John · chapter 12 · verse 48
John 12:48 in Kannada
ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಅಂಗೀಕರಿಸದಿರುವವನಿಗೆ ತೀರ್ಪು ಮಾಡುವಂಥದು ಒಂದು ಇದೆ; ಅದು ನಾನು ಹೇಳಿದ ಮಾತೇ; ಅದು ಕಡೇ ದಿನದಲ್ಲಿ ಅವನಿಗೆ ತೀರ್ಪು ಮಾಡುವದು.
Nannannu tiraskarisi nanna maatugalannu angeekarisadiruvavanige teerpu maaduvanthadu ondu ide; adu naanu helida maate; adu kade dinadalli avanige teerpu maaduvadu.
John 12:48 in English
- King James Version (KJV)
- He that rejecteth me, and receiveth not my words, hath one that judgeth him: the word that I have spoken, the same shall judge him in the last day.
- World English Bible (WEB)
- He who rejects me, and doesn’t receive my sayings, has one who judges him. The word that I spoke will judge him in the last day.
- American Standard Version (ASV)
- He that rejecteth me, and receiveth not my sayings, hath one that judgeth him: the word that I spake, the same shall judge him in the last day.
- Bible in Basic English (BBE)
- He who puts me on one side and does not take my words to heart, is not without a judge: the word which I have said will be his judge on the last day.
- Darby Translation (DBY)
- He that rejects me and does not receive my words, has him who judges him: the word which I have spoken, that shall judge him in the last day.
- Webster's Bible (WBS)
- He that rejecteth me, and receiveth not my words, hath one that judgeth him: the word that I have spoken, the same shall judge him in the last day.
- Young's Literal Translation (YLT)
- 'He who is rejecting me, and not receiving my sayings, hath one who is judging him, the word that I spake, that will judge him in the last day,
Read in context
- 46ನನ್ನಲ್ಲಿ ನಂಬಿಕೆಯಿಟ್ಟ ಯಾವನೂ ಕತ್ತಲೆಯಲ್ಲಿ ಇರಬಾರದೆಂದು ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ.
- 47ಯಾವನಾದರೂ ನನ್ನ ಮಾತುಗಳನ್ನು ಕೇಳಿ ನಂಬದೆಹೋದರೆ ನಾನು ಅವ ನಿಗೆ ತೀರ್ಪು ಮಾಡುವದಿಲ್ಲ; ಲೋಕಕ್ಕೆ ತೀರ್ಪು ಮಾಡುವದಕ್ಕಾಗಿ ಅಲ್ಲ, ಲೋಕವನ್ನು ರಕ್ಷಿಸುವದ ಕ್ಕಾಗಿಯೇ ನಾನು ಬಂದೆನು.
- 48ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಅಂಗೀಕರಿಸದಿರುವವನಿಗೆ ತೀರ್ಪು ಮಾಡುವಂಥದು ಒಂದು ಇದೆ; ಅದು ನಾನು ಹೇಳಿದ ಮಾತೇ; ಅದು ಕಡೇ ದಿನದಲ್ಲಿ ಅವನಿಗೆ ತೀರ್ಪು ಮಾಡುವದು.
- 49ನನ್ನಷ್ಟಕ್ಕೆ ನಾನೇ ಮಾತನಾಡಲಿಲ್ಲ; ಆದರೆ ನಾನು ಏನು ಹೇಳಬೇಕು ಮತ್ತು ನಾನು ಏನು ಮಾತನಾಡಬೇಕೆಂಬದನ್ನು ನನ್ನನ್ನು ಕಳುಹಿಸಿದ ತಂದೆಯೇ ನನಗೆ ಆಜ್ಞಾಪಿಸಿದ್ದಾನೆ.ಆತನ ಆಜ್ಞೆಯು ನಿತ್ಯಜೀವವಾಗಿದೆ ಎಂದು ನಾನು ಬಲ್ಲೆನು; ಆದದರಿಂದ ನಾನು ಮಾತನಾಡುವವುಗಳನ್ನು ತಂದೆಯು ನನಗೆ ಹೇಳಿದಂತೆಯೇ ನಾನು ಮಾತನಾಡು ತ್ತೇನೆ ಎಂದು ಹೇಳಿದನು.
- 50ಆತನ ಆಜ್ಞೆಯು ನಿತ್ಯಜೀವವಾಗಿದೆ ಎಂದು ನಾನು ಬಲ್ಲೆನು; ಆದದರಿಂದ ನಾನು ಮಾತನಾಡುವವುಗಳನ್ನು ತಂದೆಯು ನನಗೆ ಹೇಳಿದಂತೆಯೇ ನಾನು ಮಾತನಾಡು ತ್ತೇನೆ ಎಂದು ಹೇಳಿದನು.
Cross references
- Luke 10:16 ಲೂಕನು 10:16ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನು ಕೇಳುತ್ತಾನೆ; ನಿಮ್ಮನ್ನು ತಿರಸ್ಕರಿಸುವವನು ನನ್ನನ್ನು ತಿರಸ್ಕರಿಸುತ್ತಾನೆ; ನನ್ನನ್ನು ತಿರಸ್ಕರಿಸುವವನು ನನ್ನನ್ನು ಕಳುಹಿಸಿದಾತನನ್ನು ತಿರಸ್ಕರಿಸುತ್ತಾನೆ ಅಂದನು.
- Hebrews 9:27–28 ಇಬ್ರಿಯರಿಗೆ 9:27–28ಒಂದೇ ಸಾರಿ ಸಾಯುವದೂ ತರುವಾಯ ನ್ಯಾಯತೀರ್ಪೂ ಮನುಷ್ಯರಿಗೆ ನೇಮಕವಾಗಿದೆ.ಹಾಗೆಯೇ ಕ್ರಿಸ್ತನು ಬಹು ಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತ ನಾದನು. ತನ್ನನ್ನು ನಿರೀಕ್ಷಿಸಿ ಕೊಂಡಿರುವವರಿಗೆ ರಕ್ಷಣೆ ಯನ್ನುಂಟು ಮಾಡುವದಕ್ಕೋಸ್ಕರ ಪಾಪವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು. ಹಾಗೆಯೇ ಕ್ರಿಸ್ತನು ಬಹು ಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತ ನಾದನು. ತನ್ನನ್ನು ನಿರೀಕ್ಷಿಸಿ ಕೊಂಡಿರುವವರಿಗೆ ರಕ್ಷಣೆ ಯನ್ನುಂಟು ಮಾಡುವದಕ್ಕೋಸ್ಕರ ಪಾಪವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು.
- Romans 2:16 ರೋಮಾಪುರದವರಿಗೆ 2:16ಮನುಷ್ಯರ ರಹಸ್ಯಗಳ ವಿಷಯ ವಾಗಿ ನನ್ನ ಸುವಾರ್ತೆಗನುಸಾರ ಯೇಸು ಕ್ರಿಸ್ತನ ಮುಖಾಂತರ ದೇವರು ನ್ಯಾಯತೀರಿಸುವ ದಿವಸದಲ್ಲಿ ಅವರು ತೀರ್ಪು ಹೊಂದುವರು.
- 2 Thessalonians 1:8 2 ಥೆಸಲೊನೀಕದವರಿಗೆ 1:8ಆತನು (ಕರ್ತನಾದ ಯೇಸು) ದೇವರನ್ನರಿಯ ದವರಿಗೆ ಮತ್ತು ಕರ್ತನಾದ ಯೇಸು ಕ್ರಿಸ್ತನ ಸುವಾರ್ತೆಗೆ ವಿಧೇಯರಾಗದವರಿಗೆ ಉರಿಯುವ ಬೆಂಕಿಯ ಮೂಲಕ ಪ್ರತೀಕಾರ ಮಾಡುವದೂ ದೇವರಿಗೆ ನ್ಯಾಯವಾಗಿದೆ;
- John 11:24 ಯೋಹಾನನು 11:24ಮಾರ್ಥಳು ಆತನಿಗೆ--ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ತಿರಿಗಿ ಎದ್ದೇಳುವನೆಂದು ನಾನು ಬಲ್ಲೆನು ಎಂದು ಹೇಳಿದಳು.
- John 3:17–20 ಯೋಹಾನನು 3:17–20ದೇವರು ಲೋಕಕ್ಕೆ ತೀರ್ಪು ಮಾಡುವದಕ್ಕಾಗಿ ಅಲ್ಲ; ಆದರೆ ತನ್ನ ಮಗನ ಮುಖಾಂತರ ಲೋಕವನ್ನು ರಕ್ಷಿಸುವದಕ್ಕಾಗಿ ಆತನನ್ನು ಕಳುಹಿಸಿದನು. ಆತನ ಮೇಲೆ ನಂಬಿಕೆ ಇಡುವವನಿಗೆ ತೀರ್ಪು ಆಗುವದಿಲ್ಲ; ಆದರೆ ನಂಬಿಕೆಯಿಡದವನಿಗೆ ಆಗಲೇ ತೀರ್ಪಾಯಿತು; ಯಾಕಂದರೆ ಅವನು ದೇವರ ಒಬ್ಬನೇ ಮಗನ ಹೆಸರಿನ ಮೇಲೆ ನಂಬಿಕೆ ಇಡಲಿಲ್ಲ. ಆ ತೀರ್ಪು ಏನಂದರೆ, ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕ್ರಿಯೆಗಳು ಕೆಟ್ಟವುಗಳಾ ಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿ ಮಾಡಿದರು. ಕೆಟ್ಟದ್ದನ್ನು ಮಾಡುವ ಪ್ರತಿ ಯೊಬ್ಬನು ತನ್ನ ಕೃತ್ಯಗಳು ಖಂಡಿಸಲ್ಪಟ್ಟಾವೆಂದು ಬೆಳಕನ್ನು ಹಗೆಮಾಡುತ್ತಾನೆ ಮತ್ತು ಬೆಳಕಿಗೆ ಬರುವದಿಲ್ಲ.
- Hebrews 12:25 ಇಬ್ರಿಯರಿಗೆ 12:25ನೀವು ಮಾತನಾಡು ತ್ತಿರುವಾತನನ್ನು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಯಾಕಂದರೆ ಭೂಮಿಯ ಮೇಲೆ ಮಾತನಾಡಿದವನನ್ನು ಅಸಡ್ಡೆ ಮಾಡಿದ್ದಕ್ಕೆ ಅವರು ತಪ್ಪಿಸಿಕೊಳ್ಳದಿದ್ದರೆ ಪರ ಲೋಕದಿಂದ ಮಾತನಾಡುವಾತನಿಂದ ನಾವು ತೊಲಗಿ ದರೆ ಎಷ್ಟೋ ಹೆಚ್ಚಾಗಿ ನಾವು ತಪ್ಪಿಸಿಕೊಳ್ಳಲಾರೆವು.
- Hebrews 10:29–31 ಇಬ್ರಿಯರಿಗೆ 10:29–31ಯಾವನು ದೇವ ಕುಮಾರನನ್ನು ತುಳಿದು ತನ್ನನ್ನು ಪವಿತ್ರಮಾಡಿದಂಥ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಆತ್ಮನನ್ನು ತಿರಸ್ಕಾರ ಮಾಡಿದ್ದಾನೋ ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗಬೇಕೆಂಬ ದನ್ನು ಯೋಚಿಸಿರಿ. ಮುಯ್ಯಿ ತೀರಿಸುವದು ನನಗೆ ಸಂಬಂಧಪಟ್ಟದ್ದು, ನಾನೇ ಪ್ರತಿಫಲವನ್ನು ಕೊಡುವೆ ನೆಂದು ಹೇಳಿದ ಕರ್ತನನ್ನು ನಾವು ಬಲ್ಲೆವು; ಇದ ಲ್ಲದೆ--ಕರ್ತನು ತನ್ನ ಜನರಿಗೆ ನ್ಯಾಯತೀರಿಸುವ ನೆಂತಲೂ ಹೇಳಿಯದೆ. ಜೀವವುಳ್ಳ ದೇವರ ಕೈಯಲ್ಲಿ ಸಿಕ್ಕಿ ಬೀಳುವದು ಭಯಂಕರವಾದದ್ದು.
- John 5:45 ಯೋಹಾನನು 5:45ತಂದೆಯ ಮುಂದೆ ನಿಮ್ಮ ಮೇಲೆ ನಾನು ತಪ್ಪು ಹೊರಿಸುವೆನೆಂದು ನೀವು ನೆನಸಬೇಡಿರಿ; ಆದರೆ ನೀವು ನಂಬಿರುವ ಮೋಶೆಯೇ ನಿಮ್ಮ ಮೇಲೆ ತಪ್ಪು ಹೊರಿಸುತ್ತಾನೆ.
- Deuteronomy 18:18–19 ಧರ್ಮೋಪದೇಶಕಾಂಡ 18:18–19ನಿನ್ನ ಹಾಗಿರುವ ಪ್ರವಾದಿಯನ್ನು ಅವರ ಸಹೋದರರಲ್ಲಿಂದ ಅವರಿಗೆ ಎಬ್ಬಿಸುವೆನು; ನನ್ನ ವಾಕ್ಯಗಳನ್ನು ಅವನ ಬಾಯಲ್ಲಿ ಇಡುವೆನು; ನಾನು ಅವನಿಗೆ ಆಜ್ಞಾಪಿಸುವದನ್ನೆಲ್ಲಾ ಅವನು ಅವರಿಗೆ ಹೇಳುವನು. ಅವನು ನನ್ನ ಹೆಸರಿನಿಂದ ಹೇಳುವ ನನ್ನ ವಾಕ್ಯಗಳನ್ನು ಕೇಳದ ಮನುಷ್ಯನು ಯಾವನೋ ಅವನನ್ನು ನಾನು ವಿಚಾರಿಸುವೆನು.
- Isaiah 53:3 ಯೆಶಾಯ 53:3ಆತನು ಮನುಷ್ಯರಿಂದ ತಳ್ಳಲ್ಪಟ್ಟವನೂ ತಿರಸ್ಕರಿಸ ಲ್ಪಟ್ಟವನೂ ದುಃಖಿತ ಮನುಷ್ಯನೂ ಕಷ್ಟವನ್ನು ಅರಿತ ವನೂ; ನಾವು ನಮ್ಮ ಮುಖಗಳನ್ನು ಆತನಿಂದ ಮರೆ ಮಾಡಿಕೊಳ್ಳುವ ಹಾಗೆ ಧಿಕ್ಕರಿಸಲ್ಪಟ್ಟವನೂ ಆಗಿದ್ದನು. ನಾವು ಆತನನ್ನು ಲಕ್ಷಕ್ಕೆ ತರಲಿಲ್ಲ.
- 1 Samuel 10:19 1 ಸಮುವೇಲನು 10:19ಆದರೆ ನಿಮ್ಮ ಎಲ್ಲಾ ಕೇಡುಗಳಿಂದಲೂ ಇಕ್ಕಟ್ಟುಗಳಿಂದಲೂ ನಿಮ್ಮನ್ನು ತಪ್ಪಿಸಿ ರಕ್ಷಿಸಿದ ನಿಮ್ಮ ದೇವರನ್ನು ನೀವು ಈ ದಿವಸದಲ್ಲಿ ತಿರಸ್ಕರಿಸಿ ಆತನಿಗೆ--ನಮ್ಮ ಮೇಲೆ ಒಬ್ಬ ಅರಸನನ್ನು ನೇಮಿಸು ಎಂದು ಹೇಳಿದಿರಿ. ಆದದ ರಿಂದ ಈಗ ಕರ್ತನ ಮುಂದೆ ನಿಮ್ಮ ಗೋತ್ರಗಳ ಪ್ರಕಾರವಾಗಿಯೂ ನಿಮ್ಮ ಸಹಸ್ರಗಳ ಪ್ರಕಾರವಾ ಗಿಯೂ ಕಾಣಿಸಿಕೊಳ್ಳಿರಿ ಅಂದನು.