Job · chapter 24 · verse 15
Job 24:15 in Kannada
ವ್ಯಭಿಚಾರಿಯ ಕಣ್ಣು ಮುಂಗತ್ತಲೆಗೆ ಕಾದುಕೊಂಡು -- ಯಾವ ಕಣ್ಣೂ ನನ್ನನ್ನು ನೋಡುವದಿಲ್ಲವೆಂದು ಹೇಳುತ್ತದೆ; ಮುಖ ವನ್ನು ಮುಚ್ಚಿಕೊಳ್ಳುತ್ತಾನೆ.
Vyabhichaariya kannu mungattalege kaadukondu -- yaava kannoo nannannu noduvadillavendu heluttade; mukha vannu muchchikolluttaane.
Job 24:15 in English
- King James Version (KJV)
- The eye also of the adulterer waiteth for the twilight, saying, No eye shall see me: and disguiseth [his] face.
- World English Bible (WEB)
- The eye also of the adulterer waits for the twilight, saying, ‘No eye will see me.’ He disguises his face.
- American Standard Version (ASV)
- The eye also of the adulterer waiteth for the twilight, Saying, No eye shall see me: And he disguiseth his face.
- Bible in Basic English (BBE)
- And the man whose desire is for the wife of another is waiting for the evening, saying, No eye will see me; and he puts a cover on his face. And in the night the thief goes about;
- Darby Translation (DBY)
- And the eye of the adulterer waiteth for the twilight, saying, No eye shall see me; and he putteth a covering on [his] face.
- Webster's Bible (WBS)
- The eye also of the adulterer waiteth for the twilight, saying, No eye shall see me: and disguiseth [his] face.
- Young's Literal Translation (YLT)
- And the eye of an adulterer Hath observed the twilight, Saying, 'No eye doth behold me.' And he putteth the face in secret.
Read in context
- 13ಅವರು ಬೆಳಕಿಗೆ ವಿರೋಧವಾಗಿ ದಂಗೆಎದ್ದಿದ್ದಾರೆ; ಅದರ ಮಾರ್ಗ ಗಳನ್ನು ಅವರು ಅರಿಯರು; ಇಲ್ಲವೆ ಅದರ ದಾರಿಗಳಲ್ಲಿ ವಾಸವಾಗಿರರು.
- 14ಬೆಳಿಗ್ಗೆ ಕೊಲೆಗಾರನು ಎದ್ದು ದೀನನನ್ನೂ ದರಿದ್ರನನ್ನೂ ಕೊಲ್ಲುತ್ತಾನೆ; ರಾತ್ರಿ ಯಲ್ಲಿ ಕಳ್ಳನ ಹಾಗೆ ಇದ್ದಾನೆ.
- 15ವ್ಯಭಿಚಾರಿಯ ಕಣ್ಣು ಮುಂಗತ್ತಲೆಗೆ ಕಾದುಕೊಂಡು -- ಯಾವ ಕಣ್ಣೂ ನನ್ನನ್ನು ನೋಡುವದಿಲ್ಲವೆಂದು ಹೇಳುತ್ತದೆ; ಮುಖ ವನ್ನು ಮುಚ್ಚಿಕೊಳ್ಳುತ್ತಾನೆ.
- 16ಹಗಲು ಹೊತ್ತು ಗೊತ್ತು ಮಾಡಿಕೊಂಡ ಮನೆಗಳನ್ನು ಕತ್ತಲೆಯಲ್ಲಿ ಕೊರೆಯು ತ್ತಾರೆ; ಅವರು ಬೆಳಕನ್ನು ತಿಳಿಯರು.
- 17ಉದಯ ಕಾಲವು ಅವರಿಗೆ ಮರಣದ ನೆರಳಿನ ಹಾಗೆಯೇ ಇರುವದು; ಮರಣದ ನೆರಳಿನ ದಿಗಿಲುಗಳನ್ನು ತಿಳು ಕೊಳ್ಳುತ್ತಾರೆ.
Cross references
- Psalm 10:11 ಕೀರ್ತನೆಗಳು 10:11ದೇವರು ಮರೆತು ಬಿಟ್ಟಿ ದ್ದಾನೆ; ತನ್ನ ಮುಖವನ್ನು ಮರೆಮಾಡುತ್ತಾನೆ; ಆತನು ಎಂದೂ ನೋಡನು ಎಂದು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ.
- Proverbs 7:9–10 ಜ್ಞಾನೋಕ್ತಿಗಳು 7:9–10ಸಂಜೆಯ ಮೊಬ್ಬಿನಲ್ಲಿ ಗಾಡಾಂಧಕಾರದಲ್ಲಿ ಅವಳ ಮನೆಗೆ ಹೋದನು. ಇಗೋ, ವೇಶ್ಯಳ ವಸ್ತ್ರವನ್ನು ಧರಿಸಿ ಕೊಂಡು ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರು ಗೊಂಡಳು.
- Ezekiel 8:12 ಯೆಹೆಜ್ಕೇಲನು 8:12ಆಗ ಆತನು ನನಗೆ ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರ ಪೂರ್ವಿಕರು ಕತ್ತಲೆ ಯಲ್ಲಿ ಪ್ರತಿಯೊಬ್ಬನೂ ತನ್ನ ಕೊಠಡಿಗಳಲ್ಲಿ ಚಿತ್ರಗಳನ್ನು ಮಾಡುವದನ್ನು ನೋಡಿದೆಯಾ?--ಕರ್ತನು ನಮ್ಮನ್ನು ನೋಡುವದಿಲ್ಲ, ಕರ್ತನು ಭೂಮಿಯನ್ನು ತೊರೆದು ಬಿಟ್ಟಿದ್ದಾನೆ ಎಂದು ಹೇಳುವರು.
- Ezekiel 9:9 ಯೆಹೆಜ್ಕೇಲನು 9:9ಆಗ ಆತನು ನನಗೆ ಹೇಳಿದ್ದೇನಂದರೆಇಸ್ರಾಯೇಲಿನ ಮತ್ತು ಯೆಹೂದ ಮನೆತನದವರ ಅಕ್ರಮವು ಅತಿ ದೊಡ್ಡದಾಗಿದೆ; ದೇಶವು ರಕ್ತದಿಂದ ತುಂಬಿದೆ; ಪಟ್ಟಣವು ವಕ್ರತ್ವದಿಂದ ತುಂಬಿದೆ; ಯಾಕಂದರೆ ಕರ್ತನು ಭೂಮಿಯನ್ನು ತೊರೆದುಬಿಟ್ಟಿದ್ದಾನೆ; ಕರ್ತನು ನೋಡುವದಿಲ್ಲ ಎಂದು ಅವರು ಹೇಳುತ್ತಾರೆ.
- Proverbs 6:32–35 ಜ್ಞಾನೋಕ್ತಿಗಳು 6:32–35ಒಬ್ಬ ಸ್ತ್ರೀಯೊಂದಿಗೆ ವ್ಯಭಿಚಾರ ಮಾಡುವವನು ವಿವೇಕವಿಲ್ಲದವನಾಗಿದ್ದಾನೆ. ಅದನ್ನು ಮಾಡುವವನು ತನ್ನ ಪ್ರಾಣವನ್ನೇ ನಾಶಪಡಿಸಿಕೊಳ್ಳುವನು. ಅವ ನಿಗೆ ಗಾಯವೂ ಅವಮಾನವೂ ಆಗುವವು; ಅವನ ನಿಂದೆಯು ಎಂದಿಗೂ ಅಳಿಸಲ್ಪಡದು. ಮನುಷ್ಯನ ಕ್ರೋಧವು ಮತ್ಸರವಾಗಿದೆ; ಆದದರಿಂದ ಮುಯ್ಯಿ ತೀರಿಸುವ ದಿನದಲ್ಲಿ ಅವನು ಕ್ಷಮೆತೋರುವದಿಲ್ಲ.ಅವನು ಯಾವ ಈಡನ್ನು ಲಕ್ಷಿಸುವದಿಲ್ಲ; ಇದ ಲ್ಲದೆ ನೀನು ಎಷ್ಟು ಲಂಚಕೊಟ್ಟರೂ ಅವನು ಒಪ್ಪುವದಿಲ್ಲ. ಅವನು ಯಾವ ಈಡನ್ನು ಲಕ್ಷಿಸುವದಿಲ್ಲ; ಇದ ಲ್ಲದೆ ನೀನು ಎಷ್ಟು ಲಂಚಕೊಟ್ಟರೂ ಅವನು ಒಪ್ಪುವದಿಲ್ಲ.
- Psalm 94:7 ಕೀರ್ತನೆಗಳು 94:7ಕರ್ತನು ನೋಡುವದಿಲ್ಲ; ಇಲ್ಲವೆ ಯಾಕೋಬನ ದೇವರು ಲಕ್ಷಿಸುವದಿಲ್ಲ ಅನ್ನುತ್ತಾರೆ.
- Psalm 73:11 ಕೀರ್ತನೆಗಳು 73:11ಅವರು-- ದೇವರು ಹೇಗೆ ಬಲ್ಲನು? ಮಹೋನ್ನತನಲ್ಲಿ ತಿಳುವಳಿಕೆ ಉಂಟೋ ಎಂದು ಅಂದುಕೊಳ್ಳುತ್ತಾರೆ.
- Psalm 50:18 ಕೀರ್ತನೆಗಳು 50:18ಕಳ್ಳನನ್ನು ನೋಡಿದರೆ ಅವನೊಂದಿಗೆ ಒಪ್ಪುತ್ತೀ; ಜಾರರ ಸಂಗಡ ನಿನ್ನ ಪಾಲು ಇದೆ.
- 2 Samuel 12:12 2 ಸಮುವೇಲನು 12:12ನೀನು ಅದನ್ನು ಮರೆಯಲ್ಲಿ ಮಾಡಿದಿ; ಆದರೆ ನಾನು ಈ ಕಾರ್ಯವನ್ನು ಇಸ್ರಾಯೇಲ್ಯರೆಲ್ಲರ ಮುಂದೆಯೂ ಸೂರ್ಯನ ಮುಂದೆಯೂ ಮಾಡುವೆನು ಅಂದನು.
- Exodus 20:14 ವಿಮೋಚನಕಾಂಡ 20:14ವ್ಯಭಿಚಾರ ಮಾಡಬಾರದು.
- Genesis 38:14–15 ಆದಿಕಾಂಡ 38:14–15ಆಕೆಯು ವಿಧವೆಯ ವಸ್ತ್ರಗಳನ್ನು ತೆಗೆದಿಟ್ಟು ಮುಸುಕು ಹಾಕಿ ಮುಚ್ಚಿಕೊಂಡು ತಿಮ್ನಾತಿನ ಮಾರ್ಗದಲ್ಲಿರುವ ಬಹಿರಂಗ ಸ್ಥಳದಲ್ಲಿ ಕೂತು ಕೊಂಡಳು; ಯಾಕಂದರೆ ಶೇಲಹನು ದೊಡ್ಡವನಾ ಗಿದ್ದರೂ ತನ್ನನ್ನು ಅವನಿಗೆ ಹೆಂಡತಿಯಾಗಿ ಕೊಡಲಿಲ್ಲ ವೆಂದು ನೋಡಿದಳು. ಯೆಹೂದನು ಅವಳನ್ನು ನೋಡಿದಾಗ ಅವಳು ಮುಖಮುಚ್ಚಿಕೊಂಡಿದ್ದರಿಂದ ಅವಳು ಸೂಳೆಯೆಂದು ನೆನಸಿಕೊಂಡನು.
- 2 Samuel 11:4–13 2 ಸಮುವೇಲನು 11:4–13ದಾವೀದನು ದೂತರನ್ನು ಕಳುಹಿಸಿ ಅವಳನ್ನು ಕರೆಯಿಸಿದನು. ಅವಳು ಅವನ ಬಳಿಗೆ ಬಂದಾಗ ಅವಳು ತನ್ನ ಮೈಲಿಗೆಯನ್ನು ಕಳಕೊಂಡು ಶುಚಿಯಾಗಿದ್ದದರಿಂದ ದಾವೀದನು ಅವಳ ಸಂಗಡ ಮಲಗಿದನು. ತರುವಾಯ ಆಕೆಯು ತನ್ನ ಮನೆಗೆ ಹೋದಳು. ಆ ಸ್ತ್ರೀಯು ಗರ್ಭಧರಿಸಿ ತಾನು ಗರ್ಭವತಿಯಾದೆನೆಂದು ದಾವೀದನಿಗೆ ಹೇಳಿ ಕಳುಹಿಸಿದಳು. ಆಗ ದಾವೀದನು ಹಿತ್ತಿಯನಾದ ಊರೀಯನನ್ನು ತನ್ನ ಬಳಿಗೆ ಕಳುಹಿಸೆಂದು ಯೋವಾಬನಿಗೆ ಹೇಳಿ ಕಳುಹಿಸಿದನು. ಹಾಗೆಯೇ ಯೋವಾಬನು ಊರೀಯ ನನ್ನು ದಾವೀದನ ಬಳಿಗೆ ಕಳುಹಿಸಿದನು. ಊರೀ ಯನು ದಾವೀದನ ಬಳಿಗೆ ಬಂದಾಗ ದಾವೀದನು ಅವನನ್ನು--ಯೋವಾಬನೂ ಜನರೂ ಹೇಗಿದ್ದಾರೆ ಮತ್ತು ಯುದ್ಧವೂ ಹೇಗಿದೆ ಎಂದು ವಿಚಾರಿಸಿದನು. ದಾವೀದನು ಊರೀಯನಿಗೆ--ನೀನು ನಿನ್ನ ಮನೆಗೆ ಹೋಗಿ ನಿನ್ನ ಕಾಲುಗಳನ್ನು ತೊಳಕೋ ಅಂದನು. ಊರೀಯನು ಅರಸನ ಮನೆಯಿಂದ ಹೊರಡುವಾಗ ಅರಸನ ಭೋಜನವು ಅವನ ಸಂಗಡವೇ ಹೋಯಿತು. ಆದರೆ ಊರೀಯನು ತನ್ನ ಮನೆಗೆ ಹೋಗದೆ ಅರಮನೆಯ ಬಾಗಲ ಬಳಿಯಲ್ಲಿ ತನ್ನ ಯಜಮಾನನ ಎಲ್ಲಾ ಸೇವಕರ ಸಂಗಡ ಮಲಗಿದ್ದನು. ಊರೀಯನು ತನ್ನ ಮನೆಗೆ ಹೋಗಲಿಲ್ಲವೆಂದು ದಾವೀದನಿಗೆ ತಿಳಿಸ ಲ್ಪಟ್ಟಾಗ ದಾವೀದನು ಊರೀಯನಿಗೆ -- ನೀನು ಪ್ರಯಾಣದಿಂದ ಬರಲಿಲ್ಲವೋ? ಯಾಕೆ ನಿನ್ನ ಮನೆಗೆ ಹೋಗಲಿಲ್ಲ ಅಂದನು. ಊರೀಯನು ದಾವೀದ ನಿಗೆ--ಮಂಜೂಷವೂ ಇಸ್ರಾಯೇಲ್ಯರೂ ಯೆಹೂದ ದವರೂ ಡೇರೆಗಳಲ್ಲಿ ವಾಸಿಸಿರುವಾಗಲೂ ನನ್ನ ಒಡೆಯನಾದ ಯೋವಾಬನೂ ನನ್ನ ಒಡೆಯನ ಸೇವ ಕರೂ ಬೈಲಿನಲ್ಲಿ ದಂಡಿಳಿದಿರುವಾಗ ನಾನು ಉಣ್ಣುವ ದಕ್ಕೂ ಕುಡಿಯುವದಕ್ಕೂ ನನ್ನ ಹೆಂಡತಿಯ ಸಂಗಡ ಮಲಗುವದಕ್ಕೂ ನನ್ನ ಮನೆಗೆ ಹೋಗಲೋ? ನಿನ್ನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ಈ ಕಾರ್ಯ ಮಾಡುವದಿಲ್ಲ ಅಂದನು. ಆಗ ದಾವೀದನು ಊರೀಯನಿಗೆ--ಈ ಹೊತ್ತು ಇಲ್ಲಿರು; ನಾಳೆ ನಿನ್ನನ್ನು ಕಳುಹಿಸುತ್ತೇನೆ ಅಂದನು. ಹಾಗೆಯೇ ಊರೀಯನು ಆ ದಿನವೂ ಮಾರನೆ ದಿನವೂ ಯೆರೂಸ ಲೇಮಿನಲ್ಲಿಯೇ ಇದ್ದನು. ದಾವೀದನು ಅವನನ್ನು ಕರೆದಾಗ ಅವನು ಅವನ ಮುಂದೆ ಉಂಡು ಕುಡಿದನು. ಇದಲ್ಲದೆ ದಾವೀದನು ಅವನನ್ನು ಅಮಲೇರುವಂತೆ ಮಾಡಿಸಿದನು. ಅವನು ಸಾಯಂಕಾಲದಲ್ಲಿ ತನ್ನ ಮನೆಗೆ ಹೋಗದೆ ತನ್ನ ಯಜಮಾನನ ಸೇವಕರ ಸಂಗಡ ಮಲಗುವದಕ್ಕೆ ಹೊರಟುಹೋದನು.