- King James Version (KJV)
- And all the vessels of the house of God, great and small, and the treasures of the house of the LORD, and the treasures of the king, and of his princes; all [these] he brought to Babylon.
- World English Bible (WEB)
- All the vessels of God’s house, great and small, and the treasures of the LORD’s house, and the treasures of the king and of his princes, all these he brought to Babylon.
- American Standard Version (ASV)
- And all the vessels of the house of God, great and small, and the treasures of the house of Jehovah, and the treasures of the king, and of his princes, all these he brought to Babylon.
- Bible in Basic English (BBE)
- And all the vessels of the house of God, great and small, and the stored wealth of the Lord's house and the wealth of the king and his chiefs, he took away to Babylon.
- Darby Translation (DBY)
- And all the vessels of the house of God, great and small, and the treasures of the house of Jehovah, and the treasures of the king and of his princes, he brought all to Babylon.
- Webster's Bible (WBS)
- And all the vessels of the house of God, great and small, and the treasures of the house of the LORD, and the treasures of the king, and of his princes; all [these] he brought to Babylon.
- Young's Literal Translation (YLT)
- And all the vessels of the house of God, the great and the small, and the treasures of the house of Jehovah, and the treasures of the king and of his princes — the whole he hath brought in to Babylon.
Read in context
- 16ಆದರೆ ಕರ್ತನ ಕೋಪವು ತನ್ನ ಜನರಿಗೆ ವಿರೋಧ ವಾಗಿ ಏಳುವ ವರೆಗೂ ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ ಆತನ ವಾಕ್ಯಗಳನ್ನು ತಿರಸ್ಕರಿಸಿ ಆತನ ಪ್ರವಾದಿಗಳಿಗೆ ವಂಚನೆ ಮಾಡಿದರು.
- 17ಆದದರಿಂದ ಆತನು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದನು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಕತ್ತಿಯಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ ಕನ್ಯಾ ಸ್ತ್ರೀಯ ಮೇಲಾ ದರೂ ವೃದ್ಧನ ಮೇಲಾದರೂ ಅತೀ ವೃದ್ಧನ ಮೇಲಾ ದರೂ ಕನಿಕರಪಡಲಿಲ್ಲ. ಆತನು ಸಮಸ್ತವನ್ನು ಅವನ ಕೈಯಲ್ಲಿ ಒಪ್ಪಿಸಿದನು.
- 18ಇದಲ್ಲದೆ ದೊಡ್ಡವೂ ಸಣ್ಣವೂ ಆದ ಕರ್ತನ ಮನೆಯ ಎಲ್ಲಾ ಸಾಮಾನುಗಳು ಕರ್ತನ ಆಲಯದ ಬೊಕ್ಕಸಗಳು ಅರಸನ ಬೊಕ್ಕಸಗಳು ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬೆಲಿಗೆ ತರಿಸಿದನು.
- 19ಅವರು ದೇವರ ಆಲಯವನ್ನು ಸುಟ್ಟು ಬಿಟ್ಟು ಯೆರೂಸಲೇಮಿನ ಗೋಡೆಯನ್ನು ಕೆಡವಿ ಹಾಕಿ ಅದರ ಅರಮನೆಗಳನ್ನು ಸುಟ್ಟು ಬಿಟ್ಟು ಅದರ ಬೆಲೆಯುಳ್ಳ ಸಾಮಾನುಗಳನ್ನೆಲ್ಲಾ ಕೆಡಿಸಿದರು.
- 20ಇದ ಲ್ಲದೆ ಕತ್ತಿಗೆ ತಪ್ಪಿದವರನ್ನು ಅವನು ಬಾಬೆಲಿಗೆ ಒಯ್ದನು. ಅವರು ಅಲ್ಲಿ ಪಾರಸಿಯ ರಾಜ್ಯದ ಆಳ್ವಿಕೆಯ ಪರ್ಯಂತರ, ದೇಶವು ಅದರ ಸಬ್ಬತ್ತುಗಳನ್ನು ಅನುಭವಿ ಸುವ ಪರ್ಯಂತರ, ಯೆರೆವಿಾಯನ ಮುಖಾಂತರವಾಗಿ ಹೇಳಿದ ಕರ್ತನ ವಾಕ್ಯವು ಈಡೇರುವದಕ್ಕೆ ಅವನಿಗೂ ಅವನ ಮಕ್ಕಳಿಗೂ ಸೇವಕರಾಗಿದ್ದರು.
Cross references
- 2 Chronicles 36:10 2 ಪೂರ್ವಕಾಲವೃತ್ತಾಂತ 36:10ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ಒಂದು ವರುಷವು ತೀರಿದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಜನರನ್ನು ಕಳುಹಿಸಿ ಅವನನ್ನೂ ಕರ್ತನ ಆಲಯದ ಬೆಲೆಯುಳ್ಳ ಪಾತ್ರೆಗಳನ್ನೂ ಬಾಬೆ ಲಿಗೆ ತಕ್ಕೊಂಡು ತರಿಸಿಕೊಂಡು ಅವನ ಸಹೋದರ ನಾದ ಚಿದ್ಕೀಯನನ್ನು ಯೆಹೂದ ಯೆರೂಸಲೇಮಿನ ಮೇಲೆ ಅರಸನಾಗಿ ಮಾಡಿದನು.
- 2 Chronicles 36:7 2 ಪೂರ್ವಕಾಲವೃತ್ತಾಂತ 36:7ಇದಲ್ಲದೆ ನೆಬೂಕದ್ನೆಚ್ಚರನು ಕರ್ತನ ಮನೆಯ ಪಾತ್ರೆಗಳಲ್ಲಿ ಕೆಲವನ್ನು ಬಾಬೆಲಿಗೆ ತಕ್ಕೊಂಡು ಹೋಗಿ ಬಾಬೆಲಿ ನಲ್ಲಿರುವ ತನ್ನ ಮಂದಿರದಲ್ಲಿ ಇರಿಸಿದನು.
- 2 Kings 25:13–17 2 ಅರಸುಗಳು 25:13–17ಇದಲ್ಲದೆ ಕರ್ತನ ಮನೆಯಲ್ಲಿದ್ದ ಹಿತ್ತಾಳೆ ಸ್ತಂಭಗಳನ್ನೂ ಆಧಾರಗಳನ್ನೂ ಕರ್ತನ ಮನೆಯಲ್ಲಿದ್ದ ಹಿತ್ತಾಳೆ ಸಮುದ್ರವೆಂಬ ಪಾತ್ರೆ ಯನ್ನೂ ಕಸ್ದೀಯರು ಒಡೆದು ಹಾಕಿ ಅದರ ಹಿತ್ತಾಳೆ ಯನ್ನು ಬಾಬೆಲಿಗೆ ಒಯ್ದರು. ಮಡಕೆಗಳನ್ನೂ ಸಲಿಕೆ ಗಳನ್ನೂ ಕತ್ತರಿಗಳನ್ನೂ ಸೌಟುಗಳನ್ನೂ ಅವರು ಸೇವಿಸುತ್ತಿದ್ದ ಎಲ್ಲಾ ಹಿತ್ತಾಳೆಯ ಸಾಮಾನುಗಳನ್ನೂ ತಕ್ಕೊಂಡು ಹೋದರು. ಕಾವಲುಗಾರರ ಅಧಿಪತಿಯು ಅಗ್ನಿಪಾತ್ರೆಗಳನ್ನೂ ತಟ್ಟೆಗಳನ್ನೂ ಬಂಗಾರ ದವುಗಳಾದ ಬಂಗಾರವನ್ನೂ ಬೆಳ್ಳಿಯವುಗಳಾದ ಬೆಳ್ಳಿ ಯನ್ನೂ ತಕ್ಕೊಂಡನು. ಸೊಲೊಮೋನನು ಕರ್ತನ ಮನೆಗೋಸ್ಕರ ಮಾಡಿಸಿದ್ದ ಎರಡು ಸ್ತಂಭಗಳೂ ಸಮುದ್ರವೆನಿಸಿಕೊಂಡ ಪಾತ್ರೆಯೂ ಆಧಾರಗಳೂ ಈ ಎಲ್ಲಾ ಸಾಮಾನುಗಳ ತಾಮ್ರವು ತೂಕ ಮಾಡ ಲಾರದಷ್ಟಿತ್ತು. ಒಂದು ಸ್ತಂಭವು ಹದಿನೆಂಟು ಮೊಳ ಎತ್ತರವಾಗಿತ್ತು. ಅದರ ಮೇಲಿದ್ದ ಬೋದಿಗೆ ತಾಮ್ರ ದ್ದಾಗಿ ಮೂರು ಮೊಳ ಉದ್ದವಾಗಿತ್ತು. ಬೋದಿಗೆಯ ಸುತ್ತಲಿದ್ದ ಹೆಣೆತದ ಕೆಲಸವೂ ದಾಳಿಂಬರಗಳೂ ಎಲ್ಲಾ ತಾಮ್ರವಾಗಿತ್ತು. ಎರಡನೇ ಸ್ತಂಭಕ್ಕೆ ಇದರ ಹಾಗೆಯೇ ಹೆಣೆತದ ಕೆಲಸ ಉಂಟಾಗಿತ್ತು.
- Isaiah 39:6 ಯೆಶಾಯ 39:6ಇಗೋ, ನಿನ್ನ ಪೂರ್ವಿಕರ ಕಾಲದಿಂದ ಇಂದಿನ ವರೆಗೆ ನಿನ್ನ ಮನೆಯಲ್ಲಿ ಸಂಗ್ರಹವಾದ ದ್ದೆಲ್ಲವೂ ಬಾಬೆಲಿಗೆ ಒಯ್ಯಲ್ಪಡುವ ದಿವಸವು ಬರು ವದು. ಇಲ್ಲೇನೂ ಉಳಿಯುವದಿಲ್ಲ.
- Jeremiah 27:18–22 ಯೆರೆಮೀಯ 27:18–22ಆದರೆ ಅವರು ಪ್ರವಾದಿಗಳಾಗಿದ್ದರೆ, ದೇವರ ವಾಕ್ಯವು ಅವರ ಸಂಗಡ ಇದ್ದರೆ ಕರ್ತನ ಆಲಯದಲ್ಲಿಯೂ ಯೆಹೂ ದದ ಅರಸನ ಮನೆಯಲ್ಲಿಯೂ ಯೆರೂಸಲೇಮಿ ನಲ್ಲಿಯೂ ಉಳಿದ ಪಾತ್ರೆಗಳು ಬಾಬೆಲಿಗೆ ಹೋಗದ ಹಾಗೆ ಅವರು ಸೈನ್ಯಗಳ ಕರ್ತನಿಗೆ ವಿಜ್ಞಾಪನೆ ಮಾಡಲಿ. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂ ದದ ಅರಸನಾದ ಯೆಹೋಯಾಕೀಮನ ಮಗನಾದ ಯೆಕೊನ್ಯಯನನ್ನೂ ಯೆಹೂದದ ಮತ್ತು ಯೆರೂಸ ಲೇಮಿನ ಶ್ರೇಷ್ಠರೆಲ್ಲರನ್ನೂ ಯೆರೂಸಲೇಮಿನಿಂದ ಬಾಬೆಲಿಗೆ ಸೆರೆಯಾಗಿ ತಕ್ಕೊಂಡು ಹೋಗದಂಥ ಸ್ಥಂಭಗಳನ್ನು ಕುರಿತು ಸಮುದ್ರವನ್ನು ಕುರಿತು ಗದ್ದಿಗೆ ಗಳನ್ನು ಕುರಿತು ಈ ಪಟ್ಟಣದಲ್ಲಿ ಉಳಿದ ಬೇರೆ ಪಾತ್ರೆ ಗಳನ್ನು ಕುರಿತು ಸೈನ್ಯಗಳ ಕರ್ತನು ಹೇಳುವದೇನಂದರೆ-- ಕರ್ತನ ಆಲಯದಲ್ಲಿಯೂ ಯೆಹೂದದ ಮತ್ತು ಯೆರೂಸಲೇಮಿನ ಅರಸನ ಮನೆಯಲ್ಲಿಯೂ ಉಳಿದಿರುವ ಪಾತ್ರೆಗಳ ವಿಷಯವಾಗಿ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ಅವು ಬಾಬೆಲಿಗೆ ತರಲ್ಪಡುವವು; ನಾನು ಅವು ಗಳನ್ನು ವಿಚಾರಿಸುವ ದಿನದ ವರೆಗೆ ಅಲ್ಲಿಯೇ ಇರು ವವು. ಆಗ ನಾನು ಅವುಗಳನ್ನು ಗಮನಕ್ಕೆ ತಂದು ಈ ಸ್ಥಳಕ್ಕೆ ತಿರುಗಿ ತರುವೆನು ಎಂದು ಕರ್ತನು ಅನ್ನುತ್ತಾನೆ. ಅವು ಬಾಬೆಲಿಗೆ ತರಲ್ಪಡುವವು; ನಾನು ಅವು ಗಳನ್ನು ವಿಚಾರಿಸುವ ದಿನದ ವರೆಗೆ ಅಲ್ಲಿಯೇ ಇರು ವವು. ಆಗ ನಾನು ಅವುಗಳನ್ನು ಗಮನಕ್ಕೆ ತಂದು ಈ ಸ್ಥಳಕ್ಕೆ ತಿರುಗಿ ತರುವೆನು ಎಂದು ಕರ್ತನು ಅನ್ನುತ್ತಾನೆ.
- Zechariah 1:6 ಜೆಕರ್ಯ 1:6ಆದರೆ ನಾನು ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯ ಗಳೂ ನನ್ನ ನಿಯಮಗಳೂ ನಿಮ್ಮ ಪಿತೃಗಳಿಗೆ ಸೇರಲಿ ಲ್ಲವೋ? ಆಗ ಅವರು ತಿರುಗಿಕೊಂಡು--ಸೈನ್ಯಗಳ ಕರ್ತನು ಯೋಚಿಸಿದ ಹಾಗೆಯೇ ನಮ್ಮ ಮಾರ್ಗಗಳ ಪ್ರಕಾರವಾಗಿಯೂ ನಮ್ಮ ಕ್ರಿಯೆಗಳ ಪ್ರಕಾರವಾ ಗಿಯೂ ನಮಗೆ ಮಾಡಿದ್ದಾನೆಂದು ಹೇಳಿದರು ಎಂಬದು.
- 2 Kings 20:13–17 2 ಅರಸುಗಳು 20:13–17ಹಿಜ್ಕೀಯನು ಅವರ ಮಾತು ಕೇಳಿ ತನ್ನ ಎಲ್ಲಾ ಭಂಡಾರದ ಮನೆಯನ್ನೂ ಬೆಳ್ಳಿಯನ್ನೂ ಬಂಗಾರವನ್ನೂ ಸುಗಂಧಗಳನ್ನೂ ಒಳ್ಳೇ ತೈಲವನ್ನೂ ತನ್ನ ಆಯುಧ ಶಾಲೆಯನ್ನೂ ತನ್ನ ಬೊಕ್ಕಸಗಳಲ್ಲಿ ಸಿಕ್ಕಿದ್ದೆಲ್ಲವನ್ನೂ ಅವರಿಗೆ ತೋರಿಸಿದನು. ತನ್ನ ಮನೆ ಯಲ್ಲಿಯೂ ತನ್ನ ಎಲ್ಲಾ ರಾಜ್ಯದಲ್ಲಿಯೂ ಅವರಿಗೆ ತೋರಿಸದೆ ಇದ್ದದ್ದು ಒಂದಾದರೂ ಇರಲಿಲ್ಲ. ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ--ಆ ಮನುಷ್ಯರು ಏನು ಹೇಳಿದರು? ಅವರು ಎಲ್ಲಿಂದ ನಿನ್ನ ಬಳಿಗೆ ಬಂದರು ಅಂದನು. ಹಿಜ್ಕೀಯನು--ಅವರು ದೂರ ದೇಶದಿಂದ ಅಂದರೆ ಬಾಬೆಲಿನಿಂದ ನನ್ನ ಬಳಿಗೆ ಬಂದಿದ್ದಾರೆ ಅಂದನು. ಅವನು--ನಿನ್ನ ಮನೆಯಲ್ಲಿ ಅವರು ಏನು ನೋಡಿದರು ಅಂದನು. ಹಿಜ್ಕೀಯನು--ನನ್ನ ಮನೆಯಲ್ಲಿ ಇದ್ದ ಎಲ್ಲವನ್ನೂ ಅವರು ನೋಡಿದ್ದಾರೆ; ನನ್ನ ಬೊಕ್ಕಸಗಳಲ್ಲಿ ನಾನು ಅವರಿಗೆ ತೋರಿಸದೆ ಇದ್ದದ್ದು ಒಂದಾದರೂ ಇಲ್ಲ ಅಂದನು. ಆಗ ಯೆಶಾಯನು ಹಿಜ್ಕೀಯನಿಗೆ--ಕರ್ತನ ವಾಕ್ಯವನ್ನು ಕೇಳು. ಇಗೋ, ದಿನಗಳು ಬರುವವು; ಆಗ ನಿನ್ನ ಮನೆಯಲ್ಲಿ ಇರುವದೆಲ್ಲವೂ ನಿನ್ನ ತಂದೆಗಳು ಇಂದಿನ ವರೆಗೂ ಸಂಪಾದಿಸಿ ಇಟ್ಟದ್ದದ್ದೆಲ್ಲವೂ ಬಾಬೆಲಿಗೆ ಒಯ್ಯ ಲ್ಪಡುವದು. ಒಂದೂ ಉಳಿಯುವದಿಲ್ಲವೆಂದು ಕರ್ತನು ಹೇಳುತ್ತಾನೆ;
- Daniel 5:3 ದಾನಿಯೇಲನು 5:3ಆಗ ಅವರು ಯೆರೂಸಲೇಮಿನ ದೇವಾಲಯದೊಳಗಿಂದ ತೆಗೆದ ಬಂಗಾರದ ಪಾತ್ರೆ ಗಳನ್ನು ತಂದರು. ಅರಸನೂ ಅವನ ಪ್ರಭುಗಳೂ ಪತ್ನಿ ಮತ್ತು ಉಪಪತ್ನಿಯರೂ ಅವುಗಳಲ್ಲಿ ಕುಡಿದರು.
- Jeremiah 52:17–23 ಯೆರೆಮೀಯ 52:17–23ಇದಲ್ಲದೆ ಕರ್ತನ ಆಲಯದಲ್ಲಿದ್ದ ಹಿತ್ತಾಳೆಯ ಸ್ತಂಭಗಳನ್ನೂ ಗದ್ದಿಗೆಗಳನ್ನೂ ಕರ್ತನ ಆಲಯದಲ್ಲಿದ್ದ ಹಿತ್ತಾಳೆಯ ಸಮುದ್ರವನ್ನೂ ಕಸ್ದೀಯರು ಒಡೆದು ಅವುಗಳ ಹಿತ್ತಾಳೆಯನ್ನೆಲ್ಲಾ ಬಾಬೆಲಿಗೆ ತಕ್ಕೊಂಡು ಹೋದರು. ಗುಡಾಣಗಳನ್ನೂ ಸಲಿಕೆಗಳನ್ನೂ ಕತ್ತರಿಗಳನ್ನೂ ತಂಬಿಗೆಗಳನ್ನೂ ಸೌಟುಗಳನ್ನೂ ಸೇವೆಗೆ ಸಂಬಂಧವಾದ ಎಲ್ಲಾ ಹಿತ್ತಾಳೆಯ ಪಾತ್ರೆಗಳನ್ನೂ ತಕ್ಕೊಂಡರು. ಇದಲ್ಲದೆ ಬೋಗುಣಿಗಳನ್ನೂ ಅಗ್ನಿಪಾತ್ರೆಗಳನ್ನೂ ಬಟ್ಟಲುಗ ಳನ್ನೂ ಗುಡಾಣಗಳನ್ನೂ ದೀಪಸ್ತಂಭಗಳನ್ನೂ ಸೌಟುಗ ಳನ್ನೂ ಬಟ್ಟಲುಗಳನ್ನೂ ಬಂಗಾರದ್ದಾದರೆ, ಅದರ ಬಂಗಾರವನ್ನೂ ಬೆಳ್ಳಿಯದ್ದಾದರೆ, ಅದರ ಬೆಳ್ಳಿಯನ್ನೂ ಕಾವಲಿನ ಅಧಿಪತಿಯು ತಕ್ಕೊಂಡನು. ಅರಸನಾದ ಸೊಲೊಮೋನನು ಕರ್ತನ ಆಲಯದಲ್ಲಿ ಮಾಡಿಸಿದ ಎರಡು ಸ್ತಂಭಗಳನ್ನೂ ಒಂದು ಸಮುದ್ರವನ್ನೂ ಗದ್ದಿಗೆಗಳ ಕೆಳಗಿದ್ದ ಹನ್ನೆರಡು ಹಿತ್ತಾಳೆಯ ಎತ್ತುಗಳನ್ನೂ ತಕ್ಕೊಂಡನು; ಈ ಎಲ್ಲಾ ಪಾತ್ರೆಗಳಿಗೆ ಲೆಕ್ಕವಿಲ್ಲದಷ್ಟು ಹಿತ್ತಾಳೆ ತೂಕವಾಗಿತ್ತು. ಸ್ತಂಭಗಳ ವಿಷಯ, ಒಂದು ಸ್ತಂಭದ ಉದ್ದವು ಹದಿನೆಂಟು ಮೊಳವಾಗಿತ್ತು, ಹನ್ನೆರಡು ಮೊಳದ ಸರಿಗೆ ಅದನ್ನು ಸುತ್ತಿಕೊಂಡಿತು; ಅದರ ದಪ್ಪ ನಾಲ್ಕು ಬೆರಳು; ಅದು ಟೊಳ್ಳಾಗಿತ್ತು. ಅದರ ಮೇಲೆ ಹಿತ್ತಾಳೆಯ ಕುಂಭ ಇತ್ತು; ಒಂದು ಕುಂಭದ ಎತ್ತರವು ಐದು ಮೊಳವಾಗಿತ್ತು. ಮತ್ತು ಕುಂಭಗಳ ಮೇಲೆ ಸುತ್ತಲಾಗಿ ಜಾಲರು ಕೆಲಸವೂ ದಾಳಿಂಬರಗಳೂ ಇದ್ದವು; ಎಲ್ಲಾ ಹಿತ್ತಾಳೆಯೇ; ಎರಡನೇ ಸ್ತಂಭವೂ ದಾಳಿಂಬರಗಳೂ ಅದರಂತೆಯೇ ಇದ್ದವು; ಒಂದು ಕಡೆಗೆ ತೊಂಭತ್ತಾರು ದಾಳಿಂಬರಗಳೂ ಇದ್ದವು; ಜಾಲರು ಕೆಲಸದ ಮೇಲೆ ಸುತ್ತಲಾಗಿದ್ದ ದಾಳಿಂಬರಗಳೆಲ್ಲಾ ನೂರು.
Original words (Hebrew)
- vessels · H3627כְּלִי kᵉlîy
- house · H1004בַּיִת bayith
- God · H430אֱלֹהִים ʼĕlôhîym
- great · H1419גָּדוֹל gâdôwl
- small · H6996קָטָן qâṭân
- treasures · H214אוֹצָר ʼôwtsâr
- house · H1004בַּיִת bayith
- treasures · H214אוֹצָר ʼôwtsâr
- king · H4428מֶלֶךְ melek
- princes · H8269שַׂר sar
- brought · H935בּוֹא bôwʼ
- Babylon · H894בָּבֶל Bâbel