Job · chapter 15 · verse 29
Job 15:29 in Kannada
ಅವನು ಐಶ್ವರ್ಯವಂತನಾಗುವದಿಲ್ಲ; ಅವನ ಆಸ್ತಿ ನಿಲ್ಲುವದಿಲ್ಲ; ಅವನ ಸ್ವಾಸ್ಥ್ಯವು ಭೂಮಿಯ ಮೇಲೆ ವಿಸ್ತಾರವಾಗುವದಿಲ್ಲ.
Avanu aishvaryavantanaaguvadilla; avana aasti nilluvadilla; avana svaasthyavu bhoomiya mele vistaaravaaguvadilla.
Job 15:29 in English
- King James Version (KJV)
- He shall not be rich, neither shall his substance continue, neither shall he prolong the perfection thereof upon the earth.
- World English Bible (WEB)
- He will not be rich, neither will his substance continue, neither will their possessions be extended on the earth.
- American Standard Version (ASV)
- He shall not be rich, neither shall his substance continue, Neither shall their possessions be extended on the earth.
- Bible in Basic English (BBE)
- He does not get wealth for himself, and is unable to keep what he has got; the heads of his grain are not bent down to the earth.
- Darby Translation (DBY)
- He shall not become rich, neither shall his substance continue, and their possessions shall not extend upon the earth.
- Webster's Bible (WBS)
- He shall not be rich, neither shall his substance continue, neither shall he prolong the perfection of it upon the earth.
- Young's Literal Translation (YLT)
- He is not rich, nor doth his wealth rise, Nor doth he stretch out on earth their continuance.
Read in context
- 27ತನ್ನ ಮುಖವನ್ನು ಕೊಬ್ಬಿನಿಂದ ಮುಚ್ಚಿಕೊಂಡು, ತನ್ನ ನಡುವಿನ ಮೇಲೆ ಬೊಜ್ಜನ್ನು ಕಟ್ಟಿಕೊಂಡಿದ್ದಾನೆ.
- 28ಹಾಳಾದ ಪಟ್ಟಣ ಗಳಲ್ಲಿಯೂ ನಿವಾಸಿಗಳು ಇಲ್ಲದಂಥ ದಿಬ್ಬೆಗಳಾ ಗುವದಕ್ಕೆ ಸಿದ್ಧವಾದಂಥ ಮನೆಗಳಲ್ಲಿಯೂ ವಾಸ ಮಾಡುತ್ತಾನೆ.
- 29ಅವನು ಐಶ್ವರ್ಯವಂತನಾಗುವದಿಲ್ಲ; ಅವನ ಆಸ್ತಿ ನಿಲ್ಲುವದಿಲ್ಲ; ಅವನ ಸ್ವಾಸ್ಥ್ಯವು ಭೂಮಿಯ ಮೇಲೆ ವಿಸ್ತಾರವಾಗುವದಿಲ್ಲ.
- 30ಕತ್ತಲೆಯೊಳಗಿಂದ ಅವನು ತೊಲಗುವದಿಲ್ಲ; ಅವನ ಕೊಂಬೆಗಳನ್ನು ಜ್ವಾಲೆಯು ಬಾಡಿಸುವದು; ಅವನ ಬಾಯಿಯ ಶ್ವಾಸ ದಿಂದ ತೊಲಗಿ ಹೋಗುತ್ತಾನೆ.
- 31ಮೋಸ ಹೋದ ವನು ವ್ಯರ್ಥತ್ವವನ್ನು ನಂಬದೇ ಇರಲಿ; ವ್ಯರ್ಥತ್ವವೇ ಅವನ ಪ್ರತಿಫಲವಾಗಿರುವದು.
Cross references
- Job 27:16–17 ಯೋಬನು 27:16–17ಅವನು ಧೂಳಿನಂತೆ ಬೆಳ್ಳಿಯನ್ನು ಕೂಡಿಸಿಟ್ಟು ಮಣ್ಣಿನಂತೆ ವಸ್ತ್ರಗಳನ್ನು ಸಿದ್ಧಮಾಡಿ ಕೊಂಡಾಗ್ಯೂ ಸಿದ್ಧ ಮಾಡಿಕೊಳ್ಳುತ್ತಾನಷ್ಟೇ; ನೀತಿವಂತನು ಉಟ್ಟುಕೊಳ್ಳು ತ್ತಾನೆ; ಬೆಳ್ಳಿಯನ್ನು ನಿರಪರಾಧಿಯು ಪಾಲಿಡುತ್ತಾನೆ.
- James 1:11 ಯಾಕೋಬನು 1:11ಸೂರ್ಯನು ಉದಯಿಸಿದ ತಕ್ಷಣವೇ ಉಷ್ಣತೆ ಯಿಂದ ಹುಲ್ಲನ್ನು ಬಾಡಿಸಲು ಆ ಹುಲ್ಲಿನ ಹೂವು ಉದುರಿ ಅದರ ರೂಪದ ಸೊಗಸು ನಾಶವಾಗು ವದಷ್ಟೇ. ಹೀಗೆಯೇ ಐಶ್ವರ್ಯವಂತನು ತನ್ನ ದಾರಿ ಗಳಲ್ಲಿ ಬಾಡಿ ಹೋಗುವನು.
- James 5:1–3 ಯಾಕೋಬನು 5:1–3ಧನಿಕರೇ, ನಿಮಗೆ ಬರುವ ದುರ್ದಶೆ ಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ ನಿಮ್ಮ ಐಶ್ವರ್ಯವು ನಾಶವಾಗಿದೆ, ನಿಮ್ಮ ಬಟ್ಟೆಗಳಿಗೆ ನುಸಿ ಹಿಡಿದಿದೆ. ನಿಮ್ಮ ಚಿನ್ನ ಬೆಳ್ಳಿಗಳು ತುಕ್ಕು ಹಿಡಿದವೆ; ಅವುಗಳ ತುಕ್ಕು ನಿಮಗೆ ವಿರೋಧವಾಗಿ ಸಾಕ್ಷಿಯಾಗಿದ್ದು ಬೆಂಕಿಯಂತೆ ನಿಮ್ಮ ಮಾಂಸವನ್ನು ತಿಂದು ಬಿಡುವದು. ಕಡೇ ದಿನಗಳಿಗಾಗಿ ಸಂಪತ್ತನ್ನು ಕೂಡಿಸಿ ಇಟ್ಟುಕೊಂಡಿ ದ್ದೀರಿ.
- Luke 16:19–22 ಲೂಕನು 16:19–22ಊದಾಬಣ್ಣದ ವಸ್ತ್ರಗಳನ್ನೂ ನಯವಾದ ನಾರು ಮಡಿಯನ್ನೂ ಧರಿಸಿಕೊಂಡು ಪ್ರತಿದಿನವೂ ಸಮೃದ್ಧಿ ಯಾಗಿ ಭೋಜನಮಾಡುತ್ತಿದ್ದ ಒಬ್ಬಾನೊಬ್ಬ ಐಶ್ವರ್ಯ ವಂತನಿದ್ದನು. ಅವನ ಬಾಗಲಿನಲ್ಲಿ ಲಾಜರನೆಂಬ ಒಬ್ಬ ಭಿಕ್ಷುಕನು ಬಿದ್ದುಕೊಂಡಿದ್ದನು; ಅವನು ಮೈ ತುಂಬಾ ಹುಣ್ಣೆದ್ದವನು. ಐಶ್ವರ್ಯವಂತನ ಮೇಜಿ ನಿಂದ ಬೀಳುವ (ರೊಟ್ಟಿ) ತುಂಡುಗಳನ್ನು ತಿನ್ನುವದಕ್ಕೆ ಅವನು ಆಶೆಪಡುತ್ತಿದ್ದನು; ಇದಲ್ಲದೆ ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು. ಇದಾದ ಮೇಲೆ ಆ ಭಿಕ್ಷುಕನು ಸತ್ತನು; ದೂತರು ಅವನನ್ನು ಅಬ್ರಹಾಮನ ಎದೆಗೆ ತೆಗೆದುಕೊಂಡು ಹೋದರು; ಐಶ್ವರ್ಯವಂತನು ಸಹ ಸತ್ತನು; ಅವನನ್ನು ಹೂಣಿ ಟ್ಟರು.
- Job 22:15–20 ಯೋಬನು 22:15–20ದುಷ್ಟ ಜನರು ನಡೆದ ಪೂರ್ವಕಾಲದ ದಾರಿ ಯನ್ನು ನೋಡಿಕೊಂಡಿಯೋ? ಅವರು ಆ ಕಾಲ ದಲ್ಲಿ ಕಡಿಯಲ್ಪಟ್ಟರು; ಅವರ ಅಸ್ತಿವಾರವು ಪ್ರವಾಹ ದಲ್ಲಿ ಕೊರೆದು ಹೋಯಿತು. ನಮ್ಮನ್ನು ಬಿಟ್ಟು ಹೋಗು ಎಂದೂ ಸರ್ವಶಕ್ತನು ನಮಗೆ ಏನು ಮಾಡುವನೆಂದೂ ದೇವರಿಗೆ ಹೇಳಿದವರು ಅವರೇ. ಆದರೆ ಆತನು ಅವರ ಮನೆಗಳನ್ನು ಒಳ್ಳೇದರಿಂದ ತುಂಬಿದ್ದಾನೆ; ಆದರೂ ದುಷ್ಟರ ಆಲೋಚನೆಯು ನನಗೆ ದೂರವಾಗಿದೆ. ನೀತಿವಂತರು ನೋಡಿ ಸಂತೋಷಪಡುವರು. ನಿರಪರಾಧಿಯು ಅವರಿಗೆ ಗೇಲಿ ಮಾಡುವನು. ನಿಶ್ಚಯವಾಗಿ ನಮ್ಮ ಆಸ್ತಿಯು ತೆಗೆ ಯಲ್ಪಡಲಿಲ್ಲ; ಅವರಲ್ಲಿ ಉಳಿದವರನ್ನು ಬೆಂಕಿ ದಹಿಸಿಬಿಡುತ್ತದೆ.
- Job 20:22–28 ಯೋಬನು 20:22–28ಅವನ ಪೂರ್ಣತೆಯ ಹೆಚ್ಚಿಗೆಯಲ್ಲಿ ಅವನಿಗೆ ಇಕ್ಕಟ್ಟಾಗಿದೆ; ದುಷ್ಟರ ಕೈಗಳೆಲ್ಲಾ ಅವನ ಮೇಲೆ ಬರುವವು. ಏನಾಗುವದಂದರೆ ಅವನ ಹೊಟ್ಟೆಯನ್ನು ತುಂಬು ವದಕ್ಕಿರುವಾಗ ದೇವರು ತನ್ನ ಕೋಪದ ಉರಿಯನ್ನು ಅವನ ಮೇಲೆ ಕಳುಹಿಸುವನು; ಅವನ ಆಹಾರಕ್ಕಾಗಿ ಅವನ ಮೇಲೆ ಸುರಿಸುವನು. ಅವನು ಕಬ್ಬಿಣದ ಆಯುಧಕ್ಕೆ ಓಡಿಹೋದರೆ ಹಿತ್ತಾಳೆಯ ಬಿಲ್ಲು ಅವ ನನ್ನು ತಿವಿಯುವದು. ಅವನು ಎಳೆದರೆ ಅದು ಬೆನ್ನಿನಿಂದ ಹೊರಡುವದು; ಅವನ ಪಿತ್ತದೊಳಗಿಂದ ಮಿಂಚುವ ಖಡ್ಗ ಬರುವದು; ಅವನ ಮೇಲೆ ಹೆದರಿಕೆ ಗಳು ಅವೆ. ಎಲ್ಲಾ ಅಂಧಕಾರವು ಅವನ ಗುಪ್ತ ಸ್ಥಳಗಳಲ್ಲಿ ಇಡಲ್ಪಟ್ಟಿದೆ; ಯಾರೂ ಹೊತ್ತಿಸದ ಬೆಂಕಿ ಅವನನ್ನು ತಿನ್ನುವದು; ಅವನ ಗುಡಾರದಲ್ಲಿ ಉಳಿ ದವನು ನಾಶವಾಗುವನು. ಆಕಾಶಗಳು ಅವನ ಅಕ್ರಮವನ್ನು ಪ್ರಕಟಮಾಡುವವು; ಭೂಮಿಯು ಅವನಿಗೆ ವಿರೋಧವಾಗಿ ಏಳುವದು. ಅವನ ಮನೆಯ ಆದಾಯವು ತೊಲಗಿ ಹೋಗುವದು; ಅವನ ಕೋಪದ ದಿವಸದಲ್ಲಿ ಅದು ಕರಗಿ ಹೋಗುವದು.ದುಷ್ಟಮನುಷ್ಯನಿಗೆ ದೇವರಿಂದ ಬರುವ ಪಾಲೂ ದೇವರಿಂದ ಅವನಿಗೆ ನೇಮಿಸಲ್ಪ ಟ್ಟಿರುವ ಬಾಧ್ಯತೆಯೂ ಇದೇ.
- Luke 16:2 ಲೂಕನು 16:2ಆಗ ಅವನು ಆ ಮನೆವಾರ್ತೆ ಯವನನ್ನು ಕರೆದು ಅವನಿಗೆ--ಇದೇನು ನಾನು ನಿನ್ನ ವಿಷಯದಲ್ಲಿ ಕೇಳುವದು? ಮನೆವಾರ್ತೆಯ ನಿನ್ನ ಲೆಕ್ಕವನ್ನು ಒಪ್ಪಿಸು; ಯಾಕಂದರೆ ನೀನು ಇನ್ನು ಮೇಲೆ ಮನೆವಾರ್ತೆಯವನಾಗಿರುವದಕ್ಕಾಗುವದಿಲ್ಲ ಅಂದನು.
- Luke 12:19–21 ಲೂಕನು 12:19–21ನಾನು ನನ್ನ ಆತ್ಮಕ್ಕೆ--ಆತ್ಮವೇ, ಅನೇಕ ವರುಷ ಗಳಿಗಾಗಿ ನಿನಗೆ ಬಹಳ ಸರಕು ಇಡಲ್ಪಟ್ಟಿದೆ; ನೀನು ವಿಶ್ರಮಿಸಿಕೋ, ತಿನ್ನು, ಕುಡಿ ಆನಂದವಾಗಿರು ಎಂದು ಹೇಳುವೆನು ಎಂದು ಅಂದುಕೊಂಡನು. ಆದರೆ ದೇವರು ಅವನಿಗೆ--ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವು ನಿನ್ನಿಂದ ಕೇಳಲ್ಪಡುವದು; ಆಗ ನೀನು ಕೂಡಿಸಿಕೊಂಡವುಗಳು ಯಾರಿಗಾಗುವವು ಎಂದು ಹೇಳಿದನು. ತನಗೋಸ್ಕರ ಸಂಪತ್ತನ್ನು ಕೂಡಿಸಿಟ್ಟು ಕೊಂಡು ದೇವರ ಕಡೆಗೆ ಐಶ್ವರ್ಯವಂತನಾಗ ದಿರುವವನು ಇವನಂತೆಯೇ ಇರುವನು ಅಂದನು.
- Psalm 49:16–17 ಕೀರ್ತನೆಗಳು 49:16–17ಒಬ್ಬನು ಐಶ್ವರ್ಯವಂತ ನಾದರೆ ಮತ್ತು ಅವನ ಮನೆಯ ಘನವು ದೊಡ್ಡದಾ ದರೆ ಭಯಪಡಬೇಡ. ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗನು; ಅವನ ಘನವು ಅವನ ಹಿಂದೆ ಇಳಿದು ಹೋಗದು.