Jeremiah · chapter 9 · verse 13
Jeremiah 9:13 in Kannada
ಕರ್ತನು ಹೇಳುವದೇನಂದರೆ--ನಾನು ಅವರ ಮುಂದೆ ಇಟ್ಟ ನನ್ನ ನ್ಯಾಯಪ್ರಮಾಣವನ್ನು ಅವರು ಬಿಟ್ಟು ನನ್ನ ಶಬ್ದಕ್ಕೆ ಕಿವಿಗೊಡದೆ ಅದರಲ್ಲಿ ನಡೆಯದೆ
Kartanu heluvadenandare--naanu avara munde itta nanna nyaayapramaanavannu avaru bittu nanna shabdakke kivigodade adaralli nadeyade
Jeremiah 9:13 in English
- King James Version (KJV)
- And the LORD saith, Because they have forsaken my law which I set before them, and have not obeyed my voice, neither walked therein;
- World English Bible (WEB)
- The LORD says, “Because they have forsaken my law which I set before them, and have not obeyed my voice or walked in my ways,
- American Standard Version (ASV)
- And Jehovah saith, Because they have forsaken my law which I set before them, and have not obeyed my voice, neither walked therein,
- Bible in Basic English (BBE)
- And the Lord said, Because they have given up my law which I put before them, giving no attention to my voice and not being guided by it;
- Darby Translation (DBY)
- And Jehovah saith, Because they have forsaken my law which I set before them, and have not hearkened unto my voice, nor walked in it,
- Webster's Bible (WBS)
- And the LORD saith, Because they have forsaken my law which I set before them, and have not obeyed my voice, neither walked therein;
- Young's Literal Translation (YLT)
- And Jehovah saith: Because of their forsaking My law that I set before them, And they have not hearkened to My voice nor walked in it,
Read in context
- 11ಇದಲ್ಲದೆ ಯೆರೂಸಲೇಮನ್ನು ದಿಬ್ಬೆಗಳಾಗಿಯೂ ನರಿಗಳ ಸ್ಥಾನವಾಗಿಯೂ ಮಾಡು ತ್ತೇನೆ; ಯೆಹೂದದ ಪಟ್ಟಣಗಳನ್ನು ನಿವಾಸಿಗಳಿಲ್ಲದೆ ಹಾಳುಮಾಡುತ್ತೇನೆ.
- 12ಇದನ್ನು ಗ್ರಹಿಸುವ ಜ್ಞಾನಿ ಯಾದ ಮನುಷ್ಯನು ಯಾರು? ಇದನ್ನು ತಿಳಿಸುವ ಹಾಗೆ ಕರ್ತನ ಬಾಯಿ ಯಾರ ಸಂಗಡ ಮಾತನಾಡಿತ್ತು? ದೇಶವು ಯಾವದಕ್ಕಾಗಿ ನಾಶವಾಗಿ ಹಾದು ಹೋಗುವ ವನಿಲ್ಲದೆ ಅರಣ್ಯದ ಹಾಗೆ ಹಾಳಾಯಿತು?
- 13ಕರ್ತನು ಹೇಳುವದೇನಂದರೆ--ನಾನು ಅವರ ಮುಂದೆ ಇಟ್ಟ ನನ್ನ ನ್ಯಾಯಪ್ರಮಾಣವನ್ನು ಅವರು ಬಿಟ್ಟು ನನ್ನ ಶಬ್ದಕ್ಕೆ ಕಿವಿಗೊಡದೆ ಅದರಲ್ಲಿ ನಡೆಯದೆ
- 14ತಮ್ಮ ಹೃದಯದ ಕಾಠಿಣ್ಯದ ಪ್ರಕಾರವಾಗಿಯೂ ತಮ್ಮ ತಂದೆಗಳು ಅವರಿಗೆ ಬೋಧಿಸಿದ ಬಾಳ್ ದೇವತೆ ಗಳ ಹಿಂದೆಯೂ ನಡೆದರು.
- 15ಈ ಕಾರಣದಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ; ಇಗೋ, ನಾನು ಅವರಿಗೆ, ಹೌದು, ಈ ಜನರಿಗೆ, ಮಾಚಿಪತ್ರೆಯನ್ನು ತಿನ್ನುವದಕ್ಕೆ ಕೊಡು ತ್ತೇನೆ. ವಿಷದ ನೀರನ್ನು ಅವರಿಗೆ ಕುಡಿಯಲು ಕೊಡು ತ್ತೇನೆ.
Cross references
- 2 Chronicles 7:19 2 ಪೂರ್ವಕಾಲವೃತ್ತಾಂತ 7:19ಆದರೆ ನೀವು ಹಿಂದಿರುಗಿ ನಾನು ನಿಮ್ಮ ಮುಂದೆ ಇಟ್ಟ ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ತೊರೆದು ಅನ್ಯದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ
- Jeremiah 22:9 ಯೆರೆಮೀಯ 22:9ಆಗ ಅವರು--ತಮ್ಮ ದೇವರಾದ ಕರ್ತನ ಒಡಂಬಡಿಕೆಯನ್ನು ಬಿಟ್ಟು, ಬೇರೆ ದೇವರುಗಳಿಗೆ ನಮ ಸ್ಕರಿಸಿ ಸೇವಿಸಿದ್ದರಿಂದಲೇ ಎಂದು ಅವರು ಉತ್ತರ ಕೊಡುವರು.
- Ezra 9:10 ಎಜ್ರನು 9:10ಹಾಗಾದರೆ ನನ್ನ ದೇವರೇ, ಇದರ ತರುವಾಯ ನಾವು ಏನು ಹೇಳೋಣ? ಪ್ರವಾದಿಗಳಾದ ನಿನ್ನ ಸೇವಕರ ಮುಖಾಂತರ ನೀನು ಆಜ್ಞಾಪಿಸಿದ ನಿನ್ನ ಆಜ್ಞೆಗಳನ್ನು ತೊರೆದಿದ್ದೇವೆ.
- Psalm 119:53 ಕೀರ್ತನೆಗಳು 119:53ನಿನ್ನ ನ್ಯಾಯಪ್ರಮಾಣ ವನ್ನು ಬಿಟ್ಟುಬಿಡುವ ದುಷ್ಟರ ನಿಮಿತ್ತ ಭಯ ಭ್ರಾಂತಿಯು ನನ್ನನ್ನು ಹಿಡಿದುಕೊಂಡಿತು.
- Proverbs 28:4 ಜ್ಞಾನೋಕ್ತಿಗಳು 28:4ಕಟ್ಟಳೆಯನ್ನು ತ್ಯಜಿಸುವವನು ದುಷ್ಟರನ್ನು ಹೊಗಳುತ್ತಾನೆ; ಕಟ್ಟಳೆಯನ್ನು ಕೈಕೊಳ್ಳು ವವರು ಅವರೊಂದಿಗೆ ಹೋರಾಡುತ್ತಾರೆ.
- Zephaniah 3:1–6 ಚೆಫನ್ಯ 3:1–6ಅಸಹ್ಯವಾದ, ಮೈಲಿಗೆಯಾದ, ಶ್ರಮೆಪಡಿಸುವ ಪಟ್ಟಣಕ್ಕೆ ಅಯ್ಯೋ! ಅವಳು ಶಬ್ದಕ್ಕೆ ವಿಧೇಯಳಾಗಲಿಲ್ಲ, ಶಿಕ್ಷೆಗೆ ಒಳಪಡಲಿಲ್ಲ, ಕರ್ತನಲ್ಲಿ ಭರವಸವಿಡ ಲಿಲ್ಲ. ತನ್ನ ದೇವರ ಸವಿಾಪಕ್ಕೆ ಬರಲಿಲ್ಲ. ಅದರ ಮಧ್ಯದಲ್ಲಿರುವ ಪ್ರಧಾನರುಗಳು ಗರ್ಜಿಸುವ ಸಿಂಹಗಳಾಗಿದ್ದಾರೆ; ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳಾಗಿದ್ದಾರೆ; ಮರುದಿನದ ವರೆಗೂ ಕಡಿಯುವದಕ್ಕೆ ಎಲುಬುಗಳಿಲ್ಲ. ಅದರ ಪ್ರವಾದಿಗಳು ಹಗುರವಾಗಿಯೂ ವಂಚಕರಾಗಿಯೂ ಇದ್ದಾರೆ; ಅದರ ಯಾಜಕರು ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿ ದ್ದಾರೆ; ನ್ಯಾಯಪ್ರಮಾಣಕ್ಕೆ ಬಲಾತ್ಕಾರಮಾಡಿದ್ದಾರೆ. ನೀತಿ ಯುಳ್ಳ ಕರ್ತನು ಅದರ ಮಧ್ಯದಲ್ಲಿ ಇದ್ದಾನೆ, ಆತನು ಅನ್ಯಾಯಮಾಡುವದಿಲ್ಲ; ಪ್ರತಿ ಬೆಳಿಗ್ಗೆ ತನ್ನ ನ್ಯಾಯ ತೀರ್ಪನ್ನು ಬೆಳಕಿಗೆ ತರುತ್ತಾನೆ; ಆತನು ತಪ್ಪುವಾತನಲ್ಲ, ಆದರೆ ಅನ್ಯಾಯವಂತನು ನಾಚಿಕೆ ಯನ್ನು ಅರಿಯನು. ನಾನು ಜನಾಂಗಗಳನ್ನು ಕಡಿದು ಬಿಟ್ಟಿದ್ದೇನೆ; ಅವುಗಳ ಗೋಪುರಗಳು ಹಾಳಾಗಿವೆ; ಅವರ ಬೀದಿಗಳನ್ನು ಯಾರೂ ಹಾದು ಹೋಗದ ಹಾಗೆ ಹಾಳು ಮಾಡಿದ್ದೇನೆ; ಅವುಗಳ ಪಟ್ಟಣಗಳು ನಾಶವಾದವು, ಹೀಗೆ ಅಲ್ಲಿ ಯಾವನೂ ಇರುವದಿಲ್ಲ, ಯಾವ ಮನುಷ್ಯನು ಅಲ್ಲಿ ವಾಸಿಸುವದೂ ಇಲ್ಲ.
- Deuteronomy 31:16–17 ಧರ್ಮೋಪದೇಶಕಾಂಡ 31:16–17ಆಗ ಕರ್ತನು ಮೋಶೆಗೆ--ನೀನು ನಿನ್ನ ಪಿತೃಗಳ ಸಂಗಡ ಮಲಗುವಿ; ಈ ಜನರು ಎದ್ದು ತಾವು ಪ್ರವೇಶಿಸುವ ದೇಶದ ಅನ್ಯದೇವರುಗಳನ್ನು ಅನುಸರಿಸಿ ಜಾರತ್ವಮಾಡಿ ನನ್ನನ್ನು ಬಿಟ್ಟು ನಾನು ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ವಿಾರುವರು. ಆ ದಿವಸದಲ್ಲಿ ನನ್ನ ಕೋಪವು ಅವರ ಮೇಲೆ ಉರಿಯು ವದು. ನಾನು ಅವರನ್ನು ಬಿಟ್ಟುಬಿಟ್ಟು ನನ್ನ ಮುಖವನ್ನು ಅವರಿಗೆ ಮರೆಮಾಡುವೆನು; (ವಿರೋಧಿಗಳು) ಅವ ರನ್ನು ನುಂಗಿ ಬಿಡುವರು; ಬಹಳ ಕೇಡುಗಳೂ ಇಕ್ಕಟ್ಟು ಗಳೂ ಅವರಿಗೆ ಸಂಭವಿಸುವವು; ಆ ದಿವಸದಲ್ಲಿ ಅವರು--ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದ ಕಾರಣ ಈ ಕೇಡುಗಳು ನಮ್ಮನ್ನು ಹಿಡಿದವಲ್ಲಾ ಎಂದು ಹೇಳುವರು.
- Psalm 89:30–32 ಕೀರ್ತನೆಗಳು 89:30–32ಅವನ ಮಕ್ಕಳು ನನ್ನ ನ್ಯಾಯ ಪ್ರಮಾಣವನ್ನು ಬಿಟ್ಟು, ನನ್ನ ನ್ಯಾಯಗಳಲ್ಲಿ ನಡೆಯದೇ ಹೋದರೆ, ಅವರು ನನ್ನ ನೇಮಕಗಳನ್ನು ಮುರಿದು ನನ್ನ ಆಜ್ಞೆಗಳನ್ನು ಕೈಕೊಳ್ಳದೇ ಹೋದರೆ, ಕೋಲಿ ನಿಂದ ಅವರ ದ್ರೋಹವನ್ನೂ ಪೆಟ್ಟುಗಳಿಂದ ಅವರ ಅಕ್ರಮವನ್ನೂ ದಂಡಿಸುವೆನು.