Skip to content
ThuthiThuthiThuthi
Job · chapter 24 of 42 · 25 verses

Job 24 in Kannada

ಯೋಬನು 24

  1. ಸರ್ವಶಕ್ತನಿಗೆ ಕಾಲಗಳು ಮರೆಯಾಗದೆ ಇರಲಾಗಿ, ಆತನನ್ನು ತಿಳಿದವರು ಆತನ ದಿವಸಗಳನ್ನು ನೋಡದೆ ಇರುವದು ಯಾಕೆ?

    Why, seeing times are not hidden from the Almighty, do they that know him not see his days?

  2. ಗಡಿ ಗಳನ್ನು ಬದಲಿಸುತ್ತಾರೆ, ಮಂದೆಗಳನ್ನು ಬಲಾತ್ಕಾರ ದಿಂದ ತಕ್ಕೊಂಡು ಅವುಗಳನ್ನು ಸಾಕಿಕೊಳ್ಳುತ್ತಾರೆ.

    [Some] remove the landmarks; they violently take away flocks, and feed [thereof].

  3. ದಿಕ್ಕಿಲ್ಲದವರ ಕತ್ತೆಯನ್ನು ತಕ್ಕೊಂಡು ಹೋಗುತ್ತಾರೆ; ವಿಧವೆಯ ಎತ್ತನ್ನು ಒತ್ತೆಯಾಗಿ ತಕ್ಕೊಳ್ಳುತ್ತಾರೆ.

    They drive away the ass of the fatherless, they take the widow’s ox for a pledge.

  4. ದರಿದ್ರನನ್ನು ಮಾರ್ಗದಿಂದ ತೊಲಗಿಸುತ್ತಾರೆ; ದೇಶದ ದೀನರು ಕೂಡಾ ಅಡಗಿಕೊಳ್ಳುತ್ತಾರೆ.

    They turn the needy out of the way: the poor of the earth hide themselves together.

  5. ಇಗೋ, ಅವರು ಕಾಡುಕತ್ತೆಗಳ ಹಾಗೆ ತಮ್ಮ ಕೆಲಸಕ್ಕೆ ಹೊರಡುತ್ತಾರೆ. ಬೆಳಿಗ್ಗೆ ಕೊಳ್ಳೆ ಹುಡುಕುತ್ತಾರೆ; ಅರಣ್ಯವು ಅವರಿಗೂ ಮಕ್ಕಳಿಗೂ ಆಹಾರ ಕೊಡು ತ್ತದೆ.

    Behold, [as] wild asses in the desert, go they forth to their work; rising betimes for a prey: the wilderness [yieldeth] food for them [and] for [their] children.

  6. ಹೊಲದಲ್ಲಿ ತಮ್ಮ ತಮ್ಮ ಬೆಳೆಯನ್ನು ಕೊಯ್ದು ದುಷ್ಟನ ದ್ರಾಕ್ಷೆಯ ತೋಟದಲ್ಲಿ ಹಣ್ಣು ಆರಿಸುತ್ತಾರೆ.

    They reap [every one] his corn in the field: and they gather the vintage of the wicked.

  7. ಬೆತ್ತಲೆಯಾಗಿ ಬಟ್ಟೆ ಇಲ್ಲದೆ ಮಲಗುವಂತೆ ಮಾಡುತ್ತಾರೆ. ಚಳಿಯಲ್ಲಿ ಅವರಿಗೆ ಹೊದ್ದು ಕೊಳ್ಳು ವದಕ್ಕೆ ಇಲ್ಲ.

    They cause the naked to lodge without clothing, that [they have] no covering in the cold.

  8. ಬೆಟ್ಟಗಳ ಮಳೆಯಿಂದ ತೊಯ್ದಿ ದ್ದಾರೆ; ಆಶ್ರಯವಿಲ್ಲದೆ ಬಂಡೆಯನ್ನು ಅಪ್ಪಿಕೊಳ್ಳುತ್ತಾರೆ.

    They are wet with the showers of the mountains, and embrace the rock for want of a shelter.

  9. ದಿಕ್ಕಿಲ್ಲದವರನ್ನು ತಾಯಿಯ ಮೊಲೆಯಿಂದ ಕಸಕೊಳ್ಳುತ್ತಾರೆ; ಬಡವನಿಂದ ಒತ್ತೆಯಾಗಿ ತಕ್ಕೊಳ್ಳು ತ್ತಾರೆ.

    They pluck the fatherless from the breast, and take a pledge of the poor.

  10. ವಸ್ತ್ರವಿಲ್ಲದೆ ಬೆತ್ತಲೆಯಾಗಿರುವವರನ್ನು ತಿರು ಗಾಡಿಸುತ್ತಾರೆ; ಹಸಿದವರು ಸೂಡುಗಳನ್ನು ಹೊರು ತ್ತಾರೆ

    They cause [him] to go naked without clothing, and they take away the sheaf [from] the hungry;

  11. ಅವರ ಗೋಡೆಗಳ ನಡುವೆ ಇದ್ದುಕೊಂಡು ಎಣ್ಣೆಯನ್ನು ತೆಗೆಯುತ್ತಾರೆ; ತೊಟ್ಟಿಗಳನ್ನು ತುಳಿದು ದಾಹಪಡುತ್ತಾರೆ.

    [Which] make oil within their walls, [and] tread [their] winepresses, and suffer thirst.

  12. ಪಟ್ಟಣದೊಳಗಿಂದ ಮನುಷ್ಯರು ನರಳುತ್ತಾರೆ; ಗಾಯಪಟ್ಟವರ ಪ್ರಾಣವು ಕೂಗುತ್ತದೆ; ಆದರೂ ದೇವರು ತಪ್ಪುಹೊರಿಸುವದಿಲ್ಲ.

    Men groan from out of the city, and the soul of the wounded crieth out: yet God layeth not folly [to them].

  13. ಅವರು ಬೆಳಕಿಗೆ ವಿರೋಧವಾಗಿ ದಂಗೆಎದ್ದಿದ್ದಾರೆ; ಅದರ ಮಾರ್ಗ ಗಳನ್ನು ಅವರು ಅರಿಯರು; ಇಲ್ಲವೆ ಅದರ ದಾರಿಗಳಲ್ಲಿ ವಾಸವಾಗಿರರು.

    They are of those that rebel against the light; they know not the ways thereof, nor abide in the paths thereof.

  14. ಬೆಳಿಗ್ಗೆ ಕೊಲೆಗಾರನು ಎದ್ದು ದೀನನನ್ನೂ ದರಿದ್ರನನ್ನೂ ಕೊಲ್ಲುತ್ತಾನೆ; ರಾತ್ರಿ ಯಲ್ಲಿ ಕಳ್ಳನ ಹಾಗೆ ಇದ್ದಾನೆ.

    The murderer rising with the light killeth the poor and needy, and in the night is as a thief.

  15. ವ್ಯಭಿಚಾರಿಯ ಕಣ್ಣು ಮುಂಗತ್ತಲೆಗೆ ಕಾದುಕೊಂಡು -- ಯಾವ ಕಣ್ಣೂ ನನ್ನನ್ನು ನೋಡುವದಿಲ್ಲವೆಂದು ಹೇಳುತ್ತದೆ; ಮುಖ ವನ್ನು ಮುಚ್ಚಿಕೊಳ್ಳುತ್ತಾನೆ.

    The eye also of the adulterer waiteth for the twilight, saying, No eye shall see me: and disguiseth [his] face.

  16. ಹಗಲು ಹೊತ್ತು ಗೊತ್ತು ಮಾಡಿಕೊಂಡ ಮನೆಗಳನ್ನು ಕತ್ತಲೆಯಲ್ಲಿ ಕೊರೆಯು ತ್ತಾರೆ; ಅವರು ಬೆಳಕನ್ನು ತಿಳಿಯರು.

    In the dark they dig through houses, [which] they had marked for themselves in the daytime: they know not the light.

  17. ಉದಯ ಕಾಲವು ಅವರಿಗೆ ಮರಣದ ನೆರಳಿನ ಹಾಗೆಯೇ ಇರುವದು; ಮರಣದ ನೆರಳಿನ ದಿಗಿಲುಗಳನ್ನು ತಿಳು ಕೊಳ್ಳುತ್ತಾರೆ.

    For the morning [is] to them even as the shadow of death: if [one] know [them, they are in] the terrors of the shadow of death.

  18. ನೀರುಗಳ ಹಾಗೆ ಅವನು ತೀವ್ರವಾಗಿದ್ದಾನೆ; ಅವನ ಭಾಗವು ಭೂಮಿಯ ಮೇಲೆ ಶಪಿಸಲ್ಪಟ್ಟಿದೆ; ಅವನು ದ್ರಾಕ್ಷೇ ತೋಟಗಳ ಮಾರ್ಗಕ್ಕೆ ತಿರುಗು ವದಿಲ್ಲ.

    He [is] swift as the waters; their portion is cursed in the earth: he beholdeth not the way of the vineyards.

  19. ಹಿಮದ ನೀರನ್ನು ಒಣ ಭೂಮಿಯೂ ಬಿಸಿಲೂ ಹೀರಿಕೊಳ್ಳುವಂತೆ ಪಾಪಮಾಡಿದವರನ್ನು ಸಮಾಧಿಯು ಹೀರಿಕೊಳ್ಳುತ್ತದೆ.

    Drought and heat consume the snow waters: [so doth] the grave [those which] have sinned.

  20. ಗರ್ಭವು ಅವನನ್ನು ಮರೆತುಬಿಡುವದು; ಹುಳವು ಅವನಲ್ಲಿ ಸವಿ ಊಟ ಹೊಂದುವದು; ಇನ್ನು ಅವನ ನೆನಪು ಇರುವದಿಲ್ಲ; ಮರದ ಹಾಗೆ ಅನ್ಯಾಯವು ಮುರಿಯಲ್ಪಡುವದು.

    The womb shall forget him; the worm shall feed sweetly on him; he shall be no more remembered; and wickedness shall be broken as a tree.

  21. ಹೆರದ ಬಂಜೆಯನ್ನು ಅವನು ಉಪದ್ರವಪಡಿಸಿ ದನು; ವಿಧವೆಗೆ ಉಪಕಾರಮಾಡಲಿಲ್ಲ.

    He evil entreateth the barren [that] beareth not: and doeth not good to the widow.

  22. ಬಲಿಷ್ಠರನ್ನು ತನ್ನ ಶಕ್ತಿಯಿಂದ ಎಳೆಯುತ್ತಾನೆ. ಅವನು ಎದ್ದರೆ ಅವನ ಜೀವದಲ್ಲಿ ಯಾವ ಮನುಷ್ಯನಿಗೂ ನಂಬಿಕೆ ಇಲ್ಲ.

    He draweth also the mighty with his power: he riseth up, and no [man] is sure of life.

  23. ಅವನನ್ನು ಭದ್ರಪಡಿಸುತ್ತಾನೆ; ಅವನು ವಿಶ್ರಾಂತಿ ತೆಗೆದುಕೊಳ್ಳುತ್ತಾನೆ; ಆದಾಗ್ಯೂ ಆತನ ಕಣ್ಣುಗಳು ಅವರ ಮಾರ್ಗಗಳ ಮೇಲೆ ಅವೆ.

    [Though] it be given him [to be] in safety, whereon he resteth; yet his eyes [are] upon their ways.

  24. ಸ್ವಲ್ಪಕಾಲ ಅವರು ಉನ್ನತವಾಗಿದ್ದು ಇಲ್ಲದೆ ಹೋಗುತ್ತಾರೆ; ಅವರು ಕುಗ್ಗಿ ಹೋಗುತ್ತಾರೆ; ಎಲ್ಲರ ಹಾಗೆ ಅವರು ಮಾರ್ಗದಿಂದ ತೆಗೆದುಹಾಕಲ್ಪಡುತ್ತಾರೆ; ಅವರು ತೆನೆಗಳ ತಲೆಯಂತೆ ಕೊಯ್ಯಲ್ಪಡುತ್ತಾರೆ.ಈಗ ಹೀಗೆ ಇಲ್ಲದಿದ್ದರೆ ಯಾವನು ನನ್ನನ್ನು ಸುಳ್ಳುಗಾರನನ್ನಾಗಿ ಮಾಡಿ ನನ್ನ ನುಡಿಯನ್ನು ವ್ಯರ್ಥ ಮಾಡುವನು?

    They are exalted for a little while, but are gone and brought low; they are taken out of the way as all [other], and cut off as the tops of the ears of corn.

  25. ಈಗ ಹೀಗೆ ಇಲ್ಲದಿದ್ದರೆ ಯಾವನು ನನ್ನನ್ನು ಸುಳ್ಳುಗಾರನನ್ನಾಗಿ ಮಾಡಿ ನನ್ನ ನುಡಿಯನ್ನು ವ್ಯರ್ಥ ಮಾಡುವನು?

    And if [it be] not [so] now, who will make me a liar, and make my speech nothing worth?

All chapters of Job · Kannada Bible · Job 24 in Tamil

Kannada Bible: Kannada Old Version, public domain.

King James Version: public domain.