Job · chapter 8 · verse 5
Job 8:5 in Kannada
ನೀನೇ ದೇವರನ್ನು ಜಾಗ್ರ ತೆಯಾಗಿ ಹುಡುಕಿ ಸರ್ವಶಕ್ತನಿಗೆ ಬಿನ್ನಹ ಮಾಡಿದರೆ
Neene devarannu jaagra teyaagi huduki sarvashaktanige binnaha maadidare
Job 8:5 in English
- King James Version (KJV)
- If thou wouldest seek unto God betimes, and make thy supplication to the Almighty;
- World English Bible (WEB)
- If you want to seek God diligently, make your supplication to the Almighty.
- American Standard Version (ASV)
- If thou wouldest seek diligently unto God, And make thy supplication to the Almighty;
- Bible in Basic English (BBE)
- If you will make search for God with care, and put your request before the Ruler of all;
- Darby Translation (DBY)
- If thou seek earnestly unto God, and make thy supplication to the Almighty,
- Webster's Bible (WBS)
- If thou wouldst seek to God betimes, and make thy supplication to the Almighty;
- Young's Literal Translation (YLT)
- If thou dost seek early unto God, And unto the Mighty makest supplication,
Read in context
- 3ದೇವರು ಅನ್ಯಾಯವಾದ ತೀರ್ಪುಮಾಡುತ್ತಾನೋ? ಸರ್ವಶಕ್ತನು ನೀತಿಗೆ ವಿರುದ್ಧವಾದದ್ದನ್ನು ಮಾಡು ವನೋ?
- 4ನಿನ್ನ ಮಕ್ಕಳು ಆತನಿಗೆ ವಿರೋಧವಾಗಿ ಪಾಪಮಾಡಿದ್ದರೆ, ಅವರ ದ್ರೋಹದ ದೆಸೆಯಿಂದ ಅವರನ್ನು ತಳ್ಳಿಬಿಡುವನು.
- 5ನೀನೇ ದೇವರನ್ನು ಜಾಗ್ರ ತೆಯಾಗಿ ಹುಡುಕಿ ಸರ್ವಶಕ್ತನಿಗೆ ಬಿನ್ನಹ ಮಾಡಿದರೆ
- 6ನೀನು ಶುದ್ಧನೂ ಯಥಾರ್ಥನೂ ಆಗಿದ್ದರೆ ನಿಶ್ಚಯ ವಾಗಿ ಈಗಲೇ ಆತನು ನಿನಗೋಸ್ಕರ ಎಚ್ಚತ್ತು ನಿನ್ನ ನೀತಿಯ ನಿವಾಸವನ್ನು ಅಭಿವೃದ್ಧಿಗೊಳಿಸುವನು.
- 7ನಿನ್ನ ಆರಂಭವು ಅಲ್ಪವಾಗಿದ್ದರೂ ನಿನ್ನ ಅಂತ್ಯವು ಬಹಳವಾಗಿ ವೃದ್ಧಿಹೊಂದುವದು.
Cross references
- James 4:7–10 ಯಾಕೋಬನು 4:7–10ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು. ದೇವರ ಸವಿಾಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸವಿಾಪಕ್ಕೆ ಬರುವನು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿ ಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲ ಮಾಡಿಕೊಳ್ಳಿರಿ. ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗೆಯು ದುಃಖಕ್ಕೂ ನಿಮ್ಮ ಸಂತೋಷವು ವ್ಯಥೆಗೂ ತಿರುಗಿಕೊಳ್ಳಲಿ. ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿ ಕೊಳ್ಳಿರಿ; ಆಗಲಾತನು ನಿಮ್ಮನ್ನು ಮೇಲಕ್ಕೆತ್ತುವನು.
- Matthew 7:7–8 ಮತ್ತಾಯನು 7:7–8ಬೇಡಿಕೊಳ್ಳಿರಿ, ಅದು ನಿಮಗೆ ಕೊಡಲ್ಪಡುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ಅದು ನಿಮಗೆ ತೆರೆಯಲ್ಪಡುವದು. ಯಾಕಂದರೆ ಬೇಡಿ ಕೊಳ್ಳುವ ಪ್ರತಿಯೊಬ್ಬನು ಹೊಂದಿಕೊಳ್ಳುವನು; ಮತ್ತು ಹುಡುಕುವವನಿಗೆ ಸಿಕ್ಕುವದು; ಇದಲ್ಲದೆ ತಟ್ಟುವವನಿಗೆ ತೆರೆಯಲ್ಪಡುವದು.
- Job 11:13 ಯೋಬನು 11:13ನೀನು ನಿನ್ನ ಹೃದಯವನ್ನು ಸಿದ್ಧಮಾಡಿ ನಿನ್ನ ಕೈಗಳನ್ನು ಆತನ ಕಡೆಗೆ ಚಾಚಿದರೆ,
- Isaiah 55:6–7 ಯೆಶಾಯ 55:6–7ಕರ್ತನು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ; ಆತನು ಸವಿಾಪವಾಗಿರುವಾಗಲೇ ಆತನನ್ನು ಕರೆಯಿರಿ. ದುಷ್ಟನು ತನ್ನ ಮಾರ್ಗವನ್ನೂ ಅನೀತಿವಂತನು ತನ್ನ ಆಲೋಚನೆಗಳನ್ನೂ ತೊರೆದುಬಿಟ್ಟು ಕರ್ತನ ಕಡೆಗೆ ಹಿಂತಿರುಗಲಿ; ಆತನು ಅವನ ಮೇಲೆ ಕರುಣೆಯಿಡು ವನು; ನಮ್ಮ ದೇವರ ಬಳಿಗೂ ಹಿಂತಿರುಗಲಿ, ಆತನು ಹೇರಳವಾಗಿ ಕ್ಷಮಿಸುವನು.
- Hebrews 3:7–8 ಇಬ್ರಿಯರಿಗೆ 3:7–8ಆದದರಿಂದ(ಪವಿತ್ರಾತ್ಮನು ಹೇಳುವ ಪ್ರಕಾರ--ನೀವು ಈ ದಿನ ದೇವರ ಶಬ್ದಕ್ಕೆ ಕಿವಿಗೊಟ್ಟರೆ ಅರಣ್ಯ ದಲ್ಲಿದ್ದಾಗ ಶೋಧನೆಯ ದಿನದಲ್ಲಿ ದೇವರಿಗೆ ಕೋಪ ವನ್ನೆಬ್ಬಿಸಿದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿ ಕೊಳ್ಳಬೇಡಿರಿ.
- 2 Chronicles 33:12–13 2 ಪೂರ್ವಕಾಲವೃತ್ತಾಂತ 33:12–13ಅವನು ಬಾಧೆಯಲ್ಲಿರುವಾಗ ತನ್ನ ದೇವ ರಾದ ಕರ್ತನನ್ನು ಬೇಡಿಕೊಂಡದ್ದಲ್ಲದೆ ತನ್ನ ಪಿತೃಗಳ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು ಆತನಿಗೆ ಪ್ರಾರ್ಥನೆ ಮಾಡಿದನು. ಆಗ ಆತನು ಕನಿಕರಪಟ್ಟು ಅವನ ಬಿನ್ನಹವನ್ನು ಕೇಳಿ ಯೆರೂಸ ಲೇಮಿಗೆ ತನ್ನ ರಾಜ್ಯಕ್ಕೆ ಅವನನ್ನು ತಿರಿಗಿ ಬರಮಾಡಿ ದನು. ಆಗ ಕರ್ತನೇ ದೇವರೆಂದು ಮನಸ್ಸೆಯು ತಿಳಿದುಕೊಂಡನು.
- Job 5:8 ಯೋಬನು 5:8ನಾನು ದೇವರನ್ನು ಹುಡುಕುವೆನು; ನನ್ನ ಕಾರ್ಯವನ್ನು ದೇವರ ಮೇಲೆ ಹಾಕುವೆನು.
- Job 22:21–30 ಯೋಬನು 22:21–30ಆತನಿಗೆ ಪರಿಚಿತನಾಗಿ ಸಮಾಧಾನದಿಂದಿರು; ಇದರಿಂದ ನಿನಗೆ ಮೇಲು ಬರುವದು. ಆತನ ಬಾಯಿಂದ ನ್ಯಾಯಪ್ರಮಾಣವನ್ನು ತಕ್ಕೋ; ಆತನ ಮಾತುಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೋ. ಸರ್ವಶಕ್ತನ ಕಡೆಗೆ ನೀನು ತಿರುಗಿ ಕೊಂಡರೆ ಕಟ್ಟಲ್ಪಡುವಿ; ನಿನ್ನ ಗುಡಾರಗಳಿಂದ ದುಷ್ಟತ್ವವನ್ನು ದೂರ ಮಾಡುವಿ. ಧೂಳಿನಂತೆ ಬಂಗಾರವನ್ನು, ಹಳ್ಳಗಳ ಕಲ್ಲುಗಳಂತೆ ಓಫಿರ್ ಬಂಗಾರವನ್ನು ತೆಗೆದು ಹಾಕುವಿ. ಆಗ ಸರ್ವಶಕ್ತನು ನಿನಗೆ ರಕ್ಷಣೆಯೂ ಸಮೃದ್ಧಿಯಾದ ಬೆಳ್ಳಿಯೂ ಆಗಿರುವನು. ಆಗ ಸರ್ವಶಕ್ತನಲ್ಲಿ ನೀನು ಆನಂದಗೊಂಡು ನಿನ್ನ ಮುಖ ವನ್ನು ದೇವರ ಕಡೆಗೆ ಎತ್ತುವಿ. ನೀನು ಆತನಿಗೆ ವಿಜ್ಞಾಪನೆ ಮಾಡಲು ನಿನ್ನನ್ನು ಕೇಳುವನು; ನಿನ್ನ ಪ್ರಮಾಣಗಳನ್ನು ಸಲ್ಲಿಸುವಿ. ನೀನು ಏನಾದರೂ ನಿರ್ಣಯಿಸಿದರೆ ಅದು ನಿನಗೆ ಸ್ಥಿರವಾಗುವದು ಮತ್ತು ನಿನ್ನ ಮಾರ್ಗಗಳಲ್ಲಿ ಬೆಳಕು ಮೂಡುವದು. ಒಬ್ಬನು ತಗ್ಗುವಲ್ಲಿ ಎತ್ತುವದುಂಟು ಅನ್ನುವಿ; ದೀನ ನನ್ನು ಆತನು ರಕ್ಷಿಸುವನು.ಒಂಟಿಯಾದ ನಿರ ಪರಾಧಿಯನ್ನು ತಪ್ಪಿಸುವನು; ನಿನ್ನ ಕೈಗಳ ಶುದ್ಧತ್ವದಿಂದ ಅವನು ತಪ್ಪಿಸಿಕೊಳ್ಳುವನು. ಒಂಟಿಯಾದ ನಿರ ಪರಾಧಿಯನ್ನು ತಪ್ಪಿಸುವನು; ನಿನ್ನ ಕೈಗಳ ಶುದ್ಧತ್ವದಿಂದ ಅವನು ತಪ್ಪಿಸಿಕೊಳ್ಳುವನು.