Jeremiah · chapter 52 · verse 27
Jeremiah 52:27 in Kannada
ಆಗ ಬಾಬೆಲಿನ ಅರಸನು ಅವರನ್ನು ಹೊಡಿಸಿ, ಹಮಾತ್ ದೇಶದ ರಿಬ್ಲದಲ್ಲಿ ಕೊಂದು ಹಾಕಿಸಿದನು. ಈ ಪ್ರಕಾರ ಯೆಹೂದನು ತನ್ನ ದೇಶದಿಂದ ಸೆರೆಯಾಗಿ ಒಯ್ಯಲ್ಪಟ್ಟನು.
Aaga baabelina arasanu avarannu hodisi, hamaat deshada ribladalli kondu haakisidanu. Ee prakaara yehoodanu tanna deshadinda sereyaagi oyyalpattanu.
Jeremiah 52:27 in English
- King James Version (KJV)
- And the king of Babylon smote them, and put them to death in Riblah in the land of Hamath. Thus Judah was carried away captive out of his own land.
- World English Bible (WEB)
- The king of Babylon struck them, and put them to death at Riblah in the land of Hamath. So Judah was carried away captive out of his land.
- American Standard Version (ASV)
- And the king of Babylon smote them, and put them to death at Riblah in the land of Hamath. So Judah was carried away captive out of his land.
- Bible in Basic English (BBE)
- And the king of Babylon put them to death at Riblah in the land of Hamath. So Judah was taken prisoner away from his land.
- Darby Translation (DBY)
- and the king of Babylon smote them, and put them to death at Riblah in the land of Hamath. Thus Judah was carried away captive out of his land.
- Webster's Bible (WBS)
- And the king of Babylon smote them, and put them to death in Riblah, in the land of Hamath. Thus Judah was carried away captive out of his own land.
- Young's Literal Translation (YLT)
- and the king of Babylon smiteth them, and putteth them to death in Riblah, in the land of Hamath, and he removeth Judah from off its own ground.
Read in context
- 25ಯುದ್ಧಸ್ಥರ ಮೇಲೆ ನೇಮಿಸಲ್ಪಟ್ಟಿದ್ದ ಒಬ್ಬ ಮನೇವಾರ್ತೆಯವನನ್ನೂ ಅರಸನ ಸನ್ನಿಧಾನದಲ್ಲಿ ನಿಂತವರೊಳಗೆ ಪಟ್ಟಣದಲ್ಲಿ ಸಿಕ್ಕಿದ ಏಳು ಮನುಷ್ಯರನ್ನೂ ದೇಶಸ್ಥರನ್ನೂ ದಂಡಿನವರ ಲೆಕ್ಕದಲ್ಲಿ ಸೇರಿಸಿದ ಸೈನ್ಯಾಧಿಪತಿಯ ಲೇಖಕನನ್ನೂ ಪಟ್ಟಣದ ಮಧ್ಯದಲ್ಲಿ ಸಿಕ್ಕಿದ ದೇಶಸ್ಥರಲ್ಲಿ ಅರುವತ್ತು ಮನುಷ್ಯರನ್ನೂ ಪಟ್ಟಣದೊಳಗಿಂದ ತಕ್ಕೊಂಡನು.
- 26ಇವರನ್ನು ಕಾವಲಿನ ಅಧಿಪತಿಯಾದ ನೆಬೂಜರ ದಾನನು ತಕ್ಕೊಂಡು ಬಾಬೆಲಿನ ಅರಸನ ಬಳಿಗೆ ರಿಬ್ಲಕ್ಕೆ ಒಯ್ದನು.
- 27ಆಗ ಬಾಬೆಲಿನ ಅರಸನು ಅವರನ್ನು ಹೊಡಿಸಿ, ಹಮಾತ್ ದೇಶದ ರಿಬ್ಲದಲ್ಲಿ ಕೊಂದು ಹಾಕಿಸಿದನು. ಈ ಪ್ರಕಾರ ಯೆಹೂದನು ತನ್ನ ದೇಶದಿಂದ ಸೆರೆಯಾಗಿ ಒಯ್ಯಲ್ಪಟ್ಟನು.
- 28ನೆಬೂಕ ದ್ನೆಚ್ಚರನು ಸೆರೆಯಾಗಿ ಒಯ್ದ ಜನರು ಇವರೇ--ಏಳನೇ ವರುಷದಲ್ಲಿ ಮೂರು ಸಾವಿರದ ಇಪ್ಪತ್ತು ಮೂರು ಯೆಹೂದ್ಯರು.
- 29ನೆಬೂಕದ್ನೆಚ್ಚರನ ಹದಿನೆಂಟನೇ ವರುಷದಲ್ಲಿ ಅವನು ಯೆರೂಸಲೇಮಿನಿಂದ ಎಂಟು ನೂರ ಮೂವತ್ತೆರಡು ಜನರನ್ನು ಒಯ್ದನು.
Cross references
- Isaiah 27:10 ಯೆಶಾಯ 27:10ಕೋಟೆಯ ಪಟ್ಟಣವಾಗಿದ್ದಾಗ್ಯೂ ಹಾಳಾಗಿ ಕಾಡಿನಂತೆ ಜನರಿಲ್ಲದೆ ಶೂನ್ಯ ನಿವಾಸಸ್ಥಾನವಾಗಿದೆ; ಅಲ್ಲಿ ಕರುಗಳು ಮೇದು ಮಲಗುವವು. ಅಲ್ಲಿನ ಚಿಗುರುಗಳನ್ನು ತಿಂದು ಬಿಡು ವವು.
- Ezekiel 8:11–18 ಯೆಹೆಜ್ಕೇಲನು 8:11–18ಇದಲ್ಲದೆ ಇಸ್ರಾಯೇಲಿನ ಮನೆತನ ದವರಲ್ಲಿ ಎಪ್ಪತ್ತು ಮಂದಿಯೂ ಅವರ ಮಧ್ಯದಲ್ಲಿ ಶಾಫಾನನ ಮಗನಾದ ಯಾಜನ್ಯನೂ ನಿಂತುಕೊಂಡಿ ದ್ದರು; ಪ್ರತಿಯೊಬ್ಬನ ಕೈಯಲ್ಲೂ ಅವನವನ ಧೂಪಾ ರತಿ ಇತ್ತು; ಧೂಪದ ಸುವಾಸನೆಯು ಮೇಘವಾಗಿ ಏರುತ್ತಿತ್ತು. ಆಗ ಆತನು ನನಗೆ ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರ ಪೂರ್ವಿಕರು ಕತ್ತಲೆ ಯಲ್ಲಿ ಪ್ರತಿಯೊಬ್ಬನೂ ತನ್ನ ಕೊಠಡಿಗಳಲ್ಲಿ ಚಿತ್ರಗಳನ್ನು ಮಾಡುವದನ್ನು ನೋಡಿದೆಯಾ?--ಕರ್ತನು ನಮ್ಮನ್ನು ನೋಡುವದಿಲ್ಲ, ಕರ್ತನು ಭೂಮಿಯನ್ನು ತೊರೆದು ಬಿಟ್ಟಿದ್ದಾನೆ ಎಂದು ಹೇಳುವರು. ಇದಲ್ಲದೆ ಆತನು ಹೇಳಿದ್ದೇನಂದರೆ--ಮತ್ತೊಂದು ಸಾರಿ ತಿರುಗಿಕೋ; ಅವರು ಮಾಡುವ ಇನ್ನೂ ಮಹಾ ಅಸಹ್ಯವಾದವು ಗಳನ್ನು ನೋಡುವಿ ಅಂದನು. ಆಗ ಅವನು ನನ್ನನ್ನು ಕರ್ತನ ಆಲಯದ ಉತ್ತರ ಕಡೆಗೆ ಎದುರಾಗಿ ಬಾಗಲಿದ್ದ ಕಡೆಗೆ ತಂದನು; ಇಗೋ, ಅಲ್ಲಿ ತಮ್ಮೂಜ್ಗೋಸ್ಕರ ಅಳುವ ಹೆಂಗಸರು ಕೂತಿದ್ದರು. ಆಮೇಲೆ ನನಗೆ ಆತನು, ಓ ನರಪುತ್ರನೇ, ನೋಡಿದಿಯೋ? ಮತ್ತೊಂದು ಸಾರಿ ತಿರುಗಿಕೋ ಇವುಗಳಿಗಿಂತ ಇನ್ನೂ ದೊಡ್ಡ ಅಸಹ್ಯವಾದವುಗಳನ್ನು ನೋಡುವಿ ಎಂದು ಹೇಳಿದನು. ಆಗ ಅವನು ನನ್ನನ್ನು ಕರ್ತನ ಆಲ ಯದ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋದನು. ಇಗೋ, ಕರ್ತನ ಮಂದಿರದ ಬಾಗಿಲಲ್ಲಿ ದ್ವಾರಾಂಗ ಳಕ್ಕೂ ಯಜ್ಞವೇದಿಗೂ ಮಧ್ಯದಲ್ಲಿ ಸುಮಾರು ಇಪ್ಪ ತ್ತೈದು ಮಂದಿಯು ಕರ್ತನ ಮಂದಿರಕ್ಕೆ ಬೆನ್ನು ಕೊಟ್ಟು, ಪೂರ್ವದಿಕ್ಕಿನ ಕಡೆಗೆ ತಮ್ಮ ಮುಖಗಳನ್ನು ತಿರು ಗಿಸಿ ಸೂರ್ಯ ನಮಸ್ಕಾರ ಮಾಡುತ್ತಿದ್ದರು. ಆಗ ಆತನು ನನಗೆ--ಓ ಮನುಷ್ಯಪುತ್ರನೇ, ನೋಡಿ ದೆಯಾ? ಅವರು ಇಲ್ಲಿ ಮಾಡುವ ಅಸಹ್ಯವಾದವುಗಳು ಯೆಹೂದನ ಮನೆತನದವರಿಗಲ್ಲವೇ? ಅವರು ದೇಶವನ್ನು ಹಿಂಸೆಯಿಂದ ತುಂಬಿಸಿದ್ದಲ್ಲದೆ ನನ್ನನ್ನು ಕೆಣಕಬೇಕೆಂದು ಮತ್ತೆ ಯತ್ನಿಸುತ್ತಿದ್ದಾರೆ. ನೋಡು, ಅವರ ಮೂಗಿಗೆ ಕೊಂಬೆಗಳನ್ನಿಟ್ಟು ಕೊಳ್ಳುತ್ತಾರೆ.ಆದದರಿಂದ ನಾನು ಸಹ ಉಗ್ರ ದಿಂದಲೇ ಇರುವೆನು. ನನ್ನ ಕಣ್ಣು ಕನಿಕರಿಸುವದೂ ಇಲ್ಲ, ನಾನು ಕಟಾಕ್ಷಿಸುವದೂ ಇಲ್ಲ, ಅವರು ನನ್ನ ಕಿವಿಗಳಲ್ಲಿ ಮಹಾಧ್ವನಿಯಿಂದ ಕಿರಿಚಿದರೂ ನಾನು ಕೇಳಿಸಿಕೊಳ್ಳುವದೂ ಇಲ್ಲ. ಆದದರಿಂದ ನಾನು ಸಹ ಉಗ್ರ ದಿಂದಲೇ ಇರುವೆನು. ನನ್ನ ಕಣ್ಣು ಕನಿಕರಿಸುವದೂ ಇಲ್ಲ, ನಾನು ಕಟಾಕ್ಷಿಸುವದೂ ಇಲ್ಲ, ಅವರು ನನ್ನ ಕಿವಿಗಳಲ್ಲಿ ಮಹಾಧ್ವನಿಯಿಂದ ಕಿರಿಚಿದರೂ ನಾನು ಕೇಳಿಸಿಕೊಳ್ಳುವದೂ ಇಲ್ಲ.
- Jeremiah 25:9–11 ಯೆರೆಮೀಯ 25:9–11ನೀವು ನನ್ನ ಮಾತುಗಳನ್ನು ಕೇಳದ ಕಾರಣ ಇಗೋ, ಕರ್ತನು ಹೇಳುವದೇನಂದರೆ--ನಾನು ಕಳು ಹಿಸಿ ಉತ್ತರ ದಿಕ್ಕಿನ ಗೋತ್ರಗಳೆಲ್ಲವನ್ನೂ ನನ್ನ ಸೇವಕ ನಾದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನೂ ತಕ್ಕೊಂಡು, ಈ ದೇಶಕ್ಕೆ ವಿರೋಧವಾಗಿಯೂ ಅದರ ನಿವಾಸಿಗಳಿಗೆ ವಿರೋಧವಾಗಿಯೂ ಸುತ್ತಲಿರುವ ಈ ಎಲ್ಲಾ ಜನಾಂಗಗಳಿಗೆ ವಿರೋಧವಾಗಿಯೂ ಕರೆಯಿಸಿ ಅವರನ್ನು ಸಂಪೂರ್ಣ ನಾಶಮಾಡಿ ಅವರನ್ನು ವಿಸ್ಮ ಯಕ್ಕೂ ಸಿಳ್ಳಿಡುವಿಕೆಗೂ ಗುರಿಯಾಗಿಯೂ ನಿತ್ಯ ಹಾಳಾಗಿಯೂ ಮಾಡುತ್ತೇನೆ. ಇದಲ್ಲದೆ ಉಲ್ಲಾಸದ ಶಬ್ದವನ್ನೂ ಸಂತೋಷದ ಸ್ವರವನ್ನೂ ಮದಲಿಂಗನ ಸ್ವರವನ್ನೂ ಮದಲಗಿತ್ತಿಯ ಸ್ವರವನ್ನೂ ಬೀಸುವ ಕಲ್ಲಿನ ಶಬ್ದವನ್ನೂ ದೀಪದ ಬೆಳಕನ್ನೂ ಅವರೊಳಗಿಂದ ತೆಗೆದುಹಾಕುತ್ತೇನೆ. ಈ ದೇಶವೆಲ್ಲಾ ಹಾಳಾಗಿ ವಿಸ್ಮಯಕ್ಕೆ ಗುರಿಯಾಗುವದು; ಈ ಜನಾಂಗಗಳು ಬಾಬೆಲಿನ ಅರಸನನ್ನು ಎಪ್ಪತ್ತು ವರುಷ ಸೇವಿಸುವರು.
- Ezekiel 33:28 ಯೆಹೆಜ್ಕೇಲನು 33:28ನಾನು ಈ ದೇಶವನ್ನು ಹಾಳುಪಾಳು ಮಾಡುವೆನು. ಅದರ ಬಲದ ಮಹತ್ತು ತೀರಿಹೋಗುವದು. ಇಸ್ರಾಯೇಲಿನ ಪರ್ವತಗಳು ಹಾದುಹೋಗುವವರಿಲ್ಲದೆ ಹಾಳಾಗು ವವು.
- Isaiah 32:13–14 ಯೆಶಾಯ 32:13–14ನನ್ನ ಜನರ ಭೂಮಿಯ ಮೇಲೂ ಹೌದು, ಉತ್ಸಾಹ ಪಟ್ಟಣದಲ್ಲಿ ಉಲ್ಲಾಸಗೊಳ್ಳುವ ಎಲ್ಲಾ ಮನೆ ಗಳ ಮೇಲೂ ಮುಳ್ಳು ಮತ್ತು ದತ್ತೂರಿ ಬೆಳೆಯುವವು. ಅರಮನೆಗಳು ಕೈಬಿಡಲ್ಪಡುವವು. (ವಿಸರ್ಜಿಸು ವವು) ಸಮೂಹಗಳಿಂದ ತುಂಬಿದ್ದ ಪಟ್ಟಣವು ನಿರ್ಜನ ವಾಗುವದು. ದುರ್ಗಗಳೂ ಕೋಟೆಗಳೂ ಯಾವಾ ಗಲೂ ಗುಹೆ (ಗವಿ)ಗಳಾಗಿಯೂ ಕಾಡುಕತ್ತೆಗಳಿಗೆ ಸಂತೋಷವಾಗಿಯೂ ಮಂದೆಗಳಿಗೆ ಮೇಯುವ ಸ್ಥಳವಾಗಿಯೂ ಇರುವವು.
- Isaiah 6:11–12 ಯೆಶಾಯ 6:11–12ಆಗ ನಾನು ಕರ್ತನೇ, ಇದು ಎಷ್ಟರ ವರೆಗೆ ಅಂದೆನು. ಅದಕ್ಕೆ ಆತನು--ಪಟ್ಟಣಗಳು ನಿವಾಸಿಗಳಿಲ್ಲದೆ, ಮನೆಗಳು ಮನುಷ್ಯ ನಿಲ್ಲದೆ ದೇಶವು ಸಂಪೂರ್ಣವಾಗಿ ಹಾಳಾಗುವ ವರೆಗೆ ಕರ್ತನು ಮನುಷ್ಯರನ್ನು ದೂರಮಾಡುವ ವರೆಗೂ ಅವರನ್ನು ದೇಶದ ಮಧ್ಯದಿಂದ ತೊಲಗಿಸಿಬಿಡುವ ವರೆಗೂ ಅದು ಇರುವುದು;ಆದರೆ ಹತ್ತನೆಯ ಪಾಲು ಉಳಿದಿದ್ದರೂ ಸಹ ಅದು ಹಿಂತಿರುಗುವದ ರಿಂದ ಅದನ್ನು ತಿಂದು ಬಿಡುವದು; ಏಲಾಮರವೂ ಓಕ್ ಮರವೂ ತಮ್ಮ ಎಲೆಗಳನ್ನು ಬಿಡುವಾಗ ತಮ್ಮ ಸಾರವು ತಮ್ಮೊಳಗೆ ಇರುವಂತೆಯೇ ಪರಿಶುದ್ಧ ಸಂತಾನವು ಅದರ ಆಧಾರವಾಗಿರುವದು ಎಂದು ಉತ್ತರ ಕೊಟ್ಟನು.
- Micah 4:10 ಮೀಕ 4:10ಚೀಯೋನಿನ ಕುಮಾರ್ತೆಯೇ, ಹೆರುವವಳಂತೆ ವೇದನೆಪಡು. ಈಗ ಪಟ್ಟಣದೊಳಗಿಂದ ಹೊರಟು ಹೊಲದಲ್ಲಿ ವಾಸಮಾಡಿ ಬಾಬೆಲಿಗೆ ಹೋಗುವಿ; ಅಲ್ಲಿ ನಿನಗೆ ಬಿಡುಗಡೆಯಾಗುವದು; ಅಲ್ಲಿ ಕರ್ತನು ನಿನ್ನನ್ನು ನಿನ್ನ ಶತ್ರುಗಳ ಕೈಯೊಳಗಿಂದ ವಿಮೋಚಿ ಸುವನು.
- 2 Kings 17:20 2 ಅರಸುಗಳು 17:20ಆದದರಿಂದ ಕರ್ತನು ಇಸ್ರಾಯೇಲಿನ ಸಂತತಿ ಯನ್ನೆಲ್ಲಾ ಅಲಕ್ಷ್ಯಮಾಡಿಬಿಟ್ಟು ಅವರನ್ನು ಕುಂದಿಸಿ ಅವರನ್ನು ತನ್ನ ಸಮ್ಮುಖದಿಂದ ತಳ್ಳಿಬಿಡುವ ವರೆಗೆ ಅವರನ್ನು ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟನು.
- 2 Kings 23:27 2 ಅರಸುಗಳು 23:27ಕರ್ತನು--ನಾನು ಇಸ್ರಾ ಯೇಲನ್ನು ತೆಗೆದು ಹಾಕಿದ ಹಾಗೆ ಯೆಹೂದವನ್ನು ಸಹ ನನ್ನ ಸಮ್ಮುಖದಿಂದ ತೆಗೆದುಹಾಕುವೆನು; ಇದ ಲ್ಲದೆ ನಾನು ಆದುಕೊಂಡ ಈ ಪಟ್ಟಣವಾದ ಯೆರೂ ಸಲೇಮನ್ನೂ ನನ್ನ ಹೆಸರು ಅಲ್ಲಿರುವದೆಂದು ನಾನು ಹೇಳಿದ ಮನೆಯನ್ನೂ ತೆಗೆದುಬಿಡುವೆನು ಅಂದನು.
- Deuteronomy 28:36 ಧರ್ಮೋಪದೇಶಕಾಂಡ 28:36ಕರ್ತನು ನಿನ್ನನ್ನೂ ನೀನು ನಿನ್ನ ಮೇಲೆ ಇರಿಸಿಕೊಳ್ಳುವ ಅರಸನನ್ನೂ ನೀನೂ ನಿನ್ನ ಪಿತೃಗಳೂ ಅರಿಯದ ಜನಾಂಗದ ಬಳಿಗೆ ಹೋಗ ಮಾಡುವನು; ಅಲ್ಲಿ ಮರವೂ ಕಲ್ಲೂ ಆಗಿರುವ ಬೇರೆ ದೇವರುಗಳನ್ನು ನೀನು ಸೇವಿಸುವಿ.
- Jeremiah 24:9–10 ಯೆರೆಮೀಯ 24:9–10ನಾನು ಅವರನ್ನು ಓಡಿಸಿಬಿಡುವ ಎಲ್ಲಾ ಸ್ಥಳಗಳಲ್ಲಿ ನಿಂದೆಗೂ ಗಾದೆಗೂ ಹಾಸ್ಯಕ್ಕೂ ಶಾಪಕ್ಕೂ ಗುರಿಮಾಡಿ ಅವರನ್ನು ಭೂಮಿಯ ಸಮಸ್ತ ರಾಜ್ಯಗಳಿಂದ ತೆಗೆದು ಕೇಡಿಗೆ ಒಪ್ಪಿಸುವೆನು.ನಾನು ಅವರಿಗೂ ಅವರ ತಂದೆಗಳಿಗೂ ಕೊಟ್ಟ ದೇಶದೊಳ ಗಿಂದ ಅವರು ನಾಶವಾಗುವ ವರೆಗೂ ಕತ್ತಿಯನ್ನೂ ಕ್ಷಾಮವನ್ನೂ ಜಾಡ್ಯವನ್ನೂ ಅವರಲ್ಲಿ ಕಳುಹಿಸುವೆನು. ನಾನು ಅವರಿಗೂ ಅವರ ತಂದೆಗಳಿಗೂ ಕೊಟ್ಟ ದೇಶದೊಳ ಗಿಂದ ಅವರು ನಾಶವಾಗುವ ವರೆಗೂ ಕತ್ತಿಯನ್ನೂ ಕ್ಷಾಮವನ್ನೂ ಜಾಡ್ಯವನ್ನೂ ಅವರಲ್ಲಿ ಕಳುಹಿಸುವೆನು.
- Deuteronomy 4:26 ಧರ್ಮೋಪದೇಶಕಾಂಡ 4:26ನಾನು ಈ ದಿನ ಆಕಾಶ ವನ್ನೂ ಭೂಮಿಯನ್ನೂ ಸಾಕ್ಷಿಗೆ ಕರೆದು ನಿಮಗೆ ಹೇಳುವ ದೇನಂದರೆ--ನೀವು ಯೊರ್ದನನ್ನು ದಾಟಿ ಸ್ವಾಧೀನ ಪಡಿಸಿಕೊಳ್ಳುವ ದೇಶದಲ್ಲಿಂದ ಬೇಗನೆ ಹಾಳಾಗಿ ಹೋಗುವಿರಿ. ನೀವು ಬಹು ದಿವಸ ಇರದೆ ಸಂಪೂರ್ಣ ವಾಗಿ ನಶಿಸುವಿರಿ.