Jeremiah · chapter 12 · verse 1
Jeremiah 12:1 in Kannada
ಕರ್ತನೇ, ನಾನು ನಿನ್ನ ಸಂಗಡ ವಾದಿಸುವಾಗ ನೀನು ನೀತಿವಂತನೇ ಆಗಿದ್ದೀ; ಆದಾಗ್ಯೂ ನಾನು ನಿನ್ನ ಸಂಗಡ ನ್ಯಾಯವಾದವುಗಳನು ಕುರಿತು ಮಾತನಾಡಲು ಬಿಡು; ದುಷ್ಟರ ಮಾರ್ಗವು ಸಫಲವಾಗುವದು ಯಾಕೆ? ಮಹಾವಂಚನೆ ಮಾಡು ವವರೆಲ್ಲರು ಯಾಕೆ ಸುಖವಾಗಿರುವರು.
Kartane, naanu ninna sangada vaadisuvaaga neenu neetivantane aagiddee; aadaagyoo naanu ninna sangada nyaayavaadavugalanu kuritu maatanaadalu bidu; dushtara maargavu saphalavaaguvadu yaake? Mahaavanchane maadu vavarellaru yaake sukhavaagiruvaru.
Jeremiah 12:1 in English
- King James Version (KJV)
- Righteous [art] thou, O LORD, when I plead with thee: yet let me talk with thee of [thy] judgments: Wherefore doth the way of the wicked prosper? [wherefore] are all they happy that deal very treacherously?
- World English Bible (WEB)
- You are righteous, LORD, when I contend with you; yet I would like to plead a case with you. Why does the way of the wicked prosper? Why are they all at ease who deal very treacherously?
- American Standard Version (ASV)
- Righteous art thou, O Jehovah, when I contend with thee; yet would I reason the cause with thee: wherefore doth the way of the wicked prosper? wherefore are all they at ease that deal very treacherously?
- Bible in Basic English (BBE)
- You are in the right, O Lord, when I put my cause before you: still let me take up with you the question of your decisions: why does the evil-doer do well? why are the workers of deceit living in comfort?
- Darby Translation (DBY)
- Righteous art thou, Jehovah, when I plead with thee; yet will I speak with thee of [thy] judgments. Wherefore doth the way of the wicked prosper? [wherefore] are all they at ease that deal very treacherously?
- Webster's Bible (WBS)
- Righteous [art] thou, O LORD, when I plead with thee: yet let me speak with thee of [thy] judgments: Why doth the way of the wicked prosper? [why] are they all happy that deal very treacherously?
- Young's Literal Translation (YLT)
- Righteous [art] Thou, O Jehovah, When I plead towards thee, Only, judgments do I speak with Thee, Wherefore did the way of the wicked prosper? At rest have been all treacherous dealers.
Read in context
- 1ಕರ್ತನೇ, ನಾನು ನಿನ್ನ ಸಂಗಡ ವಾದಿಸುವಾಗ ನೀನು ನೀತಿವಂತನೇ ಆಗಿದ್ದೀ; ಆದಾಗ್ಯೂ ನಾನು ನಿನ್ನ ಸಂಗಡ ನ್ಯಾಯವಾದವುಗಳನು ಕುರಿತು ಮಾತನಾಡಲು ಬಿಡು; ದುಷ್ಟರ ಮಾರ್ಗವು ಸಫಲವಾಗುವದು ಯಾಕೆ? ಮಹಾವಂಚನೆ ಮಾಡು ವವರೆಲ್ಲರು ಯಾಕೆ ಸುಖವಾಗಿರುವರು.
- 2ನೀನು ಅವರನ್ನು ನೆಟ್ಟಿದ್ದೀ, ಹೌದು, ಅವರು ಬೇರೂರಿದ್ದಾರೆ; ಬೆಳೆಯುತ್ತಾರೆ, ಹೌದು, ಫಲಫಲಿಸುತ್ತಾರೆ; ನೀನು ಅವರ ಬಾಯಲ್ಲಿ ಸವಿಾಪವಾಗಿದ್ದೀ, ಅವರ ಅಂತ ರಿಂದ್ರಿಯಗಳಿಗೆ ದೂರವೇ.
- 3ಓ ಕರ್ತನೇ, ನೀನು ನನ್ನನ್ನು ತಿಳಿದಿದ್ದೀ; ನನ್ನನ್ನು ನೋಡಿ ನನ್ನ ಹೃದಯವು ನಿನ್ನ ಕಡೆಗೆ ಶೋಧಿಸಿದ್ದೀ; ಕೊಲೆಗೆ ಕುರಿಗಳಂತೆ ಅವ ರನ್ನು ಎಳೆದುಬಿಡು, ಸಂಹಾರದ ದಿನಕ್ಕೆ ಅವರನ್ನು ಸಿದ್ಧಮಾಡು.
Cross references
- Malachi 3:15 ಮಲಾಕಿಯ 3:15ಈಗ ನಾವು ಗರ್ವಿಷ್ಠ ರನ್ನು ಭಾಗ್ಯವಂತರೆಂದನ್ನುತ್ತೇವೆ; ಹೌದು, ದುಷ್ಟತ್ವ ಮಾಡುವವರು ಅಭಿವೃದ್ಧಿಯಾಗುತ್ತಾರೆ; ಹೌದು, ದೇವರನ್ನು ಪರೀಕ್ಷಿಸುವವರೇ ರಕ್ಷಿಸಲ್ಪಟ್ಟಿದ್ದಾರೆ ಎಂದು ಹೇಳಿದ್ದೀರಿ.
- Psalm 92:7 ಕೀರ್ತನೆಗಳು 92:7ದುಷ್ಟರು ಚಿಗುರುವದು ಮತ್ತು ಅಕ್ರಮಗಾರರು ವೃದ್ಧಿಯಾಗು ವದು ಅವರು ಎಂದೆಂದಿಗೂ ನಿರ್ಮೂಲವಾಗುವದ ಕ್ಕಾಗಿಯೇ.
- Psalm 37:1 ಕೀರ್ತನೆಗಳು 37:1ದುರ್ಮಾರ್ಗಿಗಳಿಗೋಸ್ಕರ ಕೋಪಿಸಿ ಕೊಳ್ಳಬೇಡ; ಇಲ್ಲವೆ ನೀನು ಅಕ್ರಮ ಮಾಡುವವರಿಗೆ ವಿರೋಧವಾಗಿ ಹೊಟ್ಟೇಕಿಚ್ಚು ಪಡ ಬೇಡ.
- Psalm 73:3–28 ಕೀರ್ತನೆಗಳು 73:3–28ದುಷ್ಟರ ಅಭಿವೃದ್ಧಿಯನ್ನು ನೋಡಿದಾಗ ಮೂರ್ಖರ ಮೇಲೆ ಹೊಟ್ಟೇಕಿಚ್ಚು ಪಟ್ಟೆನು. ಅವರ ಮರಣಕ್ಕೆ ಬಂಧನಗಳು ಇಲ್ಲ; ಅವರ ತ್ರಾಣವು ಸ್ಥಿರವಾಗಿದೆ. ಬೇರೆ ಮನುಷ್ಯರಂತೆ ಅವರು ಕಷ್ಟದಲ್ಲಿಲ್ಲ. ಇಲ್ಲವೆ ಬೇರೆ ಮನುಷ್ಯರ ಹಾಗೆ ಅವರಿಗೆ ವ್ಯಾಧಿಯೂ ಇಲ್ಲ; ಆದದರಿಂದ ಗರ್ವವು ಅವರಿಗೆ ಕಂಠಮಾಲೆಯಂತೆ ಅವರನ್ನು ಸುತ್ತಿದೆ, ಬಲಾತ್ಕಾರವು ಅವರನ್ನು ಬಟ್ಟೆಯ ಹಾಗೆ ಮುಚ್ಚುತ್ತದೆ. ಅವರ ಕಣ್ಣುಗಳು ಕೊಬ್ಬಿನಿಂದ ಉಬ್ಬಿಕೊಂಡಿರುತ್ತವೆ; ಅವರ ಹೃದಯವು ಆಶಿಸುವದಕ್ಕಿಂತಲೂ ಹೆಚ್ಚಾಗಿ ಅವರಿಗೆ ಇವೆ. ಅವರು ಕೆಟ್ಟುಹೋದವರು. ಸಂಕಟ ಪಡುವವರ ವಿಷಯ ಕೆಟ್ಟದ್ದಾಗಿಯೂ ಗರ್ವದಿಂದಲೂ ಮಾತನಾಡುತ್ತಾರೆ. ಪರಲೋಕಕ್ಕೆ ವಿರೋಧವಾಗಿ ತಮ್ಮ ಬಾಯನ್ನು ತೆರೆದಿದ್ದಾರೆ; ಭೂಲೋಕದಲ್ಲೆಲ್ಲಾ ಅವರ ಮಾತೇ ನಡೆಯುವದು. ಆದದರಿಂದ ಅವನ ಜನರು ಇಲ್ಲಿಗೆ ತಿರುಗಿ ಕೊಳ್ಳುತ್ತಾರೆ; ಅವರಿಗೆ ಪಾನವು ಯಥೇಚ್ಚವಾಗಿ ದೊರೆಯುತ್ತದೆ. ಅವರು-- ದೇವರು ಹೇಗೆ ಬಲ್ಲನು? ಮಹೋನ್ನತನಲ್ಲಿ ತಿಳುವಳಿಕೆ ಉಂಟೋ ಎಂದು ಅಂದುಕೊಳ್ಳುತ್ತಾರೆ. ಇಗೋ, ಇಹಲೋಕದಲ್ಲಿ ವೃದ್ಧಿಯಾಗುವ ದುಷ್ಟರು ಇವರೇ, ಐಶ್ವರ್ಯದಲ್ಲಿ ಇವರು ಹೆಚ್ಚುತ್ತಾರೆ. ನಿಶ್ಚಯವಾಗಿ ನನ್ನ ಹೃದಯವನ್ನು ವ್ಯರ್ಥವಾಗಿ ನಿರ್ಮಲ ಮಾಡಿಕೊಂಡು ನನ್ನ ಕೈಗಳನ್ನು ನಿರಪರಾಧ ದಲ್ಲಿ ತೊಳೆದಿದ್ದೇನೆ. ನಾನು ದಿನವೆಲ್ಲಾ ವ್ಯಾಧಿ ಪೀಡಿತನಾಗಿದ್ದೇನೆ; ಪ್ರತಿ ಉದಯದಲ್ಲಿ ನನಗೆ ಶಿಕ್ಷೆ ಯಾಯಿತು. ಹೀಗೆ ನಾನು ಮಾತನಾಡುವೆನೆಂದು ಹೇಳಿದರೆ, ಇಗೋ, ನಿನ್ನ ಮಕ್ಕಳ ವಂಶಕ್ಕೆ ವಿರೋಧ ವಾಗಿ ಆತಂಕ ಮಾಡುವೆನು. ಇದನ್ನು ತಿಳಿಯು ವದಕ್ಕೆ ನಾನು ಯೋಚಿಸಿದಾಗ, ನಾನು ದೇವರ ಪರಿಶುದ್ಧ ಸ್ಥಳಗಳಿಗೆ ಬರುವ ವರೆಗೆ ಅದು ನನ್ನ ದೃಷ್ಟಿಗೆ ಕಷ್ಟವಾಗಿತ್ತು. ಅವರ ಅಂತ್ಯವನ್ನು ಗ್ರಹಿಸಿ ಕೊಂಡೆನು. ನಿಶ್ಚಯವಾಗಿ ನೀನು ಅವರನ್ನು ಜಾರುವ ಸ್ಥಳಗಳಲ್ಲಿ ಇಟ್ಟಿದ್ದೀ; ಅವರನ್ನು ನಾಶನಕ್ಕೆ ಕೆಳಗೆ ದೊಬ್ಬಿದ್ದೀ. ಕ್ಷಣಮಾತ್ರದಲ್ಲಿ ಹೀಗೆ ನಾಶನಕ್ಕೆ ಅವರನ್ನು ಬರಮಾಡಿದಿ. ಅವರು ದಿಗಿಲುಗಳಿಂದ ಸಂಪೂರ್ಣವಾಗಿ ನಾಶವಾಗಿದ್ದಾರೆ. ಎಚ್ಚತ್ತ ಮೇಲೆ ಕನಸು ಹೇಗೋ ಹಾಗೆಯೇ ಓ ಕರ್ತನೇ, ನೀನು ಎಚ್ಚರವಾದಾಗ ಅವರ ರೂಪವನ್ನು ತಿರಸ್ಕರಿಸುವಿ. ಹೀಗೆ ನನ್ನ ಹೃದಯವು ವ್ಯಥೆಗೊಂಡಾಗ ನನ್ನ ಅಂತರಿಂದ್ರಿಯಗಳಿಗೆ ತಿವಿಯಲ್ಪಟ್ಟವು. ಆಗ ನಾನು ಮೂರ್ಖನಾಗಿ ಏನೂ ತಿಳಿಯದೆ ನಿನ್ನ ಮುಂದೆ ಪಶು ವಿನಂತೆ ಇದ್ದೆನು. ಆದಾಗ್ಯೂ ನಾನು ನಿನ್ನ ಸಂಗಡ ಯಾವಾಗಲೂ ಇದ್ದೇನೆ; ನೀನು ನನ್ನ ಬಲಗೈಯನ್ನು ಹಿಡಿದಿದ್ದೀ. ನಿನ್ನ ಆಲೋಚನೆಯಂತೆ ನನ್ನನ್ನು ನಡಿಸಿದ ತರು ವಾಯ ಮಹಿಮೆಗೆ ನನ್ನನ್ನು ಅಂಗೀಕರಿಸುವಿ. ಪರ ಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರಿದ್ದಾರೆ? ನಿನ್ನ ಹೊರತಾಗಿ ಭೂಮಿಯಲ್ಲಿ ನಾನು ಅಪೇಕ್ಷಿಸುವವರು ಯಾರೂ ಇಲ್ಲ. ನನ್ನ ಮಾಂಸವೂ ಹೃದಯವೂ ಕುಂದುತ್ತದೆ; ಆದರೆ ದೇವರು ಯುಗಯುಗಕ್ಕೂ ನನ್ನ ಹೃದಯದ ಬಲವೂ ಪಾಲೂ ಆಗಿದ್ದಾನೆ. ಇಗೋ, ನಿನಗೆ ದೂರವಾಗಿರುವವರು ನಾಶವಾಗುವರು, ನಿನ್ನನ್ನು ಬಿಟ್ಟು ಜಾರತ್ವ ಮಾಡುವವರೆಲ್ಲ ರನ್ನು ಸಂಹರಿಸಿದ್ದೀ.ನನಗಾದರೋ ದೇವರ ಸವಿಾಪಕ್ಕೆ ಬರುವದೇ ಒಳ್ಳೇದಾಗಿದೆ; ನಿನ್ನ ಕ್ರಿಯೆ ಗಳನ್ನೆಲ್ಲಾ ಸಾರುವದಕ್ಕೆ ಕರ್ತನಾದ ದೇವರಲ್ಲಿ ನನ್ನ ಭರವಸವನ್ನು ಇಟ್ಟಿದ್ದೇನೆ. ನನಗಾದರೋ ದೇವರ ಸವಿಾಪಕ್ಕೆ ಬರುವದೇ ಒಳ್ಳೇದಾಗಿದೆ; ನಿನ್ನ ಕ್ರಿಯೆ ಗಳನ್ನೆಲ್ಲಾ ಸಾರುವದಕ್ಕೆ ಕರ್ತನಾದ ದೇವರಲ್ಲಿ ನನ್ನ ಭರವಸವನ್ನು ಇಟ್ಟಿದ್ದೇನೆ.
- Psalm 51:4 ಕೀರ್ತನೆಗಳು 51:4ನೀನು ನಿನ್ನ ಮಾತುಗಳಲ್ಲಿ ನೀತಿವಂತ ನಾಗಿಯೂ ನಿನ್ನ ನ್ಯಾಯತೀರ್ವಿಕೆಯಲ್ಲಿ ನಿರ್ಮಲನಾ ಗಿಯೂ ಇದ್ದಿಯಲ್ಲಾ; ನಿನಗೆ ಮಾತ್ರವೇ ವಿರೋಧ ವಾಗಿ ನಾನು ಪಾಪಮಾಡಿ ನಿನ್ನ ದೃಷ್ಟಿಯಲ್ಲಿ ಈ ಕೆಟ್ಟದ್ದನ್ನು ಮಾಡಿದ್ದೇನೆ.
- Psalm 37:35 ಕೀರ್ತನೆಗಳು 37:35ದುಷ್ಟನು ದೊಡ್ಡ ಅಧಿಕಾರದಲ್ಲಿರು ವದನ್ನು ನಾನು ನೋಡಿದೆನು; ಅವನು ಹಸುರಾಗಿ ವಿಸ್ತರಿಸಿಕೊಂಡ ಮರದ ಹಾಗೆ ಇದ್ದನು.
- Daniel 9:7 ದಾನಿಯೇಲನು 9:7ಓ ಕರ್ತನೇ, ನೀನು ನೀತಿವಂತನು; ಆದರೆ ನಾವು ಈ ದಿನದ ಪ್ರಕಾರ ನಾಚಿಕೆಗೀಡಾದವರು; ಯೆಹೂದದ ಮನುಷ್ಯರನ್ನೂ ಯೆರೂಸಲೇಮಿನ ನಿವಾ ಸಿಗಳನ್ನೂ ಸಮಸ್ತ ಇಸ್ರಾಯೇಲ್ಯರನ್ನೂ ಹತ್ತಿರದಲ್ಲಿ ರುವವರನ್ನೂ ಮತ್ತು ದೂರದಲ್ಲಿರುವವರನ್ನೂ ಅವರು ನಿನಗೆ ವಿರುದ್ಧವಾಗಿ ಮಾಡಿರುವ ಅವರ ಅಪರಾಧದ ನಿಮಿತ್ತ ನೀನು ಅವರನ್ನು ಎಲ್ಲಾ ದೇಶಗಳಲ್ಲಿಯೂ ಓಡಿಸಿ ಬಿಟ್ಟಿದ್ದೀ.
- Zephaniah 3:5 ಚೆಫನ್ಯ 3:5ನೀತಿ ಯುಳ್ಳ ಕರ್ತನು ಅದರ ಮಧ್ಯದಲ್ಲಿ ಇದ್ದಾನೆ, ಆತನು ಅನ್ಯಾಯಮಾಡುವದಿಲ್ಲ; ಪ್ರತಿ ಬೆಳಿಗ್ಗೆ ತನ್ನ ನ್ಯಾಯ ತೀರ್ಪನ್ನು ಬೆಳಕಿಗೆ ತರುತ್ತಾನೆ; ಆತನು ತಪ್ಪುವಾತನಲ್ಲ, ಆದರೆ ಅನ್ಯಾಯವಂತನು ನಾಚಿಕೆ ಯನ್ನು ಅರಿಯನು.
- Psalm 94:3–4 ಕೀರ್ತನೆಗಳು 94:3–4ಕರ್ತನೇ, ದುಷ್ಟರು ಎಷ್ಟರ ವರೆಗೆ ದುಷ್ಟರು ಎಷ್ಟರ ವರೆಗೆ ಜಯಿಸುವರು? ಎಷ್ಟುಕಾಲ ಕಠಿಣ ವಾದವುಗಳನ್ನು ನುಡಿದು ಮಾತಾಡುತ್ತಾರೆ? ದುಷ್ಟತನ ಮಾಡುವವರೆಲ್ಲರು ಹೆಚ್ಚಿಸಿಕೊಳ್ಳುತ್ತಾರೆ;
- Habakkuk 1:4 ಹಬಕ್ಕೂಕ 1:4ಆದದರಿಂದ ನ್ಯಾಯಪ್ರಮಾಣವು ಸಡಿಲವಾಗುತ್ತದೆ; ನ್ಯಾಯತೀರ್ಪು ಎಂದಿಗೂ ಹೊರಡುವದಿಲ್ಲ; ದುಷ್ಟರು ನೀತಿ ವಂತರನ್ನು ಸುತ್ತಿಕೊಂಡಿದ್ದಾರೆ; ಆದದರಿಂದ ತಪ್ಪಾಗಿ ನ್ಯಾಯತೀರ್ಪು ಹೊರಡುತ್ತದೆ.
- Job 21:7–15 ಯೋಬನು 21:7–15ದುಷ್ಟರು ಯಾಕೆ ಬದುಕಿ ಮುದುಕರಾಗಿ ಹೌದು, ತ್ರಾಣದಿಂದ ಬಲಗೊಳ್ಳುತ್ತಾರೆ? ಅವರ ಸಂತಾನದವರು ಅವರ ಮುಂದೆ ಅವರ ಸಂಗಡ ದೃಢವಾಗಿದ್ದಾರೆ; ಅವರ ಸಂತಾನದವರು ಅವರ ಕಣ್ಣು ಗಳ ಮುಂದೆ ಇದ್ದಾರೆ. ಅವರ ಮನೆಗಳು ಅಂಜಿಕೆ ಇಲ್ಲದೆ ಸಮಾಧಾನವಾಗಿವೆ; ದೇವರ ಕೋಲು ಅವರ ಮೇಲೆ ಇಲ್ಲ. ಅವನ ಗೂಳಿ ಹೇಸದೆ ಬಸುರು ಮಾಡುತ್ತದೆ; ಅವನ ಆಕಳು ತಪ್ಪದೆ ಈಯುತ್ತದೆ; ತಮ್ಮ ಚಿಕ್ಕವರನ್ನು ಮಂದೆಯ ಹಾಗೆ ಕಳುಹಿಸು ತ್ತಾರೆ; ಅವರ ಮಕ್ಕಳು ಕುಣಿದಾಡುತ್ತಾರೆ. ದಮ್ಮಡಿ ಯಿಂದಲೂ ಕಿನ್ನರಿಯಿಂದಲೂ ಹಾಡುತ್ತಾರೆ; ಕೊಳಲಿನ ಶಬ್ದಕ್ಕೆ ಸಂತೋಷಿಸುತ್ತಾರೆ. ಸಂಪತ್ತಿನಲ್ಲಿ ತಮ್ಮ ದಿವಸ ಗಳನ್ನು ಕಳೆಯುತ್ತಾರೆ; ಕ್ಷಣದಲ್ಲಿ ಪಾತಾಳಕ್ಕೆ ಇಳಿ ಯುತ್ತಾರೆ. ಅವರು ದೇವರಿಗೆ--ನಮ್ಮನ್ನು ಬಿಟ್ಟು ಹೋಗು; ನಿನ್ನ ಮಾರ್ಗಗಳ ತಿಳುವಳಿಕೆಯನ್ನು ನಾವು ಮೆಚ್ಚುವದಿಲ್ಲ. ನಾವು ಆತನನ್ನು ಸೇವಿಸುವ ಹಾಗೆ ಸರ್ವಶಕ್ತನು ಯಾರು? ನಾವು ಆತನಿಗೆ ಬಿನ್ನಹ ಮಾಡುವದರಲ್ಲಿ ನಮಗೆ ಪ್ರಯೋಜನವೇನು ಎಂದು ಹೇಳುತ್ತಾರೆ.
- Job 12:6 ಯೋಬನು 12:6ಕಳ್ಳರ ಗುಡಾರಗಳು ವೃದ್ಧಿಯಾ ಗುತ್ತವೆ; ದೇವರಿಗೆ ಕೋಪ ಎಬ್ಬಿಸುವವರಿಗೆ ಅಭಯ ಉಂಟು. ದೇವರು ಅವರ ಕೈಯಲ್ಲಿ ಸಮೃದ್ಧಿಯನ್ನು ಬರ ಮಾಡುತ್ತಾನೆ.