Job · chapter 36 · verse 6
Job 36:6 in Kannada
ಆತನು ಬಲದಲ್ಲಿಯೂ ಜ್ಞಾನದಲ್ಲಿಯೂ ಪರಾಕ್ರಮಿಯಾಗಿದ್ದಾನೆ. ದುಷ್ಟರ ಜೀವವನ್ನು ಆತನು ಕಾಪಾಡುವದಿಲ್ಲ. ಆದರೆ ಬಡವ ರಿಗೆ ಸರಿಯಾದದ್ದನ್ನು ಕೊಡುತ್ತಾನೆ.
Aatanu baladalliyoo jnyaanadalliyoo paraakramiyaagiddaane. Dushtara jeevavannu aatanu kaapaaduvadilla. Aadare badava rige sariyaadaddannu koduttaane.
Job 36:6 in English
- King James Version (KJV)
- He preserveth not the life of the wicked: but giveth right to the poor.
- World English Bible (WEB)
- He doesn’t preserve the life of the wicked, but gives justice to the afflicted.
- American Standard Version (ASV)
- He preserveth not the life of the wicked, But giveth to the afflicted [their] right.
- Bible in Basic English (BBE)
- His eyes are ever on the upright, and he gives to the crushed their right;
- Darby Translation (DBY)
- He saveth not the wicked alive; but he doeth justice to the afflicted.
- Webster's Bible (WBS)
- He preserveth not the life of the wicked: but giveth right to the poor.
- Young's Literal Translation (YLT)
- He reviveth not the wicked, And the judgment of the poor appointeth;
Read in context
- 4ನಿಜ ವಾಗಿ ನನ್ನ ಮಾತುಗಳು ಸುಳ್ಳಲ್ಲ; ತಿಳುವಳಿಕೆಯಲ್ಲಿ ಸಂಪೂರ್ಣನಾದವನು ನಿನ್ನ ಬಳಿಯಲ್ಲಿದ್ದಾನೆ.
- 5ಇಗೋ, ದೇವರು ಬಲಿಷ್ಠನಾಗಿದ್ದು ಯಾರನ್ನೂ ತಿರಸ್ಕಾರ ಮಾಡುವದಿಲ್ಲ.
- 6ಆತನು ಬಲದಲ್ಲಿಯೂ ಜ್ಞಾನದಲ್ಲಿಯೂ ಪರಾಕ್ರಮಿಯಾಗಿದ್ದಾನೆ. ದುಷ್ಟರ ಜೀವವನ್ನು ಆತನು ಕಾಪಾಡುವದಿಲ್ಲ. ಆದರೆ ಬಡವ ರಿಗೆ ಸರಿಯಾದದ್ದನ್ನು ಕೊಡುತ್ತಾನೆ.
- 7ನೀತಿವಂತರಿಂದ ತನ್ನ ಕಣ್ಣುಗಳನ್ನು ತೊಲಗಿಸುವದಿಲ್ಲ. ಅವರು ಅರಸುಗಳ ಸಂಗಡ ಸಿಂಹಾಸನದಲ್ಲಿ ಇದ್ದಾರೆ. ಹೌದು, ಆತನು ಅವರನ್ನು, ಎಂದೆಂದಿಗೂ ಸ್ಥಿರಪಡಿಸುತ್ತಾನೆ. ಅವರು ಉನ್ನತಕ್ಕೇರಿಸಲ್ಪಟ್ಟಿದ್ದಾರೆ.
- 8ಆದರೆ ಸಂಕೋಲೆ ಗಳಿಂದ ಕಟ್ಟಲ್ಪಟ್ಟಿದ್ದಾರೆ. ಬಾಧೆಯ ಬಂಧಗಳಿಂದ ಹಿಡಿಯಲ್ಪಟ್ಟಿದ್ದಾರೆ.
Cross references
- Psalm 140:12 ಕೀರ್ತನೆಗಳು 140:12ಕರ್ತನು ದೀನನಿಗೆ ವ್ಯಾಜ್ಯವನ್ನೂ ಬಡವರಿಗೆ ನ್ಯಾಯವನ್ನೂ ತೀರಿಸುವನೆಂದು ನಾನು ಬಲ್ಲೆನು.ನಿಶ್ಚಯವಾಗಿ ನೀತಿವಂತರು ನಿನ್ನ ಹೆಸರಿಗೆ ಉಪಕಾರ ಸ್ತುತಿಯನ್ನು ಮಾಡುವರು; ಯಥಾರ್ಥರು ನಿನ್ನ ಸನ್ನಿಧಿಯಲ್ಲಿ ವಾಸಿಸುವರು.
- Psalm 72:12–14 ಕೀರ್ತನೆಗಳು 72:12–14ಆತನಿಗೆ ಮೊರೆ ಇಡುವ ಬಡವರನ್ನೂ ಸಹಾಯ ಕನಿಲ್ಲದ ದೀನನನ್ನೂ ಬಿಡಿಸುವನು. ದರಿದ್ರನನ್ನೂ ಬಡವನನ್ನೂ ಕರುಣಿಸುವನು; ಬಡವರ ಪ್ರಾಣಗ ಳನ್ನು ರಕ್ಷಿಸುವನು. ಮೋಸದಿಂದಲೂ ಬಲಾತ್ಕಾರ ದಿಂದಲೂ ಅವರ ಪ್ರಾಣವನ್ನು ಬಿಡುಗಡೆ ಮಾಡು ವನು; ಅವರ ರಕ್ತವು ಆತನ ದೃಷ್ಟಿಯಲ್ಲಿ ಅಮೂಲ್ಯ ವಾಗಿರುವದು.
- 2 Peter 2:9 2 ಪೇತ್ರನು 2:9ಕರ್ತನು ನೀತಿವಂತರನ್ನು ಸಂಕಟದೊಳಗಿಂದ ತಪ್ಪಿಸುವ ದಕ್ಕೂ ಅನೀತಿವಂತರನ್ನು ಶಿಕ್ಷಿಸುವದಕ್ಕಾಗಿ ನ್ಯಾಯ ತೀರ್ಪಿನ ದಿನದ ತನಕ ಇಡುವದಕ್ಕೂ ಬಲ್ಲವನಾಗಿ ದ್ದಾನೆ.
- Job 21:7–9 ಯೋಬನು 21:7–9ದುಷ್ಟರು ಯಾಕೆ ಬದುಕಿ ಮುದುಕರಾಗಿ ಹೌದು, ತ್ರಾಣದಿಂದ ಬಲಗೊಳ್ಳುತ್ತಾರೆ? ಅವರ ಸಂತಾನದವರು ಅವರ ಮುಂದೆ ಅವರ ಸಂಗಡ ದೃಢವಾಗಿದ್ದಾರೆ; ಅವರ ಸಂತಾನದವರು ಅವರ ಕಣ್ಣು ಗಳ ಮುಂದೆ ಇದ್ದಾರೆ. ಅವರ ಮನೆಗಳು ಅಂಜಿಕೆ ಇಲ್ಲದೆ ಸಮಾಧಾನವಾಗಿವೆ; ದೇವರ ಕೋಲು ಅವರ ಮೇಲೆ ಇಲ್ಲ.
- Psalm 72:4 ಕೀರ್ತನೆಗಳು 72:4ಆತನು ಜನರಲ್ಲಿ ದೀನರಿಗೆ ನ್ಯಾಯತೀರಿಸುವನು; ಬಡವನ ಮಕ್ಕಳನ್ನು ರಕ್ಷಿಸುವನು; ಬಲಾತ್ಕಾರಿಯನ್ನು ಮುರಿದು ತುಂಡು ಮಾಡುವನು.
- Exodus 22:22–24 ವಿಮೋಚನಕಾಂಡ 22:22–24ಯಾವ ವಿಧವೆಯನ್ನೂ ದಿಕ್ಕಿಲ್ಲದ ಮಗುವನ್ನೂ ಬಾಧಿಸಬಾರದು. ಯಾವದೆ ರೀತಿಯಲ್ಲಿ ಅವರನ್ನು ಬಾಧಿಸಿದರೂ ಅವರು ನನಗೆ ಮೊರೆಯಿಟ್ಟರೆ ನಾನು ನಿಶ್ಚಯವಾಗಿ ಅವರ ಮೊರೆಯನ್ನು ಕೇಳುವೆನು. ಆಗ ನನ್ನ ಕೋಪವು ಉರಿಯುವದು. ಕತ್ತಿಯಿಂದ ನಿಮ್ಮನ್ನು ಕೊಲ್ಲುವೆನು. ನಿಮ್ಮ ಹೆಂಡತಿಯರು ವಿಧವೆಯರಾಗಿ ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು.
- Job 5:15 ಯೋಬನು 5:15ಆತನು ಕತ್ತಿಯಿಂದಲೂ ಅದರ ಬಾಯಿಂದಲೂ ಬಲಿಷ್ಠನ ಕೈಯೊಳಗಿಂದಲೂ ಬಡವ ನನ್ನು ರಕ್ಷಿಸುತ್ತಾನೆ.
- Psalm 82:1–4 ಕೀರ್ತನೆಗಳು 82:1–4ದೇವರು ಬಲಶಾಲಿಗಳ ಮಧ್ಯದಲ್ಲಿ ನಿಂತು ದೇವರುಗಳಿಗೆ ನ್ಯಾಯತೀರಿಸುತ್ತಾನೆ. ಎಷ್ಟರ ವರೆಗೂ ಅನ್ಯಾಯವಾಗಿ ತೀರ್ಪುಮಾಡಿ ದುಷ್ಟ ರಿಗೆ ಮುಖದಾಕ್ಷಿಣ್ಯ ಮಾಡುವಿರಿ? ಸೆಲಾ. ದರಿದ್ರ ನನ್ನೂ ದಿಕ್ಕಿಲ್ಲದವನನ್ನೂ ಕಾಪಾಡಿ ದೀನನಿಗೂ ಬಡವ ನಿಗೂ ನೀತಿಯನ್ನು ಮಾಡಿರಿ. ದರಿದ್ರನನ್ನೂ ಬಡವ ನನ್ನೂ ದುಷ್ಟರ ಕೈಯಿಂದ ಬಿಡಿಸಿರಿ.
- Job 29:12–17 ಯೋಬನು 29:12–17ಮೊರೆ ಯಿಡುವ ದೀನನನ್ನೂ ಸಹಾಯವಿಲ್ಲದ ದಿಕ್ಕಿಲ್ಲದ ವರನ್ನೂ ನಾನು ತಪ್ಪಿಸಿದೆನು. ನಾಶವಾಗುವದಕ್ಕೆ ಸಿದ್ಧವಾದವನ ಆಶೀರ್ವಾದವು ನನ್ನ ಮೇಲೆ ಬರು ತ್ತಿತ್ತು; ವಿಧವೆಯ ಹೃದಯವು ಸಂತೋಷದಿಂದ ಹಾಡುವಂತೆ ನಾನು ಮಾಡಿದೆನು. ನೀತಿಯನ್ನು ಧರಿಸಿಕೊಂಡೆನು; ಅದೇ ನನಗೆ ವಸ್ತ್ರದಹಾಗಿತ್ತು; ನಿಲು ವಂಗಿಯ ಹಾಗೆಯೂ ಕಿರೀಟದ ಹಾಗೆಯೂ ನನ್ನ ನ್ಯಾಯವು ನನಗೆ ಇತ್ತು. ನಾನು ಕುರುಡನಿಗೆ ಕಣ್ಣೂ ಕುಂಟನಿಗೆ ಕಾಲೂ ಆಗಿದ್ದೆನು. ದರಿದ್ರರಿಗೆ ನಾನು ತಂದೆಯಾಗಿದ್ದೆನು; ನಾನರಿಯದವನ ವ್ಯಾಜ್ಯವನ್ನು ಪರಿಶೋಧಿಸಿದೆನು. ದುಷ್ಟರ ದವಡೆಗಳನ್ನು ಮುರಿ ದೆನು; ಅವನ ಹಲ್ಲುಗಳೊಳಗಿಂದ ಬೇಟೆಯನ್ನು ಕಿತ್ತು ತೆಗೆದೆನು.
- Jeremiah 12:1–2 ಯೆರೆಮೀಯ 12:1–2ಕರ್ತನೇ, ನಾನು ನಿನ್ನ ಸಂಗಡ ವಾದಿಸುವಾಗ ನೀನು ನೀತಿವಂತನೇ ಆಗಿದ್ದೀ; ಆದಾಗ್ಯೂ ನಾನು ನಿನ್ನ ಸಂಗಡ ನ್ಯಾಯವಾದವುಗಳನು ಕುರಿತು ಮಾತನಾಡಲು ಬಿಡು; ದುಷ್ಟರ ಮಾರ್ಗವು ಸಫಲವಾಗುವದು ಯಾಕೆ? ಮಹಾವಂಚನೆ ಮಾಡು ವವರೆಲ್ಲರು ಯಾಕೆ ಸುಖವಾಗಿರುವರು. ನೀನು ಅವರನ್ನು ನೆಟ್ಟಿದ್ದೀ, ಹೌದು, ಅವರು ಬೇರೂರಿದ್ದಾರೆ; ಬೆಳೆಯುತ್ತಾರೆ, ಹೌದು, ಫಲಫಲಿಸುತ್ತಾರೆ; ನೀನು ಅವರ ಬಾಯಲ್ಲಿ ಸವಿಾಪವಾಗಿದ್ದೀ, ಅವರ ಅಂತ ರಿಂದ್ರಿಯಗಳಿಗೆ ದೂರವೇ.
- Isaiah 11:4 ಯೆಶಾಯ 11:4ಆದರೆ ಬಡವರಿಗೆ ನೀತಿಯಿಂದ ನ್ಯಾಯತೀರಿಸುವನು; ಭೂಮಿಯ ದೀನರಿಗೆ ನ್ಯಾಯ ವಾಗಿ ತೀರ್ಪುಮಾಡುವನು; ಭೂಮಿಯನ್ನು ತನ್ನ ಬಾಯಿಯ ಕೋಲಿನಿಂದ ಹೊಡೆಯುವನು, ತನ್ನ ತುಟಿಗಳ ಉಸಿರಿನಿಂದ ದುಷ್ಟರನ್ನು ಹತಮಾಡುವನು.
- Psalm 9:12 ಕೀರ್ತನೆಗಳು 9:12ಆತನು ರಕ್ತಾಪರಾಧವನ್ನು ವಿಚಾರಿಸುವಾಗ ಅವರನ್ನು ಜ್ಞಾಪಕಮಾಡಿಕೊಳ್ಳುವನು; ಆತನು ದೀನರ ಕೂಗನ್ನು ಮರೆತುಬಿಡನು.