John · chapter 13 · verse 25
John 13:25 in Kannada
ತರುವಾಯ ಅವನು ಯೇಸುವಿನ ಎದೆಯಮೇಲೆ ಒರಗಿಕೊಂಡು--ಕರ್ತನೇ, ಅವನು ಯಾರು ಎಂದು ಆತನನ್ನು ಕೇಳಿದನು.
Taruvaaya avanu yesuvina edeyamele oragikondu--kartane, avanu yaaru endu aatanannu kelidanu.
John 13:25 in English
- King James Version (KJV)
- He then lying on Jesus’ breast saith unto him, Lord, who is it?
- World English Bible (WEB)
- He, leaning back, as he was, on Jesus’ chest, asked him, “Lord, who is it?”
- American Standard Version (ASV)
- He leaning back, as he was, on Jesus’ breast saith unto him, Lord, who is it?
- Bible in Basic English (BBE)
- He, then, resting his head on Jesus' breast, said to him, Lord, who is it?
- Darby Translation (DBY)
- But he, leaning on the breast of Jesus, says to him, Lord, who is it?
- Webster's Bible (WBS)
- He then lying on Jesus' breast, saith to him, Lord, who is it?
- Young's Literal Translation (YLT)
- and that one having leant back on the breast of Jesus, respondeth to him, 'Sir, who is it?'
Read in context
- 23ಶಿಷ್ಯ ರಲ್ಲಿ ಯೇಸು ಪ್ರೀತಿಸಿದ ಒಬ್ಬನು ಆತನ ಎದೆಯ ಮೇಲೆ ಒರಗಿಕೊಂಡಿದ್ದನು.
- 24ಆದದರಿಂದ ಸೀಮೋನ ಪೇತ್ರನು ಅವನಿಗೆ ಸನ್ನೆ ಮಾಡಿ ಆತನು ಯಾರ ವಿಷಯವಾಗಿ ಮಾತನಾಡಿದನೆಂದು ಕೇಳಿದನು.
- 25ತರುವಾಯ ಅವನು ಯೇಸುವಿನ ಎದೆಯಮೇಲೆ ಒರಗಿಕೊಂಡು--ಕರ್ತನೇ, ಅವನು ಯಾರು ಎಂದು ಆತನನ್ನು ಕೇಳಿದನು.
- 26ಅದಕ್ಕೆ ಯೇಸು--ನಾನು ರೊಟ್ಟಿಯ ತುಂಡನ್ನು ಅದ್ದಿ ಯಾವನಿಗೆ ಕೊಡುತ್ತೇನೋ ಅವನೇ ಎಂದು ಉತ್ತರ ಕೊಟ್ಟನು. ಆ ರೊಟ್ಟಿಯ ತುಂಡನ್ನು ಅದ್ದಿ ಆತನು ಸೀಮೋನನ ಮಗನಾದ ಯೂದ ಇಸ್ಕರಿಯೋತನಿಗೆ ಕೊಟ್ಟನು.
- 27ರೊಟ್ಟಿಯ ತುಂಡನ್ನು ತಕ್ಕೊಂಡ ಮೇಲೆ ಸೈತಾನನು ಅವನೊಳಗೆ ಹೊಕ್ಕನು. ಆಗ ಯೇಸು ಅವನಿಗೆ--ನೀನು ಮಾಡುವ ದನ್ನು ಬೇಗನೆ ಮಾಡು ಎಂದು ಹೇಳಿದನು.
Cross references
- John 21:20 ಯೋಹಾನನು 21:20ಊಟದಲ್ಲಿ ಆತನ ಎದೆಗೆ ಒರಗಿಕೊಂಡು-- ಕರ್ತನೇ, ನಿನ್ನನ್ನು ಹಿಡುಕೊಡುವವನು ಯಾರು ಎಂದು ಕೇಳಿದಂಥ ಮತ್ತು ಯೇಸು ಪ್ರೀತಿಸಿದಂಥ ಶಿಷ್ಯನು ಹಿಂದೆ ಬರುವದನ್ನು ಪೇತ್ರನು ಹಿಂತಿರುಗಿ ನೋಡಿ
- Esther 7:5 ಎಸ್ತೇರಳು 7:5ಆಗ ಅರಸ ನಾದ ಅಹಷ್ವೇರೋಷನು--ರಾಣಿಯಾದ ಎಸ್ತೇರಳಿಗೆ ಪ್ರತ್ಯುತ್ತರವಾಗಿ ಈ ಪ್ರಕಾರ ಮಾಡಲು ತನ್ನ ಹೃದಯ ತುಂಬಿಕೊಂಡವನು ಯಾರು? ಅವನು ಎಲ್ಲಿ ಅಂದನು.
- Genesis 44:4–12 ಆದಿಕಾಂಡ 44:4–12ಅವರು ಪಟ್ಟಣವನ್ನು ಬಿಟ್ಟು ದೂರ ಹೋಗುವದಕ್ಕಿಂತ ಮುಂಚೆ ಯೋಸೇಫನು ಮನೆಯ ಉಗ್ರಾಣಿಕನಿಗೆ--ಎದ್ದು ಆ ಮನುಷ್ಯರ ಹಿಂದೆ ಹೋಗಿ, ಅವರು ಸಿಕ್ಕಿದಾಗ--ನೀವು ಒಳ್ಳೆಯದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಯಾಕೆ ಮಾಡಿದಿರಿ? ಆ ಪಾತ್ರೆಯು ನನ್ನ ಒಡೆಯನು ಕುಡಿಯುವ ಪಾತ್ರೆಯಲ್ಲವೋ? ಅದರಿಂದ ನಿಜವಾ ಗಿಯೂ ಅವನು ದೈವೋಕ್ತಿಯನ್ನು ಹೇಳುವನಲ್ಲಾ? ನೀವು ಹೀಗೆ ಮಾಡಿದ್ದು ಕೆಟ್ಟದ್ದಾಗಿದೆ ಎಂದು ಅವರಿಗೆ ಹೇಳು ಅಂದನು. ಅವನು ಅವರನ್ನು ಸಂಧಿಸಿ ಈ ಮಾತುಗಳನ್ನು ಅವರಿಗೆ ಹೇಳಿದನು. ಆಗ ಅವರು ಅವನಿಗೆ--ನಮ್ಮ ಒಡೆಯನು ಯಾಕೆ ಇಂಥಾ ಮಾತುಗಳನ್ನಾಡುತ್ತಾನೆ? ಈ ಪ್ರಕಾರ ಮಾಡುವದು ನಿನ್ನ ದಾಸರಿಗೆ ದೂರವಾಗಿರಲಿ. ಇಗೋ, ನಮ್ಮ ಚೀಲಗಳ ಬಾಯಲ್ಲಿ ನಮಗೆ ಸಿಕ್ಕಿದ ಹಣವನ್ನು ನಿಮಗೆ ಕೊಡುವದಕ್ಕೆ ಕಾನಾನ್ ದೇಶದಿಂದ ತಂದೆವು. ಹೀಗಿರಲು ನಿನ್ನ ಯಜಮಾನನ ಮನೆಯೊಳಗಿಂದ ಬೆಳ್ಳಿ ಬಂಗಾರವನ್ನು ಹೇಗೆ ಕದ್ದುಕೊಂಡೇವು? ಅದು ನಿನ್ನ ದಾಸರಲ್ಲಿ ಯಾರ ಹತ್ತಿರ ಸಿಕ್ಕುವದೋ ಅವನು ಸಾಯಲಿ ಮತ್ತು ನಾವು ಸಹ ನಮ್ಮ ಒಡೆಯನಿಗೆ ದಾಸರಾಗುವೆವು ಅಂದರು. ಆಗ ಅವನು--ಈಗ ನಿಮ್ಮ ಮಾತಿನಂತೆಯೇ ಆಗಲಿ. ಯಾರ ಬಳಿಯಲ್ಲಿ ಅದು ಸಿಕ್ಕುತ್ತದೋ ಅವನು ನನಗೆ ದಾಸನಾಗಿರಲಿ; ಆದರೆ ನೀವು ನಿರಪರಾಧಿಗಳಾಗಿರುವಿರಿ ಅಂದನು. ಅದಕ್ಕೆ ಅವರು ತ್ವರೆಪಟ್ಟು ತಮ್ಮ ತಮ್ಮ ಚೀಲಗಳನ್ನು ನೆಲಕ್ಕೆ ಇಳಿಸಿ ಅವುಗಳನ್ನು ಬಿಚ್ಚಿದರು. ಅವನು ಹಿರಿಯವನ ಮೊದಲು ಗೊಂಡು ಕಿರಿಯವನ ವರೆಗೆ ಶೋಧಿಸಲಾಗಿ ಆ ಪಾತ್ರೆಯು ಬೆನ್ಯಾವಿಾನನ ಚೀಲದಲ್ಲಿ ಸಿಕ್ಕಿತು.