Job · chapter 13 · verse 1
Job 13:1 in Kannada
ಇಗೋ, ನನ್ನ ಕಣ್ಣು ಎಲ್ಲಾ ನೋಡಿತು; ನನ್ನ ಕಿವಿ ಕೇಳಿ ಅದನ್ನು ಗ್ರಹಿಸಿಕೊಂಡಿತು.
Igo, nanna kannu ellaa noditu; nanna kivi keli adannu grahisikonditu.
Job 13:1 in English
- King James Version (KJV)
- Lo, mine eye hath seen all [this], mine ear hath heard and understood it.
- World English Bible (WEB)
- “Behold, my eye has seen all this. My ear has heard and understood it.
- American Standard Version (ASV)
- Lo, mine eye hath seen all [this], Mine ear hath heard and understood it.
- Bible in Basic English (BBE)
- Truly, my eye has seen all this, word of it has come to my ear, and I have knowledge of it.
- Darby Translation (DBY)
- Lo, mine eye hath seen all [this], mine ear hath heard and understood it.
- Webster's Bible (WBS)
- Lo, my eye hath seen all [this] , my ear hath heard and understood it.
- Young's Literal Translation (YLT)
- Lo, all — hath mine eye seen, Heard hath mine ear, and it attendeth to it.
Read in context
- 1ಇಗೋ, ನನ್ನ ಕಣ್ಣು ಎಲ್ಲಾ ನೋಡಿತು; ನನ್ನ ಕಿವಿ ಕೇಳಿ ಅದನ್ನು ಗ್ರಹಿಸಿಕೊಂಡಿತು.
- 2ನೀವು ತಿಳಿದುಕೊಳ್ಳುವ ಪ್ರಕಾರ ನಾನೂ ತಿಳಿದು ಕೊಂಡಿದ್ದೇನೆ; ನಾನು ನಿಮಗಿಂತ ಕಡಿಮೆಯಾದವನಲ್ಲ.
- 3ನಾನು ಸರ್ವಶಕ್ತನ ಸಂಗಡ ಖಂಡಿತವಾಗಿ ಮಾತ ನಾಡುವೆನು, ದೇವರ ಸಂಗಡ ವಾದಿಸಲು ನನಗೆ ಮನಸ್ಸುಂಟು.
Cross references
- Job 5:9–16 ಯೋಬನು 5:9–16ಆತನು ದೊಡ್ಡ ವುಗಳನ್ನು ಶೋಧಿಸಲಸಾಧ್ಯವಾಗಿ ಮಾಡುತ್ತಾನೆ; ಎಣಿಕೆ ಇಲ್ಲದ ಅದ್ಭುತಗಳನ್ನು ಮಾಡುತ್ತಾನೆ. ಭೂಮಿಯ ಮೇಲೆ ಮಳೆಯನ್ನು ಸುರಿಸುತ್ತಾನೆ; ಹೊಲಗಳ ಮೇಲೆ ನೀರನ್ನು ಕಳುಹಿಸುತ್ತಾನೆ; ಹೀಗೆ ತಗ್ಗಿದವರನ್ನು ಉನ್ನತದಲ್ಲಿಡುತ್ತಾನೆ. ದುಃಖವುಳ್ಳವರು ರಕ್ಷಣೆಗೆ ಎತ್ತ ಲ್ಪಡುತ್ತಾರೆ. ಆತನು ಯುಕ್ತಿವಂತರ ಯೋಚನೆಗಳನ್ನು ಭಂಗಪಡಿಸುತ್ತಾನೆ; ಅವರ ಕೈಗಳು ಪ್ರಯತ್ನವನ್ನು ನಡಿಸುವದಿಲ್ಲ. ಜ್ಞಾನಿಗಳನ್ನು ಅವರ ಯುಕ್ತಿಯಲ್ಲಿ ಹಿಡಿಯುತ್ತಾನೆ--ಮೂರ್ಖರ ಆಲೋಚನೆ ಉರುಳಿ ಬೀಳುವದು. ಹಗಲಿನಲ್ಲಿ ಕತ್ತಲೆಯನ್ನು ಸಂಧಿಸು ತ್ತಾರೆ; ರಾತ್ರಿಯಲ್ಲಿ ಇದ್ದ ಹಾಗೆ ಮಧ್ಯಾಹ್ನದಲ್ಲಿ ತಡವಾಡುತ್ತಾರೆ ಆತನು ಕತ್ತಿಯಿಂದಲೂ ಅದರ ಬಾಯಿಂದಲೂ ಬಲಿಷ್ಠನ ಕೈಯೊಳಗಿಂದಲೂ ಬಡವ ನನ್ನು ರಕ್ಷಿಸುತ್ತಾನೆ. ಆದದರಿಂದ ದರಿದ್ರನಿಗೆ ನಿರೀಕ್ಷೆ ಯುಂಟು; ಅಪರಾಧವು ಬಾಯಿ ಮುಚ್ಚುವದು.
- Job 4:12 ಯೋಬನು 4:12ಒಂದು ಮಾತು ನನಗೆ ಗುಪ್ತವಾಗಿ ಬಂದಿತು. ಅದರಿಂದ ಸ್ವಲ್ಪ ಮಾತ್ರ ನನ್ನ ಕಿವಿಗೆ ಬಿದ್ದಿತು.
- Job 12:9–25 ಯೋಬನು 12:9–25ಕರ್ತನ ಕೈ ಇದನ್ನು ಮಾಡಿತೆಂದು ಇವೆಲ್ಲವುಗಳಲ್ಲಿ ತಿಳಿಯದಿರು ವದು ಯಾವದು? ಆತನ ಕೈಯಲ್ಲಿ ಎಲ್ಲಾ ಜೀವಿ ಗಳ ಪ್ರಾಣವು ಎಲ್ಲಾ ಮನುಷ್ಯರ ಶ್ವಾಸವೂ ಇವೆ. ಕಿವಿಯು ನುಡಿಗಳನ್ನು ಶೋಧಿಸುವದಿಲ್ಲವೇ? ಬಾಯಿಯು ಆಹಾರವನ್ನು ರುಚಿನೋಡುವದಿಲ್ಲವೇ? ಮುದುಕರಲ್ಲಿ ಜ್ಞಾನವೂ ದಿನಗಳುದ್ದಕ್ಕೂ ಗ್ರಹಿ ಕೆಯೂ ಇವೆ. ಜ್ಞಾನವೂ ಪರಾಕ್ರಮವೂ ಆತನಲ್ಲಿವೆ; ಆಲೋ ಚನೆಯೂ ಗ್ರಹಿಕೆಯೂ ಆತನವೇ. ಇಗೋ, ಆತನು ಕೆಡವುತ್ತಾನೆ; ಅದು ತಿರುಗಿ ಕಟ್ಟಲ್ಪಡುವದಿಲ್ಲ. ಆತನು ಮನುಷ್ಯನಿಂದ ಮುಚ್ಚಿಬಿಡುತ್ತಾನೆ; ಅದು ತೆರೆ ಯಲ್ಪಡುವದಿಲ್ಲ. ಇಗೋ, ಆತನು ಜಲಗಳನ್ನು ಬಿಗಿ ಹಿಡಿಯುತ್ತಾನೆ; ಅವು ಬತ್ತಿಹೋಗುತ್ತವೆ; ಆತನು ಅವುಗಳನ್ನು ಹೊರಗೆ ಕಳುಹಿಸಿದಾಗ ಅವು ಭೂಮಿ ಯನ್ನು ಬುಡಮೇಲು ಮಾಡುತ್ತವೆ. ಬಲವೂ ಸುಜ್ಞಾ ನವೂ ಆತನಲ್ಲಿವೆ; ಮೋಸಹೋಗುವವನೂ ಮೋಸ ಗೊಳಿಸುವವನೂ ಆತನವರೇ. ಆತನು ಸಲಹೆಗಾರ ರನ್ನು ಕೇಡಿಗೆ ನಡಿಸುತ್ತಾನೆ; ನ್ಯಾಯಾಧಿಪತಿಗಳನ್ನು ಮೂರ್ಖರನ್ನಾಗಿ ಮಾಡುತ್ತಾನೆ. ಆತನು ಅರಸರ ಬಂಧನಗಳನ್ನು ಬಿಡಿಸಿ ಅವರ ನಡುಗಳಿಗೆ ನಡುಕಟ್ಟನ್ನು ಕಟ್ಟುತ್ತಾನೆ. ಆತನು ಪ್ರಧಾನರನ್ನು ಕೇಡಿಗೆ ನಡಿಸು ತ್ತಾನೆ; ಬಲಿಷ್ಠರನ್ನು ಕೆಡವಿಬಿಡುತ್ತಾನೆ. ನಂಬಿಕೆಯು ಳ್ಳವರ ಮಾತನ್ನು ತೆಗೆದುಹಾಕುತ್ತಾನೆ; ವೃದ್ಧರ ವಿವೇಕ ವನ್ನು ಇಲ್ಲದಾಗಿ ಮಾಡುತ್ತಾನೆ. ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯ್ಯುತ್ತಾನೆ; ಬಲಿಷ್ಠರ ಬಲವನ್ನು ಕುಂದಿಸುತ್ತಾನೆ. ಕತ್ತಲೆಯೊಳಗಿನಿಂದ ಅಗಾಧವಾದ ವಿಷಯಗಳನ್ನು ಪ್ರಕಟಪಡಿಸುತ್ತಾನೆ; ಮರಣದ ನೆರ ಳನ್ನು ಬೆಳಕಿಗೆ ತರುತ್ತಾನೆ. ಆತನು ಜನಾಂಗಗಳನ್ನು ಹೆಚ್ಚಿಸಿ ಅವುಗಳನ್ನು ನಾಶಮಾಡುತ್ತಾನೆ. ಜನಾಂಗ ಗಳನ್ನು ವಿಸ್ತಾರಮಾಡಿ ತಿರುಗಿ ಅವುಗಳನ್ನು ಹತ್ತಿಕ್ಕುತ್ತಾನೆ. ಆತನು ಭೂಮಿಯ ಮುಖ್ಯಸ್ಥರ ವಿವೇಕವನ್ನು ತೆಗೆದು ಬಿಡುತ್ತಾನೆ. ಮಾರ್ಗವಿಲ್ಲದ ಕಾಡಿನಲ್ಲಿ ಅವರನ್ನು ಅಲೆಯ ಮಾಡುತ್ತಾನೆ.ಅವರು ಬೆಳಕು ಇಲ್ಲದೆ ಕತ್ತಲೆಯಲ್ಲಿ ತಡವಾಡುತ್ತಾರೆ; ಆತನು ಅವರನ್ನು ಅಮಲೇರಿದವನ ಹಾಗೆ ಓಲಾಡುವಂತೆ ಮಾಡುತ್ತಾನೆ. ಅವರು ಬೆಳಕು ಇಲ್ಲದೆ ಕತ್ತಲೆಯಲ್ಲಿ ತಡವಾಡುತ್ತಾರೆ; ಆತನು ಅವರನ್ನು ಅಮಲೇರಿದವನ ಹಾಗೆ ಓಲಾಡುವಂತೆ ಮಾಡುತ್ತಾನೆ.
- Job 15:17–18 ಯೋಬನು 15:17–18ನಾನು ನಿನಗೆ ತೋರಿಸುತ್ತೇನೆ, ನನ್ನನ್ನು ಕೇಳು; ನಾನು ನೋಡಿದ್ದನ್ನು ನಿನಗೆ ವಿವರಿಸುತ್ತೇನೆ. ಜ್ಞಾನಿಗಳು ತಮ್ಮ ಹಿರಿಯರ ಕಾಲದಿಂದ ಅದನ್ನು ಮರೆ ಮಾಡದೆ ತಿಳಿಸಿದರು.
- Psalm 78:3–4 ಕೀರ್ತನೆಗಳು 78:3–4ಅವುಗಳನ್ನು ಕೇಳಿ ತಿಳಿದಿದ್ದೇವೆ; ನಮ್ಮ ತಂದೆಗಳು ನಮಗೆ ವಿವರಿಸಿದರು. ನಾವು ಕರ್ತನ ಸ್ತೋತ್ರಗಳನ್ನೂ ಆತನ ತ್ರಾಣವನ್ನೂ ಆತನು ಮಾಡಿದ ಅದ್ಭುತಗಳನ್ನೂ ವಿವರಿಸುತ್ತಾ ಅವರ ಮಕ್ಕಳಿಗೆ, ಮುಂದಿನ ವಂಶಕ್ಕೆ ಮರೆಮಾಡುವದಿಲ್ಲ.
- Job 8:8–10 ಯೋಬನು 8:8–10ದಯಮಾಡಿ ಪೂರ್ವಿಕರನ್ನು ವಿಚಾರಿಸು; ಅವರ ಪಿತೃಗಳು ಕಂಡುಕೊಂಡದನ್ನು ಗಮನಿಸು. ನಾವು ನಿನ್ನೆ ಹುಟ್ಟಿದವರೂ ಏನೂ ಅರಿಯವದವರೂ ಆಗಿ ದ್ದೇವೆ; ನಮ್ಮ ದಿವಸಗಳು ಭೂಮಿಯ ಮೇಲೆ ನೆರಳಿ ನಂತಿವೆ. ಅವರು ನಿನಗೆ ಬೋಧಿಸುವದಿಲ್ಲವೋ? ನಿನ್ನೊಂದಿಗೆ ಮಾತನಾಡುವದಿಲ್ಲವೋ? ತಮ್ಮ ಮಾತು ಗಳನ್ನು ಹೃದಯದೊಳಗಿಂದ ಹೊರತರುವದಿಲ್ಲವೋ?
- Job 5:27 ಯೋಬನು 5:27ಇಗೋ, ಇದನ್ನೇ ನಾವು ವಿಚಾರಿಸಿದೆವು; ಅದು ಇದೇ; ಇದನ್ನು ಆಲಿಸು; ನಿನ್ನ ಹಿತಕ್ಕಾಗಿ ಇದನ್ನು ತಿಳುಕೋ.
- Job 42:3–6 ಯೋಬನು 42:3–6ಆಲೋಚನೆಯನ್ನು ತಿಳುವಳಿಕೆ ಇಲ್ಲದೆ ಮರೆಮಾಡುವವನಾರು? ಆದದರಿಂದ ನಾನು ಗ್ರಹಿ ಸದೆ ಇದ್ದವುಗಳನ್ನು ನಾನು ತಿಳಿಯದಂಥ, ನನಗೆ ಆಶ್ಚರ್ಯವಾದವುಗಳನ್ನು ಉಚ್ಚರಿಸಿದೆನು. ದಯ ಮಾಡಿ ಕೇಳು, ನಾನು ಮಾತಾಡುವೆನು; ನಾನು ಕೇಳು ತ್ತೇನೆ, ನೀನು ನನಗೆ ತಿಳಿಸು. ಕಿವಿಯಿಂದ ನಿನ್ನನ್ನು ಕುರಿತು ಕೇಳಿದ್ದೆನು; ಈಗ ನನ್ನ ಕಣ್ಣು ನಿನ್ನನ್ನು ನೋಡಿತು. ಆದದರಿಂದ ನನ್ನನ್ನು ಅಸಹ್ಯಿಸಿಕೊಂಡು ದೂಳಿಯ ಲ್ಲಿಯೂ ಬೂದಿಯಲ್ಲಿಯೂ ಪಶ್ಚಾತ್ತಾಪ ಪಡುತ್ತೇನೆ ಅಂದನು.
- 1 John 1:3 1 ಯೋಹಾನನು 1:3ನಮಗಿರುವ ಅನ್ಯೋನ್ಯತೆಯಲ್ಲಿ ನೀವೂ ಇರ ಬೇಕೆಂದು ನಾವು ಕಂಡು ಕೇಳಿದ್ದನ್ನು ನಿಮಗೆ ಪ್ರಸಿದ್ಧಿ ಪಡಿಸುತ್ತೇವೆ. ನಿಜವಾಗಿಯೂ ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡಲೂ ಆತನ ಮಗನಾದ ಯೇಸು ಕ್ರಿಸ್ತನ ಸಂಗಡಲೂ ಇರು ವಂಥದ್ದು.