Jeremiah · chapter 6 · verse 3
Jeremiah 6:3 in Kannada
ಅವಳ ಬಳಿಗೆ ಕುರುಬರು ತಮ್ಮ ಮಂದೆಗಳ ಸಂಗಡ ಬರುವರು; ಅವಳ ಸುತ್ತಲು ತಮ್ಮ ಗುಡಾರಗಳನ್ನು ಹಾಕುವರು; ತಮ್ಮ ತಮ್ಮ ಸ್ಥಳಗಳಲ್ಲಿ ಮೇಯಿಸುವರು.
Avala balige kurubaru tamma mandegala sangada baruvaru; avala suttalu tamma gudaaragalannu haakuvaru; tamma tamma sthalagalalli meyisuvaru.
Jeremiah 6:3 in English
- King James Version (KJV)
- The shepherds with their flocks shall come unto her; they shall pitch [their] tents against her round about; they shall feed every one in his place.
- World English Bible (WEB)
- Shepherds with their flocks will come to her. They will pitch their tents against her all around. They will feed everyone in his place.”
- American Standard Version (ASV)
- Shepherds with their flocks shall come unto her; they shall pitch their tents against her round about; they shall feed every one in his place.
- Bible in Basic English (BBE)
- Keepers of sheep with their flocks will come to her; they will put up their tents round her; everyone will get food in his place.
- Darby Translation (DBY)
- Shepherds with their flocks shall come unto her; they shall pitch [their] tents against her round about; they shall feed every one in his place.
- Webster's Bible (WBS)
- The shepherds with their flocks shall come to her; they shall pitch [their] tents against her on every side; they shall feed every one in his place.
- Young's Literal Translation (YLT)
- Unto her come do shepherds and their droves, They have stricken tents by her round about, They have fed each [in] his own station.
Read in context
- 1ಓ ಬೆನ್ಯಾವಿಾನನ ಮಕ್ಕಳೇ! ಯೆರೂಸಲೇಮಿನೊಳಗಿಂದ ಓಡಿಹೋಗುವದಕ್ಕೆ ನೀವು ಕೂಡಿಕೊಳ್ಳಿರಿ, ತೆಕೋವದಲ್ಲಿ ತುತೂರಿ ಊದಿರಿ; ಬೇತ್ಹಕ್ಕೆರೆಮಿನಲ್ಲಿ ಬೆಂಕಿಯ ಗುರುತನ್ನು ಹಚ್ಚಿರಿ; ಯಾಕಂದರೆ ಕೇಡೂ ದೊಡ್ಡ ನಾಶನವೂ ಉತ್ತರದ ಕಡೆಯಿಂದ ತೋರುತ್ತವೆ.
- 2ಚೀಯೋನಿನ ಮಗಳನ್ನು ಸೌಂದರ್ಯವಾದ ಮತ್ತು ಕೋಮಲವಾದವಳಿಗೆ ನಾನು ಹೋಲಿಸುತ್ತೇನೆ.
- 3ಅವಳ ಬಳಿಗೆ ಕುರುಬರು ತಮ್ಮ ಮಂದೆಗಳ ಸಂಗಡ ಬರುವರು; ಅವಳ ಸುತ್ತಲು ತಮ್ಮ ಗುಡಾರಗಳನ್ನು ಹಾಕುವರು; ತಮ್ಮ ತಮ್ಮ ಸ್ಥಳಗಳಲ್ಲಿ ಮೇಯಿಸುವರು.
- 4ಅವಳಿಗೆ ವಿರೋಧವಾಗಿ ಯುದ್ಧವನ್ನು ಸಿದ್ಧಮಾಡಿರಿ; ಏಳಿರಿ, ಮಧ್ಯಾಹ್ನದಲ್ಲಿ ಏರಿ ಹೋಗೋಣ, ನಮಗೆ ಅಯ್ಯೋ! ಹೊತ್ತು ಮುಣುಗುತ್ತದಲ್ಲಾ; ಸಂಜೆಯ ನೆರಳುಗಳು ಉದ್ದವಾ ಗುತ್ತವೆ.
- 5ಏಳಿರಿ, ರಾತ್ರಿಯಲ್ಲಿ ಏರಿಹೋಗಿ ಅವಳ ಅರಮನೆಗಳನ್ನು ನಾಶಮಾಡೋಣ;
Cross references
- Luke 19:43 ಲೂಕನು 19:43ಯಾಕಂದರೆ ನಿನ್ನ ಶತೃಗಳು ನಿನ್ನ ಸುತ್ತಲೂ ಕಂದಕವನ್ನು ತೋಡಿ ಎಲ್ಲಾ ಕಡೆಯಲ್ಲಿಯೂ ನಿನ್ನನ್ನು ಮುತ್ತಿಗೆ ಹಾಕಿ ಪ್ರತಿಯೊಂದು ಕಡೆಯಿಂದಲೂ ನಿನ್ನನ್ನು ಒಳಗೆ ಇರಿಸುವ ದಿನಗಳು ನಿನ್ನ ಮೇಲೆ ಬರುವವು.
- Jeremiah 39:1–3 ಯೆರೆಮೀಯ 39:1–3ಯೆಹೂದದ ಅರಸನಾದ ಚಿದ್ಕೀಯನ ಒಂಭತ್ತನೇ ವರುಷದ ಹತ್ತನೇ ತಿಂಗಳಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನೂ ಅವನ ಸೈನ್ಯವೆಲ್ಲವೂ ಯೆರೂಸಲೇಮಿಗೆ ವಿರೋಧವಾಗಿ ಬಂದು ಅದನ್ನು ಮುತ್ತಿಗೆ ಹಾಕಿದರು. ಚಿದ್ಕೀಯನ ಹನ್ನೊಂದನೇ ವರುಷದಲ್ಲಿ ನಾಲ್ಕನೇ ತಿಂಗಳಿನ ಒಂಭ ತ್ತನೇ ದಿವಸದಲ್ಲಿ ಪಟ್ಟಣವು ಒಡೆಯಲ್ಪಟ್ಟಿತು. ಆಗ ಬಾಬೆಲಿನ ಅರಸನ ಪ್ರಧಾನರೆಲ್ಲರೂ ನೇರ್ಗಲ್ಸ ರೇಚರನೂ ಸಮ್ಗರ್ನೆಬೋವನೂ ಸರ್ಸೆಕೀಮನೂ ನೇರ್ಗೆಲ್ಸರೆಚರನೂ ರಬ್ಶರೀಸ್ ಉಳಿದ ಬಾಬೆಲಿನ ಅರಸನ ಪ್ರಧಾನರೆಲ್ಲರೂ ಬಂದು ನಡುಬಾಗಲಲ್ಲಿ ಕೂತುಕೊಂಡರು.
- Nahum 3:18 ನಹೂಮ 3:18ಅಶ್ಶೂರ್ಯದ ಅರಸನೇ, ನಿನ್ನ ಕುರುಬರು ತೂಕಡಿಸುತ್ತಾರೆ, ನಿನ್ನ ಶ್ರೇಷ್ಠರು ಧೂಳಿನಲ್ಲಿ ಬಿದ್ದಿದ್ದಾರೆ; ನಿನ್ನ ಜನರು ಬೆಟ್ಟಗಳಲ್ಲಿ ಚದರಿ ಹೋಗಿ ದ್ದಾರೆ; ಕೂಡಿಸುವವರು ಯಾರೂ ಇಲ್ಲ.ನಿನ್ನ ಗಾಯವು ಗುಣಹೊಂದದು; ನಿನ್ನ ಗಾಯ ಕಠಿಣ ವಾದದ್ದು; ನಿನ್ನ ಸುದ್ದಿಯನ್ನು ಕೇಳುವವರೆಲ್ಲರು ನಿನಗೆ ಚಪ್ಪಾಳೆ ಹೊಡೆಯುವರು; ನಿನ್ನ ಕೆಟ್ಟತನವು ನಿತ್ಯವಾಗಿ ಯಾರ ಮೇಲೆ ಹಾದುಹೋಗದೆ ಇತ್ತು?
- 2 Kings 25:1–4 2 ಅರಸುಗಳು 25:1–4ಅವನ ಆಳಿಕೆಯ ಒಂಭತ್ತನೇ ವರುಷದ ಹತ್ತನೇ ತಿಂಗಳಿನ ಹತ್ತನೇ ದಿವಸದಲ್ಲಿ ಏನಾಯಿತಂದರೆ, ಬಾಬೆಲಿನ ಅರಸನಾದ ನೆಬೂಕ ದ್ನೆಚರನು ತಾನೂ ತನ್ನ ಎಲ್ಲಾ ಸೈನ್ಯವೂ ಯೆರೂಸ ಲೇಮಿನ ಮೇಲೆ ಬಂದು ಅದಕ್ಕೆ ಎದುರಾಗಿ ದಂಡಿಳಿದು ಅದರ ಸುತ್ತಲೂ ದಿಣ್ಣೆಗಳನ್ನು ಹಾಕಿದರು. ಅರಸನಾದ ಚಿದ್ಕೀಯನ ಆಳ್ವಿಕೆಯ ಹನ್ನೊಂದನೇ ವರುಷದ ವರೆಗೆ ಪಟ್ಟಣವು ಮುತ್ತಿಗೆ ಹಾಕಲ್ಪಟ್ಟಿತು. ನಾಲ್ಕನೇ ತಿಂಗಳಿನ ಒಂಭತ್ತನೇ ದಿವಸದಲ್ಲಿ ಪಟ್ಟಣದಲ್ಲಿ ಬರವು ಬಲವಾದದರಿಂದ ದೇಶದ ಜನರಿಗೆ ರೊಟ್ಟಿಯಿಲ್ಲದೆ ಹೋಯಿತು. ಪಟ್ಟಣವು ವಿಭಾಗಿಸಲ್ಪಟ್ಟಿದ್ದರಿಂದ ಸೈನ್ಯದ ಜನರೆಲ್ಲರೂ ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದಲ್ಲಿ ಬಾಗಲ ಮಾರ್ಗವಾಗಿ ಓಡಿಹೋದರು; ಆದರೆ ಅರಸನು ಬಯಲು ಮಾರ್ಗ ವಾಗಿ ಹೋದನು.
- 2 Kings 24:2 2 ಅರಸುಗಳು 24:2ಆದರೆ ಕರ್ತನು ಕಸ್ದೀಯರ, ಅರಾಮ್ಯರ, ಮೋವಾಬ್ಯರ, ಅಮ್ಮೋನ್ಯರ ಗುಂಪುಗಳನ್ನೂ ಅವನ ಮೇಲೆ ಕಳುಹಿಸಿದನು. ಕರ್ತನು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ ಮಾತಿನ ಪ್ರಕಾರ ಯೆಹೂದವನ್ನು ನಾಶ ಮಾಡುವಂತೆ ಅದರ ಮೇಲೆ ಅವರನ್ನು ಬರಮಾಡಿದನು.
- Jeremiah 12:10 ಯೆರೆಮೀಯ 12:10ಅನೇಕ ಕುರುಬರು ನನ್ನ ದ್ರಾಕ್ಷೇ ತೋಟವನ್ನು ಕೆಡಿಸಿದ್ದಾರೆ, ನನ್ನ ಭಾಗವನ್ನು ತುಳಿದುಬಿಟ್ಟಿದ್ದಾರೆ, ನಾನು ಮೆಚ್ಚಿದ ಭಾಗವನ್ನು ಹಾಳಾದ ಅರಣ್ಯವಾಗ ಮಾಡಿದ್ದಾರೆ.
- Jeremiah 4:16–17 ಯೆರೆಮೀಯ 4:16–17ಜನಾಂಗಗಳಿಗೆ ತಿಳಿಸಿರಿ. ಇಗೋ, ಯೆರೂಸಲೇಮಿಗೆ ವಿರೋಧವಾಗಿ ತಿಳಿಯ ಪಡಿಸಿರಿ; ಏನಂದರೆ ಮುತ್ತಿಗೆ ಹಾಕುವವರು ದೂರ ದೇಶದಿಂದ ಬರುತ್ತಾರೆ, ಯೆಹೂದದ ಪಟ್ಟಣಗಳಿಗೆ ವಿರೋಧವಾಗಿ ತಮ್ಮ ಸ್ವರವನ್ನೆತ್ತುತ್ತಾರೆ. ಹೊಲ ಕಾಯುವವರಂತೆ ಸುತ್ತಲಾಗಿ ಅವಳಿಗೆ ವಿರೋಧವಾಗಿ ದ್ದಾರೆ; ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾಳೆಂದು ಕರ್ತನು ಅನ್ನುತ್ತಾನೆ.
- 2 Kings 24:10–12 2 ಅರಸುಗಳು 24:10–12ಆ ಕಾಲದಲ್ಲಿ ಬಾಬೆಲಿನ ಅರಸನಾದ ನೆಬೂಕ ದ್ನೆಚರನ ಸೇವಕರು ಯೆರೂಸಲೇಮಿಗೆ ವಿರೋಧವಾಗಿ ಬಂದಾಗ ಆ ಪಟ್ಟಣವು ಮುತ್ತಿಗೆ ಹಾಕಲ್ಪಟ್ಟಿತು. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಪಟ್ಟಣಕ್ಕೆ ವಿರೋಧವಾಗಿ ಬಂದನು; ಅವನ ಸೇವಕರು ಅದನ್ನು ಮುತ್ತಿಗೆ ಹಾಕಿದರು. ಆಗ ಯೆಹೂದದ ಅರಸನಾದ ಯೆಹೋಯಾಖೀನನೂ ಅವನ ತಾಯಿಯೂ ಸೇವ ಕರೂ ಪ್ರಧಾನರೂ ಕಂಚುಕಿಯರೂ ಅಧಿಕಾರಿಗಳ ಸಹಿತವಾಗಿ ಬಾಬೆಲಿನ ಅರಸನ ಬಳಿಗೆ ಹೋದರು. ಬಾಬೆಲಿನ ಅರಸನು ತನ್ನ ಆಳಿಕೆಯ ಎಂಟನೇ ವರುಷ ದಲ್ಲಿ ಅವನನ್ನು ಸೆರೆಹಿಡಿದನು.