Matthew · chapter 15 · verse 24
Matthew 15:24 in Kannada
ಆದರೆ ಆತನು ಪ್ರತ್ಯು ತ್ತರವಾಗಿ-- ತಪ್ಪಿಸಿಕೊಂಡ ಕುರಿಗಳಾಗಿರುವ ಇಸ್ರಾ ಯೇಲಿನ ಮನೆತನದವರ ಬಳಿಗೆ ಮಾತ್ರ ನಾನು ಕಳುಹಿಸಲ್ಪಟ್ಟಿದ್ದೇನೆ ಅಂದನು.
Aadare aatanu pratyu ttaravaagi-- tappisikonda kurigalaagiruva israa yelina manetanadavara balige maatra naanu kaluhisalpattiddene andanu.
Matthew 15:24 in English
- King James Version (KJV)
- But he answered and said, I am not sent but unto the lost sheep of the house of Israel.
- World English Bible (WEB)
- But he answered, “I wasn’t sent to anyone but the lost sheep of the house of Israel.”
- American Standard Version (ASV)
- But he answered and said, I was not sent but unto the lost sheep of the house of Israel.
- Bible in Basic English (BBE)
- But he made answer and said, I was sent only to the wandering sheep of the house of Israel.
- Darby Translation (DBY)
- But he answering said, I have not been sent save to the lost sheep of Israel's house.
- Webster's Bible (WBS)
- But he answered and said, I am not sent but to the lost sheep of the house of Israel.
- Young's Literal Translation (YLT)
- and he answering said, 'I was not sent except to the lost sheep of the house of Israel.'
Read in context
- 22ಆಗ ಇಗೋ, ಕಾನಾನ್ಯಳಾದ ಒಬ್ಬ ಸ್ತ್ರೀಯು ಅದೇ ಪ್ರಾಂತ್ಯಗಳಿಂದ ಬಂದು ಆತನಿಗೆ--ಓ ಕರ್ತನೇ, ದಾವೀದನ ಕುಮಾ ರನೇ, ನನ್ನ ಮೇಲೆ ಕರುಣೆಯಿಡು; ನನ್ನ ಮಗಳು ದೆವ್ವದಿಂದ ಬಹಳವಾಗಿ ಸಂಕಟಪಡುತ್ತಿದ್ದಾಳೆ ಎಂದು ಕೂಗಿಕೊಂಡಳು.
- 23ಆದರೆ ಆತನು ಆಕೆಗೆ ಒಂದು ಮಾತೂ ಉತ್ತರ ಕೊಡಲಿಲ್ಲ; ಆಗ ಆತನ ಶಿಷ್ಯರು ಬಂದು--ಆಕೆಯನ್ನು ಕಳುಹಿಸಿಬಿಡು, ಯಾಕಂದರೆ ಆಕೆಯು ನಮ್ಮ ಹಿಂದೆ ಕೂಗಿಕೊಂಡು ಬರುತ್ತಾಳೆ ಎಂದು ಆತನನ್ನು ಬೇಡಿಕೊಂಡರು.
- 24ಆದರೆ ಆತನು ಪ್ರತ್ಯು ತ್ತರವಾಗಿ-- ತಪ್ಪಿಸಿಕೊಂಡ ಕುರಿಗಳಾಗಿರುವ ಇಸ್ರಾ ಯೇಲಿನ ಮನೆತನದವರ ಬಳಿಗೆ ಮಾತ್ರ ನಾನು ಕಳುಹಿಸಲ್ಪಟ್ಟಿದ್ದೇನೆ ಅಂದನು.
- 25ಆಗ ಆಕೆಯು ಬಂದು ಆತನನ್ನು ಆರಾಧಿಸಿ--ಕರ್ತನೇ, ನನಗೆ ಸಹಾಯ ಮಾಡು ಎಂದು ಕೇಳಿಕೊಂಡಳು.
- 26ಆದರೆ ಆತನು ಪ್ರತ್ಯುತ್ತರವಾಗಿ--ಮಕ್ಕಳ ರೊಟ್ಟಿಯನ್ನು ತಕ್ಕೊಂಡು ನಾಯಿಗಳಿಗೆ ಹಾಕುವದು ಸರಿಯಲ್ಲ ಎಂದು ಹೇಳಿ ದನು.
Cross references
- Matthew 10:5–6 ಮತ್ತಾಯನು 10:5–6ಯೇಸು ಈ ಹನ್ನೆರಡು ಮಂದಿಯನ್ನು ಕಳುಹಿ ಸುವಾಗ ಅವರಿಗೆ ಅಪ್ಪಣೆಕೊಟ್ಟು ಹೇಳಿದ್ದೇನಂ ದರೆ--ಅನ್ಯಜನರ ದಾರಿಯಲ್ಲಿ ಹೋಗಬೇಡಿರಿ ಮತ್ತು ಸಮಾರ್ಯರ ಯಾವ ಪಟ್ಟಣದಲ್ಲಿಯೂ ನೀವು ಪ್ರವೇಶಿಸಬೇಡಿರಿ. ಆದರೆ ತಪ್ಪಿಸಿಕೊಂಡ ಕುರಿಗಳಾದ ಇಸ್ರಾಯೇಲಿನ ಮನೆತನದವರ ಬಳಿಗೆ ಮಾತ್ರ ಹೋಗಿರಿ.
- Romans 15:8 ರೋಮಾಪುರದವರಿಗೆ 15:8ಹೀಗಿರುವದರಿಂದ ಪಿತೃ ಗಳಿಗೆ ಮಾಡಿದ ವಾಗ್ದಾನಗಳನ್ನು ದೃಢಪಡಿಸುವದಕ್ಕೆ ದೇವರ ಸತ್ಯಕ್ಕಾಗಿ ಯೇಸು ಕ್ರಿಸ್ತನು ಸುನ್ನತಿಯವರಿಗೆ ಸೇವಕನಾಗಿದ್ದನೆಂದು ನಾನು ಹೇಳುತ್ತೇನೆ.
- Jeremiah 50:6–7 ಯೆರೆಮೀಯ 50:6–7ನನ್ನ ಜನರು ಕಳೆದುಹೋದ ಕುರಿಗಳಾಗಿದ್ದರು; ಅವರ ಕುರುಬರು ಅವರನ್ನು ತಪ್ಪಿ ಹೋಗುವಂತೆ ಮಾಡಿದರು; ಅವರನ್ನು ಬೆಟ್ಟಗಳ ಮೇಲೆ ತಿರುಗಿಸಿ ಅಡ್ಡಾಡಿಸಿದರು; ಅವರು ಬೆಟ್ಟದಿಂದ ಗುಡ್ಡಕ್ಕೆ ಹೋದರು; ಮಲಗುವ ಸ್ಥಳವನ್ನು ಮರೆತುಬಿಟ್ಟರು. ಅವರನ್ನು ಕಂಡವರೆಲ್ಲರು ಅವರನ್ನು ನುಂಗಿಬಿಟ್ಟರು, ಅವರ ಎದುರಾಳಿಗಳು--ನಮ್ಮಲ್ಲಿ ಅಪರಾಧವಿಲ್ಲ; ನೀತಿಯ ನಿವಾಸವಾದ ಕರ್ತನಿಗೆ, ಅವರ ತಂದೆಗಳ ನಿರೀಕ್ಷಣೆಯಾದ ಕರ್ತನಿಗೆ ವಿರೋಧವಾಗಿ ಪಾಪಮಾಡಿದ್ದಾರೆಂದು ಅಂದರು.
- Acts 13:46 ಅಪೊಸ್ತಲರ ಕೃತ್ಯಗಳು 13:46ಆಗ ಪೌಲನೂ ಬಾರ್ನಬನೂ ಧೈರ್ಯದಿಂದ ಮಾತನಾಡಿ--ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವದು ಅವಶ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪು ಮಾಡಿಕೊಂಡದ್ದರಿಂದ ಇಗೋ, ನಾವು ಅನ್ಯಜನರ ಕಡೆಗೆ ಹೋಗುತ್ತೇವೆ.
- Ezekiel 34:5–6 ಯೆಹೆಜ್ಕೇಲನು 34:5–6ಅವು ಚದರಿಹೋದವು; ಯಾಕಂದರೆ ಅಲ್ಲಿ ಕುರುಬ ರಿಲ್ಲ; ಅವರು ಚದರಿಹೋದಾಗ ಬಯಲಿನಲ್ಲಿರುವ ಎಲ್ಲಾ ಮೃಗಗಳಿಗೆ ಆಹಾರವಾದವು. ನನ್ನ ಕುರಿಗಳು ಎಲ್ಲಾ ಪರ್ವತಗಳ ಮೇಲೆಯೂ ಪ್ರತಿಯೊಂದು ಎತ್ತರವಾದ ಬೆಟ್ಟಗಳ ಮೇಲೆಯೂ ಅಲೆದಾಡುತ್ತಿವೆ; ಹೌದು, ನನ್ನ ಮಂದೆಯು ಭೂಮಂಡಲದಲ್ಲೆಲ್ಲಾ ಚದರಿ ಹೋಗಿದೆ; ಯಾವನೂ ಅವುಗಳಿಗಾಗಿ ವಿಚಾರಿಸಲಿಲ್ಲ ಅಥವಾ ಹುಡುಕಲಿಲ್ಲ.
- Acts 3:25–26 ಅಪೊಸ್ತಲರ ಕೃತ್ಯಗಳು 3:25–26ಇದಲ್ಲದೆ ಅಬ್ರಹಾಮನಿಗೆ--ನಿನ್ನ ಸಂತ ತಿಯ ಮೂಲಕ ಭೂಲೋಕದ ಎಲ್ಲಾ ಕುಲದವರು ಆಶೀರ್ವದಿಸಲ್ಪಡುವರು ಎಂದು ದೇವರು ನಮ್ಮ ಪಿತೃಗಳೊಂದಿಗೆ ಮಾಡಿದ ಒಡಂಬಡಿಕೆಯ ಮಕ್ಕಳೂ ಪ್ರವಾದಿಗಳ ಮಕ್ಕಳೂ ನೀವಾಗಿದ್ದೀರಿ.ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ದ್ರೋಹಗಳಿಂದ ತಿರು ಗಿಸಿ ಆಶೀರ್ವದಿಸುವದಕ್ಕಾಗಿ ದೇವರು ತನ್ನ ಮಗನಾದ ಯೇಸುವನ್ನು ಎಬ್ಬಿಸಿ ಮೊದಲು ಆತನನ್ನು ನಿಮ್ಮ ಬಳಿಗೆ ಕಳುಹಿಸಿದನು ಎಂದು ಹೇಳಿದನು. ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ದ್ರೋಹಗಳಿಂದ ತಿರು ಗಿಸಿ ಆಶೀರ್ವದಿಸುವದಕ್ಕಾಗಿ ದೇವರು ತನ್ನ ಮಗನಾದ ಯೇಸುವನ್ನು ಎಬ್ಬಿಸಿ ಮೊದಲು ಆತನನ್ನು ನಿಮ್ಮ ಬಳಿಗೆ ಕಳುಹಿಸಿದನು ಎಂದು ಹೇಳಿದನು.
- Ezekiel 34:16 ಯೆಹೆಜ್ಕೇಲನು 34:16ಕಳೆದು ಹೋದದ್ದನ್ನು ನಾನೇ ಹುಡುಕುವೆನು; ಓಡಿಸಲ್ಪಟ್ಟಿದ್ದನ್ನು ನಾನೇ ಮತ್ತೆ ತರುವೆನು, ಮುರಿದದ್ದನ್ನು ನಾನೇ ಕಟ್ಟುವೆನು, ಬಲಹೀನವಾದದ್ದನ್ನು ನಾನೇ ಬಲಪಡಿಸುವೆನು. ಆದರೆ ಕೊಬ್ಬಿದ್ದನ್ನೂ ಬಲಿಷ್ಠವಾದದ್ದನ್ನೂ ನಾನೇ ಸಂಹರಿಸು ವೆನು; ನಾನೇ ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ಮೇಯಿಸುವೆನು.
- Luke 15:4–6 ಲೂಕನು 15:4–6ನಿಮ್ಮಲ್ಲಿ ಯಾವ ಮನುಷ್ಯನು ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದನ್ನು ಕಳೆದು ಕೊಂಡರೆ ಅವನು ತೊಂಭತ್ತೊಂಭತ್ತನ್ನು ಅಡವಿಯಲ್ಲಿ ಬಿಟ್ಟು ಕಳೆದುಹೋದದ್ದು ಸಿಕ್ಕುವ ವರೆಗೆ ಅದನ್ನು ಹುಡುಕಿಕೊಂಡು ಹೋಗದಿರುವನೇ? ಅವನು ಆ ಕುರಿಯನ್ನು ಕಂಡುಕೊಂಡ ಮೇಲೆ ಸಂತೋಷ ಪಡುತ್ತಾ ಅದನ್ನು ತನ್ನ ಹೆಗಲುಗಳ ಮೇಲೆ ಹೊತ್ತು ಕೊಳ್ಳುವನು. ಆಮೇಲೆ ಅವನು ಮನೆಗೆ ಬಂದು ತನ್ನ ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಾಗಿ ಕರೆದು ಅವರಿಗೆ--ನನ್ನ ಸಂಗಡ ಸಂತೋಷಪಡಿರಿ;ಯಾಕಂದರೆ ಕಳೆದುಹೋದ ನನ್ನ ಕುರಿಯನ್ನು ನಾನು ಕಂಡು ಕೊಂಡೆನು ಅನ್ನುವನು.
- Isaiah 53:6 ಯೆಶಾಯ 53:6ನಾವೆಲ್ಲರೂ ದಾರಿ ತಪ್ಪಿದ ಕುರಿಗಳಂತಿದ್ದೆವು; ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು; ಕರ್ತನು ನಮ್ಮ ದುಷ್ಕೃತ್ಯಗಳನ್ನೆಲ್ಲಾ ಆತನ ಮೇಲೆ ಹಾಕಿದನು.
- Ezekiel 34:23 ಯೆಹೆಜ್ಕೇಲನು 34:23ನಾನು ಅವುಗಳ ಮೇಲೆ ಒಬ್ಬ ಕುರುಬನನ್ನು ನೇಮಿಸುವೆನು; ಅವನು ಅವುಗಳನ್ನು ಮೇಯಿಸುತ್ತಾನೆ. ನನ್ನ ಸೇವಕನಾದ ದಾವೀದನೇ ಅವುಗಳನ್ನು ಮೇಯಿಸಿ ಅವುಗಳಿಗೆ ಕುರುಬನಾಗುತ್ತಾನೆ.
- Matthew 9:36 ಮತ್ತಾಯನು 9:36ಆದರೆ ಆತನು ಜನರ ಸಮೂಹಗಳನ್ನು ಕಂಡು ಅವರ ಮೇಲೆ ಕನಿಕರಪಟ್ಟನು; ಯಾಕಂದರೆ ಅವರು ಕುರುಬನಿಲ್ಲದ ಕುರಿಗಳಂತೆ ಚದರಿಸಲ್ಪಟ್ಟು ಬಳಲಿದವರಾಗಿದ್ದರು.