Job · chapter 33 · verse 3
Job 33:3 in Kannada
ನನ್ನ ಮಾತುಗಳು ನನ್ನ ಹೃದಯದ ಯಥಾರ್ಥತೆಯಿಂದ ಇರುವವು ಮತ್ತು ನನ್ನ ತುಟಿಗಳು ವಿವೇಕವನ್ನು ಸ್ಪಷ್ಟವಾಗಿ ಉಚ್ಚರಿಸುತ್ತವೆ.
Nanna maatugalu nanna hrudayada yathaarthateyinda iruvavu mattu nanna tutigalu vivekavannu spashtavaagi uchcharisuttave.
Job 33:3 in English
- King James Version (KJV)
- My words [shall be of] the uprightness of my heart: and my lips shall utter knowledge clearly.
- World English Bible (WEB)
- My words will utter the uprightness of my heart. That which my lips know they will speak sincerely.
- American Standard Version (ASV)
- My words [shall utter] the uprightness of my heart; And that which my lips know they shall speak sincerely.
- Bible in Basic English (BBE)
- My heart is overflowing with knowledge, my lips say what is true.
- Darby Translation (DBY)
- My words shall be of the uprightness of my heart, and my lips shall utter knowledge purely.
- Webster's Bible (WBS)
- My words [shall be of] the uprightness of my heart: and my lips shall utter knowledge clearly.
- Young's Literal Translation (YLT)
- Of the uprightness of my heart [are] my sayings, And knowledge have my lips clearly spoken.
Read in context
- 1ಆದದರಿಂದ ಯೋಬನೇ, ನನ್ನ ಮಾತುಗಳನ್ನು ಕೇಳು; ನನ್ನ ಎಲ್ಲಾ ನುಡಿಗಳಿಗೆ ಕಿವಿಗೊಡು ಎಂದು ಕೇಳಿಕೊಳ್ಳುತ್ತೇನೆ.
- 2ಇಗೋ, ಈಗ ನನ್ನ ಬಾಯನ್ನು ತೆರೆದಿದ್ದೇನೆ. ನನ್ನ ನಾಲಿಗೆ ನನ್ನ ಬಾಯಲ್ಲಿ ಮಾತನಾಡುತ್ತದೆ.
- 3ನನ್ನ ಮಾತುಗಳು ನನ್ನ ಹೃದಯದ ಯಥಾರ್ಥತೆಯಿಂದ ಇರುವವು ಮತ್ತು ನನ್ನ ತುಟಿಗಳು ವಿವೇಕವನ್ನು ಸ್ಪಷ್ಟವಾಗಿ ಉಚ್ಚರಿಸುತ್ತವೆ.
- 4ದೇವರ ಆತ್ಮನು ನನ್ನನ್ನು ಉಂಟುಮಾಡಿದನು; ಸರ್ವಶಕ್ತನ ಶ್ವಾಸವು ನನಗೆ ಜೀವವನ್ನು ಕೊಟ್ಟಿತು.
- 5ನೀನು ನನಗೆ ಉತ್ತರ ಕೊಡುವದಕ್ಕೆ ಸಾಧ್ಯವಾದರೆ ನಿನ್ನ ಮಾತುಗಳನ್ನು ಸಿದ್ಧಮಾಡಿಕೊಂಡು ನನ್ನ ಮುಂದೆ ನಿಂತುಕೋ.
Cross references
- Job 27:4 ಯೋಬನು 27:4ನನ್ನ ತುಟಿಗಳು ದುಷ್ಟತ್ವವನ್ನು ಮಾತನಾಡವು; ನನ್ನ ನಾಲಿಗೆ ಮೋಸ ನುಡಿಯದು.
- 1 Thessalonians 2:3–4 1 ಥೆಸಲೊನೀಕದವರಿಗೆ 2:3–4ಯಾಕಂದರೆ ನಮ್ಮ ಬೋಧನೆಯು ಮೋಸ ವಲ್ಲ, ಅಶುದ್ಧವಲ್ಲ, ವಂಚನೆಯಲ್ಲ; ದೇವರು ನಮ್ಮನ್ನು ನಂಬಿ ನಮ್ಮ ವಶಕ್ಕೆ ಸುವಾರ್ತೆಯನ್ನು ಒಪ್ಪಿಸಿದನಲ್ಲಾ. ಆದದರಿಂದ ನಾವು ಮನುಷ್ಯರನ್ನು ಮೆಚ್ಚಿಸಬೇಕೆನ್ನದೆ ನಮ್ಮ ಹೃದಯಗಳನ್ನು ಪರಿಶೋಧಿಸುವ ದೇವರನ್ನೇ ಮೆಚ್ಚಿಸಬೇಕೆಂದು ಮಾತನಾಡುತ್ತೇವೆ.
- Proverbs 20:15 ಜ್ಞಾನೋಕ್ತಿಗಳು 20:15ಬಂಗಾರವೂ ಮಾಣಿಕ್ಯಗಳ ರಾಶಿಯೂ ಇವೆ. ತಿಳುವಳಿಕೆಯ ತುಟಿಗಳು ಅಮೂಲ್ಯವಾದ ರತ್ನ ವಾಗಿವೆ.
- Job 6:28 ಯೋಬನು 6:28ಆದದರಿಂದ ಈಗ ಸಂತೃಪ್ತರಾಗಿ ನನ್ನನ್ನು ದೃಷ್ಟಿಸಿರಿ; ನಾನು ಸುಳ್ಳು ಹೇಳಿದರೆ ನಿಮ್ಮ ಕಣ್ಣಿಗೆ ಕಾಣುವದು.
- Proverbs 15:7 ಜ್ಞಾನೋಕ್ತಿಗಳು 15:7ಜ್ಞಾನಿಗಳ ತುಟಿಗಳು ತಿಳುವ ಳಿಕೆಯನ್ನು ಚೆಲ್ಲುತ್ತವೆ; ಬುದ್ಧಿಹೀನರ ಹೃದಯವು ಹಾಗೆ ಮಾಡುವದೇ ಇಲ್ಲ.
- Job 36:3–4 ಯೋಬನು 36:3–4ನನ್ನ ತಿಳುವಳಿಕೆಯನ್ನು ದೂರದಿಂದ ತಕ್ಕೊಂಡು ಬರುವೆನು; ನನ್ನ ನಿರ್ಮಾಣಿಕನಿಗೆ ನೀತಿಯನ್ನು ಸಲ್ಲಿಸುವೆನು. ನಿಜ ವಾಗಿ ನನ್ನ ಮಾತುಗಳು ಸುಳ್ಳಲ್ಲ; ತಿಳುವಳಿಕೆಯಲ್ಲಿ ಸಂಪೂರ್ಣನಾದವನು ನಿನ್ನ ಬಳಿಯಲ್ಲಿದ್ದಾನೆ.
- Proverbs 8:7–8 ಜ್ಞಾನೋಕ್ತಿಗಳು 8:7–8ನನ್ನ ಬಾಯಿಯು ಸತ್ಯವನ್ನು ಮಾತಾಡುವದು; ನನ್ನ ತುಟಿಗಳಿಗೆ ಕೆಟ್ಟತನವು ಅಸಹ್ಯವಾಗಿದೆ. ನನ್ನ ಬಾಯಿಯ ಮಾತುಗಳೆಲ್ಲಾ ನೀತಿಯಲ್ಲಿವೆ; ಮೂರ್ಖ ತನವಾಗಲಿ ವಕ್ರತೆಯಾಗಲಿ ಅವುಗಳಲ್ಲಿ ಇಲ್ಲ.
- Job 15:2 ಯೋಬನು 15:2ಜ್ಞಾನಿಯು ವ್ಯರ್ಥ ತಿಳುವಳಿಕೆಯನ್ನು ನುಡಿದು ಮೂಡಣದ ಗಾಳಿಯಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುವದು ಉಂಟೋ?
- Job 38:2 ಯೋಬನು 38:2ತಿಳು ವಳಿಕೆ ಇಲ್ಲದ ಮಾತುಗಳಿಂದ ಆಲೋಚನೆಯನ್ನು ಕತ್ತಲಾಗಿ ಮಾಡುವ ಇವನಾರು?
- Psalm 37:30–31 ಕೀರ್ತನೆಗಳು 37:30–31ನೀತಿವಂತನ ಬಾಯಿ ಜ್ಞಾನವನ್ನು ಉಚ್ಚರಿಸುವದು; ಅವನ ನಾಲಿಗೆ ನ್ಯಾಯ ವನ್ನು ನುಡಿಯುವದು. ದೇವರ ನ್ಯಾಯ ಪ್ರಮಾ ಣವು ಅವನ ಹೃದಯದಲ್ಲಿ ಅದೆ; ಅವನ ಹೆಜ್ಜೆಗಳು ಕದಲುವದಿಲ್ಲ.
- Proverbs 15:2 ಜ್ಞಾನೋಕ್ತಿಗಳು 15:2ಜ್ಞಾನಿಯ ನಾಲಿ ಗೆಯು ತಿಳುವಳಿಕೆಯನ್ನು ಸರಿಯಾಗಿ ಉಪಯೋಗಿ ಸುತ್ತದೆ. ಬುದ್ಧಿಹೀನರ ಬಾಯಿಯು ಬುದ್ಧಿಹೀನತೆಯನ್ನು ಹೊರಗೆಡುವುತ್ತದೆ.