John · chapter 16 · verse 4
John 16:4 in Kannada
ಆದರೆ ಸಮಯ ಬಂದಾಗ ಇವುಗಳ ವಿಷಯವಾಗಿ ನಾನು ನಿಮಗೆ ಹೇಳಿದ್ದೇನೆಂದು ನೀವು ಜ್ಞಾಪಕಮಾಡಿಕೊಳ್ಳುವಂತೆ ಇವುಗಳನ್ನು ನಿಮಗೆ ಹೇಳಿದ್ದೇನೆ. ನಾನು ನಿಮ್ಮ ಸಂಗಡಲೇ ಇದ್ದದರಿಂದ ಪ್ರಾರಂಭದಲ್ಲಿ ಇವುಗಳನ್ನು ನಿಮಗೆ ಹೇಳಲಿಲ್ಲ.
Aadare samaya bandaaga ivugala vishayavaagi naanu nimage heliddenendu neevu jnyaapakamaadikolluvante ivugalannu nimage heliddene. Naanu nimma sangadale iddadarinda praarambhadalli ivugalannu nimage helalilla.
John 16:4 in English
- King James Version (KJV)
- But these things have I told you, that when the time shall come, ye may remember that I told you of them. And these things I said not unto you at the beginning, because I was with you.
- World English Bible (WEB)
- But I have told you these things so that when the time comes, you may remember that I told you about them. I didn’t tell you these things from the beginning, because I was with you.
- American Standard Version (ASV)
- But these things have I spoken unto you, that when their hour is come, ye may remember them, how that I told you. And these things I said not unto you from the beginning, because I was with you.
- Bible in Basic English (BBE)
- I have said these things to you so that when the time comes, what I have said may come to your mind. I did not say them to you at the first, because then I was still with you.
- Darby Translation (DBY)
- But I have spoken these things to you, that when their hour shall have come, ye may remember them, that I have said [them] unto you. But I did not say these things unto you from [the] beginning, because I was with you.
- Webster's Bible (WBS)
- But these things have I told you, that when the time shall come, ye may remember that I told you of them. And these things I said not to you at the beginning, because I was with you.
- Young's Literal Translation (YLT)
- 'But these things I have spoken to you, that when the hour may come, ye may remember them, that I said [them] to you, and these things to you from the beginning I did not say, because I was with you;
Read in context
- 2ಅವರು ನಿಮ್ಮನ್ನು ಸಭಾಮಂದಿರಗಳಿಂದ ಹೊರಗೆ ಹಾಕುವರು; ಹೌದು, ನಿಮ್ಮನ್ನು ಕೊಲ್ಲುವವನು ದೇವರ ಸೇವೆ ಮಾಡುತ್ತಾನೆಂದು ನೆನಸುವ ಗಳಿಗೆ ಬರುತ್ತದೆ.
- 3ಅವರು ತಂದೆಯನ್ನಾಗಲಿ ಇಲ್ಲವೆ ನನ್ನನ್ನಾ ಗಲಿ ತಿಳಿಯದಿರುವ ಕಾರಣ ಇವೆಲ್ಲವುಗಳನ್ನು ನಿಮಗೆ ಮಾಡುವರು.
- 4ಆದರೆ ಸಮಯ ಬಂದಾಗ ಇವುಗಳ ವಿಷಯವಾಗಿ ನಾನು ನಿಮಗೆ ಹೇಳಿದ್ದೇನೆಂದು ನೀವು ಜ್ಞಾಪಕಮಾಡಿಕೊಳ್ಳುವಂತೆ ಇವುಗಳನ್ನು ನಿಮಗೆ ಹೇಳಿದ್ದೇನೆ. ನಾನು ನಿಮ್ಮ ಸಂಗಡಲೇ ಇದ್ದದರಿಂದ ಪ್ರಾರಂಭದಲ್ಲಿ ಇವುಗಳನ್ನು ನಿಮಗೆ ಹೇಳಲಿಲ್ಲ.
- 5ಆದರೆ ಈಗ ನನ್ನನ್ನು ಕಳುಹಿಸಿದಾತನ ಬಳಿಗೆ ನಾನು ಹೋಗುತ್ತೇನೆ; ನಿಮ್ಮಲ್ಲಿ ಒಬ್ಬನಾದರೂ--ನೀನು ಎಲ್ಲಿಗೆ ಹೋಗುತ್ತೀ ಎಂದು ನನ್ನನ್ನು ಕೇಳುವದಿಲ್ಲ.
- 6ಆದರೆ ಇವುಗಳನ್ನು ನಾನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯದಲ್ಲಿ ದುಃಖವು ತುಂಬಿಯದೆ.
Cross references
- John 14:29 ಯೋಹಾನನು 14:29ಅದು ನಡೆಯುವಾಗ ನೀವು ನಂಬುವಂತೆ ನಡೆಯು ವದಕ್ಕಿಂತ ಮುಂಚೆಯೇ ಈಗ ನಾನು ನಿಮಗೆ ಹೇಳಿದ್ದೇನೆ.
- Mark 13:23 ಮಾರ್ಕನು 13:23ಆದರೆ ನೀವು ಎಚ್ಚರಿಕೆ ತೆಗೆದುಕೊಳ್ಳಿರಿ; ಇಗೋ, ನಾನು ನಿಮಗೆ ಎಲ್ಲವುಗಳನ್ನು ಮುಂದಾಗಿ ಹೇಳಿದ್ದೇನೆ.
- John 13:19 ಯೋಹಾನನು 13:19ಅದು ಆಗುವಾಗ ನಾನೇ ಆತನೆಂದು ನೀವು ನಂಬುವಂತೆ ಅದು ಸಂಭವಿಸುವದಕ್ಕಿಂತ ಮುಂಚೆ ಈಗಲೇ ನಿಮಗೆ ಹೇಳುತ್ತೇನೆ.
- John 17:12–13 ಯೋಹಾನನು 17:12–13ನಾನು ಅವರೊಂದಿಗೆ ಲೋಕದಲ್ಲಿದ್ದಾಗ ನಿನ್ನ ಹೆಸರಿನಲ್ಲಿ ಅವರನ್ನು ಕಾಪಾಡಿದೆನು; ನೀನು ನನಗೆ ಕೊಟ್ಟವರನ್ನು ನಾನು ಕಾಪಾಡಿದ್ದೇನೆ; ಬರಹವು ನೆರವೇರುವ ಹಾಗೆ ಆ ನಾಶನದ ಮಗನೇ ಹೊರತು ಅವರಲ್ಲಿ ಒಬ್ಬನೂ ನಾಶವಾಗಲಿಲ್ಲ. ಈಗ ನಾನು ನಿನ್ನ ಬಳಿಗೆ ಬರು ತ್ತೇನೆ ನನ್ನ ಆನಂದವು ಅವರೊಳಗೆ ಈಡೇರುವಂತೆ ನಾನು ಲೋಕದಲ್ಲಿ ಈ ವಿಷಯಗಳನ್ನು ಮಾತನಾಡು ತ್ತೇನೆ.
- Matthew 9:15 ಮತ್ತಾಯನು 9:15ಅದಕ್ಕೆ ಯೇಸು ಅವರಿಗೆ--ಮದಲಿಂಗನು ತಮ್ಮ ಜೊತೆಯಲ್ಲಿರುವ ತನಕ ಮದಲಗಿತ್ತಿಯ ಮನೇ ಮಕ್ಕಳು ದುಃಖಪಡುವರೇ? ಆದರೆ ಮದಲಿಂಗನು ಅವರಿಂದ ತೆಗೆಯಲ್ಪಡುವ ದಿವಸಗಳು ಬರುವವು; ಆಗ ಅವರು ಉಪವಾಸ ಮಾಡುವರು.
- Acts 9:16 ಅಪೊಸ್ತಲರ ಕೃತ್ಯಗಳು 9:16ಅವನು ನನ್ನ ಹೆಸರಿನ ನಿಮಿತ್ತ ಎಷ್ಟು ಕಠಿಣವಾದ ಶ್ರಮೆಯನ್ನನುಭವಿಸಬೇಕೆಂಬದನ್ನು ನಾನೇ ಅವನಿಗೆ ತೋರಿಸುವೆನು ಎಂದು ಹೇಳಿದನು.
- Matthew 24:25 ಮತ್ತಾಯನು 24:25ಇಗೋ, ಮುಂದಾಗಿ ನಾನು ನಿಮಗೆ ಹೇಳಿದ್ದೇನೆ.
- Isaiah 41:22–23 ಯೆಶಾಯ 41:22–23ಅವರು ಅವುಗಳನ್ನು ತಂದು ಮುಂದೆ ಏನಾಗುವದು ಎಂದು ನಮಗೆ ತೋರಿಸಲಿ; ಹಿಂದಿನವುಗಳನ್ನು ನಾವು ಮನಸ್ಸಿಗೆ ತಂದುಕೊಂಡು ಅವುಗಳ ಪರಿಣಾಮವನ್ನು ಇಲ್ಲವೇ ಮುಂದಿನವುಗಳನ್ನು ತಿಳಿಸಿದರೆ ಗ್ರಹಿಸುವೆವು. ನೀವು ದೇವರುಗಳೆಂದು ತಿಳಿದುಕೊಳ್ಳುವಂತೆ ಮುಂದೆ ಬರುವವುಗಳನ್ನು ನಮಗೆ ತಿಳಿಸಿರಿ; ಹೌದು, ನಾವು ಗಾಬರಿಯಿಂದ ಭಯಪಡುವ ಹಾಗೆ ಒಳ್ಳೆಯದ ನ್ನಾಗಲಿ ಕೆಟ್ಟದ್ದನ್ನಾಗಲಿಮಾಡಿರಿ.
- 2 Peter 1:14 2 ಪೇತ್ರನು 1:14ನಮ್ಮ ಕರ್ತನಾದ ಯೇಸು ಕ್ರಿಸ್ತನು ನನಗೆ ತೋರಿಸಿದ ಪ್ರಕಾರ ನಾನು ಈ ಗುಡಾರವನ್ನು ತೆಗೆದುಹಾಕುವದು ಬೇಗನೆ ಬರುತ್ತದೆಂದು ಬಲ್ಲೆನು.
- Mark 2:19 ಮಾರ್ಕನು 2:19ಅದಕ್ಕೆ ಯೇಸು ಅವರಿಗೆ--ಮದಲಿಂಗನು ಅವರ ಸಂಗಡ ಇರುವಾಗ ಮದಲಗಿ ತ್ತಿಯ ಮನೇಮಕ್ಕಳು ಉಪವಾಸ ಮಾಡುವರೋ? ಮದಲಿಂಗನು ಅವರ ಸಂಗಡ ಇರುವ ತನಕ ಅವರು ಉಪವಾಸ ಮಾಡುವದಿಲ್ಲ.
- Matthew 10:7 ಮತ್ತಾಯನು 10:7ನೀವು ಹೋಗುವಾಗ-- ಪರಲೋಕ ರಾಜ್ಯವು ಸಮಾಪವಾಯಿತು ಎಂದು ಸಾರಿ ಹೇಳಿರಿ.
- Luke 21:12–13 ಲೂಕನು 21:12–13ಆದರೆ ಇವೆಲ್ಲವುಗಳಿಗಿಂತ ಮೊದಲು ಅವರು ನಿಮ್ಮನ್ನು ಹಿಡಿದು ಹಿಂಸಿಸಿ ಸಭಾಮಂದಿರ ಗಳಿಗೂ ಸೆರೆಮನೆಗಳಿಗೂ ಒಪ್ಪಿಸಿ ನನ್ನ ಹೆಸರಿನ ನಿಮಿತ್ತ ಅರಸುಗಳ ಮತ್ತು ಅಧಿಕಾರಿಗಳ ಮುಂದೆ ನಿಮ್ಮನ್ನು ತರುವರು. ಇದು ಸಾಕ್ಷಿಗೋಸ್ಕರ ನಿಮಗೆ ಪರಿಣಮಿ ಸುವದು.