Job · chapter 14 · verse 10
Job 14:10 in Kannada
ಆದರೆ ಮನುಷ್ಯನು ಸತ್ತು ಕ್ಷಯಿಸಿ ಹೋಗುತ್ತಾನೆ; ಮನುಷ್ಯನು ಪ್ರಾಣ ಬಿಟ್ಟ ಬಳಿಕ ಅವನೆಲ್ಲಿರುವನು?
Aadare manushyanu sattu kshayisi hoguttaane; manushyanu praana bitta balika avanelliruvanu?
Job 14:10 in English
- King James Version (KJV)
- But man dieth, and wasteth away: yea, man giveth up the ghost, and where [is] he?
- World English Bible (WEB)
- But man dies, and is laid low. Yes, man gives up the spirit, and where is he?
- American Standard Version (ASV)
- But man dieth, and is laid low: Yea, man giveth up the ghost, and where is he?
- Bible in Basic English (BBE)
- But man comes to his death and is gone: he gives up his spirit, and where is he?
- Darby Translation (DBY)
- But a man dieth, and is prostrate; yea, man expireth, and where is he?
- Webster's Bible (WBS)
- But man dieth, and wasteth away: yes, man yieldeth his breath, and where [is] he?
- Young's Literal Translation (YLT)
- And a man dieth, and becometh weak, And man expireth, and where [is] he?
Read in context
- 8ಅದರ ಬೇರು ಭೂಮಿಯಲ್ಲಿ ಹಳೆಯದಾದರೂ ನೆಲದಲ್ಲಿ ಅದರ ಬುಡವು ಸತ್ತರೂ
- 9ನೀರಿನ ವಾಸನೆಯಿಂದ ಚಿಗುರಿ ಸಸಿಯ ಹಾಗೆ ಕೊಂಬೆ ಗಳನ್ನು ಬಿಡುವದು.
- 10ಆದರೆ ಮನುಷ್ಯನು ಸತ್ತು ಕ್ಷಯಿಸಿ ಹೋಗುತ್ತಾನೆ; ಮನುಷ್ಯನು ಪ್ರಾಣ ಬಿಟ್ಟ ಬಳಿಕ ಅವನೆಲ್ಲಿರುವನು?
- 11ಹೇಗೆ ನೀರು ಸಮುದ್ರ ದಿಂದ ಮುಗಿದು ಹೋಗುತ್ತದೋ ಪ್ರವಾಹವು ಆರಿ ಬತ್ತಿಹೋಗುತ್ತದೆ ಹಾಗೆ ಮನುಷ್ಯನು ಮಲಗುತ್ತಾನೆ,
- 12ಏಳುವದೇ ಇಲ್ಲ; ಆಕಾಶಗಳು ಇಲ್ಲದೆ ಹೋಗುವ ವರೆಗೆ ಅವರು ಎಚ್ಚರಗೊಳ್ಳುವದಿಲ್ಲ. ನಿದ್ರೆಯಿಂದ ಎಬ್ಬಿಸಲ್ಪಡುವದೂ ಇಲ್ಲ.
Cross references
- Job 19:26 ಯೋಬನು 19:26ನನ್ನ ಚರ್ಮದ ಹುಳಗಳು ಈ ದೇಹ ವನ್ನು ನಾಶಪಡಿಸಿದಾಗ್ಯೂ ನಾನು ನನ್ನ ಶರೀರದಿಂದ ದೇವರನ್ನು ನೋಡುವೆನು.
- Genesis 49:33 ಆದಿಕಾಂಡ 49:33ಯಾಕೋ ಬನು ತನ್ನ ಕುಮಾರರಿಗೆ ಆಜ್ಞಾಪಿಸಿ ಮುಗಿಸಿದ ಮೇಲೆ ತನ್ನ ಕಾಲುಗಳನ್ನು ಮಂಚದ ಮೇಲೆ ಮುದುರಿಕೊಂಡನು. ಅವನು ಪ್ರಾಣ ಬಿಟ್ಟು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು.
- Proverbs 14:32 ಜ್ಞಾನೋಕ್ತಿಗಳು 14:32ದುಷ್ಟನು ತನ್ನ ದುಷ್ಟತನದಲ್ಲಿ ನೂಕ ಲ್ಪಡುತ್ತಾನೆ; ಮರಣದಲ್ಲಿ ನೀತಿವಂತನಿಗೆ ನಿರೀಕ್ಷೆ ಇದೆ.
- Job 7:7–10 ಯೋಬನು 7:7–10ನನ್ನ ಜೀವವು ಗಾಳಿ ಯಂತಿದೆ ಎಂದು ಜ್ಞಾಪಕಮಾಡಿಕೋ, ನನ್ನ ಕಣ್ಣು ತಿರುಗಿ ಒಳ್ಳೆಯದನ್ನು ನೋಡದು. ನನ್ನನ್ನು ನೋಡು ವವನ ಕಣ್ಣು ನನ್ನನ್ನು ಇನ್ನು ಮೇಲೆ ನೋಡದು; ನಿನ್ನ ಕಣ್ಣುಗಳು ನನ್ನ ಮೇಲಿವೆ ನಾನು ಮಾತ್ರ ಇರು ವದಿಲ್ಲ. ಮೋಡವು ಕರಗಿಹೋಗುವ ಹಾಗೆಯೇ, ಪಾತಾಳಕ್ಕೆ ಇಳಿದವನು ಹಿಂತಿರುಗಿ ಬರಲಾರನು. ಇನ್ನು ಅವನು ತನ್ನ ಮನೆಗೆ ತಿರುಗಿಕೊಳ್ಳುವದಿಲ್ಲ; ಅವನ ಸ್ಥಳವು ಇನ್ನು ಅವನ ಗುರುತನ್ನು ಅರಿಯದು.
- Job 17:13–16 ಯೋಬನು 17:13–16ನಾನು ನಿರೀಕ್ಷಿಸಿದರೆ ಸಮಾಧಿಯೇ ನನ್ನ ಮನೆ; ಕತ್ತಲೆಯಲ್ಲಿ ನನ್ನ ಹಾಸಿಗೆಯನ್ನು ಹಾಸಿದ್ದೇನೆ. ಕೊಳೆಯುವಿಕೆಗೆ -- ನೀನು ನನ್ನ ತಂದೆ ಎಂದೂ ಹುಳಕ್ಕೆ--ನನ್ನ ತಾಯಿಯೇ, ನನ್ನ ಅಕ್ಕನೇ ಎಂದೂ ನಾನು ಹೇಳಿದೆನು. ಹಾಗಾದರೆ ಈಗ ನನ್ನ ನಿರೀಕ್ಷೆ ಎಲ್ಲಿ? ನನ್ನ ನಿರೀಕ್ಷೆಯನ್ನು ಯಾರು ನೋಡುವರು?ನಮ್ಮ ಸಂಗಡ ಧೂಳಿನಲ್ಲಿ ವಿಶ್ರಾಂತಿಯಲ್ಲಿರುವಾಗ ಅವರು ಪಾತಾಳದ ಅಗುಳಿಗಳಿಗೆ ಇಳಿದು ಹೋಗುವರು. ನಮ್ಮ ಸಂಗಡ ಧೂಳಿನಲ್ಲಿ ವಿಶ್ರಾಂತಿಯಲ್ಲಿರುವಾಗ ಅವರು ಪಾತಾಳದ ಅಗುಳಿಗಳಿಗೆ ಇಳಿದು ಹೋಗುವರು.
- Luke 16:22–23 ಲೂಕನು 16:22–23ಇದಾದ ಮೇಲೆ ಆ ಭಿಕ್ಷುಕನು ಸತ್ತನು; ದೂತರು ಅವನನ್ನು ಅಬ್ರಹಾಮನ ಎದೆಗೆ ತೆಗೆದುಕೊಂಡು ಹೋದರು; ಐಶ್ವರ್ಯವಂತನು ಸಹ ಸತ್ತನು; ಅವನನ್ನು ಹೂಣಿ ಟ್ಟರು. ಆಗ ಅವನು ಪಾತಾಳದೊಳಗೆ ಯಾತನೆಯಲ್ಲಿ ದ್ದವನಾಗಿ ತನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ದೂರದಿಂದ ಅಬ್ರಹಾಮನನ್ನೂ ಅವನ ಎದೆಯಲ್ಲಿದ್ದ ಲಾಜರನನೂ ನೋಡಿದನು.
- Acts 5:10 ಅಪೊಸ್ತಲರ ಕೃತ್ಯಗಳು 5:10ಕೂಡಲೆ ಆಕೆಯು ಅವನ ಪಾದಗಳ ಮುಂದೆ ಬಿದ್ದು ಪ್ರಾಣ ಬಿಟ್ಟಳು. ಆಗ ಆ ಯೌವನಸ್ಥರು ಒಳಗೆ ಬಂದು ಆಕೆಯು ಸತ್ತಿದ್ದನ್ನು ಕಂಡು ಹೊತ್ತುಕೊಂಡು ಹೋಗಿ ಆಕೆಯ ಗಂಡನ ಪಕ್ಕದಲ್ಲಿ ಹೂಣಿಟ್ಟರು.
- Matthew 27:50 ಮತ್ತಾಯನು 27:50ಯೇಸು ತಿರಿಗಿ ಮಹಾಶಬ್ದದಿಂದ ಕೂಗಿ ಆತ್ಮವನ್ನು ಒಪ್ಪಿಸಿಕೊಟ್ಟನು.
- Job 14:12 ಯೋಬನು 14:12ಏಳುವದೇ ಇಲ್ಲ; ಆಕಾಶಗಳು ಇಲ್ಲದೆ ಹೋಗುವ ವರೆಗೆ ಅವರು ಎಚ್ಚರಗೊಳ್ಳುವದಿಲ್ಲ. ನಿದ್ರೆಯಿಂದ ಎಬ್ಬಿಸಲ್ಪಡುವದೂ ಇಲ್ಲ.
- Job 11:20 ಯೋಬನು 11:20ಆದರೆ ದುಷ್ಟರ ಕಣ್ಣುಗಳು ಕುಂದುವವು; ಅವರು ತಪ್ಪಿಸಿಕೊಳ್ಳುವದಿಲ್ಲ. ಅವರ ಪ್ರಾಣದ ಕೊನೆಯ ಉಸಿರೇ ಅವರ ನಿರೀಕ್ಷೆಯಾಗಿದೆ.
- Job 3:11 ಯೋಬನು 3:11ನಾನು ಗರ್ಭ ಬಿಟ್ಟಾಗಲೇ ಯಾಕೆ ಸಾಯಲಿಲ್ಲ? ಹೊಟ್ಟೆಯೊಳಗಿಂದ ಹೊರಟಾಗಲೇ ಯಾಕೆ ಪ್ರಾಣ ಬಿಡಲಿಲ್ಲ?
- Job 10:18 ಯೋಬನು 10:18ಹಾಗಾದರೆ ಯಾಕೆ ನನ್ನನ್ನು ಗರ್ಭದಿಂದ ಹೊರಡ ಮಾಡಿದಿ? ಯಾವ ಕಣ್ಣು ನನ್ನನ್ನು ನೋಡದ ಹಾಗೆ ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗಿತ್ತು.