Jeremiah · chapter 7 · verse 27
Jeremiah 7:27 in Kannada
ಆದದರಿಂದ ನೀನು ಈ ಮಾತುಗಳನ್ನೆಲ್ಲಾ ಅವ ರಿಗೆ ಹೇಳಬೇಕು, ಆದರೆ ಅವರು ನಿನ್ನ ಮಾತನ್ನು ಕೇಳುವದಿಲ್ಲ; ಅವರನ್ನು ನೀನು ಕರೆಯುವಿ, ಆದರೆ ಅವರು ನಿನಗೆ ಉತ್ತರ ಕೊಡುವದಿಲ್ಲ.
Aadadarinda neenu ee maatugalannellaa ava rige helabeku, aadare avaru ninna maatannu keluvadilla; avarannu neenu kareyuvi, aadare avaru ninage uttara koduvadilla.
Jeremiah 7:27 in English
- King James Version (KJV)
- Therefore thou shalt speak all these words unto them; but they will not hearken to thee: thou shalt also call unto them; but they will not answer thee.
- World English Bible (WEB)
- “You shall speak all these words to them, but they will not listen to you. You shall also call to them, but they will not answer you.
- American Standard Version (ASV)
- And thou shalt speak all these words unto them; but they will not hearken to thee: thou shalt also call unto them; but they will not answer thee.
- Bible in Basic English (BBE)
- And you are to say all these words to them, but they will not give ear to you: you will send out your voice to them, but they will give no answer.
- Darby Translation (DBY)
- And thou shalt speak all these words unto them, but they will not hearken unto thee; and thou shalt call unto them, but they will not answer thee.
- Webster's Bible (WBS)
- Therefore thou shalt speak all these words to them; but they will not hearken to thee: thou shalt also call to them; but they will not answer thee.
- Young's Literal Translation (YLT)
- And thou hast spoken unto them all these words, And they do not hearken to thee, And thou hast called unto them, And they do not answer thee.
Read in context
- 25ನಿಮ್ಮ ಪಿತೃಗಳು ಐಗುಪ್ತ ದೇಶವನ್ನು ಬಿಟ್ಟು ಹೋದಂದಿನಿಂದ ಇಂದಿನ ವರೆಗೂ ನಾನು ನನ್ನ ದಾಸರಾಗಿರುವ ಸಕಲ ಪ್ರವಾದಿಗಳನ್ನು ದಿನ ದಿನವೂ ಬೆಳಿಗ್ಗೆ ಎದ್ದು ನಿಮ್ಮ ಬಳಿಗೆ ಕಳುಹಿಸಿದೆನು.
- 26ಆದಾಗ್ಯೂ ಅವರು ನನ್ನ ಮಾತನ್ನು ಕೇಳದೆ ಕಿವಿಗೊಡದೆ ತಮ ಕುತ್ತಿಗೆಯನ್ನು ಕಠಿಣಮಾಡಿಕೊಂಡು ತಮ್ಮ ಪಿತೃಗಳಿಗಿಂತ ಕೆಟ್ಟದ್ದನ್ನು ಮಾಡಿದರು.
- 27ಆದದರಿಂದ ನೀನು ಈ ಮಾತುಗಳನ್ನೆಲ್ಲಾ ಅವ ರಿಗೆ ಹೇಳಬೇಕು, ಆದರೆ ಅವರು ನಿನ್ನ ಮಾತನ್ನು ಕೇಳುವದಿಲ್ಲ; ಅವರನ್ನು ನೀನು ಕರೆಯುವಿ, ಆದರೆ ಅವರು ನಿನಗೆ ಉತ್ತರ ಕೊಡುವದಿಲ್ಲ.
- 28ಹಾಗಾದರೆ ನೀನು ಅವರಿಗೆ--ತನ್ನ ದೇವರಾದ ಕರ್ತನ ಸ್ವರಕ್ಕೆ ವಿಧೇಯವಾಗದಂಥ ಇಲ್ಲವೆ ಶಿಕ್ಷೆಯನ್ನು ಅಂಗೀಕರಿಸ ದಂಥ ಜನಾಂಗವಾಗಿದೆ; ಸತ್ಯವು ನಾಶವಾಯಿತು, ಅದು ಅವರ ಬಾಯಿಯೊಳಗಿಂದ ಕಡಿದುಹಾಕಲ್ಪಟ್ಟಿದೆ.
- 29ಯೆರೂಸಲೇಮೇ, ನಿನ್ನ ಕೂದಲನ್ನು ಕತ್ತರಿಸಿ ಬಿಸಾಡಿಬಿಡು; ಉನ್ನತ ಸ್ಥಳಗಳಲ್ಲಿ ಗೋಳಾಟವನ್ನು ಎತ್ತು; ಕರ್ತನು ತನ್ನ ಉಗ್ರದ ಸಂತತಿಯನ್ನು ನಿರಾಕರಿಸಿ ತಳ್ಳಿ ಬಿಟ್ಟಿದ್ದಾನೆ;
Cross references
- Zechariah 7:13 ಜೆಕರ್ಯ 7:13ಆಗ ಆದದ್ದೇ ನಂದರೆ--ಅವನು ಕೂಗಲು ಅವರು ಕೇಳದೆ ಇದ್ದ ಪ್ರಕಾರ ಅವರು ಕೂಗಲು ನಾನು ಕೇಳದೆ ಇದ್ದೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.ಇದಲ್ಲದೆ ಅವರು ಅರಿಯದ ಎಲ್ಲಾ ಜನಾಂಗಗಳೊಳಗೆ ಅವರನ್ನು ಸುಂಟರ ಗಾಳಿಯಿಂದ ಚದರಿಸಿಬಿಟ್ಟೆನು. ಹೀಗೆ ಅವರ ಹಿಂದೆ ದೇಶವು ನಾಶವಾಯಿತು; ಹಾದುಹೋಗುವವನೂ ತಿರುಗಿಕೊಳ್ಳುವವನೂ ಇಲ್ಲದೆ ಹೋದರು. ರಮ್ಯವಾದ ದೇಶವನ್ನು ಹಾಳಾಗಿ ಮಾಡಿದರು.
- Jeremiah 1:7 ಯೆರೆಮೀಯ 1:7ಆಗ ಕರ್ತನು ನನಗೆ--ನಾನು ಚಿಕ್ಕವನೆಂದು ಹೇಳಬೇಡ; ನಾನು ನಿನ್ನನ್ನು ಕಳುಹಿಸುವವರೆಲ್ಲರ ಬಳಿಗೆ ಹೋಗಬೇಕು; ನಾನು ನಿನಗೆ ಆಜ್ಞಾಪಿಸುವದನ್ನೆಲ್ಲಾ ಮಾತನಾಡಬೇಕು.
- Isaiah 65:12 ಯೆಶಾಯ 65:12ಆದದರಿಂದ ನಿಮ್ಮನ್ನು ಕತ್ತಿಗೆ ನೇಮಿಸು ವೆನು ನೀವೆಲ್ಲರೂ ಕೊಲೆಗೆ ಬೊಗ್ಗಿಕೊಳ್ಳುವಿರಿ. ನಾನು ಕರೆಯಲು, ನೀವು ಉತ್ತರ ಕೊಡಲಿಲ್ಲ; ನಾನು ಮಾತನಾಡಲು ನೀವು ಕೇಳಿಸಿಕೊಳ್ಳಲಿಲ್ಲ; ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದಿರಿ, ನಾನು ಮೆಚ್ಚದ್ದನ್ನು ಆರಿಸಿಕೊಂಡಿರಿ.
- Jeremiah 26:2 ಯೆರೆಮೀಯ 26:2ಕರ್ತನು ಹೀಗೆ ಹೇಳುತ್ತಾನೆ--ಕರ್ತನ ಆಲಯದ ಅಂಗಳದಲ್ಲಿ ನಿಂತುಕೊಂಡು ಕರ್ತನ ಆಲಯದಲ್ಲಿ ಆರಾಧಿಸುವದಕ್ಕೆ ಬರುವ ಯೆಹೂದದ ಪಟ್ಟಣದವರೆಲ್ಲರಿಗೆ ಹೇಳಬೇಕೆಂದು ನಾನು ನಿನಗೆ ಆಜ್ಞಾಪಿಸಿದ ವಾಕ್ಯಗಳನ್ನೆಲ್ಲಾ ಹೇಳು; ಒಂದು ಮಾತಾದರೂ ಕಡಿಮೆ ಮಾಡಬೇಡ;
- Isaiah 50:2 ಯೆಶಾಯ 50:2ನಾನು ಬಂದಾಗ ಯಾಕೆ ಅಲ್ಲಿ ಒಬ್ಬನೂ ಇರಲಿಲ್ಲ? ನಾನು ಕರೆದಾಗ ಯಾಕೆ ಯಾರೂ ಉತ್ತರ ಕೊಡಲಿಲ್ಲ? ನನ್ನ ಹಸ್ತವು ವಿಮೋಚಿಸದಂಥಾ ಮೋಟುಗೈಯೋ? ಇಲ್ಲವೇ ಬಿಡಿಸುವದಕ್ಕೆ ನನ್ನಲ್ಲಿ ಶಕ್ತಿಯಿಲ್ಲವೋ? ಇಗೋ, ನನ್ನ ಗದರಿಕೆಯಿಂದ ನಾನು ಸಮುದ್ರವನ್ನು ಒಣಗಿಸುತ್ತೇನೆ. ನಾನು ನದಿಗಳನ್ನು ಅರಣ್ಯವನ್ನಾಗಿ ಮಾಡುತ್ತೇನೆ. ನೀರಿಲ್ಲದ ಕಾರಣ ಅಲ್ಲಿಯ ವಿಾನುಗಳು ಬಾಯಾರಿ ಸತ್ತುನಾರುವವು.
- Jeremiah 1:19 ಯೆರೆಮೀಯ 1:19ಅವರು ನಿನಗೆ ವಿರೋಧವಾಗಿ ಯುದ್ಧ ಮಾಡುವರು; ಆದರೆ ನಿನ್ನನ್ನು ಗೆಲ್ಲುವದಿಲ್ಲ; ನಿನ್ನನ್ನು ತಪ್ಪಿಸುವದಕ್ಕೆ ನಾನೇ ನಿನ್ನ ಸಂಗಡ ಇದ್ದೇನೆ ಎಂದು ಕರ್ತನು ಅನ್ನುತ್ತಾನೆ.
- Ezekiel 3:4–11 ಯೆಹೆಜ್ಕೇಲನು 3:4–11ನನಗೆ ಆತನು--ಮನುಷ್ಯಪುತ್ರನೇ, ಹೋಗು; ಇಸ್ರಾಯೇಲ್ಯರ ಮನೆಯವರ ಬಳಿಗೆ ಹೋಗಿ ಅವರ ಸಂಗಡ ನನ್ನ ಮಾತುಗಳನ್ನು ಮಾತನಾಡು. ನೀನು ಕಠಿಣವಾದ ಭಾಷೆಯಲ್ಲಿ ಸೋಜಿಗದ ಮಾತುಗಳ ನ್ನಾಡುವ ಜನರ ಬಳಿಗೆ ಕಳುಹಿಸದೆ ಇಸ್ರಾಯೇಲಿನ ಮನೆಯವರ ಬಳಿಗೆ ಕಳುಹಿಸಲ್ಪಟ್ಟಿರುವಿ. ನೀನು ಕಠಿಣ ಭಾಷೆಯಲ್ಲಿ ಸೋಜಿಗದ ಮಾತುಗಳನ್ನಾಡುವವರ ಬಳಿಗೆ ಕಳುಹಿಸಲ್ಪಟ್ಟವನಲ್ಲ; ಇಂಥವರ ಕಡೆಗೆ ನಾನು ನಿನ್ನನ್ನು ಕಳುಹಿಸಿದ್ದ ಪಕ್ಷದಲ್ಲಿ ನಿಶ್ಚಯವಾಗಿ ಅವರು ನಿನ್ನ ಮಾತಿಗೆ ಕಿವಿಗೊಡುತ್ತಿದ್ದರು. ಆದರೆ ಇಸ್ರಾ ಯೇಲಿನ ಮನೆತನದವರು ನಿನಗೆ ಕಿವಿಗೊಡುವದಿಲ್ಲ; ಅವರು ನನಗೆ ಕಿವಿಗೊಟ್ಟಿಲ್ಲ. ಯಾಕಂದರೆ ಎಲ್ಲಾ ಇಸ್ರಾಯೇಲಿನ ಮನೆತನದವರು ಕಠಿಣ ಹೃದಯ ದವರೂ ನಿರ್ಲಜ್ಜರೂ (ನಾಚಿಕೆಗೆಟ್ಟವರೂ) ಆಗಿದ್ದಾರೆ. ಇಗೋ, ನಾನು ನಿನ್ನ ಮುಖವನ್ನು ಅವರ ಮುಖಗಳ ಎದುರಿಗೆ ಕಠಿಣ ಮಾಡಿದ್ದೇನೆ; ಮತ್ತು ನಿನ್ನ ಹಣೆಯನ್ನು ಅವರ ಹಣೆಗಳ ಎದುರಾಗಿ ಬಲಪಡಿಸಿದ್ದೇನೆ. ನಾನು ನಿನ್ನ ಹಣೆಯನ್ನು ಅಭೇದ್ಯವಾದ ಕಲ್ಲಿಗಿಂತ ಗಟ್ಟಿಯಾಗಿ ವಜ್ರದಂತೆ ಮಾಡಿದ್ದೇನೆ; ಇಲ್ಲವೆ ತಿರುಗಿ ಬೀಳುವ ಮನೆತನದವರಾದರೂ ನೀನು ಅವರಿಗೆ ಭಯಪಡ ಬೇಡ; ಮತ್ತು ಅವರ ನೋಟಕ್ಕೆ ನೀನು ಗಾಬರಿಯಾಗ ಬೇಡ. ಇದಲ್ಲದೆ ಆತನು ನನಗೆ--ನರಪುತ್ರನೇ, ನಾನು ನಿನ್ನ ಸಂಗಡ ಆಡುವ ಈ ನನ್ನ ಮಾತುಗಳನ್ನೆಲಾ ನಿನ್ನ ಕಿವಿಗಳಿಂದ ಕೇಳಿ ಹೃದಯದಲ್ಲಿ ಅಂಗೀಕರಿಸಿಕೋ. ಹೋಗು, ಸೆರೆಯಾಗಿರುವ ನಿನ್ನ ಜನರ ಮಕ್ಕಳ ಬಳಿಗೆ ಹೋಗಿ, ಅವರ ಸಂಗಡ ಮಾತನಾಡು, ಅವರು ಕೇಳಿದರೂ ಕೇಳದಿದ್ದರೂ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಅವರಿಗೆ ಹೇಳು.
- Acts 20:27 ಅಪೊಸ್ತಲರ ಕೃತ್ಯಗಳು 20:27ಯಾಕಂದರೆ ದೇವರ ಸಂಕಲ್ಪ ವನ್ನೆಲ್ಲಾ ನಿಮಗೆ ತಿಳಿಸುವದರಲ್ಲಿ ನಾನು ಹಿಂದೆಗೆಯ ಲಿಲ್ಲ.
- Ezekiel 3:17–18 ಯೆಹೆಜ್ಕೇಲನು 3:17–18ಮನುಷ್ಯಪುತ್ರನೇ, ನಾನು ನಿನ್ನನ್ನು ಇಸ್ರಾಯೇ ಲಿನ ಮನೆಯನ್ನು ಕಾಯಲು ಕಾವಲುಗಾರನನ್ನಾಗಿ ಮಾಡಿದ್ದೇನೆ. ಆದದರಿಂದ ನನ್ನ ವಾಕ್ಯವನ್ನು ನನ್ನ ಬಾಯಿಂದ ಕೇಳಿ ನನ್ನಿಂದ ಅವರಿಗೆ ಎಚ್ಚರಿಕೆ ಕೊಡು. ನಾನು ದುಷ್ಟನಿಗೆ--ನೀನು ನಿಶ್ಚಯವಾಗಿ ಸಾಯುವಿ ಯೆಂದು ಹೇಳುವಾಗ ನೀನು ಅವನನ್ನು ಎಚ್ಚರಿಸದೆ ಅವನನ್ನು ಬದುಕಿಸುವ ಹಾಗೆ ದುಷ್ಟನನ್ನು ಅವನ ದುಷ್ಟಮಾರ್ಗದ ವಿಷಯದಲ್ಲಿ ಎಚ್ಚರಿಸಿ ಮಾತನಾಡದೆ ಹೋದರೆ ಆ ದುಷ್ಟನು ತನ್ನ ಅಕ್ರಮದಲ್ಲೇ ಸಾಯು ವನು. ಆದರೆ ಅವನ ರಕ್ತವನ್ನು ನಿನ್ನ ಕೈಯಿಂದ ದುಷ್ಟತ್ವ ಕ್ಕಾಗಿ ನಾನು ವಿಚಾರಿಸುವೆನು.
- Isaiah 6:9–10 ಯೆಶಾಯ 6:9–10ಅದಕ್ಕೆ ಆತನು -- ನೀನು ಈ ಜನರ ಬಳಿಗೆ ಹೋಗಿ -- ನೀವು ಕಿವಿಯಾರೆ ಕೇಳಿದರೂ ತಿಳಿಯಬಾರದೆಂದೂ ಕಣ್ಣಾರೆ ಕಂಡರೂ ಅದನ್ನು ಗ್ರಹಿಸಬಾರದೆಂದೂ ತಿಳಿಸು. ತಮ್ಮ ಕಣ್ಣುಗಳಿಂದ ನೋಡದಂತೆಯೂ ತಮ್ಮ ಕಿವಿಗಳಿಂದ ಕೇಳದಂತೆಯೂ ತಮ್ಮ ಹೃದಯದಿಂದ ಗ್ರಹಿಸಿ ತಿರುಗಿಕೊಂಡು ಸ್ವಸ್ಥವಾಗ ದಂತೆಯೂ ಈ ಜನರ ಹೃದಯವನ್ನು ಕೊಬ್ಬಿಸಿ ಕಿವಿ ಯನ್ನು ಮಂದಗೊಳಿಸಿ ಅವರ ಕಣ್ಣುಗಳನ್ನು ಮುಚ್ಚು ಎಂದು ನನಗೆ ಹೇಳಿದನು.
- Ezekiel 2:4–7 ಯೆಹೆಜ್ಕೇಲನು 2:4–7ಅವರು ನಿರ್ಲಜ್ಜರಾದ ಒರಟು ಹೃದಯವುಳ್ಳ ಮಕ್ಕಳಾಗಿದ್ದಾರೆ. ನಾನು ನಿನ್ನನ್ನು ಅವರ ಬಳಿಗೆ ಕಳುಹಿಸುತ್ತೇನೆ ನೀನು ಅವರಿಗೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳಬೇಕು. ಅವರು ಕೇಳಲಿ ಅಥವಾ ಕೇಳದಿರಲಿ (ಅವರು ತಿರುಗಿಬೀಳುವ ಮನೆಯವರು); ಆದರೆ ತಮ್ಮೊಳಗೆ ಒಬ್ಬ ಪ್ರವಾದಿ ಇರುವನೆಂದು ತಿಳಿದು ಕೊಂಡರೆ ಸಾಕು. ಇದಲ್ಲದೆ ಮನುಷ್ಯಪುತ್ರನೇ, ನೀನು ಅವರಿಗಾ ಗಲೀ ಅವರ ಮಾತುಗಳಿಗಾಗಲೀ ಭಯಪಡಬೇಡ. ಮುಳ್ಳುಗಳೂ ದತ್ತೂರಿಗಳೂ ನಿನ್ನ ಸಂಗಡ ಇದ್ದರೂ ಚೇಳುಗಳ ನಡುವೆ ನೀನು ವಾಸಿಸಿದರೂ ಸರಿ; ನೀನು ಅವರ ಮಾತುಗಳಿಗೆ ಭಯಪಡಬೇಡ, ಅವರು ತಿರುಗಿ ಬೀಳುವ ಮನೆಯವರಾದರೂ ಅವರ ನೋಟಗಳಿಗೆ ಅಂಜಬೇಡ. ಕೇಳಿದರೂ ಸರಿ, ಕೇಳದಿದ್ದರೂ ಸರಿ; ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು; ಅವರು ಖಂಡಿತವಾಗಿಯೂ ತಿರುಗಿಬೀಳುವವರೇ.