Jeremiah · chapter 7 · verse 26
Jeremiah 7:26 in Kannada
ಆದಾಗ್ಯೂ ಅವರು ನನ್ನ ಮಾತನ್ನು ಕೇಳದೆ ಕಿವಿಗೊಡದೆ ತಮ ಕುತ್ತಿಗೆಯನ್ನು ಕಠಿಣಮಾಡಿಕೊಂಡು ತಮ್ಮ ಪಿತೃಗಳಿಗಿಂತ ಕೆಟ್ಟದ್ದನ್ನು ಮಾಡಿದರು.
Aadaagyoo avaru nanna maatannu kelade kivigodade tama kuttigeyannu kathinamaadikondu tamma pitrugaliginta kettaddannu maadidaru.
Jeremiah 7:26 in English
- King James Version (KJV)
- Yet they hearkened not unto me, nor inclined their ear, but hardened their neck: they did worse than their fathers.
- World English Bible (WEB)
- Yet they didn’t listen to me or incline their ear, but made their neck stiff. They did worse than their fathers.
- American Standard Version (ASV)
- yet they hearkened not unto me, nor inclined their ear, but made their neck stiff: they did worse than their fathers.
- Bible in Basic English (BBE)
- But still they took no note and would not give ear, but they made their necks stiff, doing worse than their fathers.
- Darby Translation (DBY)
- but they have not hearkened unto me, nor inclined their ear; and they have hardened their neck: they have done worse than their fathers.
- Webster's Bible (WBS)
- Yet they hearkened not to me, nor inclined their ear, but hardened their neck: they did worse than their fathers.
- Young's Literal Translation (YLT)
- And they have not hearkened unto Me, Nor inclined their ear, and harden their neck, They have done evil above their fathers.
Read in context
- 24ಆದರೆ ಅವರು ಕೇಳಲಿಲ್ಲ, ಇಲ್ಲವೆ ಕಿವಿಗೊಡಲಿಲ್ಲ; ಅವರು ತಮ್ಮ ದುಷ್ಟ ಹೃದಯದ ಆಲೋಚನೆಯ ಪ್ರಕಾರವೂ ಕಲ್ಪನೆಯ ಪ್ರಕಾರವೂ ನಡಕೊಂಡು ಮುಂದಕ್ಕೆ ಅಲ್ಲ, ಹಿಂದಕ್ಕೆ ಹೋದರು.
- 25ನಿಮ್ಮ ಪಿತೃಗಳು ಐಗುಪ್ತ ದೇಶವನ್ನು ಬಿಟ್ಟು ಹೋದಂದಿನಿಂದ ಇಂದಿನ ವರೆಗೂ ನಾನು ನನ್ನ ದಾಸರಾಗಿರುವ ಸಕಲ ಪ್ರವಾದಿಗಳನ್ನು ದಿನ ದಿನವೂ ಬೆಳಿಗ್ಗೆ ಎದ್ದು ನಿಮ್ಮ ಬಳಿಗೆ ಕಳುಹಿಸಿದೆನು.
- 26ಆದಾಗ್ಯೂ ಅವರು ನನ್ನ ಮಾತನ್ನು ಕೇಳದೆ ಕಿವಿಗೊಡದೆ ತಮ ಕುತ್ತಿಗೆಯನ್ನು ಕಠಿಣಮಾಡಿಕೊಂಡು ತಮ್ಮ ಪಿತೃಗಳಿಗಿಂತ ಕೆಟ್ಟದ್ದನ್ನು ಮಾಡಿದರು.
- 27ಆದದರಿಂದ ನೀನು ಈ ಮಾತುಗಳನ್ನೆಲ್ಲಾ ಅವ ರಿಗೆ ಹೇಳಬೇಕು, ಆದರೆ ಅವರು ನಿನ್ನ ಮಾತನ್ನು ಕೇಳುವದಿಲ್ಲ; ಅವರನ್ನು ನೀನು ಕರೆಯುವಿ, ಆದರೆ ಅವರು ನಿನಗೆ ಉತ್ತರ ಕೊಡುವದಿಲ್ಲ.
- 28ಹಾಗಾದರೆ ನೀನು ಅವರಿಗೆ--ತನ್ನ ದೇವರಾದ ಕರ್ತನ ಸ್ವರಕ್ಕೆ ವಿಧೇಯವಾಗದಂಥ ಇಲ್ಲವೆ ಶಿಕ್ಷೆಯನ್ನು ಅಂಗೀಕರಿಸ ದಂಥ ಜನಾಂಗವಾಗಿದೆ; ಸತ್ಯವು ನಾಶವಾಯಿತು, ಅದು ಅವರ ಬಾಯಿಯೊಳಗಿಂದ ಕಡಿದುಹಾಕಲ್ಪಟ್ಟಿದೆ.
Cross references
- Jeremiah 16:12 ಯೆರೆಮೀಯ 16:12ನೀವು ನಿಮ್ಮ ತಂದೆಗಳಿಗಿಂತ ಇನ್ನೂ ಕೆಟ್ಟ ಕೆಲಸ ಮಾಡಿದ್ದೀರಿ; ಇಗೋ, ನನ್ನನ್ನು ಕೇಳದ ಹಾಗೆ ನಿಮ್ಮ ನಿಮ್ಮ ಕೆಟ್ಟ ಹೃದಯದ ಕಲ್ಪನೆಯ ಪ್ರಕಾರ ನಡೆದುಕೊಂಡಿದ್ದೀರಿ.
- 2 Chronicles 30:8 2 ಪೂರ್ವಕಾಲವೃತ್ತಾಂತ 30:8ನಿಮ್ಮ ಪಿತೃ ಗಳ ಹಾಗೆ ನಿಮ್ಮ ಕುತ್ತಿಗೆಯನ್ನು ಕಠಿಣಪಡಿಸಬೇಡಿರಿ. ಕರ್ತನಿಗೆ ಕೈಕೊಟ್ಟು ಆತನು ಯುಗಯುಗಕ್ಕೂ ಪರಿಶುದ್ಧ ಮಾಡಿದ ಆತನ ಪರಿಶುದ್ಧ ಸ್ಥಾನದಲ್ಲಿ ಪ್ರವೇಶಿಸಿದ ನಿಮ್ಮ ದೇವರಾದ ಕರ್ತನನ್ನು ಸೇವಿಸಿರಿ. ಆಗ ತನ್ನ ಉಗ್ರಕೋಪವನ್ನು ಬಿಟ್ಟು ನಿಮ್ಮ ಕಡೆಗೆ ತಿರುಗುವನು.
- Jeremiah 7:24 ಯೆರೆಮೀಯ 7:24ಆದರೆ ಅವರು ಕೇಳಲಿಲ್ಲ, ಇಲ್ಲವೆ ಕಿವಿಗೊಡಲಿಲ್ಲ; ಅವರು ತಮ್ಮ ದುಷ್ಟ ಹೃದಯದ ಆಲೋಚನೆಯ ಪ್ರಕಾರವೂ ಕಲ್ಪನೆಯ ಪ್ರಕಾರವೂ ನಡಕೊಂಡು ಮುಂದಕ್ಕೆ ಅಲ್ಲ, ಹಿಂದಕ್ಕೆ ಹೋದರು.
- Matthew 23:32 ಮತ್ತಾಯನು 23:32ಹಾಗಾದರೆ ನಿಮ ಪಿತೃಗಳ ಅಳತೆಯನ್ನು ನೀವೇ ತುಂಬಿಸಿರಿ.
- Jeremiah 17:23 ಯೆರೆಮೀಯ 17:23ಆದರೆ ಅವರು ವಿಧೇಯರಾಗಲಿಲ್ಲ; ಕಿವಿಗೊಟ್ಟು ಕೇಳಲಿಲ್ಲ; ವಿಧೇಯರಾಗದ ಹಾಗೆಯೂ ಉಪದೇಶ ಹೊಂದದ ಹಾಗೆಯೂ ತಮ್ಮ ಕುತ್ತಿಗೆಯನ್ನು ಬೊಗ್ಗಿಸದ ಹಾಗೆಯೂ ಮಾಡಿಕೊಂಡರು.
- Jeremiah 19:15 ಯೆರೆಮೀಯ 19:15ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ಪಟ್ಟಣದ ಮೇಲೆಯೂ ಅದರ ಎಲ್ಲಾ ಊರುಗಳ ಮೇಲೆಯೂ ನಾನು ಅದಕ್ಕೆ ವಿರೋಧವಾಗಿ ಹೇಳಿದ ಕೇಡನ್ನೆಲ್ಲಾ ಬರ ಮಾಡುತ್ತೇನೆ; ಅವರು ನನ್ನ ಮಾತುಗಳನ್ನು ಕೇಳದ ಹಾಗೆ ತಮ್ಮ ಕುತ್ತಿಗೆಗಳನ್ನು ಕಠಿಣ ಮಾಡಿಕೊಂಡಿದ್ದಾರೆ.
- Jeremiah 44:16 ಯೆರೆಮೀಯ 44:16ನೀನು ಕರ್ತನ ಹೆಸರಿನಲ್ಲಿ ನಮ್ಮ ಸಂಗಡ ಮಾತನಾಡಿದ ಮಾತಿನ ವಿಷಯದಲ್ಲಿ ನಾವು ನಿನ್ನನ್ನು ಕೇಳುವದಿಲ್ಲ.
- Jeremiah 26:5 ಯೆರೆಮೀಯ 26:5ನಾನು ಬೆಳಿಗ್ಗೆ ನಿಮ್ಮ ಬಳಿಗೆ ಕಳುಹಿಸಿದಂಥ ನೀವು ಕೇಳದಂಥ ನನ್ನ ಸೇವಕರಾದ ಪ್ರವಾದಿಗಳ ವಾಕ್ಯಗಳನ್ನು ಕೇಳದೆಹೋದರೆ
- Jeremiah 34:14 ಯೆರೆಮೀಯ 34:14ಏಳು ವರುಷಗಳ ಕಡೆಯಲ್ಲಿ ಒಬ್ಬೊಬ್ಬನು ತನಗೆ ಮಾರಲ್ಪಟ್ಟಿದ್ದ ತನ್ನ ಸಹೋದರನಾದ ಇಬ್ರಿಯನನ್ನು ಕಳುಹಿಸಬೇಕೆಂದೂ ಅವನು ನಿನಗೆ ಆರು ವರುಷ ಸೇವೆಮಾಡಿದ ಮೇಲೆ ನಿನ್ನ ಕಡೆಯಿಂದ ಅವನನ್ನು ಬಿಡುಗಡೆಯಾಗಿ ಕಳುಹಿಸಬೇಕೆಂದೂ ಹೇಳಿದೆನು; ನಿಮ್ಮ ಪಿತೃಗಳು ನನ್ನ ಮಾತಿಗೆ ಕಿವಿಗೊಡಲಿಲ್ಲ.
- Nehemiah 9:16–17 ನೆಹೆಮೀಯ 9:16–17ಆದರೆ ಅವರೂ ನಮ್ಮ ತಂದೆಗಳೂ ಗರ್ವಪಟ್ಟು ನಡೆದು ತಮ್ಮ ಕುತ್ತಿಗೆಯನ್ನು ಕಠಿಣಮಾಡಿ ನಿನ್ನ ಆಜ್ಞೆ ಗಳನ್ನು ಕೇಳದೆ ಹೋದರು. ಕೇಳದೆಯೂ ನೀನು ಅವರ ಮಧ್ಯದಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಜ್ಞಾಪಕ ಮಾಡದೆಯೂ ತಮ್ಮ ಕುತ್ತಿಗೆಯನ್ನು ಕಠಿಣ ಮಾಡಿ ಎದುರುಬಿದ್ದು ತಮ್ಮ ದಾಸತ್ವಕ್ಕೆ ತಿರಿಗಿ ಹೋಗುವ ಹಾಗೆ ಅಧಿಪತಿಯನ್ನು ನೇಮಿಸಿದರು. ಆದರೆ ನೀನು ಮನ್ನಿಸುವ ದೇವರಾಗಿಯೂ ಕೃಪಾಪೂರ್ಣನೂ ಅಂತಃ ಕರಣವೂ ದೀರ್ಘಶಾಂತಿಯೂ ಮಹಾದಯೆಯೂ ಆಗಿರುವವನಾಗಿಯೂ ಇರುವದರಿಂದ ಅವರನ್ನು ಕೈ ಬಿಡಲಿಲ್ಲ.
- Jeremiah 6:17 ಯೆರೆಮೀಯ 6:17ಇದಲ್ಲದೆ ನಿಮ್ಮ ಮೇಲೆ ಕಾವಲುಗಾರರನ್ನು ಇರಿಸಿ ತುತೂರಿಯ ಶಬ್ದವನ್ನು ಆಲೈ ಸಿರಿ ಅಂದೆನು; ಆದರೆ ಅವರು--ನಾವು ಆಲೈಸುವ ದಿಲ್ಲ ಅಂದರು.
- Nehemiah 9:29 ನೆಹೆಮೀಯ 9:29ನೀನು ಅವರನ್ನು ನಿನ್ನ ನ್ಯಾಯಪ್ರಮಾಣಕ್ಕೆ ತಿರಿಗಿ ಬರುವ ಹಾಗೆ ಅವರಿಗೆ ವಿರೋಧವಾಗಿ ಸಾಕ್ಷಿ ಹೇಳಿದಿ. ಆದರೆ ಅವರು ಗರ್ವಪಟ್ಟು ನಿನ್ನ ಆಜ್ಞೆಗಳನ್ನು ಕೇಳದೆ ಮನುಷ್ಯರು ಯಾವವುಗಳನ್ನು ಕೈಕೊಳ್ಳುವದರಿಂದ ಬದುಕುವರೋ ಆ ನಿನ್ನ ನ್ಯಾಯಗಳಿಗೆ ವಿರೋಧವಾಗಿ ಪಾಪಮಾಡಿಹೆಗಲುಕೊಡದೆ ಕುತ್ತಿಗೆಯನ್ನು ಕಠಿಣಪಡಿಸಿಕೊಂಡು ಕೇಳದೆಹೋದರು.