Deuteronomy · chapter 32 · verse 4
Deuteronomy 32:4 in Kannada
ಆತನೇ ಬಂಡೆ. ಆತನ ಕಾರ್ಯವು ಸಂಪೂರ್ಣ ವಾದದ್ದು. ಆತನ ಮಾರ್ಗಗಳೆಲ್ಲಾ ನ್ಯಾಯವಾಗಿವೆ; ಆತನು ಸತ್ಯದ ಮತ್ತು ದೋಷರಹಿತನಾದ ದೇವರು, ಆತನು ನೀತಿವಂತನೂ ಯಥಾರ್ಥನೂ ಆಗಿದ್ದಾನೆ.
Aatane bande. Aatana kaaryavu sampoorna vaadaddu. Aatana maargagalellaa nyaayavaagive; aatanu satyada mattu dosharahitanaada devaru, aatanu neetivantanoo yathaarthanoo aagiddaane.
Deuteronomy 32:4 in English
- King James Version (KJV)
- [He is] the Rock, his work [is] perfect: for all his ways [are] judgment: a God of truth and without iniquity, just and right [is] he.
- World English Bible (WEB)
- The Rock: his work is perfect, for all his ways are just. A God of faithfulness who does no wrong, just and right is he.
- American Standard Version (ASV)
- The Rock, his work is perfect; For all his ways are justice: A God of faithfulness and without iniquity, Just and right is he.
- Bible in Basic English (BBE)
- He is the Rock, complete is his work; for all his ways are righteousness: a God without evil who keeps faith, true and upright is he.
- Darby Translation (DBY)
- [He is] the Rock, his work is perfect, For all his ways are righteousness; A God of faithfulness without deceit, Just and right is he.
- Webster's Bible (WBS)
- [He is] the Rock, his work [is] perfect: for all his ways [are] judgment: a God of truth and without iniquity: just and right [is] he.
- Young's Literal Translation (YLT)
- The Rock! — perfect [is] His work, For all His ways [are] just; God of stedfastness, and without iniquity: Righteous and upright [is] He.
Read in context
- 2ನನ್ನ ಬೋಧನೆಯು ಮಳೆಯಂತೆ ಸುರಿಯುವದು; ನನ್ನ ಮಾತು ಮಂಜಿನಂತೆಯೂ ಹುಲ್ಲಿನ ಮೇಲೆ ಬೀಳುವ ತುಂತುರಿನ ಹಾಗೆಯೂ ಪಲ್ಯದ ಮೇಲೆ ಬೀಳುವ ವೃಷ್ಟಿಗಳ ಹಾಗೆಯೂ ಬೀಳುವದು.
- 3ಕರ್ತನ ಹೆಸರನ್ನು ನಾನು ಸಾರುತ್ತೇನೆ. ನಮ್ಮ ದೇವರಿಗೆ ಮಹತ್ವವನ್ನು ಕೊಡಿರಿ.
- 4ಆತನೇ ಬಂಡೆ. ಆತನ ಕಾರ್ಯವು ಸಂಪೂರ್ಣ ವಾದದ್ದು. ಆತನ ಮಾರ್ಗಗಳೆಲ್ಲಾ ನ್ಯಾಯವಾಗಿವೆ; ಆತನು ಸತ್ಯದ ಮತ್ತು ದೋಷರಹಿತನಾದ ದೇವರು, ಆತನು ನೀತಿವಂತನೂ ಯಥಾರ್ಥನೂ ಆಗಿದ್ದಾನೆ.
- 5ಅವರು ತಮ್ಮನ್ನು ತಾವೇ ಕೆಡಿಸಿಕೊಂಡರು. ಅವರ ಗುರುತು ಆತನ ಮಕ್ಕಳಲ್ಲದವರ ಗುರುತು. ಅವರು ಮೂರ್ಖರಾದ ವಕ್ರಸಂತತಿಯೇ.
- 6ಓ ಮೂರ್ಖರಾದ ಬುದ್ಧಿಹೀನ ಜನರೇ, ಕರ್ತನಿಗೆ ಹೀಗೆ ಪ್ರತಿಯಾಗಿ ಕೊಡುತ್ತೀರೋ? ಆತನು ನಿನ್ನನ್ನು ಕೊಂಡುಕೊಂಡ ತಂದೆಯಲ್ಲವೋ? ಆತನು ನಿನ್ನನ್ನು ಸೃಷ್ಟಿಮಾಡಿ ಸ್ಥಿರಪಡಿಸಿದ್ದಾನೆ.
Cross references
- Psalm 18:30–31 ಕೀರ್ತನೆಗಳು 18:30–31ದೇವರ ಮಾರ್ಗವಾದರೋ ಸಂಪೂರ್ಣವಾದದ್ದು; ಕರ್ತನ ವಾಕ್ಯವು ಪುಟಕ್ಕೆ ಹಾಕಿದ್ದಾಗಿದೆ; ಆತನು ತನ್ನಲ್ಲಿ ಭರವಸವಿಟ್ಟವರೆಲ್ಲರಿಗೆ ಗುರಾಣಿಯಾಗಿದ್ದಾನೆ. ಕರ್ತನಲ್ಲದೆ ದೇವರು ಯಾರು? ಇಲ್ಲವೆ ನಮ್ಮ ದೇವರ ಹೊರತು ಬಂಡೆಯು ಯಾರು?
- Psalm 92:15 ಕೀರ್ತನೆಗಳು 92:15ಕರ್ತನು ಯಥಾರ್ಥನೂ ನನ್ನ ಬಂಡೆಯೂ ಆಗಿದ್ದಾನೆ; ಆತನಲ್ಲಿ ಅನೀತಿ ಇರುವದಿಲ್ಲ.
- Isaiah 26:4 ಯೆಶಾಯ 26:4ನೀವು ಕರ್ತನಲ್ಲಿ ಸದಾ ಭರವಸವಿಡಿರಿ; ಕರ್ತನಾದ ಯೆಹೋವನಲ್ಲಿ ನಿತ್ಯವಾದ ಬಲವುಂಟು.
- 2 Samuel 22:31–32 2 ಸಮುವೇಲನು 22:31–32ದೇವರಾದರೋ, ಆತನ ಮಾರ್ಗವು ಸಂಪೂರ್ಣ ವಾದದ್ದು; ಕರ್ತನ ವಾಕ್ಯವು ಶೋಧಿಸಲ್ಪಟ್ಟದ್ದಾಗಿದೆ; ಆತನಲ್ಲಿ ಭರವಸವಿಡುವವರೆಲ್ಲರಿಗೆ ಗುರಾಣಿಯಾಗಿ ದ್ದಾನೆ. ಕರ್ತನಲ್ಲದೆ ದೇವರು ಯಾರು? ನಮ್ಮ ದೇವರಲ್ಲದೆ ಬಂಡೆಯು ಯಾರು?
- Psalm 18:2 ಕೀರ್ತನೆಗಳು 18:2ಕರ್ತನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನನ್ನು ತಪ್ಪಿಸು ವಾತನೂ ನನ್ನ ದೇವರೂ ನಾನು ಭರವಸವಿಡುವ ನನ್ನ ಬಲವೂ ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ನನ್ನ ಉನ್ನತವಾದ ದುರ್ಗವೂ ಆಗಿದ್ದಾನೆ.
- Revelation 15:3–4 ಪ್ರಕಟನೆ 15:3–4ಅವರು ದೇವರ ಸೇವಕನಾದ ಮೋಶೆಯ ಹಾಡನ್ನೂ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ--ಸರ್ವಶಕ್ತನಾಗಿರುವ ದೇವ ರಾದ ಕರ್ತನೇ, ನಿನ್ನ ಕ್ರಿಯೆಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಪರಿಶುದ್ಧರ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ. ಓ ಕರ್ತನೇ, ನಿನಗೆ ಭಯಪಡದವರೂ ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರಿ ದ್ದಾರೆ? ಯಾಕಂದರೆ ನೀನೊಬ್ಬನೇ ಪರಿಶುದ್ಧನು; ನಿನ್ನ ತೀರ್ಪುಗಳು ಪ್ರಕಟವಾದದ್ದರಿಂದ ಎಲ್ಲಾ ಜನಾಂಗ ಗಳು ಬಂದು ನಿನ್ನ ಸನ್ನಿಧಾನದಲ್ಲಿ ಆರಾಧಿಸುವರು ಎಂದು ಹೇಳಿದರು.
- Daniel 4:37 ದಾನಿಯೇಲನು 4:37ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.
- Deuteronomy 32:30–31 ಧರ್ಮೋಪದೇಶಕಾಂಡ 32:30–31ಅವರ ಬಂಡೆ ಅವರನ್ನು ಮಾರಿ ಕರ್ತನು ಅವರನ್ನು ಅಟ್ಟಿಬಿಟ್ಟರೆ ಒಬ್ಬನು ಹೇಗೆ ಸಾವಿರ ಮಂದಿ ಯನ್ನು ಹಿಂದಟ್ಟುವನು? ಇಬ್ಬರು ಹೇಗೆ ಹತ್ತು ಸಾವಿರ ಮಂದಿಯನ್ನು ಓಡಿಸುವರು? ನಮ್ಮ ಬಂಡೆಯ ಹಾಗೆ ಅವರ ಬಂಡೆ ಅಲ್ಲ. ಇದಕ್ಕೆ ನಮ್ಮ ಶತ್ರುಗಳೇ ಸಾಕ್ಷಿ.
- 1 Corinthians 10:4 1 ಕೊರಿಂಥದವರಿಗೆ 10:4ಅವರೆಲ್ಲರೂ ಆತ್ಮಿಕವಾದ ಒಂದೇ ಪಾನವನ್ನು ಕುಡಿದರು; ಯಾಕಂದರೆ ಅವರನ್ನು ಹಿಂಬಾಲಿಸಿದ ಆ ಆತ್ಮಿಕ ಬಂಡೆಯೊಳಗಿಂದ ಅವರು ಕುಡಿದರು; ಆ ಬಂಡೆಯು ಕ್ರಿಸ್ತನೇ.
- Matthew 5:48 ಮತ್ತಾಯನು 5:48ಆದದರಿಂದ ಪರಲೋಕ ದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣ ನಾಗಿರುವಂತೆಯೇ ನೀವೂ ಪರಿಪೂರ್ಣರಾಗಿರ್ರಿ.
- 2 Samuel 22:2–3 2 ಸಮುವೇಲನು 22:2–3ಕರ್ತನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನನ್ನು ತಪ್ಪಿಸುವವನೂ ಆಗಿದ್ದಾನೆ. ನನ್ನ ಬಂಡೆಯಾದ ದೇವರಲ್ಲಿ ನಾನು ಭರವಸ ವಿಡುವೆನು; ಆತನು ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ಉನ್ನತ ಗೋಪುರವೂ ನನ್ನ ಆಶ್ರಯವೂ ನನ್ನ ರಕ್ಷಕನೂ ಆಗಿದ್ದಾನೆ. ನೀನು ಬಲಾತ್ಕಾರಿಯಿಂದ ನನ್ನನ್ನು ರಕ್ಷಿಸುತ್ತೀ.
- Psalm 100:5 ಕೀರ್ತನೆಗಳು 100:5ಕರ್ತನು ಒಳ್ಳೆಯವನು; ಆತನ ಕರುಣೆಯು ಯುಗಯುಗಕ್ಕೂ ಆತನ ಸತ್ಯತೆಯು ತಲತಲಾಂತರಕ್ಕೂ ಇರುವವು.