Job · chapter 27 · verse 22
Job 27:22 in Kannada
ಆತನು ಕರುಣೆ ಇಲ್ಲದೆ ಅವನ ಮೇಲೆ ಹಾಕು ತ್ತಾನೆ. ಆತನ ಕೈಯಲ್ಲಿಂದ ಅವನು ಓಡಿಯೇ ಓಡುತ್ತಾನೆ.ಜನರು ಅವನ ಕಡೆಗೆ ಚಪ್ಪಾಳೆ ತಟ್ಟುತ್ತಾರೆ. ಅವನ ಸ್ಥಳದೊಳಗಿಂದ ಅವನನ್ನು ಛೇ ಎಂದು ಹೊರಡಿಸುತ್ತಾರೆ.
Aatanu karune illade avana mele haaku ttaane. Aatana kaiyallinda avanu odiye oduttaane.janaru avana kadege chappaale tattuttaare. Avana sthaladolaginda avanannu chhe endu horadisuttaare.
Job 27:22 in English
- King James Version (KJV)
- For [God] shall cast upon him, and not spare: he would fain flee out of his hand.
- World English Bible (WEB)
- For it hurls at him, and does not spare, as he flees away from his hand.
- American Standard Version (ASV)
- For [God] shall hurl at him, and not spare: He would fain flee out of his hand.
- Bible in Basic English (BBE)
- God sends his arrows against him without mercy; he goes in flight before his hand.
- Darby Translation (DBY)
- And [God] shall cast upon him and not spare: he would fain flee out of his hand.
- Webster's Bible (WBS)
- For [God] shall cast upon him, and not spare: he would fain flee out of his hand.
- Young's Literal Translation (YLT)
- And it casteth at him, and doth not spare, From its hand he diligently fleeth.
Read in context
- 20ದಿಗಿಲು ಗಳು ನೀರಿನಂತೆ ಅವನನ್ನು ಹಿಡಿಯುತ್ತವೆ. ರಾತ್ರಿ ಯಲ್ಲಿ ಬಿರುಗಾಳಿ ಅವನನ್ನು ಸುಲುಕೊಳ್ಳುತ್ತದೆ.
- 21ಮೂಡಣಗಾಳಿ ಅವನನ್ನು ಎತ್ತಿಕೊಂಡು ಹೋಗು ತ್ತದೆ; ಅವನು ಹೋಗಿಬಿಡುತ್ತಾನೆ; ಬಿರುಗಾಳಿ ಅವನನ್ನು ಅವನ ಸ್ಥಳದಿಂದ ಹಾರಿಸಿ ಬಿಡುತ್ತದೆ.
- 22ಆತನು ಕರುಣೆ ಇಲ್ಲದೆ ಅವನ ಮೇಲೆ ಹಾಕು ತ್ತಾನೆ. ಆತನ ಕೈಯಲ್ಲಿಂದ ಅವನು ಓಡಿಯೇ ಓಡುತ್ತಾನೆ.ಜನರು ಅವನ ಕಡೆಗೆ ಚಪ್ಪಾಳೆ ತಟ್ಟುತ್ತಾರೆ. ಅವನ ಸ್ಥಳದೊಳಗಿಂದ ಅವನನ್ನು ಛೇ ಎಂದು ಹೊರಡಿಸುತ್ತಾರೆ.
- 23ಜನರು ಅವನ ಕಡೆಗೆ ಚಪ್ಪಾಳೆ ತಟ್ಟುತ್ತಾರೆ. ಅವನ ಸ್ಥಳದೊಳಗಿಂದ ಅವನನ್ನು ಛೇ ಎಂದು ಹೊರಡಿಸುತ್ತಾರೆ.
Cross references
- 2 Peter 2:4–5 2 ಪೇತ್ರನು 2:4–5ಹೇಗೆಂದರೆ ದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯ ತೀರ್ಪನ್ನು ಹೊಂದುವದಕ್ಕೆ ಇಡಲ್ಪಟ್ಟವರಾಗಿರ ಬೇಕೆಂದು ಕತ್ತಲೆಯ ಸಂಕೋಲೆಗಳಿಗೆ ಒಪ್ಪಿಸಿದನು. ಆತನು ಪುರಾತನ ಲೋಕವನ್ನು ಸುಮ್ಮನೆ ಬಿಡದೆ ಭಕ್ತಿಹೀನರ ಮೇಲೆ ಜಲಪ್ರಳಯವನ್ನು ಬರಮಾಡಿ ದನು; ಆದರೆ ನೀತಿಯನ್ನು ಸಾರುತ್ತಿದ್ದ ಎಂಟನೆಯ ವನಾದ ನೋಹನನ್ನು ರಕ್ಷಿಸಿದನು.
- Ezekiel 24:14 ಯೆಹೆಜ್ಕೇಲನು 24:14ಕರ್ತನಾದ ನಾನೇ ಅದನ್ನು ಹೇಳಿದ್ದೇನೆ, ಅದು ನಡೆಯುವದು; ನಾನು ಅದನ್ನು ಮಾಡದೆ ಬಿಡುವದಿಲ್ಲ; ಕಟಾಕ್ಷ ತೋರಿಸು ವದಿಲ್ಲ; ಪಶ್ಚಾತ್ತಾಪಪಡುವದಿಲ್ಲ. ನಿನ್ನ ಮಾರ್ಗಗಳ ಪ್ರಕಾರವೂ ನಿನ್ನ ಕ್ರಿಯೆಗಳ ಪ್ರಕಾರವೂ ನಿನಗೆ ನ್ಯಾಯ ತೀರಿಸುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
- Ezekiel 5:11 ಯೆಹೆಜ್ಕೇಲನು 5:11ಆದಕಾರಣ ನನ್ನ ಜೀವದಾಣೆ, ದೇವರಾದ ಕರ್ತನು --ನಿಶ್ಚಯವಾಗಿ ನೀನು ನನ್ನ ಪರಿಶುದ್ಧ ಸ್ಥಳವನ್ನು ನಿನ್ನ ಎಲ್ಲಾ ಹೇಸಿಗೆಗಳಿಂದಲೂ ಅಸಹ್ಯಗಳಿಂದಲೂ ಅಪವಿತ್ರಪಡಿಸಿದ ಕಾರಣ ನಾನೂ ಸಹ ನಿನ್ನನ್ನು ಕುಂದಿಸುವೆನು ಮತ್ತು ನನ್ನ ಕಣ್ಣು ಕನಿಕರಿಸುವದಿಲ್ಲ, ಇಲ್ಲವೆ ಕಟಾಕ್ಷವನ್ನು ತೋರಿಸುವದಿಲ್ಲ.
- Job 11:20 ಯೋಬನು 11:20ಆದರೆ ದುಷ್ಟರ ಕಣ್ಣುಗಳು ಕುಂದುವವು; ಅವರು ತಪ್ಪಿಸಿಕೊಳ್ಳುವದಿಲ್ಲ. ಅವರ ಪ್ರಾಣದ ಕೊನೆಯ ಉಸಿರೇ ಅವರ ನಿರೀಕ್ಷೆಯಾಗಿದೆ.
- Isaiah 10:3 ಯೆಶಾಯ 10:3ವಿಚಾರಣೆಯ ದಿನದಲ್ಲಿಯೂ ದೂರ ದಿಂದ ಬರುವ ನಾಶನದಲ್ಲಿಯೂ ನೀವು ಏನು ಮಾಡು ವಿರಿ? ಸಹಾಯಕ್ಕಾಗಿ ನೀವು ಯಾರ ಬಳಿಗೆ ಓಡುವಿರಿ? ನಿಮ್ಮ ವೈಭವವನ್ನು ಎಲ್ಲಿ ಬಿಡುವಿರಿ?
- Exodus 9:14 ವಿಮೋಚನಕಾಂಡ 9:14ಭೂಲೋಕ ದಲ್ಲೆಲ್ಲಾ ನನ್ನ ಹಾಗೆ ಯಾರೂ ಇಲ್ಲವೆಂದು ನೀನು ತಿಳಿದುಕೊಳ್ಳುವ ಹಾಗೆ ಈ ಸಾರಿ ನಾನು ಎಲ್ಲಾ ಬಾಧೆಗಳನ್ನು ನಿನ್ನ ಮೇಲೆಯೂ ನಿನ್ನ ಸೇವಕರ ಮೇಲೆಯೂ ನಿನ್ನ ಜನರ ಮೇಲೆಯೂ ಬರಮಾಡು ವೆನು.
- Judges 4:17–21 ನ್ಯಾಯಸ್ಥಾಪಕರು 4:17–21ಆದರೆ ಸೀಸೆರನು ಕಾಲುನಡೆಯಾಗಿ ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳ ಗುಡಾರಕ್ಕೆ ಓಡಿಬಂದನು. ಯಾಬೀನನೆಂಬ ಹಾಚೋರಿನ ಅರಸ ನಿಗೂ ಕೇನ್ಯನಾದ ಹೆಬೆರನ ಮನೆಗೂ ನಡುವೆ ಸಮಾ ಧಾನ ಇತ್ತು. ಆಗ ಯಾಯೇಲಳು ಸೀಸೆರನನ್ನು ಎದುರುಗೊಳ್ಳುವದಕ್ಕೆ ಹೋಗಿ ಅವನಿಗೆ--ಒಳಗೆ ಬಾ, ನನ್ನ ಪ್ರಭುವೇ; ನನ್ನ ಬಳಿಗೆ ಬಾ; ಭಯಪಡಬೇಡ ಎಂದು ಹೇಳಿದಳು. ಅವನು ಗುಡಾರದಲ್ಲಿರುವ ಅವಳ ಬಳಿಗೆ ಬಂದಾಗ ಅವಳು ಅವನನ್ನು ಒಂದು ಜಮಖಾನ ದಿಂದ ಮುಚ್ಚಿದಳು. ಸೀಸೆರನು ಅವಳಿಗೆ--ದಯ ವಿಟ್ಟು ನನಗೆ ಕುಡಿಯುವದಕ್ಕೆ ಸ್ವಲ್ಪ ನೀರು ಕೊಡು, ನನಗೆ ದಾಹವಾಗಿದೆ ಅಂದನು. ಅವಳು ಹಾಲಿನ ಬುದ್ದಲಿಯನ್ನು ತೆರೆದು ಅವನಿಗೆ ಕುಡಿಯಲು ಕೊಟ್ಟು ಅವನನ್ನು ಮುಚ್ಚಿದಳು. ತಿರಿಗಿ ಅವನು ಅವಳಿಗೆನೀನು ಬಾಗಲಲ್ಲಿ ನಿಂತಿರು; ಯಾವನಾದರೂ ಬಂದು ಇಲ್ಲಿ ಯಾರಾದರೂ ಇದ್ದಾರೋ ಎಂದು ನಿನ್ನನ್ನು ಕೇಳಿದರೆ ಇಲ್ಲ ಎಂದು ಹೇಳು ಅಂದನು. ಹೆಬೆರನ ಹೆಂಡತಿಯಾದ ಯಾಯೇಲಳು ಗುಡಾರದ ಮೊಳೆ ಯನ್ನು ತೆಗೆದು ತನ್ನ ಕೈಯಲ್ಲಿ ಸುತ್ತಿಗೆಯನ್ನು ಹಿಡಿದು ಕೊಂಡು ಅವನು ಆಯಾಸದಿಂದ ಬಹಳ ನಿದ್ರೆ ಮಾಡುತ್ತಿರುವಾಗ ಮೆಲ್ಲಗೆ ಅವನ ಬಳಿಗೆ ಬಂದು ಅವನ ಕಣತಲೆಯಲ್ಲಿ ಆ ಮೊಳೆಯನ್ನು ಹೊಡೆದು ನೆಲದಲ್ಲಿ ನಾಟಿದಳು, ಅವನು ಸತ್ತನು.
- Amos 9:1–3 ಆಮೋಸ 9:1–3ಕರ್ತನು ಯಜ್ಞವೇದಿಯ ಮೇಲೆ ನಿಂತಿರು ವದನ್ನು ನಾನು ಕಂಡೆನು. ಆತನು ಹೇಳಿದ್ದೇ ನಂದರೆ--ಹೊಸ್ತಿಲುಗಳು ಕದಲುವಂತೆ ಆಧಾರ ಬೋದಿಗೆಗಳನ್ನು ಬಲವಾಗಿ ಹೊಡೆದು ಅವು ಎಲ್ಲರ ತಲೆಗಳ ಮೇಲೆ ಬೀಳುವ ಹಾಗೆ ಅವುಗಳನ್ನು ಕಡಿದು ಬಿಡು; ಅವರಲ್ಲಿ ಉಳಿದವರನ್ನು ನಾನು ಕೊಲ್ಲುವೆನು; ಅವರಲ್ಲಿ ಓಡಿ ಹೋಗುವವನು ಓಡಿಹೋಗಲಾಗು ವದಿಲ್ಲ; ಅವರಲ್ಲಿ ತಪ್ಪಿಸಿಕೊಳ್ಳುವವನು ತಪ್ಪಿಸಿಕೊಳ್ಳ ಲಾಗುವದಿಲ್ಲ. ಅವರು ನರಕದ ವರೆಗೂ ತೋಡಿ ಕೊಂಡು ಹೋದರೂ ನನ್ನ ಕೈ ಅವರನ್ನು ಅಲ್ಲಿಂದ ಹಿಡಿದೆಳೆಯುವದು. ಅವರು ಆಕಾಶಕ್ಕೆ ಏರಿ ಹೋದರೂ ನಾನು ಅವರನ್ನು ಅಲ್ಲಿಂದ ಕೆಳಗೆ ಇಳಿಸುವೆನು. ಅವರು ಕರ್ಮೆಲಿನ ಬೆಟ್ಟದ ಕೊನೆಯಲ್ಲಿ ಅಡಗಿಕೊಂಡರೂ ನಾನು ಅವರನ್ನು ಹುಡುಕಿ ಅಲ್ಲಿಂದ ತೆಗೆಯುವೆನು; ಅವರು ನನ್ನ ಕಣ್ಣುಗಳಿಗೆ ಮರೆಯಾಗಿ ಸಮುದ್ರದ ತಳದಲ್ಲಿ ಅಡಗಿಕೊಂಡರೂ ಸರ್ಪಕ್ಕೆ ಅಪ್ಪಣೆಕೊಟ್ಟು ಅದು ಅವರನ್ನು ಅಲ್ಲೇ ಕಚ್ಚುವಂತೆ ಮಾಡುವೆನು.
- Joshua 10:11 ಯೆಹೋಶುವ 10:11ತರುವಾಯ ಅವರು ಬೇತ್ಹೋರೋನಿಂದ ಇಳಿದು ಅಜೇಕದ ವರೆಗೆ ಇಸ್ರಾಯೇಲಿನ ಮುಂದೆ ಓಡಿ ಹೋಗುವಾಗ ಅವರ ಮೇಲೆ ಕರ್ತನು ಆಕಾಶದಿಂದ ಅವರನ್ನು ಕೊಲ್ಲುವ ದೊಡ್ಡ ಕಲ್ಲುಗಳನ್ನು ಬೀಳಿಸಿದನು. ಇಸ್ರಾಯೇಲ್ ಮಕ್ಕಳು ಕತ್ತಿಯಿಂದ ಕೊಂದವರಿಗಿಂತ ಕಲ್ಲು ಮಳೆ ಯಿಂದ ಸತ್ತವರು ಹೆಚ್ಚಾಗಿದ್ದರು.
- Amos 2:14 ಆಮೋಸ 2:14ಆದ ದರಿಂದ ತ್ವರೆಯಾಗಿ ಓಡುವವನು ನಾಶವಾಗುವನು. ಬಲಿಷ್ಠನು ತನ್ನ ತ್ರಾಣವನ್ನು ಬಲಪಡಿಸಿಕೊಳ್ಳಲಾರನು; ಪರಾಕ್ರಮಿಯು ತನ್ನ ಪ್ರಾಣವನ್ನು ಉಳಿಸಿಕೊಳ್ಳನು.
- Deuteronomy 32:23 ಧರ್ಮೋಪದೇಶಕಾಂಡ 32:23ನಾನು ಕೇಡುಗಳನ್ನು ಅವರ ಮೇಲೆ ಕೂಡಿಸಿ ಡುವೆನು; ನನ್ನ ಬಾಣಗಳನ್ನು ಅವರ ಮೇಲೆ ಎಸೆದು ತೀರಿಸುವೆನು.
- Exodus 14:25–28 ವಿಮೋಚನಕಾಂಡ 14:25–28ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದ್ದರಿಂದ ಐಗುಪ್ತ್ಯರು ಕಷ್ಟದಿಂದ ಹೋಗು ವಂತೆ ಮಾಡಿದನು. ಆಗ--ಇಸ್ರಾಯೇಲಿನ ಎದುರಿ ನಿಂದ ಓಡಿಹೋಗೋಣ. ಯಾಕಂದರೆ ಕರ್ತನು ಐಗುಪ್ತ್ಯರಿಗೆ ವಿರೋಧವಾಗಿ ಅವರಿಗೋಸ್ಕರ ಯುದ್ಧ ಮಾಡುತ್ತಾನೆಂದು ಹೇಳಿಕೊಂಡರು. ಆಗ ಕರ್ತನು ಮೋಶೆಗೆ--ಐಗುಪ್ತ್ಯರ ಮೇಲೆಯೂ ಅವರ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನೀರು ತಿರಿಗಿ ಬರುವಹಾಗೆ ಸಮುದ್ರದ ಮೇಲೆ ಕೈಚಾಚು ಅಂದನು. ಆಗ ಮೋಶೆಯು ಸಮುದ್ರದ ಮೇಲೆ ಕೈಚಾಚಲಾಗಿ ಸಮುದ್ರವು ಬೆಳಗಾಗುವಾಗಲೇ ತನ್ನ ಶಕ್ತಿಗೆ ತಿರುಗಿಕೊಂಡಿತು. ಐಗುಪ್ತ್ಯರು ಅದಕ್ಕೆದುರಾಗಿ ಓಡಿಹೋದರು. ಕರ್ತನು ಐಗುಪ್ತ್ಯರನ್ನು ಸಮುದ್ರದ ಮಧ್ಯದಲ್ಲಿ ಸಂಹರಿಸಿದನು. ನೀರು ತಿರಿಗಿ ಬಂದು ರಥಗಳೂ ಕುದುರೆಗಳೂ ಸವಾರರೂ ಅವರ ಹಿಂದೆ ಸಮುದ್ರದಲ್ಲಿ ಬರುತ್ತಿದ್ದ ಫರೋಹನ ಎಲ್ಲಾ ಸೈನ್ಯವೂ ಒಬ್ಬರೂ ಉಳಿಯದಂತೆ ಮುಚ್ಚಿಕೊಂಡಿತು.