Job · chapter 36 · verse 3
Job 36:3 in Kannada
ನನ್ನ ತಿಳುವಳಿಕೆಯನ್ನು ದೂರದಿಂದ ತಕ್ಕೊಂಡು ಬರುವೆನು; ನನ್ನ ನಿರ್ಮಾಣಿಕನಿಗೆ ನೀತಿಯನ್ನು ಸಲ್ಲಿಸುವೆನು.
Nanna tiluvalikeyannu dooradinda takkondu baruvenu; nanna nirmaanikanige neetiyannu sallisuvenu.
Job 36:3 in English
- King James Version (KJV)
- I will fetch my knowledge from afar, and will ascribe righteousness to my Maker.
- World English Bible (WEB)
- I will get my knowledge from afar, and will ascribe righteousness to my Maker.
- American Standard Version (ASV)
- I will fetch my knowledge from afar, And will ascribe righteousness to my Maker.
- Bible in Basic English (BBE)
- I will get my knowledge from far, and I will give righteousness to my Maker.
- Darby Translation (DBY)
- I will fetch my knowledge from afar, and will ascribe righteousness to my Creator.
- Webster's Bible (WBS)
- I will bring my knowledge from afar, and will ascribe righteousness to my Maker.
- Young's Literal Translation (YLT)
- I lift up my knowledge from afar, And to my Maker I ascribe righteousness.
Read in context
- 1ಎಲೀಹು ಮುಂದುವರಿದು ಹೇಳಿದ್ದೇನಂದರೆ--
- 2ನನಗೋಸ್ಕರ ಸ್ವಲ್ಪ ತಾಳಿ ಕೋ; ಆಗ ನಿನಗೆ ಪ್ರಕಟಮಾಡುವೆನು; ಯಾಕಂದರೆ ದೇವರ ಪರವಾಗಿ ಇನ್ನೂ ಮಾತುಗಳುಂಟು.
- 3ನನ್ನ ತಿಳುವಳಿಕೆಯನ್ನು ದೂರದಿಂದ ತಕ್ಕೊಂಡು ಬರುವೆನು; ನನ್ನ ನಿರ್ಮಾಣಿಕನಿಗೆ ನೀತಿಯನ್ನು ಸಲ್ಲಿಸುವೆನು.
- 4ನಿಜ ವಾಗಿ ನನ್ನ ಮಾತುಗಳು ಸುಳ್ಳಲ್ಲ; ತಿಳುವಳಿಕೆಯಲ್ಲಿ ಸಂಪೂರ್ಣನಾದವನು ನಿನ್ನ ಬಳಿಯಲ್ಲಿದ್ದಾನೆ.
- 5ಇಗೋ, ದೇವರು ಬಲಿಷ್ಠನಾಗಿದ್ದು ಯಾರನ್ನೂ ತಿರಸ್ಕಾರ ಮಾಡುವದಿಲ್ಲ.
Cross references
- James 3:17 ಯಾಕೋಬನು 3:17ಆದರೆ ಮೇಲಣಿಂದ ಬರುವ ಜ್ಞಾನವು ಮೊದಲು ನಿರ್ಮಲವಾದದ್ದು, ಆಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸುಲಭವಾಗಿ ಒಪ್ಪಿಕೊಳ್ಳುವಂಥದು, ಕರುಣೆಯಿಂದಲೂ ಒಳ್ಳೇ ಫಲಗಳಿಂದಲೂ ತುಂಬಿರುವಂಥದ್ದು ಆಗಿದೆ; ಅದರಲ್ಲಿ ಪಕ್ಷಪಾತವೂ ಕಪಟವೂ ಇಲ್ಲ.ಸಮಾಧಾನ ಪಡಿಸುವವರಿಗೆ ಸಮಾಧಾನದಲ್ಲಿ ನೀತಿಯ ಫಲವು ಬಿತ್ತಲ್ಪಡುತ್ತದೆ.
- James 1:17 ಯಾಕೋಬನು 1:17ಪ್ರತಿಯೊಂದು ಒಳ್ಳೇ ದಾನವೂ ಸಂಪೂರ್ಣವಾದ ಪ್ರತಿವರವೂ ಮೇಲಣ ವುಗಳೇ; ಅವು ಬೆಳಕುಗಳ ತಂದೆಯಿಂದ ಇಳಿದು ಬರುತ್ತವೆ. ಆತನಲ್ಲಿ ಚಂಚಲತ್ವವೇನೂ ಇಲ್ಲ, ವ್ಯತ್ಯಾಸದ ನೆರಳೂ ಇಲ್ಲ.
- Revelation 15:3 ಪ್ರಕಟನೆ 15:3ಅವರು ದೇವರ ಸೇವಕನಾದ ಮೋಶೆಯ ಹಾಡನ್ನೂ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ--ಸರ್ವಶಕ್ತನಾಗಿರುವ ದೇವ ರಾದ ಕರ್ತನೇ, ನಿನ್ನ ಕ್ರಿಯೆಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಪರಿಶುದ್ಧರ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.
- Daniel 9:7 ದಾನಿಯೇಲನು 9:7ಓ ಕರ್ತನೇ, ನೀನು ನೀತಿವಂತನು; ಆದರೆ ನಾವು ಈ ದಿನದ ಪ್ರಕಾರ ನಾಚಿಕೆಗೀಡಾದವರು; ಯೆಹೂದದ ಮನುಷ್ಯರನ್ನೂ ಯೆರೂಸಲೇಮಿನ ನಿವಾ ಸಿಗಳನ್ನೂ ಸಮಸ್ತ ಇಸ್ರಾಯೇಲ್ಯರನ್ನೂ ಹತ್ತಿರದಲ್ಲಿ ರುವವರನ್ನೂ ಮತ್ತು ದೂರದಲ್ಲಿರುವವರನ್ನೂ ಅವರು ನಿನಗೆ ವಿರುದ್ಧವಾಗಿ ಮಾಡಿರುವ ಅವರ ಅಪರಾಧದ ನಿಮಿತ್ತ ನೀನು ಅವರನ್ನು ಎಲ್ಲಾ ದೇಶಗಳಲ್ಲಿಯೂ ಓಡಿಸಿ ಬಿಟ್ಟಿದ್ದೀ.
- Psalm 11:7 ಕೀರ್ತನೆಗಳು 11:7ನೀತಿಯ ಕರ್ತನು ನೀತಿಯನ್ನು ಪ್ರೀತಿ ಮಾಡುತ್ತಾನೆ; ಆತನ ಮುಖವು ಯಥಾರ್ಥನನ್ನು ದೃಷ್ಟಿಸುತ್ತದೆ.
- Job 32:8 ಯೋಬನು 32:8ಆದರೆ ಮನುಷ್ಯನಲ್ಲಿ ಆತ್ಮ ಉಂಟು; ಸರ್ವಶಕ್ತನ ಶ್ವಾಸವು ಅವನಿಗೆ ಗ್ರಹಿಕೆ ಕೊಡುತ್ತದೆ.
- Daniel 9:14 ದಾನಿಯೇಲನು 9:14ಆದದರಿಂದ ಕರ್ತನು ಕೇಡಿ ಗಾಗಿ ಕಾದುಕೊಂಡು ಅದನ್ನು ನಮ್ಮ ಮೇಲೆ ತಂದಿ ದ್ದಾನೆ. ನಮ್ಮ ದೇವರಾದ ಕರ್ತನು ತಾನು ಮಾಡುವ ಎಲ್ಲಾ ಕೆಲಸಗಳಲ್ಲೂ ನೀತಿವಂತನೇ; ನಾವಾದರೋ ಆತನ ಸ್ವರಕ್ಕೆ ವಿಧೇಯರಾಗಲಿಲ್ಲ.
- Psalm 145:17 ಕೀರ್ತನೆಗಳು 145:17ಕರ್ತನು ತನ್ನ ಎಲ್ಲಾ ಮಾರ್ಗಗಳಲ್ಲಿ ನೀತಿವಂತನೂ ತನ್ನ ಎಲ್ಲಾ ಕೆಲಸಗಳಲ್ಲಿ ಪರಿಶುದ್ಧನೂ ಆಗಿದ್ದಾನೆ.
- Deuteronomy 32:4 ಧರ್ಮೋಪದೇಶಕಾಂಡ 32:4ಆತನೇ ಬಂಡೆ. ಆತನ ಕಾರ್ಯವು ಸಂಪೂರ್ಣ ವಾದದ್ದು. ಆತನ ಮಾರ್ಗಗಳೆಲ್ಲಾ ನ್ಯಾಯವಾಗಿವೆ; ಆತನು ಸತ್ಯದ ಮತ್ತು ದೋಷರಹಿತನಾದ ದೇವರು, ಆತನು ನೀತಿವಂತನೂ ಯಥಾರ್ಥನೂ ಆಗಿದ್ದಾನೆ.
- Job 8:3 ಯೋಬನು 8:3ದೇವರು ಅನ್ಯಾಯವಾದ ತೀರ್ಪುಮಾಡುತ್ತಾನೋ? ಸರ್ವಶಕ್ತನು ನೀತಿಗೆ ವಿರುದ್ಧವಾದದ್ದನ್ನು ಮಾಡು ವನೋ?
- James 1:5 ಯಾಕೋಬನು 1:5ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆ ಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲ ರಿಗೂ ಉದಾರ ಮನಸ್ಸಿನಿಂದ ಕೊಡುವಾತನಾಗಿದ್ದಾನೆ.
- Romans 3:25–26 ರೋಮಾಪುರದವರಿಗೆ 3:25–26ಈತನು ತನ್ನ ರಕ್ತದ ಮೂಲಕ ನಂಬಿಕೆಯಿದ್ದವರಿಗಾಗಿ ಪಾಪದ ಪ್ರಾಯಶ್ಚಿತ್ತವಾಗಿರಬೇಕೆಂದು ದೇವರು ಈತನನ್ನು ಮುಂದಿಟ್ಟನು. ದೇವರು ಹಿಂದಿನಕಾಲದ ಪಾಪಗಳನ್ನು ಸಹಿಸಿಕೊಂಡಿರಲಾಗಿ ತನ್ನ ನೀತಿಯನ್ನು ಈಗಿನ ಕಾಲದಲ್ಲಿ ಹೀಗೆ ತೋರಿಸಿ ತಾನು ನೀತಿವಂತನಾಗಿಯೂ ಯೇಸುವಿನಲ್ಲಿ ನಂಬಿಕೆಯಿಡುವವರನ್ನು ನೀತಿವಂತ ರೆಂದು ನಿರ್ಣಯಿಸುವವನಾಗಿಯೂ ಪ್ರಸಿದ್ಧಿಪಡಿಸಿ ಕೊಂಡನು.