John · chapter 14 · verse 1
John 14:1 in Kannada
ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.
Nimma hrudayavu kalavalagollade irali; neevu devarannu nambiri, nannannoo nambiri.
John 14:1 in English
- King James Version (KJV)
- Let not your heart be troubled: ye believe in God, believe also in me.
- World English Bible (WEB)
- “Don’t let your heart be troubled. Believe in God. Believe also in me.
- American Standard Version (ASV)
- Let not your heart be troubled: believe in God, believe also in me.
- Bible in Basic English (BBE)
- Let not your heart be troubled: have faith in God and have faith in me.
- Darby Translation (DBY)
- Let not your heart be troubled; ye believe on God, believe also on me.
- Webster's Bible (WBS)
- Let not your heart be troubled: ye believe in God, believe also in me.
- Young's Literal Translation (YLT)
- 'Let not your heart be troubled, believe in God, also in me believe;
Read in context
- 1ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ; ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.
- 2ನನ್ನ ತಂದೆಯ ಮನೆಯಲ್ಲಿ ಬಹಳ ಭವನ ಗಳಿವೆ; ಇಲ್ಲದಿದ್ದರೆ ನಾನು ನಿಮಗೆ ಹೇಳುತ್ತಿದ್ದೆನು, ನಾನು ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗು ತ್ತೇನಲ್ಲಾ.
- 3ನಾನು ಹೋಗಿ ನಿಮಗೋಸ್ಕರ ಸ್ಥಳವನ್ನು ಸಿದ್ಧಮಾಡಿ ತಿರಿಗಿ ಬಂದು ನಿಮ್ಮನ್ನು ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಆಗ ನಾನಿರುವಲ್ಲಿ ನೀವು ಸಹ ಇರುವಿರಿ.
Cross references
- Isaiah 26:3 ಯೆಶಾಯ 26:3ದೃಢಮನಸ್ಸುಳ್ಳವನನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವಿ. ಅವನಿಗೆ ನಿನ್ನಲ್ಲಿ ಭರವಸವಿದೆ.
- John 16:22–23 ಯೋಹಾನನು 16:22–23ಆದದರಿಂದ ಈಗ ನಿಮಗೆ ದುಃಖವುಂಟು; ಆದರೆ ನಾನು ನಿಮ್ಮನ್ನು ತಿರಿಗಿ ನೋಡುವೆನು; ಆಗ ನಿಮ್ಮ ಹೃದಯವು ಉಲ್ಲಾಸಿಸುವದು; ನಿಮ್ಮ ಆನಂದವನ್ನು ನಿಮ್ಮಿಂದ ಯಾರೂ ತೆಗೆಯುವದಿಲ್ಲ. ಆ ದಿನದಲ್ಲಿ ನೀವು ನನ್ನನ್ನು ಏನೂ ಕೇಳುವದಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಅದನ್ನು ಆತನು ನಿಮಗೆ ಕೊಡುವನು.
- Isaiah 12:2–3 ಯೆಶಾಯ 12:2–3ಇಗೋ, ದೇವರೇ ನನ್ನ ರಕ್ಷಣೆಯು; ನಾನು ಭರ ವಸವಿಡುವೆನು ಮತ್ತು ಭಯಪಡೆನು; ಕರ್ತನಾದ ಯೆಹೋವನೇ ನನ್ನ ಬಲವೂ ಕೀರ್ತನೆಯೂ ಆತನೇ ನನಗೆ ರಕ್ಷಣೆಯೂ ಆಗಿದ್ದಾನೆ. ಆದದರಿಂದಲೇ ರಕ್ಷಣೆಯೆಂಬ ಬಾವಿಗಳಿಂದ ಆನಂದದೊಡನೆ ನೀವು ನೀರನ್ನು ಸೇದುವಿರಿ.
- 2 Corinthians 12:9–10 2 ಕೊರಿಂಥದವರಿಗೆ 12:9–10ಅದಕ್ಕಾತನು--ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ನನ್ನ ಬಲವು ಪರಿಪೂರ್ಣವಾಗುತ್ತದೆ ಎಂದು ನನಗೆ ಹೇಳಿದನು. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿ ಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾ ವಸ್ಥೆಗಳ ವಿಷಯದಲ್ಲಿಯೇ ಬಹು ಸಂತೋಷವಾಗಿ ಹೆಚ್ಚಳಪಡುವೆನು. ಆದದರಿಂದ ನಾನು ಕ್ರಿಸ್ತನ ನಿಮಿತ್ತ ನಿರ್ಬಲಾವಸ್ಥೆಗಳಲ್ಲಿ ಅವಮಾನಗಳಲ್ಲಿ ಕೊರತೆ ಗಳಲ್ಲಿ ಹಿಂಸೆಗಳಲ್ಲಿ ಇಕ್ಕಟ್ಟುಗಳಲ್ಲಿ ಸಂತೋಷವಾಗಿ ದ್ದೇನೆ; ಯಾಕಂದರೆ ನಾನು ಯಾವಾಗ ನಿರ್ಬಲ ನಾಗಿದ್ದೇನೋ ಅವಾಗಲೇ ಬಲವುಳ್ಳವನಾಗಿದ್ದೇನೆ.
- John 14:27–28 ಯೋಹಾನನು 14:27–28ನಾನು ನಿಮಗೆ ಸಮಾಧಾನವನ್ನು ಬಿಟ್ಟು ಹೋಗುತ್ತೇನೆ, ನನ್ನ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಲ್ಲಿ ನಾನು ನಿಮಗೆ ಕೊಡುವದಿಲ್ಲ, ನಿಮ್ಮ ಹೃದಯವು ಕಳವಳಗೊಳ್ಳ ದಿರಲಿ ಇಲ್ಲವೆ ಅಂಜದಿರಲಿ. ನಾನು ಹೋಗಿ ತಿರಿಗಿ ನಿಮ್ಮ ಬಳಿಗೆ ಬರುವದು ಹೇಗೆ ಎಂದು ನಾನು ನಿಮಗೆ ಹೇಳಿದ್ದನ್ನು ನೀವು ಕೇಳಿದ್ದೀರಿ; ನೀವು ನನ್ನನ್ನು ಪ್ರೀತಿಸಿದ್ದರೆ ನಾನು ನನ್ನ ತಂದೆಯ ಬಳಿಗೆ ಹೊಗುತ್ತೇನೆಂದು ಹೇಳಿದ್ದಕ್ಕೆ ಸಂತೋಷಪಡುತ್ತಿದ್ದಿರಿ; ನನ್ನ ತಂದೆಯು ನನಗಿಂತಲೂ ದೊಡ್ಡವನಾಗಿದ್ದಾನೆ.
- Psalm 42:5–6 ಕೀರ್ತನೆಗಳು 42:5–6ನನ್ನ ಪ್ರಾಣವೇ,ನೀನು ಕುಗ್ಗಿಹೋಗಿರುವದೇನು? ನನ್ನಲ್ಲಿ ನೀನು ಯಾಕೆ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು; ನಾನು ಆತನ ಸಹಾಯಕ್ಕಾಗಿ ಆತನನ್ನು ಇನ್ನೂ ಕೊಂಡಾಡುವೆನು. ಓ ನನ್ನ ದೇವರೇ, ನನ್ನ ಪ್ರಾಣವು ನನ್ನಲ್ಲಿ ಕುಗ್ಗು ತ್ತದೆ; ಆದದರಿಂದ ಯೊರ್ದನ್ ಸೀಮೆಯಿಂದಲೂ ಹೆರ್ಮೋನ್ಯರಿಂದಲೂ ಮಿಸಾರ್ ಸಣ್ಣ ಬೆಟ್ಟದಿಂದಲೂ ನಿನ್ನನ್ನು ಜ್ಞಾಪಕಮಾಡಿಕೊಳ್ಳುತ್ತೇನೆ.
- John 6:40 ಯೋಹಾನನು 6:40ನನ್ನನ್ನು ಕಳುಹಿಸದಾತನ ಚಿತ್ತವೇನಂದರೆ, ಮಗನನ್ನು ನೋಡಿ ಆತನ ಮೇಲೆ ನಂಬಿಕೆ ಇಡುವ ಪ್ರತಿಯೊಬ್ಬನು ನಿತ್ಯ ಜೀವವನ್ನು ಹೊಂದುವದೇ; ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು ಎಂದು ಹೇಳಿದನು.
- John 12:44 ಯೋಹಾನನು 12:44ಆಗ ಯೇಸು--ನನ್ನನ್ನು ನಂಬುವವನು ನನ್ನನ್ನಲ್ಲ. ನನ್ನನ್ನು ಕಳುಹಿಸಿಕೊಟ್ಟಾತನನ್ನೇ ನಂಬಿದ್ದಾನೆ.
- Psalm 43:5 ಕೀರ್ತನೆಗಳು 43:5ಓ ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ಇನ್ನೂ ಕೊಂಡಾಡುವೆನು.
- 1 Peter 1:21 1 ಪೇತ್ರನು 1:21ಹೀಗಿರ ಲಾಗಿ ನಿಮ್ಮ ನಂಬಿಕೆಯೂ ನಿರೀಕ್ಷೆಯೂ ದೇವರಲ್ಲಿಯೇ ನೆಲೆಗೊಂಡಿರುವಂತೆ ಆತನನ್ನು ಸತ್ತವರೊಳಗಿಂದ ಎಬ್ಬಿಸಿ ಆತನಿಗೆ ಪ್ರಭಾವವನ್ನು ಕೊಟ್ಟ ದೇವರಲ್ಲಿ ನೀವು ಆತನ ಮೂಲಕ ವಿಶ್ವಾಸವಿಟ್ಟವರಾದಿರಷ್ಟೆ.
- Isaiah 43:1–2 ಯೆಶಾಯ 43:1–2ಈಗಲಾದರೋ ಓ ಯಾಕೋಬೇ, ಇಸ್ರಾಯೇಲೇ ನಿನ್ನನ್ನು ಸೃಷ್ಟಿಸಿದಾತನೂ ರೂಪಿಸಿದಾತನೂ ಆದ ಕರ್ತನು ಇಂತೆನ್ನುತ್ತಾನೆ--ಹೆದರಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ ನಿನ್ನ ಹೆಸರು ಹಿಡಿದು ಕರೆದೆನಲ್ಲಾ; ನೀನು ನನ್ನವನೇ. ನೀನು ಜಲರಾಶಿಯನ್ನು ದಾಟಿ ಹೋಗುವಾಗ ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ ಅವು ನಿನ್ನನ್ನು ಮುಳುಗಿಸುವದಿಲ್ಲ; ಬೆಂಕಿಯಲ್ಲಿ ನೀನು ನಡೆಯುವಾಗ ಸುಡಲ್ಪಡುವದಿಲ್ಲ; ಇಲ್ಲವೆ ಜ್ವಾಲೆಯು ನಿನ್ನನ್ನು ದಹಿಸದು.
- Ephesians 3:14–17 ಎಫೆಸದವರಿಗೆ 3:14–17ಈ ಕಾರಣದಿಂದ ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯ ಮುಂದೆ ನನ್ನ ಮೊಣ ಕಾಲೂರಿ ಯಾವ ತಂದೆಯ ಹೆಸರನ್ನು ಪರಲೋಕ ಭೂಲೋಕಗಳಲ್ಲಿರುವ ಕುಟುಂಬವೆಲ್ಲಾ ತೆಗೆದುಕೊಳ್ಳು ತ್ತದೋ, ಆ ತಂದೆಯು ನಿಮಗೆ ತನ್ನ ಮಹಿಮೆಯ ಐಶ್ವರ್ಯಕ್ಕನುಸಾರವಾಗಿ ಆತನ ಆತ್ಮನ ಮೂಲಕ ಆಂತರ್ಯದಲ್ಲಿ ವಿಶೇಷ ಬಲವನ್ನು ಅನುಗ್ರಹಿಸುವ ಹಾಗೆಯೂ ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ನಂಬಿಕೆಯ ಮೂಲಕ ವಾಸಿಸುವಂತೆಯೂ ನೀವು ಪ್ರೀತಿಯಲಿ ಬೇರೂರಿ ನೆಲೆಗೊಂಡು ನಿಂತು