Job · chapter 9 · verse 33
Job 9:33 in Kannada
ನಮ್ಮಿಬ್ಬರ ಮೇಲೆ ಕೈ ಇಡತಕ್ಕ ಮಧ್ಯಸ್ಥಗಾರನು ನಮ್ಮ ಮಧ್ಯದಲ್ಲಿಲ್ಲ.
Nammibbara mele kai idatakka madhyasthagaaranu namma madhyadallilla.
Job 9:33 in English
- King James Version (KJV)
- Neither is there any daysman betwixt us, [that] might lay his hand upon us both.
- World English Bible (WEB)
- There is no umpire between us, that might lay his hand on us both.
- American Standard Version (ASV)
- There is no umpire betwixt us, That might lay his hand upon us both.
- Bible in Basic English (BBE)
- There is no one to give a decision between us, who might have control over us.
- Darby Translation (DBY)
- There is not an umpire between us, who should lay his hand upon us both.
- Webster's Bible (WBS)
- Neither is there any judge between us, [that] might lay his hand upon us both.
- Young's Literal Translation (YLT)
- If there were between us an umpire, He doth place his hand on us both.
Read in context
- 31ನನ್ನನ್ನು ಕುಣಿಯಲ್ಲಿ ಮುಣುಗಿಸಿ ಬಿಡುವಿ; ನನ್ನ ಸ್ವಂತ ವಸ್ತ್ರಗಳು ನನ್ನನ್ನು ಹೇಸಿಕೊಳ್ಳು ವವು.
- 32ನಾನು ಆತನಿಗೆ ಉತ್ತರ ಕೊಡುವ ಹಾಗೆಯೂ ನಾವು ಕೂಡ ನ್ಯಾಯದಲ್ಲಿ ಸೇರುವ ಹಾಗೆಯೂ ಆತನು ನನ್ನಂಥ ಮನುಷ್ಯನಲ್ಲ.
- 33ನಮ್ಮಿಬ್ಬರ ಮೇಲೆ ಕೈ ಇಡತಕ್ಕ ಮಧ್ಯಸ್ಥಗಾರನು ನಮ್ಮ ಮಧ್ಯದಲ್ಲಿಲ್ಲ.
- 34ಆತನು ತನ್ನ ಕೋಲನ್ನು ನನ್ನ ಮೇಲಿನಿಂದ ತೊಲ ಗಿಸಲಿ, ಆತನ ಭೀತಿ ನನ್ನನ್ನು ಹೆದರಿಸದಿರಲಿ.ಆಗ ಆತನಿಗೆ ಭಯಪಡದೆ ಮಾತನಾಡುವೆನು; ಆದರೆ ಭಯಕ್ಕೆ ನನ್ನಲ್ಲೇನೂ ಆಸ್ಪದವಿಲ್ಲ.
- 35ಆಗ ಆತನಿಗೆ ಭಯಪಡದೆ ಮಾತನಾಡುವೆನು; ಆದರೆ ಭಯಕ್ಕೆ ನನ್ನಲ್ಲೇನೂ ಆಸ್ಪದವಿಲ್ಲ.
Cross references
- 1 Samuel 2:25 1 ಸಮುವೇಲನು 2:25ಮನು ಷ್ಯನಿಗೆ ವಿರೋಧವಾಗಿ ಮನುಷ್ಯನು ಪಾಪಮಾಡಿದರೆ ನ್ಯಾಯಾಧಿಪತಿಗಳು ಅವನಿಗೆ ನ್ಯಾಯತೀರಿಸುವರು.ಒಬ್ಬನು ಕರ್ತನಿಗೆ ವಿರೋಧವಾಗಿ ಪಾಪಮಾಡಿದರೆ ಅವನಿಗೋಸ್ಕರ ಪ್ರಾರ್ಥನೆ ಮಾಡತಕ್ಕವನು ಯಾರು ಅಂದನು. ಆದರೆ ಕರ್ತನು ಅವರನ್ನು ಕೊಂದುಹಾಕ ಬೇಕೆಂದಿದ್ದನಷ್ಟೆ, ಅವರು ತಮ್ಮ ತಂದೆಯ ಮಾತನ್ನು ಕೇಳದೆಹೋದರು.
- Job 9:19 ಯೋಬನು 9:19ಶಕ್ತಿಯ ವಿಷಯದಲ್ಲಿ ಮಾತನಾಡಲೋ? ಇಗೋ, ಆತನು ಬಲವುಳ್ಳವನಾಗಿದ್ದಾನೆ. ನ್ಯಾಯದ ವಿಷಯವೋ ವಾದಿ ಸುವದಕ್ಕೆ ನನಗೆ ಕಾಲವನ್ನು ನಿಯಮಿಸುವವನು ಯಾರು?
- 1 John 2:1–2 1 ಯೋಹಾನನು 2:1–2ನನ್ನ ಚಿಕ್ಕಮಕ್ಕಳೇ, ನೀವು ಪಾಪಮಾಡ ದಂತೆ ಇವುಗಳನ್ನು ನಾನು ನಿಮಗೆ ಬರೆಯು ತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನು ನಮಗೆ ಪಕ್ಷವಾದಿಯಾಗಿದ್ದಾನೆ. ಆತನು ನಮ್ಮ ಪಾಪಗಳಿಗಾಗಿ ಪ್ರಾಯಶ್ಚಿತ್ತವಾಗಿದ್ದಾನೆ; ನಮ್ಮ ಪಾಪಗಳಿಗೆ ಮಾತ್ರ ವಲ್ಲದೆ ಸಮಸ್ತ ಲೋಕದ ಪಾಪಗಳಿಗಾಗಿಯೂ ಪ್ರಾಯಶ್ಚಿತ್ತವಾಗಿದ್ದಾನೆ.
- Psalm 106:23 ಕೀರ್ತನೆಗಳು 106:23ಆದದರಿಂದ ಆತನು ಅವರನ್ನು ನಾಶಮಾಡುತ್ತೇನೆಂದು ಹೇಳಿದನು. ಆದರೆ ಆತನು ಆದುಕೊಂಡ ಮೋಶೆಯು ಆತನ ಕೋಪ ವನ್ನು ತಿರುಗಿಸುವ ಹಾಗೆ ಆಪತ್ತಿನಲ್ಲಿ ಆತನ ಮುಂದೆ ನಿಂತುಕೊಂಡನು.
- 1 Kings 3:16–28 1 ಅರಸುಗಳು 3:16–28ತರುವಾಯ ಇಬ್ಬರು ವೇಶ್ಯಾಸ್ತ್ರೀಯರು ಅರಸನ ಬಳಿಗೆ ಬಂದು ಅವನ ಮುಂದೆ ನಿಂತರು. ಅವರಲ್ಲಿ ಒಬ್ಬಳು--ಓ ನನ್ನ ಒಡೆಯನೇ, ನಾನೂ ಈ ಹೆಂಗಸೂ ಒಂದೇ ಮನೆಯಲ್ಲಿ ವಾಸವಾಗಿದ್ದೇವೆ. ನಾನು ಅವಳ ಸಂಗಡ ಮನೆಯಲ್ಲಿರುವಾಗ ಮಗುವನ್ನು ಹೆತ್ತೆನು. ನಾನು ಹೆತ್ತ ಮೂರು ದಿವಸಗಳ ತರುವಾಯ ಈ ಹೆಂಗಸು ಕೂಡ ಹೆತ್ತಳು. ನಾವು ಇಬ್ಬರೂ ಕೂಡಿಯೇ ಇದ್ದೆವು. ಮನೆಯಲ್ಲಿ ನಮ್ಮ ಇಬ್ಬರ ಹೊರತು ನಮ್ಮ ಸಂಗಡ ಮತ್ತಾರೂ ಇಲ್ಲ. ಆದರೆ ಅವಳು ಅದರ ಮೇಲೆ ಹೊರಳಿದ್ದರಿಂದ ರಾತ್ರಿಯಲ್ಲಿ ಈ ಹೆಂಗಸಿನ ಮಗುವು ಸತ್ತು ಹೋಯಿತು. ಇವಳು ಮಧ್ಯರಾತ್ರಿಯಲ್ಲಿ ಎದ್ದು ನಿನ್ನ ದಾಸಿಯು ನಿದ್ರೆ ಗೈಯುತ್ತಿರುವಾಗ ನನ್ನ ಹತ್ತಿರ ಮಲಗಿದ್ದ ನನ್ನ ಮಗ ನನ್ನು ತೆಗೆದುಕೊಂಡು ಅದನ್ನು ತನ್ನ ಎದೆಯ ಮೇಲೆ ಮಲಗಿಸಿಕೊಂಡು ತನ್ನ ಸತ್ತ ಮಗುವನ್ನು ನನ್ನ ಎದೆಯ ಮೇಲೆ ಮಲಗಿಸಿದಳು. ಉದಯದಲ್ಲಿ ನನ್ನ ಕೂಸಿಗೆ ಮೊಲೆ ಕೊಡಲು ಎದ್ದಾಗ ಇಗೋ, ಅದು ಸತ್ತಿತ್ತು. ಉದಯದಲ್ಲಿ ಅದನ್ನು ಯೋಚಿಸಿದಾಗ ಇಗೋ, ಅದು ನಾನು ಹೆತ್ತ ಮಗುವಾಗಿದ್ದಿಲ್ಲ ಅಂದಳು. ಆಗ ಆ ಬೇರೆ ಹೆಂಗಸು--ಇಲ್ಲ, ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು ಅಂದಳು. ಆದರೆ ನಾನು--ಹಾಗಲ್ಲ; ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು ಅಂದೆನು. ಹೀಗೆ ಅವರು ಅರಸನ ಮುಂದೆ ಮಾತನಾಡಿದರು. ಆಗ ಅರಸನುಇವಳು--ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು ಅನ್ನುತ್ತಾಳೆ. ಅವಳು--ಹಾಗಲ್ಲ, ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು ಅನ್ನುತ್ತಾಳೆ ಎಂದು ಹೇಳಿ ಅರಸನು--ಕತ್ತಿಯನ್ನು ನನ್ನ ಬಳಿಗೆ ತಕ್ಕೊಂಡು ಬಾ ಅಂದನು. ಅವರು ಕತ್ತಿಯನ್ನು ಅರಸನ ಬಳಿಗೆ ತಂದರು. ಆಗ ಅರಸನುಬದುಕಿರುವ ಕೂಸನ್ನು ಎರಡು ತುಂಡಾಗಿ ಕಡಿದು ಇವಳಿಗೆ ಅರ್ಧಪಾಲನ್ನು ಅವಳಿಗೆ ಅರ್ಧ ಪಾಲನ್ನು ಕೊಡಿರಿ ಅಂದನು. ಆಗ ಬದುಕಿರುವ ಕೂಸಿನ ತಾಯಿಯಾದವಳ ಕರುಳುಗಳು ತನ್ನ ಮಗನಿಗಾಗಿ ಮರುಗಿದ್ದರಿಂದ ಅವಳು ಅರಸನಿಗೆ--ಓ ನನ್ನ ಒಡೆ ಯನೇ, ಬದುಕಿರುವ ಕೂಸನ್ನು ಇವಳಿಗೆ ಕೊಡು; ಕೊಲ್ಲಲ್ಲೇ ಬೇಡ ಅಂದಳು. ಆದರೆ ಮತ್ತೊಬ್ಬಳು--ಅದು ನನ್ನದಾಗಲಿ ನಿನ್ನದಾಗಲಿ ಆಗಿರಬಾರದು; ಕಡಿ ಯಿರಿ ಅಂದಳು. ಆಗ ಅರಸನು ಪ್ರತ್ಯುತ್ತರವಾಗಿಬದುಕಿರುವ ಕೂಸನ್ನು ಇವಳಿಗೆ ಕೊಡಿರಿ; ಕೊಲ್ಲ ಬೇಡಿರಿ; ಇವಳೇ ಅದರ ತಾಯಿ ಅಂದನು.ಅರಸನು ತೀರಿಸಿದ ನ್ಯಾಯವನ್ನು ಕುರಿತು ಸಮಸ್ತ ಇಸ್ರಾಯೇ ಲ್ಯರು ಕೇಳಿ ಅರಸನಿಗೆ ಭಯಪಟ್ಟರು; ಯಾಕಂದರೆ ನ್ಯಾಯತೀರಿಸಲು ಅವನಲ್ಲಿ ದೇವರ ಜ್ಞಾನವಿದೆ ಎಂದು ನೋಡಿದರು. ಅರಸನು ತೀರಿಸಿದ ನ್ಯಾಯವನ್ನು ಕುರಿತು ಸಮಸ್ತ ಇಸ್ರಾಯೇ ಲ್ಯರು ಕೇಳಿ ಅರಸನಿಗೆ ಭಯಪಟ್ಟರು; ಯಾಕಂದರೆ ನ್ಯಾಯತೀರಿಸಲು ಅವನಲ್ಲಿ ದೇವರ ಜ್ಞಾನವಿದೆ ಎಂದು ನೋಡಿದರು.