John · chapter 14 · verse 18
John 14:18 in Kannada
ನಾನು ನಿಮ್ಮನ್ನು ಆದರಣೆಯಿಲ್ಲದೆ ಬಿಡುವದಿಲ್ಲ; ನಿಮ್ಮ ಬಳಿಗೆ ನಾನು ಬರುವೆನು.
Naanu nimmannu aadaraneyillade biduvadilla; nimma balige naanu baruvenu.
John 14:18 in English
- King James Version (KJV)
- I will not leave you comfortless: I will come to you.
- World English Bible (WEB)
- I will not leave you orphans. I will come to you.
- American Standard Version (ASV)
- I will not leave you desolate: I come unto you.
- Bible in Basic English (BBE)
- I will not let you be without a friend: I am coming to you.
- Darby Translation (DBY)
- I will not leave you orphans, I am coming to you.
- Webster's Bible (WBS)
- I will not leave you comfortless; I will come to you.
- Young's Literal Translation (YLT)
- 'I will not leave you bereaved, I come unto you;
Read in context
- 16ನಾನು ತಂದೆಯನ್ನು ಬೇಡಿ ಕೊಳ್ಳುವೆನು; ಆಗ ಆತನು ನಿಮಗೆ ಬೇರೊಬ್ಬ ಆದರಿ ಕನನ್ನು ಸದಾಕಾಲವೂ ನಿಮ್ಮ ಸಂಗಡ ಇರುವದಕ್ಕೆ ಕೊಡುವನು.
- 17ಆತನು ಸತ್ಯದ ಆತ್ಮನೇ; ಲೋಕವು ಆತನನ್ನು ನೋಡದೆಯೂ ತಿಳಿಯದೆಯೂ ಇರುವದ ರಿಂದ ಆತನನ್ನು ಹೊಂದಲಾರದು. ಆದರೆ ನೀವು ಆತನನ್ನು ಬಲ್ಲಿರಿ. ಯಾಕಂದರೆ ಆತನು ನಿಮ್ಮೊಂದಿಗೆ ವಾಸಿಸುತ್ತಾನೆ ಮತ್ತು ನಿಮ್ಮೊಳಗಿರುವನು.
- 18ನಾನು ನಿಮ್ಮನ್ನು ಆದರಣೆಯಿಲ್ಲದೆ ಬಿಡುವದಿಲ್ಲ; ನಿಮ್ಮ ಬಳಿಗೆ ನಾನು ಬರುವೆನು.
- 19ಇನ್ನು ಸ್ವಲ್ಪ ಕಾಲವಾದ ಮೇಲೆ ಲೋಕವು ನನ್ನನ್ನು ನೋಡುವದಿಲ್ಲ. ಆದರೆ ನೀವು ನನ್ನನ್ನು ನೋಡುವಿರಿ; ನಾನು ಜೀವಿಸುವ ದರಿಂದ ನೀವು ಸಹ ಜೀವಿಸುವಿರಿ.
- 20ನಾನು ನನ್ನ ತಂದೆಯಲ್ಲಿಯೂ ನೀವು ನನ್ನಲ್ಲಿಯೂ ನಾನು ನಿಮ್ಮ ಲ್ಲಿಯೂ ಇರುವೆನೆಂದು ನೀವು ಆ ದಿನದಲ್ಲಿ ತಿಳಿದು ಕೊಳ್ಳುವಿರಿ.
Cross references
- John 14:3 ಯೋಹಾನನು 14:3ನಾನು ಹೋಗಿ ನಿಮಗೋಸ್ಕರ ಸ್ಥಳವನ್ನು ಸಿದ್ಧಮಾಡಿ ತಿರಿಗಿ ಬಂದು ನಿಮ್ಮನ್ನು ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಆಗ ನಾನಿರುವಲ್ಲಿ ನೀವು ಸಹ ಇರುವಿರಿ.
- Psalm 23:4 ಕೀರ್ತನೆಗಳು 23:4ಹೌದು, ನಾನು ಮರಣದ ನೆರಳಿನ ಕಣಿವೆಯಲ್ಲಿ ನಡೆದರೂ ಕೇಡಿಗೆ ಭಯಪಡೆನು; ಯಾಕಂದರೆ ನೀನು ನನ್ನ ಸಂಗಡ ಇದ್ದೀ; ನಿನ್ನ ಕೋಲೂ ದೊಣ್ಣೆಯೂ ನನ್ನನ್ನು ಆದರಿಸುತ್ತವೆ.
- John 14:27–28 ಯೋಹಾನನು 14:27–28ನಾನು ನಿಮಗೆ ಸಮಾಧಾನವನ್ನು ಬಿಟ್ಟು ಹೋಗುತ್ತೇನೆ, ನನ್ನ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಲ್ಲಿ ನಾನು ನಿಮಗೆ ಕೊಡುವದಿಲ್ಲ, ನಿಮ್ಮ ಹೃದಯವು ಕಳವಳಗೊಳ್ಳ ದಿರಲಿ ಇಲ್ಲವೆ ಅಂಜದಿರಲಿ. ನಾನು ಹೋಗಿ ತಿರಿಗಿ ನಿಮ್ಮ ಬಳಿಗೆ ಬರುವದು ಹೇಗೆ ಎಂದು ನಾನು ನಿಮಗೆ ಹೇಳಿದ್ದನ್ನು ನೀವು ಕೇಳಿದ್ದೀರಿ; ನೀವು ನನ್ನನ್ನು ಪ್ರೀತಿಸಿದ್ದರೆ ನಾನು ನನ್ನ ತಂದೆಯ ಬಳಿಗೆ ಹೊಗುತ್ತೇನೆಂದು ಹೇಳಿದ್ದಕ್ಕೆ ಸಂತೋಷಪಡುತ್ತಿದ್ದಿರಿ; ನನ್ನ ತಂದೆಯು ನನಗಿಂತಲೂ ದೊಡ್ಡವನಾಗಿದ್ದಾನೆ.
- John 14:16 ಯೋಹಾನನು 14:16ನಾನು ತಂದೆಯನ್ನು ಬೇಡಿ ಕೊಳ್ಳುವೆನು; ಆಗ ಆತನು ನಿಮಗೆ ಬೇರೊಬ್ಬ ಆದರಿ ಕನನ್ನು ಸದಾಕಾಲವೂ ನಿಮ್ಮ ಸಂಗಡ ಇರುವದಕ್ಕೆ ಕೊಡುವನು.
- Matthew 18:20 ಮತ್ತಾಯನು 18:20ಯಾಕಂದರೆ ಇಬ್ಬರಾಗಲೀ ಮೂವರಾಗಲೀ ನನ್ನ ಹೆಸರಿನಲ್ಲಿ ಎಲ್ಲಿ ಕೂಡಿಬರುತ್ತಾರೋ ಅವರ ಮಧ್ಯ ದಲ್ಲಿ ನಾನು ಇದ್ದೇನೆ ಅಂದನು.
- Matthew 28:20 ಮತ್ತಾಯನು 28:20ಇದಲ್ಲದೆ ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಕೈಕೊಳ್ಳುವ ಹಾಗೆ ಅವರಿಗೆ ಬೋಧಿಸಿರಿ; ಮತ್ತು ಇಗೋ, ಲೋಕಾಂತ್ಯದ ವರೆಗೂ ಯಾವಾಗಲೂ ನಾನು ನಿಮ್ಮ ಸಂಗಡ ಇದ್ದೇನೆ ಅಂದನು. ಆಮೆನ್.
- John 16:33 ಯೋಹಾನನು 16:33ನನ್ನಲ್ಲಿ ನಿಮಗೆ ಸಮಾಧಾನವು ಉಂಟಾಗುವಂತೆ ಇವುಗಳನ್ನು ನಾನು ನಿಮಗೆ ಹೇಳಿದ್ದೇನೆ, ಲೋಕದಲ್ಲಿ ನಿಮಗೆ ಸಂಕಟ ಇರುವದು; ಆದರೆ ಧೈರ್ಯವಾಗಿರ್ರಿ; ನಾನು ಲೋಕ ವನ್ನು ಜಯಿಸಿದ್ದೇನೆ ಅಂದನು.
- Hebrews 2:18 ಇಬ್ರಿಯರಿಗೆ 2:18ತಾನೇ ಶೋಧಿಸಲ್ಪಟ್ಟು ಬಾಧೆ ಯನ್ನು ಅನುಭವಿಸಿರುವದರಿಂದ ಶೋಧಿಸಲ್ಪಡು ವವರಿಗೆ ಸಹಾಯಮಾಡುವದಕ್ಕೆ ಶಕ್ತನಾಗಿದ್ದಾನೆ.
- Psalm 101:2 ಕೀರ್ತನೆಗಳು 101:2ಸಂಪೂರ್ಣವಾದ ಮಾರ್ಗದಲ್ಲಿ ಬುದ್ಧಿ ಯಿಂದ ನಡೆದು ಕೊಳ್ಳುವೆನು; ಯಾವಾಗ ನನ್ನ ಬಳಿಗೆ ಬರುವಿ? ನನ್ನ ಹೃದಯದ ಸಂಪೂರ್ಣತೆಯಿಂದ ನನ್ನ ಮನೆಯೊಳಗೆ ನಡೆದುಕೊಳ್ಳುವೆನು.
- Hosea 6:3 ಹೋಶೇಯ 6:3ನಾವು ಕರ್ತನನ್ನು ತಿಳಿದುಕೊಳ್ಳಲು ಆತನನ್ನು ಹಿಂಬಾ ಲಿಸಿದರೆ ನಾವು ತಿಳಿದುಕೊಳ್ಳುವೆವು; ಅರುಣೋದ ಯದ ಹಾಗೆ ಆತನ ಹೊರಡೋಣವು ಸಿದ್ಧವಾಗಿದೆ; ಆತನು ಮಳೆಯಂತೆಯೂ ಮುಂಗಾರಿನಂತೆಯೂ ಭೂಮಿಗೆ ತಂಪುಮಾಡುವ ಹಿಂಗಾರಿನಂತೆಯೂ ನಮ್ಮ ಬಳಿಗೆ ಬರುವನು.
- Isaiah 51:12 ಯೆಶಾಯ 51:12ನಾನೇ, ನಾನೇ ನಿನ್ನನ್ನು ಆದರಿಸುವವನಾಗಿ ದ್ದೇನೆ; ಹಾಗಾದರೆ ಸಾಯುವ ಮನುಷ್ಯನಿಗೂ ಹುಲ್ಲಿನಂತೆ ಮಾಡಲ್ಪಟ್ಟಿರುವ ನರಪುತ್ರನಿಗೂ ಭಯ ಪಡುವ ನೀನು ಯಾರು?
- 2 Thessalonians 2:16 2 ಥೆಸಲೊನೀಕದವರಿಗೆ 2:16ನಮ್ಮನ್ನು ಪ್ರೀತಿಸಿ ನಮಗೆ ನಿತ್ಯವಾದ ಆದರಣೆಯನ್ನೂ ಉತ್ತಮವಾದ ನಿರೀಕ್ಷೆಯನ್ನೂ ಕೃಪೆಯಿಂದ ಅನುಗ್ರ ಹಿಸಿದ ನಮ ಕರ್ತನಾದ ಯೇಸು ಕ್ರಿಸ್ತನೂ ನಮ್ಮ ತಂದೆಯಾದ ದೇವರೂನಿಮ್ಮ ಹೃದಯಗಳನ್ನು ಸಂತೈಸಿ ಸಕಲ ಸದ್ವಾಕ್ಯದಲ್ಲಿಯೂ ಸತ್ಕಾರ್ಯದಲ್ಲಿಯೂ ದೃಢಪಡಿಸಲಿ.