Job · chapter 22 · verse 29
Job 22:29 in Kannada
ಒಬ್ಬನು ತಗ್ಗುವಲ್ಲಿ ಎತ್ತುವದುಂಟು ಅನ್ನುವಿ; ದೀನ ನನ್ನು ಆತನು ರಕ್ಷಿಸುವನು.ಒಂಟಿಯಾದ ನಿರ ಪರಾಧಿಯನ್ನು ತಪ್ಪಿಸುವನು; ನಿನ್ನ ಕೈಗಳ ಶುದ್ಧತ್ವದಿಂದ ಅವನು ತಪ್ಪಿಸಿಕೊಳ್ಳುವನು.
Obbanu tagguvalli ettuvaduntu annuvi; deena nannu aatanu rakshisuvanu.ontiyaada nira paraadhiyannu tappisuvanu; ninna kaigala shuddhatvadinda avanu tappisikolluvanu.
Job 22:29 in English
- King James Version (KJV)
- When [men] are cast down, then thou shalt say, [There is] lifting up; and he shall save the humble person.
- World English Bible (WEB)
- When they cast down, you will say, ‘be lifted up.’ He will save the humble person.
- American Standard Version (ASV)
- When they cast [thee] down, thou shalt say, [There is] lifting up; And the humble person he will save.
- Bible in Basic English (BBE)
- For God makes low those whose hearts are lifted up, but he is a saviour to the poor in spirit.
- Darby Translation (DBY)
- When they are made low, then thou shalt say, Rise up! and he shall save him that is of downcast eyes.
- Webster's Bible (WBS)
- When [men] are cast down, then thou shalt say, [There is] exaltation; and he shall save the humble person.
- Young's Literal Translation (YLT)
- For they have made low, And thou sayest, 'Lift up.' And the bowed down of eyes he saveth.
Read in context
- 27ನೀನು ಆತನಿಗೆ ವಿಜ್ಞಾಪನೆ ಮಾಡಲು ನಿನ್ನನ್ನು ಕೇಳುವನು; ನಿನ್ನ ಪ್ರಮಾಣಗಳನ್ನು ಸಲ್ಲಿಸುವಿ.
- 28ನೀನು ಏನಾದರೂ ನಿರ್ಣಯಿಸಿದರೆ ಅದು ನಿನಗೆ ಸ್ಥಿರವಾಗುವದು ಮತ್ತು ನಿನ್ನ ಮಾರ್ಗಗಳಲ್ಲಿ ಬೆಳಕು ಮೂಡುವದು.
- 29ಒಬ್ಬನು ತಗ್ಗುವಲ್ಲಿ ಎತ್ತುವದುಂಟು ಅನ್ನುವಿ; ದೀನ ನನ್ನು ಆತನು ರಕ್ಷಿಸುವನು.ಒಂಟಿಯಾದ ನಿರ ಪರಾಧಿಯನ್ನು ತಪ್ಪಿಸುವನು; ನಿನ್ನ ಕೈಗಳ ಶುದ್ಧತ್ವದಿಂದ ಅವನು ತಪ್ಪಿಸಿಕೊಳ್ಳುವನು.
- 30ಒಂಟಿಯಾದ ನಿರ ಪರಾಧಿಯನ್ನು ತಪ್ಪಿಸುವನು; ನಿನ್ನ ಕೈಗಳ ಶುದ್ಧತ್ವದಿಂದ ಅವನು ತಪ್ಪಿಸಿಕೊಳ್ಳುವನು.
Cross references
- James 4:6 ಯಾಕೋಬನು 4:6ಆತನು ಹೆಚ್ಚಾದ ಕೃಪೆಯನ್ನು ಕೊಡುತ್ತಾನೆ. ಆದದರಿಂದ--ದೇವರು ಅಹಂಕಾರಿಗಳನ್ನು ಎದುರಿಸು ತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸು ತ್ತಾನೆ ಎಂದು ಆತನು ಹೇಳುತ್ತಾನೆ.
- Job 5:19–27 ಯೋಬನು 5:19–27ಆರು ಇಕ್ಕಟ್ಟುಗಳಿಂದ ನಿನ್ನನ್ನು ತಪ್ಪಿಸುವನು; ಹೌದು, ಏಳರಲ್ಲಿಯೂ ಕೇಡು ನಿನ್ನನ್ನು ಮುಟ್ಟದು. ಬರದಲ್ಲಿ ನಿನ್ನನ್ನು ಮರಣದೊಳ ಗಿಂದಲೂ ಯುದ್ಧದಲ್ಲಿ ಕತ್ತಿಯ ಬಲದಿಂದಲೂ ವಿಮೋಚಿಸುವನು. ನಾಲಿಗೆಯೆಂಬ ಬೆತ್ತಕ್ಕೆ ಮರೆ ಯಾಗುವಿ; ಅದು ಬಂದಾಗ ನೀನು ನಾಶಕ್ಕೆ ಭಯ ಪಡುವದಿಲ್ಲ. ನಾಶನಕ್ಕೂ ಕ್ಷಾಮಕ್ಕೂ ನಗುವಿ; ಭೂಮಿಯ ಮೃಗಗಳಿಗೂ ಭಯಪಡುವದಿಲ್ಲ. ಹೊಲದ ಕಲ್ಲುಗಳ ಸಂಗಡ ನಿನಗೆ ಒಡಂಬಡಿಕೆ ಇರುವದು; ಹೊಲದ ಮೃಗಗಳು ನಿನ್ನೊಂದಿಗೆ ಸಮಾ ಧಾನವಾಗಿರುವವು. ನಿನ್ನ ಗುಡಾರವು ಕ್ಷೇಮವಾಗಿದೆ ಎಂದು ತಿಳಿದುಕೊಳ್ಳುವಿ, ನೀನು ನಿನ್ನ ನಿವಾಸ ಸ್ಥಾನ ವನ್ನು ತಿಳಿದುಕೊಳ್ಳುವಿ ಪಾಪಮಾಡುವದಿಲ್ಲ. ನಿನ್ನ ಸಂತತಿಯು ಬಹಳವಾಗಿದೆ ಎಂದೂ ನಿನ್ನ ಸಂತಾನವು ಭೂಮಿಯ ಹುಲ್ಲಿನಂತಿದೆ ಎಂದೂ ತಿಳಿದುಕೊಳ್ಳುವಿ. ಸಿವುಡು ತನ್ನ ಕಾಲದಲ್ಲಿ ಏಳುವಂತೆ ನೀನು ಪೂರ್ಣ ಪ್ರಾಯದವನಾಗಿ ಸಮಾಧಿಗೆ ಸೇರುವಿ.ಇಗೋ, ಇದನ್ನೇ ನಾವು ವಿಚಾರಿಸಿದೆವು; ಅದು ಇದೇ; ಇದನ್ನು ಆಲಿಸು; ನಿನ್ನ ಹಿತಕ್ಕಾಗಿ ಇದನ್ನು ತಿಳುಕೋ. ಇಗೋ, ಇದನ್ನೇ ನಾವು ವಿಚಾರಿಸಿದೆವು; ಅದು ಇದೇ; ಇದನ್ನು ಆಲಿಸು; ನಿನ್ನ ಹಿತಕ್ಕಾಗಿ ಇದನ್ನು ತಿಳುಕೋ.
- 1 Peter 5:5 1 ಪೇತ್ರನು 5:5ಅದೇ ರೀತಿಯಾಗಿ ಯೌವನಸ್ಥರೇ, ಹಿರಿಯರಿಗೆ ಅಧೀನರಾಗಿರ್ರಿ; ನೀವೆಲ್ಲರೂ ದೀನತೆಯೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಅಧೀನರಾಗಿರ್ರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿ ಗಾದರೊ ಕೃಪೆಯನ್ನು ಅನುಗ್ರಹಿಸುತ್ತಾನೆ.
- Luke 1:52 ಲೂಕನು 1:52ಬಲಿಷ್ಠ ರನ್ನು ಅವರ ಸ್ಥಾನಗಳಿಂದ ಕೆಳಗೆ ದೊಬ್ಬಿ ದೀನರನ್ನು ಮೇಲಕ್ಕೆ ಎತ್ತಿದ್ದಾನೆ.
- Matthew 23:12 ಮತ್ತಾಯನು 23:12ಯಾವನಾದರೂ ತನ್ನನ್ನು ಹೆಚ್ಚಿಸಿಕೊಂಡರೆ ಅವನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.
- Psalm 91:14–16 ಕೀರ್ತನೆಗಳು 91:14–16ಅವನು ತನ್ನ ಪ್ರೀತಿಯನ್ನು ನನ್ನ ಮೇಲೆ ಇಟ್ಟಿದ್ದಾನೆ; ಆದದರಿಂದ ಅವನನ್ನು ತಪ್ಪಿಸುವೆನು; ಅವನು ನನ್ನ ಹೆಸರನ್ನು ತಿಳಿದಿರುವದರಿಂದ ಅವನನ್ನು ಉನ್ನತದಲ್ಲಿಡುವೆನು. ಅವನು ನನ್ನನ್ನು ಕರೆಯುವನು; ನಾನು ಅವನಿಗೆ ಉತ್ತರ ಕೊಡುವೆನು; ಇಕ್ಕಟ್ಟಿನಲ್ಲಿ ನಾನು ಅವನ ಸಂಗಡ ಇದ್ದು ಅವನನ್ನು ತಪ್ಪಿಸಿ; ಘನಪಡಿಸುವೆನು.ದೀರ್ಘಾಯುಷ್ಯದಿಂದ ಅವನನ್ನು ತೃಪ್ತಿಪಡಿಸಿ ನನ್ನ ರಕ್ಷಣೆಯನ್ನು ಅವನಿಗೆ ತೋರಿಸುವೆನು. ದೀರ್ಘಾಯುಷ್ಯದಿಂದ ಅವನನ್ನು ತೃಪ್ತಿಪಡಿಸಿ ನನ್ನ ರಕ್ಷಣೆಯನ್ನು ಅವನಿಗೆ ತೋರಿಸುವೆನು.
- Luke 18:9–14 ಲೂಕನು 18:9–14ತಾವು ನೀತಿವಂತರೆಂದು ತಮ್ಮಲ್ಲಿಯೇ ಭರವಸ ವನ್ನಿಟ್ಟುಕೊಂಡು ಬೇರೆಯವರನ್ನು ಅಸಡ್ಡೆ ಮಾಡಿದ ಕೆಲವರಿಗೆ ಈ ಸಾಮ್ಯವನ್ನು ಹೇಳಿದನು. ಇಬ್ಬರು ಪ್ರಾರ್ಥನೆ ಮಾಡುವದಕ್ಕೆ ದೇವಾಲಯದೊಳಗೆ ಹೋದರು; ಒಬ್ಬನು ಫರಿಸಾಯನು, ಮತ್ತೊಬ್ಬನು ಸುಂಕದವನು. ಫರಿಸಾಯನು ನಿಂತುಕೊಂಡು ತನ್ನೊಳಗೆ ಹೀಗೆ ಪ್ರಾರ್ಥಿಸುತ್ತಾ--ದೇವರೇ, ಸುಲು ಕೊಳ್ಳುವವರೂ ಅನೀತಿವಂತರೂ ವ್ಯಭಿಚಾರಿಗಳೂ ಆಗಿರುವ ಮಿಕ್ಕಾದವರಂತೆ ಇಲ್ಲವೆ ಈ ಸುಂಕದವನ ಹಾಗೆ ನಾನು ಅಲ್ಲ, ಆದದರಿಂದ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ನಾನು ವಾರದಲ್ಲಿ ಎರಡು ಸಾರಿ ಉಪವಾಸ ಮಾಡುತ್ತೇನೆ; ನನಗಿರುವದೆ ಲ್ಲವುಗಳಲ್ಲಿ ದಶಾಂಶ ಕೊಡುತ್ತೇನೆ ಎಂದು ಹೇಳಿದನು. ಆದರೆ ಸುಂಕದವನು ದೂರದಲ್ಲಿ ನಿಂತುಕೊಂಡು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವದಕ್ಕೂ ಮನಸ್ಸಿಲ್ಲದೆ ತನ್ನ ಎದೆಯನ್ನು ಬಡುಕೊಳ್ಳುತ್ತಾ--ದೇವರು ಪಾಪಿ ಯಾದ ನನ್ನನ್ನು ಕರುಣಿಸಲಿ ಅಂದನು. ಇವನೇ ಫರಿಸಾಯನಿಗಿಂತ ನೀತಿವಂತನೆಂದು ನಿರ್ಣಯಿಸಲ್ಪಟ್ಟ ವನಾಗಿ ತನ್ನ ಮನೆಗೆ ಹೋದನು; ಯಾಕಂದರೆ ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
- Isaiah 66:2 ಯೆಶಾಯ 66:2ಇವುಗಳ ನ್ನೆಲ್ಲಾ ನನ್ನ ಕೈ ಉಂಟುಮಾಡಿತು; ಇವುಗಳೆಲ್ಲಾ ಇದ್ದವೆಂದು ಕರ್ತನು ಅನ್ನುತ್ತಾನೆ. ಆದರೆ ಇವನ ಮೇಲೆ ದೃಷ್ಟಿ ಇಡುವೆನು ದೀನನೂ ಜಜ್ಜಿದ ಆತ್ಮವುಳ್ಳ ವನೂ ನನ್ನ ವಾಕ್ಯಕ್ಕೆ ನಡುಗುವವನೂ ಯಾವನೋ ಅವನ ಮೇಲೆಯೂ ದೃಷ್ಟಿ ಇಡುವೆನು.
- Psalm 92:9–11 ಕೀರ್ತನೆಗಳು 92:9–11ಇಗೋ, ಓ ಕರ್ತನೇ, ನಿನ್ನ ಶತ್ರು ಗಳು, ಓ ಕರ್ತನೇ, ಇಗೋ, ನಿನ್ನ ಶತ್ರುಗಳು ನಾಶವಾಗುವರು; ಅಕ್ರಮ ಮಾಡುವವರೆಲ್ಲರು ಚದರಿ ಹೋಗುವರು. ಆದರೆ ನೀನು ನನ್ನ ಕೊಂಬನ್ನು ಕಾಡುಕೋಣದ ಕೊಂಬಿನಹಾಗೆ ಎತ್ತುವಿ; ಹೊಸ ಎಣ್ಣೆಯಿಂದ ಅಭಿಷಿಕ್ತ ನಾಗುವೆನು. ನನ್ನ ಕಣ್ಣು ಸಹ ನನ್ನ ವಿರೋಧಿಗಳ ಮೇಲೆ ದೃಷ್ಟಿಸುವದು; ನನಗೆ ವಿರೋಧವಾಗಿ ಏಳುವ ದುರ್ಮಾರ್ಗಿಗಳನ್ನು ಕುರಿತು ನನ್ನ ಇಷ್ಟದಂತೆ ನನ್ನ ಕಿವಿಗಳು ಕೇಳುವವು.
- Isaiah 57:15 ಯೆಶಾಯ 57:15ಉನ್ನತನೂ ಎತ್ತರವಾದವನೂ ನಿತ್ಯವಾಗಿ ವಾಸಿ ಸುವವನೂ ಪರಿಶುದ್ಧನೆಂದು ಹೆಸರುಳ್ಳಾತನೂ ಹೀಗೆ ಹೇಳುತ್ತಾನೆ--ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿ ಸುವ ನಾನು ಪಶ್ಚಾತ್ತಾಪದೊಂದಿಗೆ ಮತ್ತು ದೀನನ ಆತ್ಮದೊಂದಿಗೆ ಇದ್ದುಕೊಂಡು ಅವರನ್ನು ಉಜ್ಜೀ ವಿಸುವವನಾಗಿದ್ದೇನೆ.
- Proverbs 29:23 ಜ್ಞಾನೋಕ್ತಿಗಳು 29:23ಮನುಷ್ಯನ ಗರ್ವವು ತನ್ನನ್ನು ಹೀನಸ್ಥಿತಿಗೆ ತರುವದು; ಆತ್ಮದಲ್ಲಿ ದೀನರಾಗಿರುವವರು ಸನ್ಮಾನಹೊಂದುವರು.
- Luke 14:11 ಲೂಕನು 14:11ಯಾವನು ತನ್ನನ್ನು ತಾನೇ ಹೆಚ್ಚಿಸಿಕೊಳ್ಳು ತ್ತಾನೋ ಅವನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು.