John · chapter 14 · verse 28
John 14:28 in Kannada
ನಾನು ಹೋಗಿ ತಿರಿಗಿ ನಿಮ್ಮ ಬಳಿಗೆ ಬರುವದು ಹೇಗೆ ಎಂದು ನಾನು ನಿಮಗೆ ಹೇಳಿದ್ದನ್ನು ನೀವು ಕೇಳಿದ್ದೀರಿ; ನೀವು ನನ್ನನ್ನು ಪ್ರೀತಿಸಿದ್ದರೆ ನಾನು ನನ್ನ ತಂದೆಯ ಬಳಿಗೆ ಹೊಗುತ್ತೇನೆಂದು ಹೇಳಿದ್ದಕ್ಕೆ ಸಂತೋಷಪಡುತ್ತಿದ್ದಿರಿ; ನನ್ನ ತಂದೆಯು ನನಗಿಂತಲೂ ದೊಡ್ಡವನಾಗಿದ್ದಾನೆ.
Naanu hogi tirigi nimma balige baruvadu hege endu naanu nimage heliddannu neevu keliddeeri; neevu nannannu preetisiddare naanu nanna tandeya balige hoguttenendu heliddakke santoshapaduttiddiri; nanna tandeyu nanagintaloo doddavanaagiddaane.
John 14:28 in English
- King James Version (KJV)
- Ye have heard how I said unto you, I go away, and come [again] unto you. If ye loved me, ye would rejoice, because I said, I go unto the Father: for my Father is greater than I.
- World English Bible (WEB)
- You heard how I told you, ‘I am going away, and I will come back to you.’ If you loved me, you would have rejoiced because I said ‘I am going to my Father;’ for the Father is greater than I.
- American Standard Version (ASV)
- Ye heard how I said to you, I go away, and I come unto you. If ye loved me, ye would have rejoiced, because I go unto the Father: for the Father is greater than I.
- Bible in Basic English (BBE)
- Keep in mind how I said to you, I go away and come to you again. If you had love for me you would be glad, because I am going to the Father: for the Father is greater than I.
- Darby Translation (DBY)
- Ye have heard that I have said unto you, I go away and I am coming to you. If ye loved me ye would rejoice that I go to the Father, for [my] Father is greater than I.
- Webster's Bible (WBS)
- Ye have heard that I said to you, I go away, and come [again] to you. If ye loved me, ye would rejoice, because I said, I go to the Father: for my Father is greater than I.
- Young's Literal Translation (YLT)
- ye heard that I said to you — I go away, and I come unto you; if ye did love me, ye would have rejoiced that I said — I go on to the Father, because my Father is greater than I.
Read in context
- 26ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪರಿಶುದ್ಧಾತ್ಮನೆಂಬ ಆದರಿಕನೇ ಎಲ್ಲವುಗಳನ್ನು ನಿಮಗೆ ಬೋಧಿಸಿ ನಾನು ನಿಮಗೆ ಹೇಳಿದವುಗಳನ್ನೆಲ್ಲಾ ನಿಮ್ಮ ನೆನಪಿಗೆ ತರುವನು.
- 27ನಾನು ನಿಮಗೆ ಸಮಾಧಾನವನ್ನು ಬಿಟ್ಟು ಹೋಗುತ್ತೇನೆ, ನನ್ನ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಲ್ಲಿ ನಾನು ನಿಮಗೆ ಕೊಡುವದಿಲ್ಲ, ನಿಮ್ಮ ಹೃದಯವು ಕಳವಳಗೊಳ್ಳ ದಿರಲಿ ಇಲ್ಲವೆ ಅಂಜದಿರಲಿ.
- 28ನಾನು ಹೋಗಿ ತಿರಿಗಿ ನಿಮ್ಮ ಬಳಿಗೆ ಬರುವದು ಹೇಗೆ ಎಂದು ನಾನು ನಿಮಗೆ ಹೇಳಿದ್ದನ್ನು ನೀವು ಕೇಳಿದ್ದೀರಿ; ನೀವು ನನ್ನನ್ನು ಪ್ರೀತಿಸಿದ್ದರೆ ನಾನು ನನ್ನ ತಂದೆಯ ಬಳಿಗೆ ಹೊಗುತ್ತೇನೆಂದು ಹೇಳಿದ್ದಕ್ಕೆ ಸಂತೋಷಪಡುತ್ತಿದ್ದಿರಿ; ನನ್ನ ತಂದೆಯು ನನಗಿಂತಲೂ ದೊಡ್ಡವನಾಗಿದ್ದಾನೆ.
- 29ಅದು ನಡೆಯುವಾಗ ನೀವು ನಂಬುವಂತೆ ನಡೆಯು ವದಕ್ಕಿಂತ ಮುಂಚೆಯೇ ಈಗ ನಾನು ನಿಮಗೆ ಹೇಳಿದ್ದೇನೆ.
- 30ಇನ್ನು ಮೇಲೆ ನಾನು ನಿಮ್ಮೊಂದಿಗೆ ಬಹಳವಾಗಿ ಮಾತನಾಡುವದಿಲ್ಲ; ಯಾಕಂದರೆ ಇಹ ಲೋಕದ ಅಧಿಪತಿಯು ಬರುತ್ತಾನೆ. ಅವನಿಗೆ ಸಂಬಂಧಪಟ್ಟದ್ದು ನನ್ನಲ್ಲಿ ಏನೂ ಇಲ್ಲ.ನಾನು ತಂದೆಯನ್ನು ಪ್ರೀತಿಮಾಡುತ್ತೇನೆಂದು ಲೋಕವು ತಿಳಿಯುವ ಹಾಗೆ ತಂದೆಯು ನನಗೆ ಆಜ್ಞೆ ಕೊಟ್ಟಂತೆಯೇ ನಾನು ಮಾಡುತ್ತೇನೆ. ಏಳಿರಿ, ನಾವು ಇಲ್ಲಿಂದ ಹೋಗೋಣ ಅಂದನು.
Cross references
- John 10:29–30 ಯೋಹಾನನು 10:29–30ಅವುಗಳನ್ನು ನನಗೆ ಕೊಟ್ಟ ನನ್ನ ತಂದೆಯು ಎಲ್ಲರಿಗಿಂತಲೂ ದೊಡ್ಡವನು; ನನ್ನ ತಂದೆಯ ಕೈಯೊಳ ಗಿಂದ ಅವುಗಳನ್ನು ಯಾವನೂ ಕಸಕೊಳ್ಳಲಾರನು. ನಾನು ಮತ್ತು ನನ್ನ ತಂದೆಯು ಒಂದಾಗಿದ್ದೇವೆ ಎಂದು ಉತ್ತರಕೊಟ್ಟನು.
- 1 Corinthians 15:24–28 1 ಕೊರಿಂಥದವರಿಗೆ 15:24–28ಆಮೇಲೆ ಆತನು ಬೇರೆ ಎಲ್ಲಾ ದೊರೆತನವನ್ನೂ ಎಲ್ಲಾ ಅಧಿಕಾರವನ್ನೂ ಬಲವನ್ನೂ ನಿವೃತ್ತಿಮಾಡಿ ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿ ಕೊಡುವಾಗ ಸಮಾಪ್ತಿ ಯಾಗುವದು. ಯಾಕಂದರೆ ತಾನು ಎಲ್ಲಾ ವಿರೋಧಿ ಗಳನ್ನು ತನ್ನ ಪಾದಗಳ ಕೆಳಗೆ ಹಾಕುವ ತನಕ ಆತನು ಆಳುವದು ಅವಶ್ಯ. ನಾಶವಾಗಲಿರುವ ಕಡೇ ಶತ್ರುವು ಮರಣ. ದೇವರು ಸಮಸ್ತವನ್ನೂ ಕ್ರಿಸ್ತನ ಪಾದಗಳ ಕೆಳಗೆ ಹಾಕಿದ್ದಾನೆ. ಸಮಸ್ತವೂ ಆತನಿಗೆ ಅಧೀನ ಮಾಡಲ್ಪಟ್ಟಿದೆ ಎಂದು ಹೇಳುವಾಗ ಸಮಸ್ತವನ್ನು ಅಧೀನ ಮಾಡಿದಾತನು ಅದರಲ್ಲಿ ಸೇರಲಿಲ್ಲವೆಂಬದು ಸ್ಪಷ್ಟವಾಗಿದೆ. ಸಮಸ್ತವೂ ಆತನಿಗೆ ಅಧೀನವಾದ ಮೇಲೆ ಮಗನು ಸಹ ಸಮಸ್ತವನ್ನೂ ತನಗೆ ಅಧೀನ ಮಾಡಿಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗಿರುವನು.
- 1 Corinthians 11:3 1 ಕೊರಿಂಥದವರಿಗೆ 11:3ಕಟ್ಟಳೆಗಳನ್ನು ಅನುಸರಿಸಿ ನಡೆಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.
- Philippians 2:6–11 ಫಿಲಿಪ್ಪಿಯವರಿಗೆ 2:6–11ಆತನು ದೇವಸ್ವರೂಪ ನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವೆನೆಂದಿಣಿ ಸದೆ ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡಾಗ ಮನುಷ್ಯರ ಹೋಲಿಕೆ ಯಲ್ಲಿ ಮಾಡಲ್ಪಟ್ಟನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಾಗ ತನ್ನನ್ನು ತಗ್ಗಿಸಿ ಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣ ವನ್ನಾದರೂ ಹೊಂದುವಷ್ಟು ವಿಧೇಯನಾದನು. ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತವಾಗಿ ಏರಿಸಿ ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತವಾಗಿ ಏರಿಸಿ ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ತಂದೆಯಾದ ದೇವರ ಮಹಿಮೆಗಾಗಿ ಯೇಸು ಕ್ರಿಸ್ತನು ಕರ್ತನೆಂದು ಪ್ರತಿಯೊಂದು ನಾಲಿಗೆಯೂ ಅರಿಕೆ ಮಾಡುವದು.
- Hebrews 2:9–15 ಇಬ್ರಿಯರಿಗೆ 2:9–15ಆದರೂ ದೂತರಿಗಿಂತ ಸ್ವಲ್ಪ ಕಡಿಮೆಯಾಗಿ ಮಾಡಲ್ಪಟ್ಟ ಒಬ್ಬಾತನು ಅಂದರೆ ಯೇಸುವು, ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿ ಹೊಂದಿರುವದನ್ನು ನಾವು ನೋಡುತ್ತೇವೆ; ಆತನು ಮೃತಪಟ್ಟದ್ದರಿಂದಲೇ ಮಾನ ಪ್ರಭಾವಗಳನ್ನು ಹೊಂದಿದನು; ಆತನು ದೇವರ ಕೃಪೆ ಯಿಂದ ಎಲ್ಲರಿಗೋಸ್ಕರ ಮರ ಸಮಸ್ತವು ಯಾವಾತನಿಗೋಸ್ಕರವೂ ಯಾವಾತನಿಂದಲೂ ಉಂಟಾಯಿತೋ ಆತನು ಬಹುಮಂದಿ ಪುತ್ರರನ್ನು ಪ್ರಭಾವಕ್ಕೆ ಸೇರಿಸುವಲ್ಲಿ ಅವರ ರಕ್ಷಣಾ ನಾಯಕನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವದು ಆತನಿಗೆ ಯುಕ್ತವಾಗಿತ್ತು. ಯಾಕಂದರೆ ಪವಿತ್ರ ಮಾಡುವಾತನೂ ಪವಿತ್ರರಾದವರೆಲ್ಲರೂ ಒಬ್ಬಾತನಿಗೆ ಸಂಬಂಧಪಟ್ಟವರಾಗಿದ್ದಾರೆ. ಈ ಕಾರಣದಿಂದ ಆತನು ಅವರನ್ನು ಸಹೋದರರೆಂದು ಕರೆಯುವದಕ್ಕೆ ನಾಚಿಕೆ ಪಡದೆ-- ನಿನ್ನ ನಾಮವನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನಗೆ ಸ್ತುತಿ ಪದಗಳನ್ನು ಹಾಡುವೆನು ಎಂತಲೂ ನಾನು ಆತನ ಮೇಲೆ ಭರವಸವಿಡುವೆನು ಎಂತಲೂ ತಿರಿಗಿ--ಇಗೋ, ನಾನೂ ದೇವರು ನನಗೆ ದಯಪಾಲಿಸಿರುವ ಮಕ್ಕಳೂ ಎಂತಲೂ ಹೇಳುತ್ತಾನೆ. ಇದಲ್ಲದೆ ಮಕ್ಕಳು ರಕ್ತಮಾಂಸಗಳಲ್ಲಿ ಪಾಲುಗಾರರಾದದರಿಂದ ಆತನು ಸಹ ಅವರಂತೆಯೇ ಆದನು; ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ನಾಶ ಮಾಡುವದಕ್ಕೂ ಮರಣ ಭಯದ ದೆಸೆಯಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವದಕ್ಕೂ ಅವರಂತೆ ರಕ್ತಮಾಂಸಗಳಲ್ಲಿ ಭಾಗ ವಹಿಸಿದನು.
- John 20:17 ಯೋಹಾನನು 20:17ಯೇಸು ಆಕೆಗೆ--ನನ್ನನ್ನು ಮುಟ್ಟಬೇಡ; ಯಾಕಂದರೆ ನಾನು ಇನ್ನೂ ನನ್ನ ತಂದೆಯ ಬಳಿಗೆ ಏರಿಹೋಗಲಿಲ್ಲ; ಆದರೆ ನೀನು ನನ್ನ ಸಹೋದರರ ಬಳಿಗೆ ಹೋಗಿ ಅವ ರಿಗೆ--ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ನಾನು ಏರಿಹೋಗುತ್ತೇನೆ ಎಂದು ಹೇಳು
- Hebrews 1:2–3 ಇಬ್ರಿಯರಿಗೆ 1:2–3ಈ ಅಂತ್ಯದಿನಗಳಲ್ಲಿ ನಮ್ಮ ಸಂಗಡ ತನ್ನ ಮಗನ ಮುಖಾಂತರ ಮಾತನಾಡಿದ್ದಾನೆ. ಈತನನ್ನು ಎಲ್ಲಕ್ಕೂ ಬಾಧ್ಯನನ್ನಾಗಿ ನೇಮಿಸಿದನು, ಈತನ ಮೂಲಕವೇ ಲೋಕಗಳನ್ನು ಉಂಟು ಮಾಡಿದನು. ಈತನು ದೇವರ ಮಹಿಮೆಯ ಪ್ರಕಾಶವೂ ಆತನ ವ್ಯಕ್ತಿತ್ವದ ಪ್ರತಿರೂಪವೂ ತನ್ನ ಬಲವುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ತೊಳೆದ ಮೇಲೆ ಉನ್ನತದೊಳಗೆ ಮಹೋನ್ನತನ ಬಲ ಗಡೆಯಲ್ಲಿ ಕೂತುಕೊಂಡನು.
- John 13:16 ಯೋಹಾನನು 13:16ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ತನ್ನ ಒಡೆಯನಿಗಿಂತ ಸೇವಕನು ದೊಡ್ಡವನಲ್ಲ; ಇಲ್ಲವೆ ಕಳುಹಿಸಲ್ಪಟ್ಟವನು ಅವನನ್ನು ಕಳುಹಿಸಿದವನಿಗಿಂತ ದೊಡ್ಡವನಲ್ಲ.
- Psalm 47:5–7 ಕೀರ್ತನೆಗಳು 47:5–7ದೇವರು ಮಹಾಧ್ವನಿಯಿಂದ, ಕರ್ತನು ತುತೂ ರಿಯ ಶಬ್ದದಿಂದ, ಮೇಲೆ ಹೋಗಿದ್ದಾನೆ. ದೇವರಿಗೆ ಸ್ತುತಿಗಳನ್ನು ಹಾಡಿರಿ, ಸ್ತುತಿಗಳನ್ನು ಹಾಡಿರಿ; ನಮ್ಮ ಅರಸನಿಗೆ ಸ್ತುತಿಗಳನ್ನು ಹಾಡಿರಿ, ಸ್ತುತಿಗಳನ್ನು ಹಾಡಿರಿ; ದೇವರು ಭೂಮಿಗೆಲ್ಲಾ ಅರಸನು; ತಿಳುವಳಿಕೆಯಿಂದ ಸ್ತುತಿಗಳನ್ನು ಹಾಡಿರಿ.
- John 14:18 ಯೋಹಾನನು 14:18ನಾನು ನಿಮ್ಮನ್ನು ಆದರಣೆಯಿಲ್ಲದೆ ಬಿಡುವದಿಲ್ಲ; ನಿಮ್ಮ ಬಳಿಗೆ ನಾನು ಬರುವೆನು.
- Hebrews 3:1–4 ಇಬ್ರಿಯರಿಗೆ 3:1–4ಆದದರಿಂದ ಪರಿಶುದ್ಧರಾದ ಸಹೋ ದರರೇ, ಪರಲೋಕದ ಕರೆಯುವಿಕೆಯಲ್ಲಿ ಪಾಲುಗಾರರೇ, ನಾವು ಒಪ್ಪಿಕೊಂಡಿರುವ ಅಪೊ ಸ್ತಲನೂ ಮಹಾಯಾಜಕನೂ ಆಗಿರುವ ಕ್ರಿಸ್ತ ಯೇಸುವನ್ನು ಆಲೋಚಿಸಿರಿ. ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತ ನಾಗಿದ್ದಂತೆಯೇ ಈತನೂ ತನ್ನನ್ನು ನೇಮಿಸಿದಾತನಿಗೆ ನಂಬಿಗಸ್ತನಾಗಿದ್ದಾನೆ. ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಗೌರವವಿರುವದರಿಂದ ಮೋಶೆಗಿಂತ ಈತನು (ಕ್ರಿಸ್ತ ಯೇಸು) ಹೆಚ್ಚಾದ ಮಾನಕ್ಕೆ ಯೋಗ್ಯನೆಂದೆಣಿಸ ಲ್ಪಟ್ಟಿದ್ದಾನೆ. ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು; ಆದರೆ ಸಮಸ್ತವನ್ನು ಕಟ್ಟಿದಾತನು ದೇವರೇ.
- John 20:21 ಯೋಹಾನನು 20:21ಯೇಸು ತಿರಿಗಿ ಅವರಿಗೆ--ನಿಮಗೆ ಸಮಾಧಾನ ವಾಗಲಿ; ನನ್ನ ತಂದೆಯು ನನ್ನನ್ನು ಕಳುಹಿಸಿದ ಮೇರೆಗೆ ನಾನೂ ನಿಮ್ಮನ್ನು ಕಳುಹಿಸುತ್ತೇನೆ ಅಂದನು.