Jeremiah · chapter 7 · verse 15
Jeremiah 7:15 in Kannada
ನಿಮ್ಮ ಸಹೋದರರೆಲ್ಲರನ್ನೂ ಎಫ್ರಾಯಾಮಿನ ಎಲ್ಲಾ ಸಂತಾನವನ್ನೂ ಹೊರಗೆ ಹಾಕಿದ ಹಾಗೆ ನಿಮ್ಮನ್ನು ನನ್ನ ಸಮ್ಮುಖದಿಂದ ಹೊರಗೆ ಹಾಕುವೆನು.
Nimma sahodararellarannoo ephraayaamina ellaa santaanavannoo horage haakida haage nimmannu nanna sammukhadinda horage haakuvenu.
Jeremiah 7:15 in English
- King James Version (KJV)
- And I will cast you out of my sight, as I have cast out all your brethren, [even] the whole seed of Ephraim.
- World English Bible (WEB)
- I will cast you out of my sight, as I have cast out all your brothers, even the whole offspring of Ephraim.
- American Standard Version (ASV)
- And I will cast you out of my sight, as I have cast out all your brethren, even the whole seed of Ephraim.
- Bible in Basic English (BBE)
- And I will send you away from before my face, as I have sent away all your brothers, even all the seed of Ephraim.
- Darby Translation (DBY)
- and I will cast you out of my sight, as I have cast out all your brethren, all the seed of Ephraim.
- Webster's Bible (WBS)
- And I will cast you out of my sight, as I have cast out all your brethren, [even] the whole seed of Ephraim.
- Young's Literal Translation (YLT)
- And I have cast you from before My face, As I have cast out all your brethren, The whole seed of Ephraim.
Read in context
- 13ಈಗ ಕರ್ತನು ಅನ್ನುವದೇನಂದರೆ--ನೀವು ಈ ಕೆಲಸಗಳ ನ್ನೆಲ್ಲಾ ಮಾಡಿದ್ದರಿಂದ ನಾನು ಬೆಳಿಗ್ಗೆ ಎದ್ದು ನಿಮ್ಮ ಸಂಗಡ ಮಾತಾಡಿದರೂ ನೀವು ಕೇಳದೆ ಹೋದಿರಿ. ನಾನು ನಿಮ್ಮನ್ನು ಕರೆದರೂ ನೀವು ಉತ್ತರ ಕೊಡದೆ ಹೋದಿರಿ.
- 14ಆದಕಾರಣ ನನ್ನ ಹೆಸರಿನಿಂದ ಕರೆ ಯಲ್ಪಟ್ಟಂಥ ನೀವು ನಂಬಿಕೊಂಡಿರುವಂಥ ಈ ಆಲಯಕ್ಕೂ ನಾನು ನಿಮಗೂ ನಿಮ್ಮ ಪಿತೃಗಳಿಗೂ ಕೊಟ್ಟ ಸ್ಥಳಕ್ಕೂ ಶಿಲೋವಿಗೆ ಮಾಡಿದ ಹಾಗೆ ಮಾಡುವೆನು.
- 15ನಿಮ್ಮ ಸಹೋದರರೆಲ್ಲರನ್ನೂ ಎಫ್ರಾಯಾಮಿನ ಎಲ್ಲಾ ಸಂತಾನವನ್ನೂ ಹೊರಗೆ ಹಾಕಿದ ಹಾಗೆ ನಿಮ್ಮನ್ನು ನನ್ನ ಸಮ್ಮುಖದಿಂದ ಹೊರಗೆ ಹಾಕುವೆನು.
- 16ಆದದರಿಂದ ನೀನು ಈ ಜನರಿಗೋಸ್ಕರ ಪ್ರಾರ್ಥನೆ ಮಾಡಬೇಡ; ಅವರಿಗೋಸ್ಕರ ಮೊರೆ ಯನ್ನೂ ಪ್ರಾರ್ಥನೆಯನ್ನೂ ಎತ್ತಬೇಡ ಇಲ್ಲವೆ ನನಗೆ ವಿಜ್ಞಾಪನೆ ಮಾಡಬೇಡ; ನಾನು ಅದನ್ನು ಕೇಳಿಸಿಕೊಳ್ಳು ವದಿಲ್ಲ.
- 17ಯೆಹೂದದ ಪಟ್ಟಣಗಳಲ್ಲಿಯೂ ಯೆರೂಸ ಲೇಮಿನ ಬೀದಿಗಳಲ್ಲಿಯೂ ಅವರು ಮಾಡುವದನ್ನು ನೀನು ನೋಡುವದಿಲ್ಲವೋ? ಆಕಾಶದ ರಾಣಿಗೆ ದೋಸೆಗಳನ್ನು ಮಾಡುವದಕ್ಕೂ ಬೇರೆ ದೇವರುಗಳಿಗೆ ಪಾನದರ್ಪಣೆಯನ್ನು ಹೊಯ್ಯುವದಕ್ಕೂ
Cross references
- Jeremiah 15:1 ಯೆರೆಮೀಯ 15:1ಆಗ ಕರ್ತನು ನನಗೆ ಹೇಳಿದ್ದೇನಂದರೆ --ಮೋಶೆಯೂ ಸಮುವೇಲನೂ ನನ್ನ ಮುಂದೆ ನಿಂತರೂ ನನ್ನ ಮನಸ್ಸು ಈ ಜನರ ಮೇಲೆ ಇರುವದಿಲ್ಲ. ಅವರನ್ನು ನನ್ನ ಸನ್ನಿಧಿಯಿಂದ ಕಳುಹಿಸಿ ಬಿಡು; ಅವರು ಹೋಗಲಿ.
- Jeremiah 52:3 ಯೆರೆಮೀಯ 52:3ಕರ್ತನು ಯೆಹೂದದ ಮೇಲೆಯೂ ಯೆರೂಸಲೇಮಿನ ಮೇಲೆಯೂ ಅವರನ್ನು ತನ್ನ ಸನ್ನಿಧಿಯಿಂದ ತಳ್ಳಿಬಿಡುವ ವರೆಗೆ ಮಾಡಿದ ಕೋಪದಿಂದ ಚಿದ್ಕೀಯನು ಬಾಬೆಲಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು.
- 2 Kings 17:23 2 ಅರಸುಗಳು 17:23ಹೀಗೆಯೇ ಇಸ್ರಾ ಯೇಲಿನವರು ಇಂದಿನ ವರೆಗೂ ತಮ್ಮ ದೇಶದಿಂದ ಅಶ್ಶೂರಿಗೆ ಸೆರೆಯಾಗಿ ಒಯ್ಯಲ್ಪಟ್ಟರು.
- Hosea 13:16 ಹೋಶೇಯ 13:16ಸಮಾರ್ಯವು ಹಾಳಾಗಿ ಹೋಗುವದು; ಅವಳು ತನ್ನ ದೇವರಿಗೆ ವಿರುದ್ಧವಾಗಿ ತಿರಿಗಿ ಬಿದ್ದಿದ್ದಾಳೆ; ಅವರೆಲ್ಲರೂ ಕತ್ತಿ ಯಿಂದ ಬೀಳುವರು; ಅವರ ಎಳೇ ಕೂಸುಗಳು ಚೂರು ಚೂರಾಗಿ ಬಡಿಯಲ್ಪಡುವವು; ಅವರ ಗರ್ಭಿಣಿಯರು ಸೀಳಲ್ಪಡುವರು.
- Hosea 9:16–17 ಹೋಶೇಯ 9:16–17ಎಫ್ರಾಯಾಮ್ಯರು ಹೊಡೆಯಲ್ಪಟ್ಟಿದ್ದಾರೆ, ಅವರ ಬೇರು ಒಣಗಿ ಹೋಗಿದೆ, ಅವರು ಫಲವನ್ನು ಕೊಡುವದಿಲ್ಲ; ಹೌದು, ಅವರು ಹೆತ್ತರೂ ಅವರ ಗರ್ಭದ ಪ್ರಿಯಕರವಾದ ಫಲವನ್ನು ಸಹ ನಾನು ಕೊಲ್ಲುವೆನು.ನನ್ನ ದೇವರು ಅವರನ್ನು ತಳ್ಳಿಬಿಡುವನು; ಅವರು ಆತನಿಗೆ ಕಿವಿಗೊಡಲಿಲ್ಲ; ಅವರು ಜನಾಂಗಗಳಲ್ಲಿ ಅಲೆದಾಡುವವರಾಗಿರುವರು. ನನ್ನ ದೇವರು ಅವರನ್ನು ತಳ್ಳಿಬಿಡುವನು; ಅವರು ಆತನಿಗೆ ಕಿವಿಗೊಡಲಿಲ್ಲ; ಅವರು ಜನಾಂಗಗಳಲ್ಲಿ ಅಲೆದಾಡುವವರಾಗಿರುವರು.
- 2 Kings 24:20 2 ಅರಸುಗಳು 24:20ಕರ್ತನು ಅವರನ್ನು ತನ್ನ ಸಮ್ಮುಖದಿಂದ ದೊಬ್ಬಿ ಹಾಕುವ ವರೆಗೆ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಉಂಟಾದ ಆತನ ಕೋಪದ ನಿಮಿತ್ತ ಚಿದ್ಕೀಯನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದನು.
- 2 Chronicles 15:9 2 ಪೂರ್ವಕಾಲವೃತ್ತಾಂತ 15:9ಇದಲ್ಲದೆ ಅವನು ಯೆಹೂದದ ಬೆನ್ಯಾ ವಿಾನನ ಸಮಸ್ತರನ್ನೂ ಎಫ್ರಾಯಾಮಿನಿಂದಲೂ ಮನಸ್ಸೆಯಿಂದಲೂ ಸಿಮೆಯೋನಿನಿಂದಲೂ ಅವರ ಕಡೆಗೆ ಬಂದ ಅನ್ಯರನ್ನೂ ಕೂಡಿಸಿದನು. ಅವನ ದೇವರಾದ ಕರ್ತನು ಅವನ ಸಂಗಡ ಇದ್ದಾನೆಂದು ಇವರು ಕಂಡು ಇಸ್ರಾಯೇಲಿನೊಳಗಿಂದ ಅನೇಕರು ಅವನ ಕಡೆಗೆ ಹೋದರು.
- Psalm 78:67–68 ಕೀರ್ತನೆಗಳು 78:67–68ಆತನು ಯೋಸೇಫನ ಗುಡಾರವನ್ನು ತಿರಸ್ಕರಿಸಿ, ಎಫ್ರಾಯಾಮನ ಗೋತ್ರವನ್ನು ಆದು ಕೊಳ್ಳದೆ, ಯೆಹೂದನ ಕುಲವನ್ನೂ ತಾನು ಪ್ರೀತಿ ಮಾಡಿದ ಚೀಯೋನ್ ಪರ್ವತವನ್ನೂ ಆದುಕೊಂಡು,
- Hosea 9:9 ಹೋಶೇಯ 9:9ಗಿಬ್ಯದ ದಿನಗಳಲ್ಲಿ ಆದ ಹಾಗೆ ತಮ್ಮನ್ನು ಬಹಳವಾಗಿ ಕೆಡಿಸಿಕೊಂಡಿದ್ದಾರೆ; ಆದದರಿಂದ ಅವರ ಅಕ್ರಮವನ್ನು ಆತನು ಜ್ಞಾಪಕಮಾಡಿಕೊಳ್ಳುವನು, ಅವರ ಪಾಪಗಳನ್ನು ವಿಚಾರಿಸುವನು.
- 2 Kings 17:18–20 2 ಅರಸುಗಳು 17:18–20ಆದದರಿಂದ ಕರ್ತನು ಇಸ್ರಾಯೇಲಿನ ಮೇಲೆ ಬಹುಕೋಪ ಗೊಂಡು ಅವರನ್ನು ತನ್ನ ಸಮ್ಮುಖದಿಂದ ತೆಗೆದುಹಾಕಿ ದನು. ಯೆಹೂದದ ಗೋತ್ರದ ಹೊರತಾಗಿ ಇನ್ಯಾರೂ ಉಳಿದದ್ದಿಲ್ಲ. ಆದರೆ ಯೆಹೂದದವರು ತಮ್ಮ ದೇವರಾದ ಕರ್ತನ ಆಜ್ಞೆಗಳನ್ನು ಕೈಕೊಳ್ಳದೆ ಇಸ್ರಾ ಯೇಲು ಮಾಡಿಕೊಂಡ ಕಟ್ಟಳೆಗಳಲ್ಲಿ ನಡೆದರು. ಆದದರಿಂದ ಕರ್ತನು ಇಸ್ರಾಯೇಲಿನ ಸಂತತಿ ಯನ್ನೆಲ್ಲಾ ಅಲಕ್ಷ್ಯಮಾಡಿಬಿಟ್ಟು ಅವರನ್ನು ಕುಂದಿಸಿ ಅವರನ್ನು ತನ್ನ ಸಮ್ಮುಖದಿಂದ ತಳ್ಳಿಬಿಡುವ ವರೆಗೆ ಅವರನ್ನು ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟನು.
- Hosea 9:3 ಹೋಶೇಯ 9:3ಅವರು ಕರ್ತನ ದೇಶದಲ್ಲಿ ನೆಲೆಸುವದಿಲ್ಲ; ಆದರೆ ಎಫ್ರಾಯಾಮು ಐಗುಪ್ತಕ್ಕೆ ತಿರುಗುವದು; ಅವರು ಅಶ್ಯೂರಿನಲ್ಲಿ ಅಶುದ್ಧ ವಾದವುಗಳನ್ನು ತಿನ್ನುವರು.
- Jeremiah 23:39 ಯೆರೆಮೀಯ 23:39ಕರ್ತನು ಹೀಗೆ ಹೇಳು ತ್ತಾನೆ--ನಾನು ಇಗೋ, ನಾನೇ ನಿಮ್ಮನ್ನು ಪೂರ್ಣವಾಗಿ ಮರೆತುಬಿಡುವೆನು; ನಿಮ್ಮನ್ನು ನಿಮಗೂ ನಿಮ್ಮ ತಂದೆ ಗಳಿಗೂ ಕೊಟ್ಟ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತಳ್ಳಿಬಿಡುವೆನು.ಮರೆತು ಹೋಗಲಾರದ ನಿತ್ಯವಾದ ನಿಂದೆಯನ್ನೂ ನಿತ್ಯವಾದ ಅವಮಾನವನ್ನೂ ನಿನ್ನ ಮೇಲೆ ಬರಮಾಡುತ್ತೇನೆ.