Job · chapter 3 · verse 5
Job 3:5 in Kannada
ಕತ್ತಲೂ ಮರಣದ ನೆರಳೂ ಅದನ್ನು ಅಶುದ್ಧಮಾಡಲಿ; ಮೋಡವು ಅದರ ಮೇಲೆ ವಾಸಮಾಡಲಿ; ಹಗಲಿನ ಮೊಬ್ಬುಗಳು ಅದನ್ನು ಹೆದ ರಿಸಲಿ.
Kattaloo maranada neraloo adannu ashuddhamaadali; modavu adara mele vaasamaadali; hagalina mobbugalu adannu heda risali.
Job 3:5 in English
- King James Version (KJV)
- Let darkness and the shadow of death stain it; let a cloud dwell upon it; let the blackness of the day terrify it.
- World English Bible (WEB)
- Let darkness and the shadow of death claim it for their own. Let a cloud dwell on it. Let all that makes the day black terrify it.
- American Standard Version (ASV)
- Let darkness and the shadow of death claim it for their own; Let a cloud dwell upon it; Let all that maketh black the day terrify it.
- Bible in Basic English (BBE)
- Let the dark and the black night take it for themselves; let it be covered with a cloud; let the dark shades of day send fear on it.
- Darby Translation (DBY)
- Let darkness and the shadow of death claim it; let clouds dwell upon it; let darkeners of the day terrify it.
- Webster's Bible (WBS)
- Let darkness and the shades of death stain it; let a cloud dwell upon it; let the blackness of the day terrify it.
- Young's Literal Translation (YLT)
- Let darkness and death-shade redeem it, Let a cloud tabernacle upon it, Let them terrify it as the most bitter of days.
Read in context
- 3ನಾನು ಹುಟ್ಟಿದ ದಿವ ಸವೂ ಗಂಡು ಹುಟ್ಟಿತೆಂದು ಹೇಳಿದ ರಾತ್ರಿಯೂ ಹಾಳಾಗಲಿ.
- 4ಆ ದಿವಸವು ಕತ್ತಲಾಗಲಿ; ಮೇಲಿನಿಂದ ದೇವರು ಅದನ್ನು ಗೌರವಿಸದಿರಲಿ; ಅದರ ಮೇಲೆ ಬೆಳಕು ಪ್ರಕಾಶಿಸದಿರಲಿ.
- 5ಕತ್ತಲೂ ಮರಣದ ನೆರಳೂ ಅದನ್ನು ಅಶುದ್ಧಮಾಡಲಿ; ಮೋಡವು ಅದರ ಮೇಲೆ ವಾಸಮಾಡಲಿ; ಹಗಲಿನ ಮೊಬ್ಬುಗಳು ಅದನ್ನು ಹೆದ ರಿಸಲಿ.
- 6ಆ ರಾತ್ರಿಯನ್ನು ಅಂಧಕಾರವು ಮುತ್ತಲಿ, ಅದು ವರುಷದ ದಿವಸಗಳಲ್ಲಿ ಸಂತೋಷಪಡದಿರಲಿ; ತಿಂಗಳುಗಳ ಲೆಕ್ಕದಲ್ಲಿ ಸೇರದಿರಲಿ.
- 7ಇಗೋ, ಆ ರಾತ್ರಿಯು ಒಂಟಿಯಾಗಿರಲಿ; ಆನಂದ ಸ್ವರವು ಅದಕ್ಕೆ ಬಾರದಿರಲಿ.
Cross references
- Job 10:21–22 ಯೋಬನು 10:21–22ಆಗ ನಾನು ತಿರುಗಿಕೊಳ್ಳದವನಾಗಿ ಕತ್ತಲೆಯ ದೇಶಕ್ಕೆ, ಮರಣದ ನೆರಳಿಗೆಮರಣದ ನೆರಳಿನ ಅಂಧಕಾರದ ಹಾಗೆ ಮೊಬ್ಬಿರುವ ಕ್ರಮವಿಲ್ಲದ ಪ್ರಕಾಶವೇ ಅಂಧ ಕಾರದ ಹಾಗಿರುವ ದೇಶಕ್ಕೆ ಹೋಗುವದಕ್ಕಿಂತ ಮುಂಚೆ ಸ್ವಲ್ಪ ವಿಶ್ರಮಿಸಿಕೊಳ್ಳುವೆನು. ಮರಣದ ನೆರಳಿನ ಅಂಧಕಾರದ ಹಾಗೆ ಮೊಬ್ಬಿರುವ ಕ್ರಮವಿಲ್ಲದ ಪ್ರಕಾಶವೇ ಅಂಧ ಕಾರದ ಹಾಗಿರುವ ದೇಶಕ್ಕೆ ಹೋಗುವದಕ್ಕಿಂತ ಮುಂಚೆ ಸ್ವಲ್ಪ ವಿಶ್ರಮಿಸಿಕೊಳ್ಳುವೆನು.
- Job 28:3 ಯೋಬನು 28:3ಕತ್ತಲೆಗೆ ಮೇರೆ ಇಡು ತ್ತಾರೆ. ಅಂಧಕಾರದಲ್ಲಿಯೂ ಮರಣದ ನೆರಳಿನ ಲ್ಲಿಯೂ ಇರುವ ಕಲ್ಲುಗಳನ್ನು ಕಟ್ಟಕಡೇ ವರೆಗೂ ಅವರು ಶೋಧಿಸುತ್ತಾರೆ.
- Jeremiah 2:6 ಯೆರೆಮೀಯ 2:6ನಮ್ಮನ್ನು ಐಗುಪ್ತ ದೇಶದೊಳಗಿಂದ ಬರಮಾಡಿ ನಮ್ಮನ್ನು ಅರಣ್ಯದಲ್ಲಿ ಕಾಡೂ ಕುಣಿಗಳೂ ಉಳ್ಳ ದೇಶದಲ್ಲಿ, ಕ್ಷಾಮದ ಮತ್ತು ಮರಣದ ನೆರಳಾದಂಥ ದೇಶದಲ್ಲಿ, ಒಬ್ಬರೂ ಹಾದು ಹೋಗದೆ ಯಾರೂ ವಾಸಮಾಡದೆ ಇರುವಲ್ಲಿ ನಡಿಸಿದ ಕರ್ತನು ಎಲ್ಲಿ ಎಂದು ಅವರು ಅಂದುಕೊಳ್ಳಲಿಲ್ಲ.
- Psalm 23:4 ಕೀರ್ತನೆಗಳು 23:4ಹೌದು, ನಾನು ಮರಣದ ನೆರಳಿನ ಕಣಿವೆಯಲ್ಲಿ ನಡೆದರೂ ಕೇಡಿಗೆ ಭಯಪಡೆನು; ಯಾಕಂದರೆ ನೀನು ನನ್ನ ಸಂಗಡ ಇದ್ದೀ; ನಿನ್ನ ಕೋಲೂ ದೊಣ್ಣೆಯೂ ನನ್ನನ್ನು ಆದರಿಸುತ್ತವೆ.
- Jeremiah 13:16 ಯೆರೆಮೀಯ 13:16ಆತನು ಕತ್ತಲೆಯನ್ನು ತರುವದಕ್ಕಿಂತ ಮುಂಚೆಯೂ ನಿಮ್ಮ ಕಾಲುಗಳು ಅಂಧಕಾರದ ಪರ್ವತಗಳ ಮೇಲೆ ಎಡವುವದಕ್ಕಿಂತ ಮುಂಚೆಯೂ ನೀವು ಬೆಳಕಿಗೆ ಕಾದುಕೊಳ್ಳುತ್ತಿರುವಾಗ ಆತನು ಅದನ್ನು ಮರಣದ ನೆರಳಾಗಿ ಮಾಡಿ ಕಾರ್ಗ ತ್ತಲಿಗೆ ಬದಲಾಯಿಸುವದಕ್ಕಿಂತ ಮುಂಚೆಯೇ ನಿಮ್ಮ ದೇವರಾದ ಕರ್ತನನ್ನು ಮಹಿಮೆಪಡಿಸಿರಿ.
- Ezekiel 34:12 ಯೆಹೆಜ್ಕೇಲನು 34:12ಕುರುಬನು ಚದರಿದ್ದ ತನ್ನ ಕುರಿಗಳ ಮಧ್ಯದಲ್ಲಿ ಇರುವ ದಿನದಲ್ಲಿ ತನ್ನ ಮಂದೆಯನ್ನು ಹುಡುಕುವ ಪ್ರಕಾರ ನಾನು ನನ್ನ ಕುರಿಗಳನ್ನು ಹುಡುಕಿ ಕಾರ್ಮುಗಿಲಿನ ದಿನದಲ್ಲಿ ಚದರಿ ಹೋದ ಅವುಗಳನ್ನು ಎಲ್ಲಾ ಸ್ಥಳಗಳಿಂದ ಬಿಡಿಸುವೆನು.
- Isaiah 9:2 ಯೆಶಾಯ 9:2ಕತ್ತಲೆಯಲ್ಲಿ ನಡೆಯುವ ಜನರು ದೊಡ್ಡ ಬೆಳಕನ್ನು ಕಂಡರು; ಮರಣದ ನೆರಳಿನ ದೇಶದಲ್ಲಿ ವಾಸಿಸುವವರ ಮೇಲೆ ಬೆಳಕು ಪ್ರಕಾಶಿ ಸುತ್ತದೆ.
- Deuteronomy 4:11 ಧರ್ಮೋಪದೇಶಕಾಂಡ 4:11ಆಗ ನೀವು ಹತ್ತಿರ ಬಂದು ಬೆಟ್ಟದ ಕೆಳಗೆ ನಿಂತಿರಿ; ಆ ಬೆಟ್ಟವು ಕತ್ತಲೆಯಾ ಗಿದ್ದು ಮೇಘಗಳೂ ಗಾಢಾಂಧಕಾರವೂ ಉಂಟಾಗಿ ಆಕಾಶ ಮಧ್ಯದ ವರೆಗೆ ಬೆಂಕಿಯಿಂದ ಉರಿಯು ತ್ತಿತ್ತು.
- Psalm 107:14 ಕೀರ್ತನೆಗಳು 107:14ಕತ್ತಲೆಯೊಳಗಿಂದಲೂ ಮರಣದ ನೆರಳಿನಿಂದಲೂ ಅವರನ್ನು ಹೊರಗೆ ತಂದು ಅವರ ಬಂಧನಗಳನ್ನು ಮುರಿದುಬಿಟ್ಟನು.
- Jeremiah 4:28 ಯೆರೆಮೀಯ 4:28ಇದರ ನಿಮಿತ್ತ ಭೂಮಿಯು ದುಃಖಿಸುವದು; ಮೇಲಿರುವ ಆಕಾಶವು ಕಪ್ಪಾಗುವದು; ನಾನು ಅದನ್ನು ಹೇಳಿ ನಿಶ್ಚಯಿಸಿದ್ದೇನೆ; ಮಾನಸಾಂತರಪಡುವದಿಲ್ಲ; ಇಲ್ಲವೆ ಅದರಿಂದ ಹಿಂತಿರುಗುವದಿಲ್ಲ;
- Psalm 107:10 ಕೀರ್ತನೆಗಳು 107:10ಕತ್ತಲಲ್ಲಿ ಮತ್ತು ಮರಣದ ನೆರಳಿ ನಲ್ಲಿ ಕೂತವರೂ ದೀನತೆಯಲ್ಲಿಯೂ ಕಬ್ಬಿಣದ ಬೇಡಿ ಯಲ್ಲಿ ಬಂಧಿತರೂ ಸೆರೆಬಿದ್ದವರೂ ಆದ ಇವರು
- Job 16:16 ಯೋಬನು 16:16ನನ್ನ ಮುಖವು ಅಳುವದರಿಂದ ಉಬ್ಬಿ ಕೆಂಪಾಯಿತು; ನನ್ನ ರೆಪ್ಪೆಗಳ ಮೇಲೆ ಮರಣದ ನೆರಳು ಅದೇ;