Jeremiah · chapter 6 · verse 19
Jeremiah 6:19 in Kannada
ಭೂಮಿಯೇ, ಕೇಳು, ಇಗೋ, ನಾನು ಈ ಜನರ ಮೇಲೆ ಕೇಡನ್ನು ಅಂದರೆ ಅವರ ಕಲ್ಪನೆಗಳ ಫಲವನ್ನೇ ಬರಮಾಡುತ್ತೇನೆ. ಅವರು ನನ್ನ ವಾಕ್ಯಗಳನ್ನು ಆಲೈಸದೆ ಹೋದರು, ನನ್ನ ನ್ಯಾಯಪ್ರಮಾಣವನ್ನು ತಿರಸ್ಕರಿಸಿ ದರು.
Bhoomiye, kelu, igo, naanu ee janara mele kedannu andare avara kalpanegala phalavanne baramaaduttene. Avaru nanna vaakyagalannu aalaisade hodaru, nanna nyaayapramaanavannu tiraskarisi daru.
Jeremiah 6:19 in English
- King James Version (KJV)
- Hear, O earth: behold, I will bring evil upon this people, [even] the fruit of their thoughts, because they have not hearkened unto my words, nor to my law, but rejected it.
- World English Bible (WEB)
- Hear, earth! Behold, I will bring evil on this people, even the fruit of their thoughts, because they have not listened to my words; and as for my law, they have rejected it.
- American Standard Version (ASV)
- Hear, O earth: behold, I will bring evil upon this people, even the fruit of their thoughts, because they have not hearkened unto my words; and as for my law, they have rejected it.
- Bible in Basic English (BBE)
- Give ear, O earth: see, I will make evil come on this people, even the fruit of their thoughts, because they have not given attention to my words, and they would have nothing to do with my law.
- Darby Translation (DBY)
- Hear, O earth: behold, I will bring evil upon this people, the fruit of their thoughts; for they have not hearkened unto my words, and as to my law, they have rejected it.
- Webster's Bible (WBS)
- Hear, O earth: behold, I will bring evil upon this people, [even] the fruit of their thoughts, because they have not hearkened to my words, nor to my law, but have rejected it.
- Young's Literal Translation (YLT)
- Hear, O earth, lo, I am bringing evil on this people, The fruit of their devices, For to My words they gave no attention, And My law — they kick against it.
Read in context
- 17ಇದಲ್ಲದೆ ನಿಮ್ಮ ಮೇಲೆ ಕಾವಲುಗಾರರನ್ನು ಇರಿಸಿ ತುತೂರಿಯ ಶಬ್ದವನ್ನು ಆಲೈ ಸಿರಿ ಅಂದೆನು; ಆದರೆ ಅವರು--ನಾವು ಆಲೈಸುವ ದಿಲ್ಲ ಅಂದರು.
- 18ಆದದರಿಂದ ಜನಾಂಗಗಳೇ, ಕೇಳಿರಿ; ಸಭೆಯೇ, ಅವರಲ್ಲಿ ಇರುವಂಥದ್ದನ್ನು ತಿಳುಕೊಳ್ಳಿರಿ.
- 19ಭೂಮಿಯೇ, ಕೇಳು, ಇಗೋ, ನಾನು ಈ ಜನರ ಮೇಲೆ ಕೇಡನ್ನು ಅಂದರೆ ಅವರ ಕಲ್ಪನೆಗಳ ಫಲವನ್ನೇ ಬರಮಾಡುತ್ತೇನೆ. ಅವರು ನನ್ನ ವಾಕ್ಯಗಳನ್ನು ಆಲೈಸದೆ ಹೋದರು, ನನ್ನ ನ್ಯಾಯಪ್ರಮಾಣವನ್ನು ತಿರಸ್ಕರಿಸಿ ದರು.
- 20ಶೇಬದಿಂದ ಸಾಂಬ್ರಾಣಿಯೂ ದೂರ ದೇಶದಿಂದ ಒಳ್ಳೇ ಸುಗಂಧವೂ ನನಗೆ ಬರುವದು ಯಾತಕ್ಕೆ? ನಿಮ್ಮ ದಹನಬಲಿಗಳು ಮೆಚ್ಚಿಕೆಯಾಗಲಿಲ್ಲ; ನಿಮ್ಮ ಬಲಿಗಳು ನನಗೆ ರುಚಿ ಇಲ್ಲ.
- 21ಆದದರಿಂದ ಕರ್ತನು ಹೀಗೆ ಹೇಳುತ್ತಾನೆ. ಇಗೋ, ನಾನು ಈ ಜನರ ಮುಂದೆ ಎಡೆತಡೆಗಳನ್ನು ಇಡುತ್ತೇನೆ; ತಂದೆ ಗಳೂ ಮಕ್ಕಳೂ ಕೂಡ ಅವುಗಳ ಮೇಲೆ ಬೀಳುವರು; ನೆರೆಯವನೂ ಅವನ ಸ್ನೇಹಿತನೂ ನಾಶವಾಗುವನು.
Cross references
- Isaiah 1:2 ಯೆಶಾಯ 1:2ಓ ಆಕಾಶ ಗಳೇ, ಕೇಳಿರಿ; ಓ ಭೂಮಿಯೇ, ಕಿವಿಗೊಡು; ಕರ್ತನು ಮಾತನಾಡುತ್ತಿದ್ದಾನೆ: ನಾನು ಸಾಕಿ ಸಲಹಿದ ಮಕ್ಕಳೇ, ನನಗೆ ವಿರೋಧವಾಗಿ ಎದುರುಬಿದ್ದಿದ್ದಾರೆ.
- Acts 8:22 ಅಪೊಸ್ತಲರ ಕೃತ್ಯಗಳು 8:22ಆದದರಿಂದ ಈ ನಿನ್ನ ಕೆಟ್ಟತನದ ವಿಷಯವಾಗಿ ಮಾನಸಾಂತರಪಟ್ಟು ದೇವರನ್ನು ಬೇಡಿಕೋ, ಆಗ ನಿನ್ನ ಹೃದಯದ ಆಲೋಚನೆಯು ಕ್ಷಮಿಸಲ್ಪಡಬಹುದು.
- Jeremiah 8:9 ಯೆರೆಮೀಯ 8:9ಜ್ಞಾನಿಗಳು ನಾಚಿಕೊಂಡಿ ದ್ದಾರೆ, ದಿಗಿಲುಪಟ್ಟು ಸಿಕ್ಕಿಕೊಂಡಿದ್ದಾರೆ; ಇಗೋ, ಕರ್ತನ ವಾಕ್ಯವನ್ನು ನಿರಾಕರಿಸಿದ್ದಾರೆ. ಹಾಗಾದರೆ ಅವರಲ್ಲಿ ಎಂಥಾ ಜ್ಞಾನವಿದೆ?
- Jeremiah 17:10 ಯೆರೆಮೀಯ 17:10ಕರ್ತನಾದ ನಾನೇ ಹೃದಯ ವನ್ನು ಪರೀಕ್ಷಿಸುತ್ತೇನೆ; ಅಂತರಿಂದ್ರಿಯಗಳನ್ನು ಶೋಧಿ ಸುತ್ತೇನೆ. ಒಬ್ಬೊಬ್ಬನಿಗೆ ಅವನವನ ಮಾರ್ಗಗಳ ಪ್ರಕಾರವೂ ಅವನ ಕ್ರಿಯೆಗಳ ಫಲದ ಪ್ರಕಾರವೂ (ಪ್ರತಿಫಲ) ಕೊಡುತ್ತೇನೆ.
- Jeremiah 6:10 ಯೆರೆಮೀಯ 6:10ನಾನು ಯಾರ ಸಂಗಡ ಮಾತನಾಡಲಿ? ಅವರು ಕೇಳುವ ಹಾಗೆ ಯಾರನ್ನು ಎಚ್ಚರಿಸಲಿ? ಇಗೋ, ಅವರು ಆಲೈಸಲಾರದ ಹಾಗೆ ಅವರ ಕಿವಿ ಪರಿಛೇದನೆ ಯಿಲ್ಲದಾಗಿದೆ; ಇಗೋ, ಕರ್ತನ ವಾಕ್ಯವು ಅವರಿಗೆ ನಿಂದೆಯಾಗಿದೆ, ಅದರಲ್ಲಿ ಅವರಿಗೆ ಸಂತೋಷವಿಲ್ಲ.
- Micah 6:2 ಮೀಕ 6:2ಓ ಬೆಟ್ಟಗಳೇ, ಭೂಮಿಯ ಬಲವಾದ ಅಸ್ತಿವಾರಗಳಾದ ಬಂಡೆಗಳೇ, ಕರ್ತನ ವ್ಯಾಜ್ಯವನ್ನು ಕೇಳಿರಿ; ಕರ್ತನಿಗೆ ತನ್ನ ಜನರ ಸಂಗಡ ವ್ಯಾಜ್ಯ ಉಂಟು, ಇಸ್ರಾಯೇಲಿನ ಸಂಗಡ ಆತನು ತರ್ಕಿಸುತ್ತಾನೆ.
- Hosea 4:6 ಹೋಶೇಯ 4:6ನನ್ನ ಜನರು ತಿಳುವಳಿ ಕೆಯ ಕೊರತೆಯಿಂದ ನಾಶವಾಗಿದ್ದಾರೆ; ಆದಕಾರಣ ನೀನು ತಿಳುವಳಿಕೆಯನ್ನು ತಳ್ಳಿಬಿಟ್ಟದ್ದರಿಂದ ನಾನು ಸಹ ನನಗೆ ಯಾಜಕನಾಗದಂತೆ ನಿನ್ನನ್ನು ತಳ್ಳಿಬಿಡುತ್ತೇನೆ; ನೀನು ನಿನ್ನ ದೇವರ ನ್ಯಾಯಪ್ರಮಾಣವನ್ನು ಮರೆತು ಬಿಟ್ಟಿದ್ದರಿಂದ ನಾನು ಸಹ ನಿನ್ನ ಮಕ್ಕಳನ್ನು ಮರೆತು ಬಿಡುವೆನು.
- John 12:48 ಯೋಹಾನನು 12:48ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಅಂಗೀಕರಿಸದಿರುವವನಿಗೆ ತೀರ್ಪು ಮಾಡುವಂಥದು ಒಂದು ಇದೆ; ಅದು ನಾನು ಹೇಳಿದ ಮಾತೇ; ಅದು ಕಡೇ ದಿನದಲ್ಲಿ ಅವನಿಗೆ ತೀರ್ಪು ಮಾಡುವದು.
- John 3:19–21 ಯೋಹಾನನು 3:19–21ಆ ತೀರ್ಪು ಏನಂದರೆ, ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕ್ರಿಯೆಗಳು ಕೆಟ್ಟವುಗಳಾ ಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿ ಮಾಡಿದರು. ಕೆಟ್ಟದ್ದನ್ನು ಮಾಡುವ ಪ್ರತಿ ಯೊಬ್ಬನು ತನ್ನ ಕೃತ್ಯಗಳು ಖಂಡಿಸಲ್ಪಟ್ಟಾವೆಂದು ಬೆಳಕನ್ನು ಹಗೆಮಾಡುತ್ತಾನೆ ಮತ್ತು ಬೆಳಕಿಗೆ ಬರುವದಿಲ್ಲ. ಆದರೆ ಸತ್ಯವನ್ನು ಅನುಸರಿಸುವವನು ತನ್ನ ಕೃತ್ಯಗಳು ದೇವರಿಂದ ಮಾಡಲ್ಪಟ್ಟವುಗಳೆಂದು ಪ್ರಕಟವಾಗು ವಂತೆ ಬೆಳಕಿಗೆ ಬರುತ್ತಾನೆ ಎಂದು ಹೇಳಿದನು.
- Jeremiah 22:29 ಯೆರೆಮೀಯ 22:29ಓ ಭೂಮಿಯೇ, ಭೂಮಿಯೇ, ಭೂಮಿಯೇ, ಕರ್ತನ ವಾಕ್ಯವನ್ನು ಕೇಳು.ಕರ್ತನು ಹೀಗೆ ಹೇಳುತ್ತಾನೆ--ಈ ಮನುಷ್ಯನನ್ನು ಮಕ್ಕಳಿಲ್ಲದವನೆಂದೂ ತನ್ನ ದಿನಗಳಲ್ಲಿ ವೃದ್ಧಿಯಾಗುವ ಪುರುಷನಲ್ಲವೆಂದೂ ಬರೆ ಯಿರಿ; ಅವನ ಸಂತಾನದಲ್ಲಿ ಒಬ್ಬನಾದರೂ ದಾವೀದನ ಸಿಂಹಾಸನದಲ್ಲಿ ಕೂತುಕೊಂಡು ಯೆಹೂದದಲ್ಲಿ ಆಳುವ ಹಾಗೆ ಬಾಳುವದಿಲ್ಲ.
- Hosea 10:13 ಹೋಶೇಯ 10:13ನೀವು ದುಷ್ಟತ್ವವನ್ನು ಬಿತ್ತು ಅನ್ಯಾಯವನ್ನು ಕೊಯ್ದಿರಿ. ಸುಳ್ಳಿನ ಫಲವನ್ನು ತಿಂದಿದ್ದೀರಿ; ನಿನ್ನ ಮಾರ್ಗದಲ್ಲಿಯೂ ನಿನ್ನ ಬಲಿಷ್ಠರಾದ ಹಲವರಲ್ಲಿಯೂ ಭರವಸೆಯಿಟ್ಟಿದ್ದೀ.
- Isaiah 66:18 ಯೆಶಾಯ 66:18ನಾನು ಅವರ ಕ್ರಿಯೆಗಳನ್ನೂ ಅವರ ಆಲೋಚನೆಗಳನ್ನೂ ಬಲ್ಲೆನು. ಎಲ್ಲಾ ಜನಾಂಗ ಗಳನ್ನೂ ಭಾಷೆಯವರನ್ನೂ ಇನ್ನು ಮುಂದೆ ಒಟ್ಟಿಗೆ ಬರಮಾಡುವೆನು; ಆಗ ಅವರು ಬಂದು ನನ್ನ ಮಹಿ ಮೆಯನ್ನು ನೋಡುವರು.