Job · chapter 24 · verse 3
Job 24:3 in Kannada
ದಿಕ್ಕಿಲ್ಲದವರ ಕತ್ತೆಯನ್ನು ತಕ್ಕೊಂಡು ಹೋಗುತ್ತಾರೆ; ವಿಧವೆಯ ಎತ್ತನ್ನು ಒತ್ತೆಯಾಗಿ ತಕ್ಕೊಳ್ಳುತ್ತಾರೆ.
Dikkilladavara katteyannu takkondu hoguttaare; vidhaveya ettannu otteyaagi takkolluttaare.
Job 24:3 in English
- King James Version (KJV)
- They drive away the ass of the fatherless, they take the widow’s ox for a pledge.
- World English Bible (WEB)
- They drive away the donkey of the fatherless, and they take the widow’s ox for a pledge.
- American Standard Version (ASV)
- They drive away the ass of the fatherless; They take the widow’s ox for a pledge.
- Bible in Basic English (BBE)
- They send away the ass of him who has no father, they take the widow's ox for debt.
- Darby Translation (DBY)
- They drive away the ass of the fatherless, they take the widow's ox for a pledge;
- Webster's Bible (WBS)
- They drive away the ass of the fatherless, they take the widow's ox for a pledge.
- Young's Literal Translation (YLT)
- The ass of the fatherless they lead away, They take in pledge the ox of the widow,
Read in context
- 1ಸರ್ವಶಕ್ತನಿಗೆ ಕಾಲಗಳು ಮರೆಯಾಗದೆ ಇರಲಾಗಿ, ಆತನನ್ನು ತಿಳಿದವರು ಆತನ ದಿವಸಗಳನ್ನು ನೋಡದೆ ಇರುವದು ಯಾಕೆ?
- 2ಗಡಿ ಗಳನ್ನು ಬದಲಿಸುತ್ತಾರೆ, ಮಂದೆಗಳನ್ನು ಬಲಾತ್ಕಾರ ದಿಂದ ತಕ್ಕೊಂಡು ಅವುಗಳನ್ನು ಸಾಕಿಕೊಳ್ಳುತ್ತಾರೆ.
- 3ದಿಕ್ಕಿಲ್ಲದವರ ಕತ್ತೆಯನ್ನು ತಕ್ಕೊಂಡು ಹೋಗುತ್ತಾರೆ; ವಿಧವೆಯ ಎತ್ತನ್ನು ಒತ್ತೆಯಾಗಿ ತಕ್ಕೊಳ್ಳುತ್ತಾರೆ.
- 4ದರಿದ್ರನನ್ನು ಮಾರ್ಗದಿಂದ ತೊಲಗಿಸುತ್ತಾರೆ; ದೇಶದ ದೀನರು ಕೂಡಾ ಅಡಗಿಕೊಳ್ಳುತ್ತಾರೆ.
- 5ಇಗೋ, ಅವರು ಕಾಡುಕತ್ತೆಗಳ ಹಾಗೆ ತಮ್ಮ ಕೆಲಸಕ್ಕೆ ಹೊರಡುತ್ತಾರೆ. ಬೆಳಿಗ್ಗೆ ಕೊಳ್ಳೆ ಹುಡುಕುತ್ತಾರೆ; ಅರಣ್ಯವು ಅವರಿಗೂ ಮಕ್ಕಳಿಗೂ ಆಹಾರ ಕೊಡು ತ್ತದೆ.
Cross references
- Deuteronomy 24:6 ಧರ್ಮೋಪದೇಶಕಾಂಡ 24:6ಬೀಸುವ ಕಲ್ಲಿನಲ್ಲಿ ಅಡಿಕಲ್ಲಾದರೂ ಮೇಲ್ಕಲ್ಲಾ ದರೂ ಒತ್ತೆಯಾಗಿ ತಕ್ಕೊಳ್ಳಬಾರದು; ಹಾಗೆ ಮಾಡಿದರೆ ಪ್ರಾಣವನ್ನು ಒತ್ತೆಯಾಗಿ ತಕ್ಕೊಂಡ ಹಾಗಿರುವದು.
- Deuteronomy 24:17–21 ಧರ್ಮೋಪದೇಶಕಾಂಡ 24:17–21ಪರನಿಗೂ ದಿಕ್ಕಿಲ್ಲದವನಿಗೂ ನ್ಯಾಯವನ್ನು ತಪ್ಪಿಸ ಬೇಡ; ವಿಧವೆಯ ವಸ್ತ್ರವನ್ನು ಒತ್ತೆಯಾಗಿ ತಕ್ಕೊಳ್ಳಬೇಡ. ನೀನು ಐಗುಪ್ತದಲ್ಲಿ ದಾಸನಾಗಿದ್ದಿ ಎಂದೂ ನಿನ್ನ ದೇವರಾದ ಕರ್ತನು ನಿನ್ನನ್ನು ಅಲ್ಲಿಂದ ವಿಮೋಚಿಸಿದ ನೆಂದೂ ಜ್ಞಾಪಕಮಾಡಿಕೊಳ್ಳಬೇಕು; ಆದದರಿಂದ ಈ ಕಾರ್ಯವನ್ನು ಮಾಡಬೇಕೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ. ಹೊಲದಲ್ಲಿ ನಿನ್ನ ಪೈರನ್ನು ಕೊಯ್ಯುವಾಗ ಅಲ್ಲಿ ಸಿವುಡನ್ನು ಮರೆತುಬಿಟ್ಟರೆ ಅದನ್ನು ತಕ್ಕೊಳ್ಳುವದಕ್ಕೆ ತಿರುಗಿಕೊಳ್ಳಬಾರದು; ನಿನ್ನ ದೇವರಾದ ಕರ್ತನು ನಿನ್ನ ಎಲ್ಲಾ ಕೈಕೆಲಸದಲ್ಲಿ ನಿನ್ನನ್ನು ಆಶೀರ್ವದಿಸುವ ಹಾಗೆ ಅದು ಪರನಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಇರಲಿ. ನಿನ್ನ ಇಪ್ಪೆಗಳನ್ನು ಬಡಿದರೆ ಮಿಕ್ಕಿದ್ದನ್ನು ಆರಿಸ ಬಾರದು. ಅದು ಪರನಿಗೂ ದಿಕ್ಕಿಲ್ಲದವನಿಗೂ ವಿಧ ವೆಗೂ ಇರಲಿ. ನಿನ್ನ ದ್ರಾಕ್ಷೇತೋಟದಲ್ಲಿ ಕೂಡಿ ಸಿದರೆ ಮಿಕ್ಕಿದ್ದನ್ನು ಆರಿಸಬೇಡ; ಅದು ಪರನಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಇರಲಿ.ನೀನು ಐಗುಪ್ತದೇಶದಲ್ಲಿ ದಾಸನಾಗಿದ್ದಿ ಎಂದು ಜ್ಞಾಪಕ ಮಾಡಿಕೊಳ್ಳಬೇಕು; ಆದದರಿಂದ ಈ ಕಾರ್ಯವನ್ನು ಮಾಡಬೇಕೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ.
- 1 Samuel 12:3 1 ಸಮುವೇಲನು 12:3ಇಗೋ, ನಾನು ಇಲ್ಲಿದ್ದೇನೆ; ಕರ್ತನ ಮುಂದೆಯೂ ಆತನ ಅಭಿಷಿಕ್ತನ ಮುಂದೆಯೂ ನನಗೆ ವಿರೋಧವಾಗಿ ಸಾಕ್ಷಿಕೊಡಿರಿ. ನಾನು ಯಾರ ಎತ್ತನ್ನಾದರೂ ಕತ್ತೆಯ ನ್ನಾದರೂ ತೆಗೆದುಕೊಂಡೆನೋ? ಯಾರಿಗಾದರೂ ವಂಚನೆ ಮಾಡಿದೆನೋ? ಯಾರನ್ನಾದರೂ ಹಿಂಸಿಸಿ ದೆನೋ? ಯಾರಿಂದಲಾದರೂ ಕಣ್ಣಿಗೆ ಮರೆಮಾಡುವ ಲಂಚವನ್ನು ತೆಗೆದುಕೊಂಡೆನೋ? ಹೀಗಿದ್ದರೆ ಹೇಳಿರಿ ತಿರಿಗಿಕೊಡುತ್ತೇನೆ ಅಂದನು.
- Job 22:6–9 ಯೋಬನು 22:6–9ಸುಮ್ಮನೆ ನಿನ್ನ ಸಹೋದರನಿಂದ ಈಡು ತೆಗೆದು ಕೊಂಡಿ; ಬೆತ್ತಲೆಯಾಗಿರುವವರ ವಸ್ತ್ರಗಳನ್ನು ನೀನು ಸುಲುಕೊಂಡಿ. ದಣಿದವನಿಗೆ ನೀರನ್ನು ಕುಡಿಯ ಕೊಡಲಿಲ್ಲ; ಹಸಿದವನಿಂದ ರೊಟ್ಟಿಯನ್ನು ಹಿಂದೆ ಗೆದಿದ್ದಿ. ಬಲಿಷ್ಠನಿಗಾದರೋ ದೇಶವು ಅವನದೇ; ಗೌರವದ ಮನುಷ್ಯನು ಅದರಲ್ಲಿ ವಾಸಿಸಿದನು. ವಿಧವೆಯರನ್ನು ಬರಿದಾಗಿ ಕಳುಹಿಸಿದಿ; ದಿಕ್ಕಿಲ್ಲದ ವರ ತೋಳುಗಳನ್ನು ಜಜ್ಜಿದಿ.
- Deuteronomy 24:10–13 ಧರ್ಮೋಪದೇಶಕಾಂಡ 24:10–13ನೀನು ನಿನ್ನ ನೆರೆಯವನಿಗೆ ಯಾವದೊಂದು ಕೈಗಡ ಕೊಟ್ಟರೆ ಅವನ ಒತ್ತೆಯನ್ನು ಕೇಳುವ ಹಾಗೆ ಅವನ ಮನೆಯಲ್ಲಿ ಪ್ರವೇಶಿಸಬಾರದು. ನೀನು ಹೊರಗೆ ನಿಂತಿರಬೇಕು; ನೀನು ಕೈಗಡ ಕೊಟ್ಟ ಮನುಷ್ಯನು ಒತ್ತೆಯನ್ನು ನಿನಗೆ ಹೊರಗೆ ತರಬೇಕು. ಅವನು ಬಡವನಾದರೆ, ಅವನ ಒತ್ತೆ ಇಟ್ಟುಕೊಂಡು ಮಲಗ ಬೇಡ. ಸೂರ್ಯನು ಮುಣುಗಿದಾಗ ಹೇಗಾದರೂ ಅವನಿಗೆ ಒತ್ತೆಯನ್ನು ಹಿಂದಕ್ಕೆ ಕೊಡಬೇಕು; ಆಗಲವನು ತನ್ನ ವಸ್ತ್ರದಲ್ಲಿ ಮಲಗಿಕೊಂಡು ನಿನ್ನನ್ನು ಆಶೀರ್ವದಿ ಸುವನು; ನಿನ್ನ ದೇವರಾದ ಕರ್ತನ ಮುಂದೆ ನೀತಿ ಉಂಟಾಗುವದು.
- Job 31:16–17 ಯೋಬನು 31:16–17ನಾನು ಬಡವರ ಇಷ್ಟವನ್ನು ಹಿಂತೆಗೆದಿದ್ದರೆ ವಿಧ ವೆಯ ಕಣ್ಣುಗಳನ್ನು ನಿರಾಶೆಪಡಿಸಿದ್ದರೆ, ದಿಕ್ಕಿಲ್ಲದ ವನು ಅದರಲ್ಲಿ ಉಣ್ಣದ ಹಾಗೆ ನಾನು ಮಾತ್ರ ನನ್ನ ತುತ್ತು ಉಂಡಿದ್ದರೆ,