John · chapter 13 · verse 10
John 13:10 in Kannada
ಯೇಸು ಅವನಿಗೆ--ಸ್ನಾನಮಾಡಿಕೊಂಡವನು ತನ ಪಾದಗಳನ್ನು ಹೊರತು ಮತ್ತೇನೂ ತೊಳೆಯುವದು ಅವಶ್ಯವಿಲ್ಲ; ಯಾಕಂದರೆ ಅವನು ಸಂಪೂರ್ಣವಾಗಿ ಶುದ್ಧನಾಗಿದ್ದಾನೆ. ನೀವು ಶುದ್ಧರಾಗಿದ್ದೀರಿ, ಆದರೆ ಎಲ್ಲರೂ ಅಲ್ಲ ಅಂದನು.
Yesu avanige--snaanamaadikondavanu tana paadagalannu horatu mattenoo toleyuvadu avashyavilla; yaakandare avanu sampoornavaagi shuddhanaagiddaane. Neevu shuddharaagiddeeri, aadare ellaroo alla andanu.
John 13:10 in English
- King James Version (KJV)
- Jesus saith to him, He that is washed needeth not save to wash [his] feet, but is clean every whit: and ye are clean, but not all.
- World English Bible (WEB)
- Jesus said to him, “Someone who has bathed only needs to have his feet washed, but is completely clean. You are clean, but not all of you.”
- American Standard Version (ASV)
- Jesus saith to him, He that is bathed needeth not save to wash his feet, but is clean every whit: and ye are clean, but not all.
- Bible in Basic English (BBE)
- Jesus said to him, He who is bathed has need only to have his feet washed and then he is clean all over: and you, my disciples, are clean, but not all of you.
- Darby Translation (DBY)
- Jesus says to him, He that is washed all over needs not to wash save his feet, but is wholly clean; and ye are clean, but not all.
- Webster's Bible (WBS)
- Jesus saith to him, He that is washed needeth not save to wash [his] feet, but is wholly clean: and ye are clean, but not all.
- Young's Literal Translation (YLT)
- Jesus saith to him, 'He who hath been bathed hath no need save to wash his feet, but he is clean altogether; and ye are clean, but not all;'
Read in context
- 8ಪೇತ್ರನು ಆತನಿಗೆ--ನೀನು ನನ್ನ ಕಾಲುಗಳನ್ನು ಎಂದಿಗೂ ತೊಳೆಯಬಾರದು ಅಂದನು; ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ನಿನ್ನನ್ನು ತೊಳೆಯ ದಿದ್ದರೆ ನನ್ನೊಂದಿಗೆ ನಿನಗೆ ಪಾಲಿಲ್ಲ ಎಂದು ಹೇಳಿದನು.
- 9ಅದಕ್ಕೆ ಸೀಮೋನ ಪೇತ್ರನು ಆತ ನಿಗೆ--ಕರ್ತನೇ, ನನ್ನ ಪಾದಗಳನ್ನು ಮಾತ್ರವಲ್ಲದೆ ನನ್ನ ಕೈಗಳನ್ನು ಮತ್ತು ತಲೆಯನ್ನು ಸಹ ತೊಳೆ ಅಂದನು.
- 10ಯೇಸು ಅವನಿಗೆ--ಸ್ನಾನಮಾಡಿಕೊಂಡವನು ತನ ಪಾದಗಳನ್ನು ಹೊರತು ಮತ್ತೇನೂ ತೊಳೆಯುವದು ಅವಶ್ಯವಿಲ್ಲ; ಯಾಕಂದರೆ ಅವನು ಸಂಪೂರ್ಣವಾಗಿ ಶುದ್ಧನಾಗಿದ್ದಾನೆ. ನೀವು ಶುದ್ಧರಾಗಿದ್ದೀರಿ, ಆದರೆ ಎಲ್ಲರೂ ಅಲ್ಲ ಅಂದನು.
- 11ತನ್ನನ್ನು ಹಿಡಿದುಕೊಡುವ ವನು ಯಾರೆಂದು ಆತನು ತಿಳಿದಿದ್ದರಿಂದ--ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ ಎಂದು ಹೇಳಿದನು.
- 12ಆತನು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಉಡುಪುಗಳನ್ನು ಹಾಕಿಕೊಂಡು ತಿರಿಗಿ ಕೂತು ಕೊಂಡ ಮೇಲೆ ಅವರಿಗೆ--ನಾನು ನಿಮಗೆ ಮಾಡಿದ್ದು ಏನೆಂದು ತಿಳಿಯಿತೋ?
Cross references
- John 15:3 ಯೋಹಾನನು 15:3ನಾನು ನಿಮಗೆ ಹೇಳಿದ ಮಾತಿನ ದೆಸೆಯಿಂದ ನೀವು ಈಗ ಶುದ್ಧರಾಗಿದ್ದೀರಿ.
- 2 Corinthians 7:1 2 ಕೊರಿಂಥದವರಿಗೆ 7:1ಅತಿ ಪ್ರಿಯರೇ, ಈ ವಾಗ್ದಾನಗಳು ನಮಗಿರುವದರಿಂದ ನಾವು ಶರೀರಾತ್ಮಗಳ ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಲ್ಲಿ ಪವಿತ್ರತ್ವನ್ನು ಸಿದ್ದಿಗೆ ತರೋಣ.
- 2 Corinthians 5:17 2 ಕೊರಿಂಥದವರಿಗೆ 5:17ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿಯಾಗಿದ್ದಾನೆ. ಹಳೆಯವುಗಳು ಅಳಿದುಹೋದವು; ಇಗೋ, ಎಲ್ಲವೂ ನೂತನವಾದವು.
- Numbers 19:19–21 ಅರಣ್ಯಕಾಂಡ 19:19–21ಪವಿತ್ರನಾ ದವನು ಅಪವಿತ್ರನಾದವನ ಮೇಲೆ ಮೂರನೇ ದಿವಸ ದಲ್ಲಿಯೂ ಏಳನೇ ದಿವಸದಲ್ಲಿಯೂ ಚಿಮುಕಿಸಲಿ. ಏಳನೇ ದಿವಸದಲ್ಲಿ ಅವನು ತನ್ನನ್ನು ಪವಿತ್ರಮಾಡಿ ಕೊಂಡು ತನ್ನ ವಸ್ತ್ರಗಳನ್ನು ಒಗೆದುಕೊಂಡು ಅವನು ಸ್ನಾನಮಾಡಿ ಸಾಯಂಕಾಲದಲ್ಲಿ ಪವಿತ್ರನಾಗುವನು. ಆದರೆ ಅಪವಿತ್ರನಾಗಿದ್ದು ತನ್ನನ್ನು ಶುದ್ಧಪಡಿಸಿ ಕೊಳ್ಳದವನು ಸಭೆಯ ಮಧ್ಯದಿಂದ ತೆಗೆದು ಹಾಕಲ್ಪ ಡಲಿ; ಅವನು ಕರ್ತನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿದ್ದಾನೆ; ಪ್ರತ್ಯೇಕಿಸಲ್ಪಟ್ಟ ನೀರು ಅವನ ಮೇಲೆ ಚಿಮುಕಿಸಲ್ಪಡಲಿಲ್ಲ; ಅವನು ಅಪವಿತ್ರನೇ. ಇದು ಅವರಿಗೆ ನಿತ್ಯ ಕಟ್ಟಳೆಯಾಗಿರಬೇಕು; ಪ್ರತ್ಯೇಕಿಸಲ್ಪಟ್ಟ ನೀರನ್ನು ಚಿಮುಕಿಸುವವನು ತನ್ನ ವಸ್ತ್ರ ಗಳನ್ನು ಒಗೆಯಬೇಕು; ಪ್ರತ್ಯೇಕಿಸಲ್ಪಟ್ಟ ನೀರನ್ನು ಮುಟ್ಟಿದವನು ಸಾಯಂಕಾಲದ ವರೆಗೆ ಅಪವಿತ್ರನಾಗಿರ ಬೇಕು.ಇದಲ್ಲದೆ ಅಪವಿತ್ರನಾದವನು ಮುಟ್ಟು ವಂಥದ್ದೆಲ್ಲಾ ಅಪವಿತ್ರವಾಗುವದು; ಅವನನ್ನು ಮುಟ್ಟಿ ದವನು ಸಾಯಂಕಾಲದ ವರೆಗೆ ಅಪವಿತ್ರನಾಗಿರಬೇಕು ಎಂದು ಹೇಳಿದನು.
- Ephesians 5:26–27 ಎಫೆಸದವರಿಗೆ 5:26–27ಆತನು ಅದನ್ನು ವಾಕ್ಯವೆಂಬ ನೀರಿನಿಂದ ತೊಳೆದು ಪ್ರತಿಷ್ಠಿಸಿ ಶುದ್ಧ ಮಾಡಿದ್ದಲ್ಲದೆ ಅದನ್ನು ಕಳಂಕ ಸುಕ್ಕು ಇಂಥಾದ್ದು ಯಾವದೂ ಇಲ್ಲದೆ ಪರಿಶುದ್ಧವೂ ದೋಷವಿಲ್ಲದ್ದೂ ಆಗಿರುವ ಮಹಿಮೆಯುಳ್ಳ ಸಭೆಯ ನ್ನಾಗಿ ತನಗೆ ತಾನೇ ಸಮರ್ಪಿಸಿಕೊಳ್ಳಬೇಕೆಂದಿದ್ದಾನೆ.
- Leviticus 17:15–16 ಯಾಜಕಕಾಂಡ 17:15–16ನಿಮ್ಮ ದೇಶದವನಾಗಲಿ ಪರಕೀಯನಾಗಲಿ ತನ್ನ ಷ್ಟಕ್ಕೆ ತಾನೇ ಸತ್ತುಹೋದದ್ದನ್ನು ಇಲ್ಲವೆ ಮೃಗಗಳಿಂದ ಹರಿಯಲ್ಪಟ್ಟಿರುವದನ್ನು ತಿನ್ನುವ ಪ್ರತಿಯೊಬ್ಬನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡ ಬೇಕು. ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರ ಬೇಕು, ತರುವಾಯ ಅವನು ಶುದ್ಧನಾಗಿರುವನು.ಆದರೆ ಅವನು ಅವುಗಳನ್ನು ಒಗೆದುಕೊಳ್ಳದೆ ಇದ್ದರೆ ಇಲ್ಲವೆ ತಾನು ಸ್ನಾನಮಾಡದಿದ್ದರೆ ತನ್ನ ಅಪರಾಧವನ್ನು ತಾನೇ ಹೊತ್ತುಕೊಳ್ಳಬೇಕು. ಆದರೆ ಅವನು ಅವುಗಳನ್ನು ಒಗೆದುಕೊಳ್ಳದೆ ಇದ್ದರೆ ಇಲ್ಲವೆ ತಾನು ಸ್ನಾನಮಾಡದಿದ್ದರೆ ತನ್ನ ಅಪರಾಧವನ್ನು ತಾನೇ ಹೊತ್ತುಕೊಳ್ಳಬೇಕು.
- Numbers 19:12–13 ಅರಣ್ಯಕಾಂಡ 19:12–13ಅವನು ಇದ ರಿಂದ ಮೂರನೇ ದಿವಸದಲ್ಲಿ ತನ್ನನ್ನು ಶುದ್ಧೀಕರಿಸಿ ಕೊಂಡು ಏಳನೇ ದಿವಸದಲ್ಲಿ ಶುದ್ಧನಾಗಬೇಕು; ಆದರೆ ಅವನು ಮೂರನೇ ದಿವಸದಲ್ಲಿ ತನ್ನನ್ನು ಶುದ್ಧಮಾಡಿ ಕೊಳ್ಳದಿದ್ದರೆ ಏಳನೇ ದಿವಸದಲ್ಲಿ ಶುದ್ಧನಾಗಲಾರನು. ಸತ್ತ ಮನುಷ್ಯನ ಹೆಣವನ್ನು ಮುಟ್ಟಿ ಶುದ್ಧಮಾಡಿ ಕೊಳ್ಳದ ಯಾವನಾದರೂ ಕರ್ತನ ಗುಡಾರವನ್ನು ಹೊಲೆಮಾಡುತ್ತಾನೆ; ಅವನು ಇಸ್ರಾಯೇಲಿನವರೊ ಳಗಿಂದ ತೆಗೆದುಹಾಕಲ್ಪಡಲಿ; ಪ್ರತ್ಯೇಕಿಸಲ್ಪಟ್ಟ ನೀರು ಅವನ ಮೇಲೆ ಚೆಲ್ಲಲ್ಪಡದ ಕಾರಣ ಅಶುದ್ಧನಾಗಿದ್ದಾನೆ; ಅವನ ಅಶುದ್ಧತ್ವವು ಇನ್ನೂ ಅವನ ಮೇಲೆ ಇದೆ.
- Numbers 19:7–8 ಅರಣ್ಯಕಾಂಡ 19:7–8ಆಗ ಯಾಜಕನು ತನ್ನ ವಸ್ತ್ರಗಳನ್ನು ಒಗೆದುಕೊಂಡು ತನ್ನ ಶರೀರವನ್ನು ನೀರಿನಲ್ಲಿ ತೊಳೆಯ ಬೇಕು; ಆಮೇಲೆ ಪಾಳೆಯದೊಳಗೆ ಬರಬೇಕು. ಯಾಜ ಕನು ಸಾಯಂಕಾಲದ ವರೆಗೆ ಅಶುದ್ಧನಾಗಿರುವನು. ಅದನ್ನು ಸುಟ್ಟವನೂ ತನ್ನ ಶರೀರವನ್ನು ನೀರಿನಲ್ಲಿ ತೊಳೆದುಕೊಂಡು ವಸ್ತ್ರಗಳನ್ನು ಒಗೆದುಕೊಳ್ಳಬೇಕು. ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
- Romans 7:20–23 ರೋಮಾಪುರದವರಿಗೆ 7:20–23ಇಚ್ಛಿಸದಿರುವದನ್ನು ನಾನು ಮಾಡಿದರೆ ಅದನ್ನು ಮಾಡಿದವನು ಇನ್ನು ನಾನಲ್ಲ. ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತು. ಹೀಗಿರಲಾಗಿ ಒಳ್ಳೆಯದನ್ನು ಮಾಡ ಲಿಚ್ಛಿಸುವ ನನಗೆ ಕೆಟ್ಟದ್ದಾಗಿರುವ ನಿಯಮವು ನನ್ನಲ್ಲಿ ಕಾಣಬರುತ್ತದೆ. ಹೀಗಿದ್ದಾಗ್ಯೂ ಒಳಮನುಷ್ಯನಿಗನು ಗುಣವಾಗಿ ದೇವರ ನಿಯಮದಲ್ಲಿ ಆನಂದಪಡುವವ ನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಬೇರೊಂದು ನಿಯಮವುಂಟೆಂದು ನಾನು ನೋಡುತ್ತೇನೆ; ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರೋಧವಾಗಿ ಕಾದಾಡಿ ನನ್ನನ್ನು ಸೆರೆ ಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದ್ದಾಗಿದೆ.
- Leviticus 16:26 ಯಾಜಕಕಾಂಡ 16:26ಪಾಪ ಪಶುವಿಗಾಗಿ ಆಡನ್ನು ಹೋಗಲು ಬಿಟ್ಟ ವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ತನ್ನ ಶರೀರ ವನ್ನು ನೀರಿನಲ್ಲಿ ತೊಳೆದುಕೊಂಡ ಮೇಲೆ ಅವನು ಪಾಳೆಯದೊಳಕ್ಕೆ ಬರಬೇಕು.
- 2 Corinthians 5:21 2 ಕೊರಿಂಥದವರಿಗೆ 5:21ನಾವು ಆತನಲ್ಲಿ ದೇವರ ನೀತಿಯಾಗುವಂತೆ ದೇವರು ಪಾಪವನ್ನರಿಯ ಆತನನ್ನು ನಮಗೋಸ್ಕರ ಪಾಪವಾಗ ಮಾಡಿದನು.
- Ephesians 4:22–24 ಎಫೆಸದವರಿಗೆ 4:22–24ಯೇಸುವಿನಲ್ಲಿರುವ ಸತ್ಯೋಪದೇಶವು ಯಾವದೆಂದರೆ--ನೀವು ನಿಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವ ವನ್ನು ತೆಗೆದು ಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟು ಹೋಗುವಂಥದು. ನೀವು ನಿಮ್ಮ ಮನಸ್ಸಿನಭಾವದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ನೀತಿಯಲ್ಲಿಯೂ ನಿಜವಾದ ಪರಿಶುದ್ಧತೆಯಲ್ಲಿಯೂ ನಿರ್ಮಿಸಲ್ಪಟ್ಟಿದೆ.