Job · chapter 9 · verse 34
Job 9:34 in Kannada
ಆತನು ತನ್ನ ಕೋಲನ್ನು ನನ್ನ ಮೇಲಿನಿಂದ ತೊಲ ಗಿಸಲಿ, ಆತನ ಭೀತಿ ನನ್ನನ್ನು ಹೆದರಿಸದಿರಲಿ.ಆಗ ಆತನಿಗೆ ಭಯಪಡದೆ ಮಾತನಾಡುವೆನು; ಆದರೆ ಭಯಕ್ಕೆ ನನ್ನಲ್ಲೇನೂ ಆಸ್ಪದವಿಲ್ಲ.
Aatanu tanna kolannu nanna melininda tola gisali, aatana bheeti nannannu hedarisadirali.aaga aatanige bhayapadade maatanaaduvenu; aadare bhayakke nannallenoo aaspadavilla.
Job 9:34 in English
- King James Version (KJV)
- Let him take his rod away from me, and let not his fear terrify me:
- World English Bible (WEB)
- Let him take his rod away from me. Let his terror not make me afraid;
- American Standard Version (ASV)
- Let him take his rod away from me, And let not his terror make me afraid:
- Bible in Basic English (BBE)
- Let him take away his rod from me and not send his fear on me:
- Darby Translation (DBY)
- Let him take his rod away from me, and let not his terror make me afraid,
- Webster's Bible (WBS)
- Let him take away his rod from me, and let not his fear terrify me:
- Young's Literal Translation (YLT)
- He doth turn aside from off me his rod, And His terror doth not make me afraid,
Read in context
- 32ನಾನು ಆತನಿಗೆ ಉತ್ತರ ಕೊಡುವ ಹಾಗೆಯೂ ನಾವು ಕೂಡ ನ್ಯಾಯದಲ್ಲಿ ಸೇರುವ ಹಾಗೆಯೂ ಆತನು ನನ್ನಂಥ ಮನುಷ್ಯನಲ್ಲ.
- 33ನಮ್ಮಿಬ್ಬರ ಮೇಲೆ ಕೈ ಇಡತಕ್ಕ ಮಧ್ಯಸ್ಥಗಾರನು ನಮ್ಮ ಮಧ್ಯದಲ್ಲಿಲ್ಲ.
- 34ಆತನು ತನ್ನ ಕೋಲನ್ನು ನನ್ನ ಮೇಲಿನಿಂದ ತೊಲ ಗಿಸಲಿ, ಆತನ ಭೀತಿ ನನ್ನನ್ನು ಹೆದರಿಸದಿರಲಿ.ಆಗ ಆತನಿಗೆ ಭಯಪಡದೆ ಮಾತನಾಡುವೆನು; ಆದರೆ ಭಯಕ್ಕೆ ನನ್ನಲ್ಲೇನೂ ಆಸ್ಪದವಿಲ್ಲ.
- 35ಆಗ ಆತನಿಗೆ ಭಯಪಡದೆ ಮಾತನಾಡುವೆನು; ಆದರೆ ಭಯಕ್ಕೆ ನನ್ನಲ್ಲೇನೂ ಆಸ್ಪದವಿಲ್ಲ.
Cross references
- Psalm 39:10 ಕೀರ್ತನೆಗಳು 39:10ನನ್ನಿಂದ ನಿನ್ನ ಪೆಟ್ಟನ್ನು ತೊಲಗಿಸು; ನಿನ್ನ ಕೈಹೊಡೆ ತದಿಂದ ನಾನು ಸತ್ತು ಹೋಗುತ್ತೇನೆ.
- Job 33:7 ಯೋಬನು 33:7ಇಗೋ, ನನ್ನ ಭೀತಿಯು ನಿನ್ನನ್ನು ಹೆದರಿಸಲಾರದು; ಇಲ್ಲವೆ ನನ್ನ ಕೈ ನಿನ್ನ ಮೇಲೆ ಭಾರವಾಗದು.
- Job 13:11 ಯೋಬನು 13:11ಆತನ ಘನತೆಯು ನಿಮ್ಮನ್ನು ಹೆದರಿಸು ವದಿಲ್ಲವೋ? ಆತನ ಭೀತಿಯು ನಿಮ್ಮ ಮೇಲೆ ಬೀಳುವ ದಿಲ್ಲವೋ?
- Job 23:15 ಯೋಬನು 23:15ಆದದರಿಂದ ಆತನ ಮುಂದೆ ತಲ್ಲಣಪಡುತ್ತೇನೆ; ಗ್ರಹಿಸಿಕೊಂಡು ಆತನಿಗೆ ಭಯ ಪಡುತ್ತೇನೆ.
- Job 31:23 ಯೋಬನು 31:23ದೇವರಿಂದ ಬರುವ ನಾಶವು ನನಗೆ ಹೆದರಿಕೆಯಾಗಿತ್ತು; ಆತನ ಉನ್ನತ ಕ್ಕೋಸ್ಕರ ನಾನು ತಾಳಲಾರದೆ ಇದ್ದೆನು.
- Job 37:1 ಯೋಬನು 37:1ಇದಕ್ಕೋಸ್ಕರ ನನ್ನ ಹೃದಯವು ನಡುಗಿ ತನ್ನ ಸ್ಥಳದಿಂದ ಕದಲುತ್ತದೆ.
- Job 13:20–22 ಯೋಬನು 13:20–22ಎರಡು ಸಂಗತಿಗಳನ್ನು ಮಾತ್ರ ನನಗೆ ಮಾಡಬೇಡ; ಆಗ ನಿನ್ನಿಂದ ನಾನು ಅಡಗಿಕೊಳ್ಳು ವದಿಲ್ಲ. ನಿನ್ನ ಕೈಯನ್ನು ನನ್ನಿಂದ ದೂರಮಾಡು; ನಿನ್ನ ಭೀತಿಯು ನನ್ನನ್ನು ಹೆದರಿಸದಿರಲಿ. ಆಗ ನೀನು ಕರೆಯುವಿ, ನಾನು ಉತ್ತರಿಸುವೆನು; ಅಥವಾ ನಾನು ಮಾತನಾಡುತ್ತೇನೆ, ನೀನು ನನಗೆ ಉತ್ತರ ಕೊಡು.
- Psalm 90:11 ಕೀರ್ತನೆಗಳು 90:11ನಿನ್ನ ಕೋಪದ ಬಲವನ್ನು ತಿಳಿದ ವನಾರು? ನಿನ್ನ ಭಯದ ಪ್ರಕಾರವೇ ನಿನ್ನ ಉಗ್ರತೆ ಇದೆ.
- Job 29:2–25 ಯೋಬನು 29:2–25ಓ, ಮುಂಚಿನ ತಿಂಗ ಳುಗಳ ಹಾಗೆಯೂ ದೇವರು ನನ್ನನ್ನು ಕಾಪಾಡಿದ ದಿವಸಗಳ ಹಾಗೆಯೂ ನನಗೆ ಆದರೆ ಒಳ್ಳೇದು. ಆಗ ಆತನ ದೀಪವು ನನ್ನ ತಲೆಯ ಮೇಲೆ ಹೊಳೆ ಯಿತು; ಆತನ ಬೆಳಕಿನಿಂದ ಕತ್ತಲಲ್ಲಿ ನಡೆದೆನು. ನಾನು ನನ್ನ ಯೌವನದ ದಿವಸಗಳಲ್ಲಿದ್ದಾಗ ದೇವರ ಮರ್ಮವು ನನ್ನ ಗುಡಾರದ ಮೇಲೆ ಇತ್ತು. ಸರ್ವ ಶಕ್ತನು ಇನ್ನೂ ನನ್ನ ಸಂಗಡ ಇದ್ದನು; ನನ್ನ ಸುತ್ತಲೂ ನನ್ನ ಮಕ್ಕಳು ಇದ್ದರು. ನನ್ನ ಹೆಜ್ಜೆಗಳನ್ನು ಬೆಣ್ಣೆ ಯಿಂದ ತೊಳೆಯುತ್ತಾ ಇದ್ದೆನು; ಬಂಡೆಯು ನನ್ನ ಬಳಿಯಲ್ಲಿ ಎಣ್ಣೆಯ ಪ್ರವಾಹಗಳನ್ನು ಹೊಯ್ಯುತ್ತಿತ್ತು. ಪಟ್ಟಣವನ್ನು ಹಾದು ಬಾಗಲಿಗೆ ಹೊರಟುಹೋಗಿ ನನ್ನ ಪೀಠವನ್ನು ಬೀದಿಯಲ್ಲಿ ಸಿದ್ಧಪಡಿಸುತ್ತಾ ಇದ್ದೆನು. ಯುವಕರು ನನ್ನನ್ನು ನೋಡಿ ಅಡಗಿಕೊಳ್ಳುತ್ತಿದ್ದರು; ವೃದ್ಧರು ಎದ್ದು ನಿಲ್ಲುತ್ತಿದ್ದರು. ಪ್ರಧಾನರು ನುಡಿಗಳನ್ನು ಬಿಗಿಹಿಡಿದು ತಮ್ಮ ಬಾಯಿಯ ಮೇಲೆ ಕೈ ಇಟ್ಟು ಕೊಂಡರು. ಘನವುಳ್ಳವರು ಮೌನವಾದರು; ಅವರ ನಾಲಿಗೆ ಅವರ ಅಂಗಳಕ್ಕೆ ಅಂಟಿತು. ಕೇಳುವ ಕಿವಿ ನನ್ನನ್ನು ಧನ್ಯನೆಂದು ಹರಸಿತು; ನೋಡುವ ಕಣ್ಣು ನನಗೆ ಸಾಕ್ಷಿ ಕೊಡುತ್ತಿತ್ತು. ಮೊರೆ ಯಿಡುವ ದೀನನನ್ನೂ ಸಹಾಯವಿಲ್ಲದ ದಿಕ್ಕಿಲ್ಲದ ವರನ್ನೂ ನಾನು ತಪ್ಪಿಸಿದೆನು. ನಾಶವಾಗುವದಕ್ಕೆ ಸಿದ್ಧವಾದವನ ಆಶೀರ್ವಾದವು ನನ್ನ ಮೇಲೆ ಬರು ತ್ತಿತ್ತು; ವಿಧವೆಯ ಹೃದಯವು ಸಂತೋಷದಿಂದ ಹಾಡುವಂತೆ ನಾನು ಮಾಡಿದೆನು. ನೀತಿಯನ್ನು ಧರಿಸಿಕೊಂಡೆನು; ಅದೇ ನನಗೆ ವಸ್ತ್ರದಹಾಗಿತ್ತು; ನಿಲು ವಂಗಿಯ ಹಾಗೆಯೂ ಕಿರೀಟದ ಹಾಗೆಯೂ ನನ್ನ ನ್ಯಾಯವು ನನಗೆ ಇತ್ತು. ನಾನು ಕುರುಡನಿಗೆ ಕಣ್ಣೂ ಕುಂಟನಿಗೆ ಕಾಲೂ ಆಗಿದ್ದೆನು. ದರಿದ್ರರಿಗೆ ನಾನು ತಂದೆಯಾಗಿದ್ದೆನು; ನಾನರಿಯದವನ ವ್ಯಾಜ್ಯವನ್ನು ಪರಿಶೋಧಿಸಿದೆನು. ದುಷ್ಟರ ದವಡೆಗಳನ್ನು ಮುರಿ ದೆನು; ಅವನ ಹಲ್ಲುಗಳೊಳಗಿಂದ ಬೇಟೆಯನ್ನು ಕಿತ್ತು ತೆಗೆದೆನು. ನನ್ನ ಗೂಡಿನಲ್ಲಿ ನಾನು ಸಾಯುವೆನು, ಮರಳಿ ನಂತೆ ನನ್ನ ದಿವಸಗಳನ್ನು ಹೆಚ್ಚಿಸುವೆನು ಅಂದೆನು. ನನ್ನ ಬೇರು ನೀರಿನ ಬಳಿಯಲ್ಲಿ ಹಬ್ಬಿತ್ತು--ನನ್ನ ಕೊಂಬೆಯ ಮೇಲೆ ಮಂಜು ಉಳುಕೊಳ್ಳುತ್ತಾ ಇತ್ತು. ನನ್ನ ಘನವು ನನ್ನಲ್ಲಿ ಹೊಸದಾಗಿತ್ತು; ನನ್ನ ಬಿಲ್ಲು ನನ್ನ ಕೈಯಲ್ಲಿ ಹೊಸದಾಗಿತ್ತು. ನನಗೆ ಕಿವಿಗೊಟ್ಟು ಎದುರುನೋಡಿ, ನನ್ನ ಆಲೋಚನೆಗೆ ಮೌನವಾಗಿ ದ್ದರು. ನನ್ನ ಮಾತಿನ ಮೇಲೆ ಅವರು ಬೇರೆ ಮಾತ ನಾಡಲಿಲ್ಲ; ನನ್ನ ನುಡಿ ಅವರ ಮೇಲೆ ಸುರಿಯಿತು. ಮಳೆಯಂತೆ ನನ್ನನ್ನು ಎದುರು ನೋಡುತ್ತಿದ್ದರು; ಹಿಂಗಾರು ಮಳೆಗೆ ಎಂಬಂತೆ ಬಾಯಿ ತೆಗೆದರು. ನಂಬಿಕೆ ಇಲ್ಲದವರ ಕಡೆಗೆ ನಗೆ ತೋರಿಸಿದೆನು; ನನ್ನ ಮುಖದ ಕಳೆಯನ್ನು ಅವರು ಕುಂದಿಸಲಿಲ್ಲ.ಅವರ ಮಾರ್ಗವನ್ನು ಆದುಕೊಂಡು ಪ್ರಧಾನನಾಗಿ ಕೂತು ಗೋಳಾಡುವವರನ್ನು ಸಂತೈಸುವವನಾಗಿಯೇ ಅರಸನಂತೆ ಸೈನ್ಯದಲ್ಲಿ ಆಸೀನನಾಗಿದ್ದೆನು. ಅವರ ಮಾರ್ಗವನ್ನು ಆದುಕೊಂಡು ಪ್ರಧಾನನಾಗಿ ಕೂತು ಗೋಳಾಡುವವರನ್ನು ಸಂತೈಸುವವನಾಗಿಯೇ ಅರಸನಂತೆ ಸೈನ್ಯದಲ್ಲಿ ಆಸೀನನಾಗಿದ್ದೆನು.