Jeremiah · chapter 8 · verse 18
Jeremiah 8:18 in Kannada
ದುಃಖದ ನಿಮಿತ್ತ ನನ್ನನ್ನು ಆದರಿಸಿಕೊಳ್ಳಲು ನಾನು ಮನಸ್ಸು ಮಾಡಿದಾಗ ನನ್ನ ಹೃದಯವು ನನ್ನಲ್ಲಿ ಕುಂದಿಹೋಗಿದೆ. ದೂರ ದೇಶದಿಂದ ನನ್ನ ಜನರ ಮಗಳು ಕೂಗುವ ಶಬ್ದವನ್ನು ನೋಡಿರಿ.
Duhkhada nimitta nannannu aadarisikollalu naanu manassu maadidaaga nanna hrudayavu nannalli kundihogide. Doora deshadinda nanna janara magalu kooguva shabdavannu nodiri.
Jeremiah 8:18 in English
- King James Version (KJV)
- [When] I would comfort myself against sorrow, my heart [is] faint in me.
- World English Bible (WEB)
- Oh that I could comfort myself against sorrow! My heart is faint within me.
- American Standard Version (ASV)
- Oh that I could comfort myself against sorrow! my heart is faint within me.
- Bible in Basic English (BBE)
- Sorrow has come on me! my heart in me is feeble.
- Darby Translation (DBY)
- My comfort in my sadness! my heart is faint in me!
- Webster's Bible (WBS)
- [When] I would comfort myself against sorrow, my heart [is] faint in me.
- Young's Literal Translation (YLT)
- My refreshing for me [is] sorrow, For me my heart [is] sick.
Read in context
- 16ಅವನ ಕುದುರೆಗಳ ಶ್ವಾಸವು ದಾನಿನಿಂದ ಕೇಳಿಸಿತು, ಅವನ ಬಲವಾದವು ಗಳ ಕೆನೆತದ ಶಬ್ದದಿಂದ ದೇಶವೆಲ್ಲಾ ನಡುಗುತ್ತದೆ; ಯಾಕಂದರೆ ಅವರು ಬಂದರು; ದೇಶವನ್ನೂ ಅದರ ಲ್ಲಿರುವದೆಲ್ಲವನ್ನೂ ಪಟ್ಟಣವನ್ನೂ ಅದರ ನಿವಾಸಿ ಗಳನ್ನೂ ನುಂಗಿಬಿಟ್ಟಿದ್ದಾರೆ.
- 17ಇಗೋ, ನಾನು ನಿಮ್ಮಲ್ಲಿ ಸರ್ಪಗಳನ್ನು ಮಂತ್ರಿಸಕೂಡದ ನಾಗರಗಳನ್ನ್ನು ಕಳು ಹಿಸುತ್ತೇನೆ; ಅವು ನಿಮ್ಮನ್ನು ಕಚ್ಚುವವೆಂದು ಕರ್ತನು ಅನ್ನುತ್ತಾನೆ.
- 18ದುಃಖದ ನಿಮಿತ್ತ ನನ್ನನ್ನು ಆದರಿಸಿಕೊಳ್ಳಲು ನಾನು ಮನಸ್ಸು ಮಾಡಿದಾಗ ನನ್ನ ಹೃದಯವು ನನ್ನಲ್ಲಿ ಕುಂದಿಹೋಗಿದೆ. ದೂರ ದೇಶದಿಂದ ನನ್ನ ಜನರ ಮಗಳು ಕೂಗುವ ಶಬ್ದವನ್ನು ನೋಡಿರಿ.
- 19ಏನಂ ದರೆ--ಕರ್ತನು ಚೀಯೋನಿನಲ್ಲಿ ಇಲ್ಲವೋ? ಅವಳ ಅರಸನು ಅವಳಲ್ಲಿ ಇಲ್ಲವೋ ಎಂಬದು. ಅವರು ತಮ್ಮ ವಿಗ್ರಹಗಳಿಂದಲೂ ವಿಚಿತ್ರವಾದ ವ್ಯರ್ಥತ್ವ ಗಳಿಂದಲೂ ನನಗೆ ಕೋಪವನ್ನೆಬ್ಬಿಸಿದ್ದು ಯಾಕೆ?
- 20ಸುಗ್ಗಿ ಹೋಯಿತು, ಬೇಸಿಗೆಕಾಲ ತೀರಿತು; ಆದರೆ ನಾವು ರಕ್ಷಿಸಲ್ಪಡಲಿಲ್ಲ.
Cross references
- Isaiah 22:4 ಯೆಶಾಯ 22:4ಹೀಗಿರಲು ನನ್ನ ಕಡೆ ಯಿಂದ ದೃಷ್ಟಿ ತಿರುಗಿಸಿರಿ. ಬಹುಸಂಕಟದಿಂದ ನಾನು ಅಳುವೆನು. ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವದಕ್ಕೆ ತವಕಗೊಳ್ಳದಿರಿ ಅಂದೆನು.
- Lamentations 1:16–17 ಪ್ರಲಾಪಗಳು 1:16–17ಇವುಗಳ ನಿಮಿತ್ತ ನಾನು ಅಳುತ್ತೇನೆ; ಕಣ್ಣೀರು ಧಾರೆಧಾರೆಯಾಗಿ ಸುರಿಯುವದು, ನನ್ನನ್ನು ಆದರಿಸುವಾತನೂ ನನ್ನ ಪ್ರಾಣವನ್ನು ಬದುಕಿಸುವ ಆದರಿಕನೂ ನನ್ನಿಂದ ದೂರವಾಗಿದ್ದಾನೆ; ನನ್ನ ಮಕ್ಕಳು ಹಾಳಾಗಿದ್ದಾರೆ, ನನ್ನ ಶತ್ರುವು ಗೆದ್ದಿದ್ದಾನೆ. ಚೀಯೋನ್ ತನ್ನ ಕೈಗಳನ್ನು ಚಾಚುತ್ತಾಳೆ; ಅಲ್ಲಿ ಅವಳನ್ನು ಆದರಿಸುವವನು ಒಬ್ಬನೂ ಇಲ್ಲ; ಯಾಕೋಬಿಗೆ ಸಂಬಂಧಿಸಿದ ಅವನ ವೈರಿಗಳು ಅವನ ಸುತ್ತಲೂ ಇರಬೇಕೆಂದು ಕರ್ತನು ಆಜ್ಞಾಪಿಸಿದ್ದಾನೆ. ಯೆರೂಸಲೇಮು ಅವರ ಮದ್ಯದಲ್ಲಿ ಮುಟ್ಟಾದ ಹೆಂಗಸಿನ ಹಾಗೆ ಇದೆ.
- Jeremiah 6:24 ಯೆರೆಮೀಯ 6:24ಅದರ ಕೀರ್ತಿಯನ್ನು ಕೇಳಿದ್ದೇವೆ, ನಮ್ಮ ಕೈಗಳು ಜೋಲಾ ಡುತ್ತವೆ; ಸಂಕಟವೂ ಹೆರುವವಳಂತಿರುವ ನೋವೂ ನಮ್ಮನ್ನು ಹಿಡಿಯಿತು.
- Lamentations 5:17 ಪ್ರಲಾಪಗಳು 5:17ಇದಕ್ಕಾಗಿ ನಮ್ಮ ಹೃದಯವು ದುರ್ಬಲವಾಗಿದೆ; ಇವುಗಳಿಂದ ನಮ್ಮ ಕಣ್ಣುಗಳು ಮೊಬ್ಬಾಗಿವೆ.
- Habakkuk 3:16 ಹಬಕ್ಕೂಕ 3:16ನಾನು ಕೇಳಿದಾಗ ನನ್ನ ಹೊಟ್ಟೆಯು ತಳಮಳಗೊಂಡಿತು, ಆ ಶಬ್ದಕ್ಕೆ ನನ್ನ ತುಟಿಗಳು ಅದರಿದವು; ಇಕ್ಕಟ್ಟಿನ ದಿನದಲ್ಲಿ ನಾನು ವಿಶ್ರಾಂತಿಯನ್ನು ಹೊಂದುವ ಹಾಗೆ ಕೊಳೆಯುವಿಕೆಯು ನನ್ನ ಎಲುಬುಗಳಲ್ಲಿ ಸೇರಿತು, ನಾನು ನಿಂತ ಹಾಗೆಯೇ ನಡುಗಿದೆನು; ಆತನು ಜನರ ಬಳಿಗೆ ಬರುವಾಗ ತನ್ನ ಸೈನ್ಯಗಳ ಕೂಡ ಅವರ ಮೇಲೆ ದಾಳಿ ಮಾಡುವನು.
- Job 7:13–14 ಯೋಬನು 7:13–14ನನ್ನ ಮಂಚವು ನನ್ನನ್ನು ಆದರಿಸಲಿ, ನನ್ನ ಹಾಸಿಗೆಯು ನನ್ನ ಚಿಂತೆಯನ್ನು ಶಮನಮಾಡಲಿ ಅನ್ನಲಾಗಿ ಸ್ವಪ್ನ ಗಳಿಂದ ನನ್ನನ್ನು ಹೆದರಿಸುತ್ತೀ; ದರ್ಶನಗಳಿಂದ ನನ್ನನ್ನು ನಡುಗಿಸುತ್ತೀ.
- Daniel 10:16–17 ದಾನಿಯೇಲನು 10:16–17ಆಗ ಇಗೋ, ಮನುಷ್ಯಕುಮಾರನ ಹೋಲಿಕೆಯ ಹಾಗಿ ರುವ ಒಬ್ಬನು ನನ್ನ ತುಟಿಗಳನ್ನು ಮುಟ್ಟಿದನು. ಆಗ ನಾನು ಬಾಯಿತೆರೆದು ಮಾತನಾಡಿ ನನ್ನ ಮುಂದೆ ನಿಂತಿದ್ದವನಿಗೆ ಹೇಳಿದ್ದೇನಂದರೆ--ಓ ನನ್ನ ಒಡೆಯನೇ, ಆ ದರ್ಶನದ ನಿಮಿತ್ತ ನನ್ನ ಸಂಕಟಗಳು ನನ್ನ ಮೇಲೆ ತಿರುಗಿಕೊಂಡಿವೆ; ನಾನು ತ್ರಾಣವನ್ನು ಉಳಿಸಿಕೊಳ್ಳ ಲಿಲ್ಲ. ಈ ನಿನ್ನ ಒಡೆಯನ ಸೇವಕನು ನನ್ನ ಒಡೆಯನ ಸಂಗಡ ಹೇಗೆ ಮಾತನಾಡುವನು? ನನ್ನ ವಿಷಯ ವಾದರೋ ಆಗಿನಿಂದಲೂ ನನ್ನ ತ್ರಾಣವು ನನ್ನಲ್ಲಿ ಉಳಿಯಲಿಲ್ಲ; ಉಸಿರು ಸಹ ನನ್ನಲ್ಲಿ ಉಳಿಯಲಿಲ್ಲ.
- Jeremiah 10:19–22 ಯೆರೆಮೀಯ 10:19–22ನನ್ನ ನೋವಿನ ನಿಮಿತ್ತ ನನಗೆ ಅಯ್ಯೋ, ನನ್ನ ಗಾಯವು ಕಠಿಣವಾಗಿದೆ; ಆದರೆ ನಾನು--ನಿಶ್ಚಯ ವಾಗಿ ಇದು ಸಂತಾಪವಾಗಿದೆ; ನಾನು ತಾಳಲೇಬೇಕು ಅಂದೆನು. ನನ್ನ ಗುಡಾರವು ಸೂರೆಯಾಯಿತು; ನನ್ನ ಹಗ್ಗಗಳೆಲ್ಲಾ ಹರಿದಿವೆ; ನನ್ನ ಮಕ್ಕಳು ನನ್ನನ್ನು ಬಿಟ್ಟು ಹೋಗಿದ್ದಾರೆ, ಅವರು ಇಲ್ಲ; ಇನ್ನು ಮೇಲೆ ನನ್ನ ಡೇರೆಯನ್ನು ಹರಡುವದಕ್ಕೂ ನನ್ನ ಪರದೆಗಳನ್ನು ನಿಲ್ಲಿಸುವದಕ್ಕೂ ಒಬ್ಬನೂ ಇಲ್ಲ. ಕುರುಬರು ಪಶು ಗಳಂತಾದರು; ಅವರು ಕರ್ತನನ್ನು ಹುಡುಕಲಿಲ್ಲ, ಆದದರಿಂದ ಅವರು ಸಫಲವಾಗುವದಿಲ್ಲ; ಅವರ ಮಂದೆಗಳೆಲ್ಲಾ ಚದರಿಸಲ್ಪಡುವವು. ಇಗೋ, ಯೆಹೂದದ ಪಟ್ಟಣಗಳನ್ನು ಹಾಳು ಮಾಡುವದಕ್ಕೂ ಘಟಸರ್ಪದ ಗುಹೆಯನ್ನಾಗಿ ಮಾಡು ವದಕ್ಕೂ ಸುದ್ದಿಯ ಶಬ್ದವೂ ಉತ್ತರ ದೇಶದಿಂದ ಮಹಾ ಗಲಭೆಯೂ ಬರುತ್ತದೆ.