John · chapter 1 · verse 11
John 1:11 in Kannada
ಆತನು ತನ್ನ ಸ್ವಂತದವರ ಬಳಿಗೆ ಬಂದನು. ಆತನ ಸ್ವಂತದವರು ಆತನನ್ನು ಅಂಗೀಕರಿಸಲಿಲ್ಲ.
Aatanu tanna svantadavara balige bandanu. Aatana svantadavaru aatanannu angeekarisalilla.
John 1:11 in English
- King James Version (KJV)
- He came unto his own, and his own received him not.
- World English Bible (WEB)
- He came to his own, and those who were his own didn’t receive him.
- American Standard Version (ASV)
- He came unto his own, and they that were his own received him not.
- Bible in Basic English (BBE)
- He came to the things which were his and his people did not take him to their hearts.
- Darby Translation (DBY)
- He came to his own, and his own received him not;
- Webster's Bible (WBS)
- He came to his own, and his own received him not.
- Young's Literal Translation (YLT)
- to his own things he came, and his own people did not receive him;
Read in context
- 9ಲೋಕದಲ್ಲಿ ಬರುವ ಪ್ರತಿಯೊಬ್ಬ ಮನುಷ್ಯನಿಗೆ ಆತನು ಬೆಳಕನ್ನು ಕೊಡುವ ನಿಜವಾದ ಬೆಳಕಾಗಿದ್ದನು.
- 10ಆತನು ಲೋಕದಲ್ಲಿ ಇದ್ದನು; ಲೋಕವು ಆತನಿಂದ ಉಂಟಾಯಿತು; ಲೋಕವು ಆತನನ್ನು ಅರಿಯಲಿಲ್ಲ.
- 11ಆತನು ತನ್ನ ಸ್ವಂತದವರ ಬಳಿಗೆ ಬಂದನು. ಆತನ ಸ್ವಂತದವರು ಆತನನ್ನು ಅಂಗೀಕರಿಸಲಿಲ್ಲ.
- 12ಆದರೆ ಯಾರಾರು ಆತನನ್ನು ಅಂಗೀಕರಿಸಿದರೋ ಅವರಿಗೆ ಅಂದರೆ ಆತನ ಹೆಸರಿನ ಮೇಲೆ ನಂಬಿಕೆಯಿಡುವವರಿಗೆ ದೇವರ ಪುತ್ರರಾಗುವ ಅಧಿಕಾರವನ್ನು ಆತನು ಕೊಟ್ಟನು.
- 13ಇವರು ರಕ್ತದಿಂದಾಗಲಿ ಇಲ್ಲವೆ ಶರೀರದ ಇಚ್ಛೆಯಿಂದಾಗಲಿ ಇಲ್ಲವೆ ಮನುಷ್ಯನ ಇಚ್ಛೆಯಿಂದಾ ಗಲಿ ಹುಟ್ಟಿದವರಲ್ಲ, ದೇವರಿಂದಲೇ ಹುಟ್ಟಿದವರು.
Cross references
- Luke 19:14 ಲೂಕನು 19:14ಆದರೆ ಅವರ ಪಟ್ಟಣದವರು ಅವನನ್ನು ದ್ವೇಷಿಸಿ--ಇವನು ನಮ್ಮ ಮೇಲೆ ಆಡಳಿತ ಮಾಡುವದು ನಮಗೆ ಮನಸ್ಸಿಲ್ಲ ಎಂದು ಹೇಳಿ ಅವನ ಹಿಂದೆ ಸಂದೇಶವನ್ನು ಕಳುಹಿಸಿದರು.
- Isaiah 53:2–3 ಯೆಶಾಯ 53:2–3ಆತನು ಚಿಗುರಿನಂತೆಯೂ ಒಣನೆಲದಿಂದ ಹುಟ್ಟಿಬರುವ ಬೇರಿನಂತೆಯೂ ಆತನ ಮುಂದೆ ಬೆಳೆ ಯುವನು. ಆತನಿಗೆ ಯಾವ ರೂಪವಾಗಲಿ ಅಂದವಾ ಗಲಿ ಇರಲಿಲ್ಲ; ನಾವು ಆತನನ್ನು ನೋಡಿದಾಗ ಅಲ್ಲಿ ನಾವು ಅಪೇಕ್ಷಿಸುವಂಥ ಯಾವ ಚಂದವೂ ಇರಲಿಲ್ಲ. ಆತನು ಮನುಷ್ಯರಿಂದ ತಳ್ಳಲ್ಪಟ್ಟವನೂ ತಿರಸ್ಕರಿಸ ಲ್ಪಟ್ಟವನೂ ದುಃಖಿತ ಮನುಷ್ಯನೂ ಕಷ್ಟವನ್ನು ಅರಿತ ವನೂ; ನಾವು ನಮ್ಮ ಮುಖಗಳನ್ನು ಆತನಿಂದ ಮರೆ ಮಾಡಿಕೊಳ್ಳುವ ಹಾಗೆ ಧಿಕ್ಕರಿಸಲ್ಪಟ್ಟವನೂ ಆಗಿದ್ದನು. ನಾವು ಆತನನ್ನು ಲಕ್ಷಕ್ಕೆ ತರಲಿಲ್ಲ.
- John 3:32 ಯೋಹಾನನು 3:32ಆತನು ಯಾವದನ್ನು ಕಂಡು ಕೇಳಿದನೋ ಅದಕ್ಕೆ ಸಾಕ್ಷಿ ಕೊಡುತ್ತಾನೆ; ಆದರೆ ಆತನ ಸಾಕ್ಷಿಯನ್ನು ಯಾವನೂ ಅಂಗೀಕರಿಸುವದಿಲ್ಲ.
- Acts 7:51–52 ಅಪೊಸ್ತಲರ ಕೃತ್ಯಗಳು 7:51–52ಬಗ್ಗದ ಕುತ್ತಿಗೆಯುಳ್ಳವರೇ, ಹೃದಯದಲ್ಲಿಯೂ ಕಿವಿಗಳಲ್ಲಿಯೂ ಸುನ್ನತಿಯಿಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವು ಯಾವಾಗಲೂ ಪವಿತ್ರಾತ್ಮನನ್ನು ಎದುರಿಸುವವರಾಗಿದ್ದೀರಿ. ಪ್ರವಾದಿ ಗಳಲ್ಲಿ ನಿಮ್ಮ ಪಿತೃಗಳು ಹಿಂಸೆಪಡಿಸದವರು ಯಾರಿ ದ್ದಾರೆ? ಅವರು ಆ ನೀತಿವಂತನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು. ನೀವು ಈಗ ಆತನನ್ನು ಹಿಡುಕೊಟ್ಟು ಕೊಂದವರಾದಿರಿ.
- Luke 20:13–15 ಲೂಕನು 20:13–15ಆಗ ದ್ರಾಕ್ಷೇತೋಟದ ಯಜಮಾನನು--ನಾನೇನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನೇ ಕಳುಹಿ ಸುವೆನು. ಅವರು ಇವನನ್ನು ನೋಡಿಯಾದರೂ ಇವ ನನ್ನು ಗೌರವಿಸಿಯಾರು ಎಂದು ಅಂದುಕೊಂಡನು. ಆದರೆ ಒಕ್ಕಲಿಗರು ಅವನನ್ನು ನೋಡಿದಾಗ ತಮ್ಮತಮ್ಮೊಳಗೆ--ಇವನೇ ಬಾಧ್ಯಸ್ಥನು; ಬನ್ನಿರಿ, ಇವ ನನ್ನು ಕೊಂದುಹಾಕೋಣ ಬಾಧ್ಯತೆಯು ನಮ್ಮದಾಗು ತ್ತದೆ ಎಂದು ಆಲೋಚನೆ ಮಾಡಿಕೊಂಡರು. ಅವರು ಅವನನ್ನು ದ್ರಾಕ್ಷೇ ತೋಟದ ಹೊರಗೆಹಾಕಿ ಕೊಂದರು. ಹೀಗಿರಲು ದ್ರಾಕ್ಷೇತೋಟದ ಯಜ ಮಾನನು ಅವರಿಗೆ ಏನು ಮಾಡುವನು?
- Matthew 15:24 ಮತ್ತಾಯನು 15:24ಆದರೆ ಆತನು ಪ್ರತ್ಯು ತ್ತರವಾಗಿ-- ತಪ್ಪಿಸಿಕೊಂಡ ಕುರಿಗಳಾಗಿರುವ ಇಸ್ರಾ ಯೇಲಿನ ಮನೆತನದವರ ಬಳಿಗೆ ಮಾತ್ರ ನಾನು ಕಳುಹಿಸಲ್ಪಟ್ಟಿದ್ದೇನೆ ಅಂದನು.
- Acts 3:25–26 ಅಪೊಸ್ತಲರ ಕೃತ್ಯಗಳು 3:25–26ಇದಲ್ಲದೆ ಅಬ್ರಹಾಮನಿಗೆ--ನಿನ್ನ ಸಂತ ತಿಯ ಮೂಲಕ ಭೂಲೋಕದ ಎಲ್ಲಾ ಕುಲದವರು ಆಶೀರ್ವದಿಸಲ್ಪಡುವರು ಎಂದು ದೇವರು ನಮ್ಮ ಪಿತೃಗಳೊಂದಿಗೆ ಮಾಡಿದ ಒಡಂಬಡಿಕೆಯ ಮಕ್ಕಳೂ ಪ್ರವಾದಿಗಳ ಮಕ್ಕಳೂ ನೀವಾಗಿದ್ದೀರಿ.ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ದ್ರೋಹಗಳಿಂದ ತಿರು ಗಿಸಿ ಆಶೀರ್ವದಿಸುವದಕ್ಕಾಗಿ ದೇವರು ತನ್ನ ಮಗನಾದ ಯೇಸುವನ್ನು ಎಬ್ಬಿಸಿ ಮೊದಲು ಆತನನ್ನು ನಿಮ್ಮ ಬಳಿಗೆ ಕಳುಹಿಸಿದನು ಎಂದು ಹೇಳಿದನು. ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ದ್ರೋಹಗಳಿಂದ ತಿರು ಗಿಸಿ ಆಶೀರ್ವದಿಸುವದಕ್ಕಾಗಿ ದೇವರು ತನ್ನ ಮಗನಾದ ಯೇಸುವನ್ನು ಎಬ್ಬಿಸಿ ಮೊದಲು ಆತನನ್ನು ನಿಮ್ಮ ಬಳಿಗೆ ಕಳುಹಿಸಿದನು ಎಂದು ಹೇಳಿದನು.
- Romans 15:8 ರೋಮಾಪುರದವರಿಗೆ 15:8ಹೀಗಿರುವದರಿಂದ ಪಿತೃ ಗಳಿಗೆ ಮಾಡಿದ ವಾಗ್ದಾನಗಳನ್ನು ದೃಢಪಡಿಸುವದಕ್ಕೆ ದೇವರ ಸತ್ಯಕ್ಕಾಗಿ ಯೇಸು ಕ್ರಿಸ್ತನು ಸುನ್ನತಿಯವರಿಗೆ ಸೇವಕನಾಗಿದ್ದನೆಂದು ನಾನು ಹೇಳುತ್ತೇನೆ.
- Acts 13:46 ಅಪೊಸ್ತಲರ ಕೃತ್ಯಗಳು 13:46ಆಗ ಪೌಲನೂ ಬಾರ್ನಬನೂ ಧೈರ್ಯದಿಂದ ಮಾತನಾಡಿ--ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವದು ಅವಶ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪು ಮಾಡಿಕೊಂಡದ್ದರಿಂದ ಇಗೋ, ನಾವು ಅನ್ಯಜನರ ಕಡೆಗೆ ಹೋಗುತ್ತೇವೆ.
- Romans 9:5 ರೋಮಾಪುರದವರಿಗೆ 9:5ಪಿತೃಗಳು ಇವರಿಗೆ ಸಂಬಂಧಪಟ್ಟವರೇ; ಶರೀರ ಸಂಬಂಧವಾಗಿ ಕ್ರಿಸ್ತನು ಇವರಿಂದಲೇ ಬಂದನು; ಆತನು ಎಲ್ಲಾದರ ಮೇಲೆ ಇರುವಾತನಾಗಿದ್ದು ನಿರಂತರಕ್ಕೂ ಸ್ತುತಿ ಹೊಂದತಕ್ಕ ದೇವರಾಗಿದ್ದಾನೆ. ಆಮೆನ್.
- Galatians 4:4 ಗಲಾತ್ಯದವರಿಗೆ 4:4ಆದರೆ ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಸ್ತ್ರೀಯಿಂದ ಹುಟ್ಟಿದವನನ್ನಾಗಿಯೂ ನ್ಯಾಯ ಪ್ರಮಾಣಕ್ಕೆ ಒಳಗಾದವನನ್ನಾಗಿಯೂ ಮಾಡಿ ಕಳುಹಿಸಿದ್ದಲ್ಲದೆ
- Acts 13:26 ಅಪೊಸ್ತಲರ ಕೃತ್ಯಗಳು 13:26ಜನರೇ, ಸಹೋದರರೇ, ಅಬ್ರಹಾಮನ ವಂಶ ಸ್ಥರೇ, ನಿಮ್ಮಲ್ಲಿ ದೇವರಿಗೆ ಭಯಪಡುವವರೇ, ನಿಮಗೆ ಈ ರಕ್ಷಣೆಯ ವಾಕ್ಯವು ಕಳುಹಿಸಿಯದೆ.