John · chapter 21 · verse 19
John 21:19 in Kannada
ಅವನು ಎಂಥ ಮರಣ ದಿಂದ ದೇವರನ್ನು ಮಹಿಮೆಪಡಿಸಬೇಕಾಗಿದೆ ಎಂದು ಸೂಚಿಸಿ ಆತನು ಇದನ್ನು ಹೇಳಿದನು. ಆತನು ಇದನ್ನು ಹೇಳಿದ ಮೇಲೆ ಅವನಿಗೆ--ನನ್ನನ್ನು ಹಿಂಬಾಲಿಸು ಅಂದನು.
Avanu entha marana dinda devarannu mahimepadisabekaagide endu soochisi aatanu idannu helidanu. Aatanu idannu helida mele avanige--nannannu himbaalisu andanu.
John 21:19 in English
- King James Version (KJV)
- This spake he, signifying by what death he should glorify God. And when he had spoken this, he saith unto him, Follow me.
- World English Bible (WEB)
- Now he said this, signifying by what kind of death he would glorify God. When he had said this, he said to him, “Follow me.”
- American Standard Version (ASV)
- Now this he spake, signifying by what manner of death he should glorify God. And when he had spoken this, he saith unto him, Follow me.
- Bible in Basic English (BBE)
- Now this he said, pointing out the sort of death by which he would give God glory. And after saying this, he said to him, Come after me.
- Darby Translation (DBY)
- But he said this signifying by what death he should glorify God. And having said this, he says to him, Follow me.
- Webster's Bible (WBS)
- This he spoke, signifying by what death he should glorify God. And when he had spoken this, he saith to him, Follow me.
- Young's Literal Translation (YLT)
- and this he said, signifying by what death he shall glorify God; and having said this, he saith to him, 'Be following me.'
Read in context
- 17ಆತನು ಮೂರನೆಯ ಸಾರಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಿದನು. ಆತನು ಮೂರನೆಯ ಸಾರಿ--ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು--ಕರ್ತನೇ, ನಿನಗೆ ಎಲ್ಲವುಗಳು ತಿಳಿದವೆ; ನಾನು ನಿನ
- 18ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ--ನೀನು ಯೌವನಸ್ಥನಾಗಿದ್ದಾಗ ನೀನೇ ನಿನ್ನ ನಡುಕಟ್ಟಿಕೊಂಡು ಇಷ್ಟಬಂದ ಕಡೆಗೆ ತಿರುಗಾ ಡುತ್ತಿದ್ದಿ; ಆದರೆ ನೀನು ಮುದುಕನಾದಾಗ ನಿನ್ನ ಕೈಗಳನ್ನು ಚಾಚುವಿ, ಆಗ ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ತೆಗೆದುಕೊಂ
- 19ಅವನು ಎಂಥ ಮರಣ ದಿಂದ ದೇವರನ್ನು ಮಹಿಮೆಪಡಿಸಬೇಕಾಗಿದೆ ಎಂದು ಸೂಚಿಸಿ ಆತನು ಇದನ್ನು ಹೇಳಿದನು. ಆತನು ಇದನ್ನು ಹೇಳಿದ ಮೇಲೆ ಅವನಿಗೆ--ನನ್ನನ್ನು ಹಿಂಬಾಲಿಸು ಅಂದನು.
- 20ಊಟದಲ್ಲಿ ಆತನ ಎದೆಗೆ ಒರಗಿಕೊಂಡು-- ಕರ್ತನೇ, ನಿನ್ನನ್ನು ಹಿಡುಕೊಡುವವನು ಯಾರು ಎಂದು ಕೇಳಿದಂಥ ಮತ್ತು ಯೇಸು ಪ್ರೀತಿಸಿದಂಥ ಶಿಷ್ಯನು ಹಿಂದೆ ಬರುವದನ್ನು ಪೇತ್ರನು ಹಿಂತಿರುಗಿ ನೋಡಿ
- 21ಯೇಸುವಿಗೆ--ಕರ್ತನೇ, ಈ ಮನುಷ್ಯನ ವಿಷಯವೇನು ಅಂದನು.
Cross references
- 2 Peter 1:14 2 ಪೇತ್ರನು 1:14ನಮ್ಮ ಕರ್ತನಾದ ಯೇಸು ಕ್ರಿಸ್ತನು ನನಗೆ ತೋರಿಸಿದ ಪ್ರಕಾರ ನಾನು ಈ ಗುಡಾರವನ್ನು ತೆಗೆದುಹಾಕುವದು ಬೇಗನೆ ಬರುತ್ತದೆಂದು ಬಲ್ಲೆನು.
- John 21:22 ಯೋಹಾನನು 21:2222ಯೇಸು ಅವನಿಗೆ--ನಾನು ಬರುವ ತನಕ ಅವನು ಇರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು? ನೀನು ನನ್ನನ್ನು ಹಿಂಬಾ ಲಿಸು ಅಂದನು.
- Matthew 10:38 ಮತ್ತಾಯನು 10:38ತನ್ನ ಶಿಲುಬೆ ಯನ್ನು ತೆಗೆದುಕೊಳ್ಳದೆ ನನ್ನನ್ನು ಹಿಂಬಾಲಿಸುವವನು ನನಗೆ ಯೋಗ್ಯನಲ್ಲ.
- Philippians 1:20 ಫಿಲಿಪ್ಪಿಯವರಿಗೆ 1:20ಹೇಗೆಂದರೆ, ನಾನು ಯಾವ ವಿಷಯದಲ್ಲಾದರೂ ನಾಚಿಕೆಪಡದೆ ಎಂದಿನಂತೆ ಈಗಲೂ ಸಹ ತುಂಬಾ ಧೈರ್ಯದಿಂದಿರುವದರಿಂದ ಬದುಕಿದರೂ ಸರಿಯೇ ಸತ್ತರೂ ಸರಿಯೇ ನನ್ನ ದೇಹದ ಮೂಲಕ ಕ್ರಿಸ್ತನಿಗೆ ಮಹಿಮೆಯುಂಟಾಗಬೇಕೆಂದು ನನಗೆ ಬಹಳ ಅಭಿಲಾಷೆಯೂ ನಿರೀಕ್ಷೆಯೂ ಉಂಟು.
- 1 Samuel 12:20 1 ಸಮುವೇಲನು 12:20ಆಗ ಸಮು ವೇಲನು ಜನರಿಗೆ--ನೀವು ಭಯಪಡಬೇಡಿರಿ. ಈ ಕೆಟ್ಟತನವನ್ನೆಲ್ಲಾ ಮಾಡಿದ್ದೀರಿ; ಆದರೂ ಕರ್ತನನ್ನು ಬಿಟ್ಟು ತಿರುಗದೆ ನಿಮ್ಮ ಪೂರ್ಣ ಹೃದಯದಿಂದ ಕರ್ತನನ್ನು ಸೇವಿಸಿರಿ. ಲಾಭಕರವಿಲ್ಲದಂಥವುಗಳನ್ನೂ ಬಿಡಿಸಲಾರದವುಗಳನ್ನೂ ವ್ಯರ್ಥವಾದವುಗಳನ್ನೂ ಅನುಸರಿಸುವದಕ್ಕೆ ಹೋಗಬೇಡಿರಿ.
- John 13:36–37 ಯೋಹಾನನು 13:36–37ಸೀಮೋನ ಪೇತ್ರನು ಆತನಿಗೆ--ಕರ್ತನೇ, ನೀನು ಎಲ್ಲಿಗೆ ಹೋಗುತ್ತೀ? ಅನ್ನಲು ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ಹೋಗುವಲ್ಲಿಗೆ ನೀನು ಈಗ ಬರಲಾರಿ; ತರುವಾಯ ನೀನು ನನ್ನನ್ನು ಹಿಂಬಾಲಿಸುವಿ ಅಂದನು. ಪೇತ್ರನು ಆತನಿಗೆ-- ಕರ್ತನೇ, ನಾನು ಯಾಕೆ ಈಗ ನಿನ್ನ ಹಿಂದೆ ಬರ ಲಾರೆನು? ನಿನಗೋಸ್ಕರ ನನ್ನ ಪ್ರಾಣವನ್ನು ಕೊಡು ವೆನು ಅಂದನು.ಯೇಸು ಪ್ರತ್ಯುತ್ತರವಾಗಿ ಅವ ನಿಗೆ--ನೀನು ನನಗೋಸ್ಕರ ನಿನ್ನ ಪ್ರಾಣವನ್ನು ಕೊಡು ತ್ತೀಯೋ? ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ನನ್ನನ್ನು ಮೂರು ಸಾರಿ ಅಲ್ಲಗಳೆಯುವ ತನಕ ಹುಂಜವು ಕೂಗುವದಿಲ್ಲ ಅಂದನು.
- Mark 8:33–38 ಮಾರ್ಕನು 8:33–38ಆದರೆ ಆತನು ತಿರುಗಿಕೊಂಡು ತನ್ನ ಶಿಷ್ಯರ ಕಡೆಗೆ ನೋಡಿ ಪೇತ್ರನನ್ನು ಗದರಿಸಿ--ಸೈತಾನನೇ ನನ್ನ ಹಿಂದೆ ಹೋಗು; ಯಾಕಂದರೆ ನೀನು ಯೋಚಿಸುವಂಥದ್ದು ದೇವರವುಗಳಲ್ಲ, ಆದರೆ ಮನುಷ್ಯರವುಗಳೇ ಎಂದು ಹೇಳಿದನು. ಆತನು ಜನರನ್ನು ತನ್ನ ಶಿಷ್ಯರ ಕೂಡ ತನ್ನ ಬಳಿಗೆ ಕರೆದು ಅವರಿಗೆ--ಯಾವನಾದರೂ ನನ್ನ ಹಿಂದೆ ಬರುವದಾದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿ ಸಲಿ. ಯಾಕಂದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳ ಬೇಕೆಂದಿರುವ ಯಾವನಾದರೂ ಅದನ್ನು ಕಳಕೊಳ್ಳು ವನು; ಆದರೆ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಯಾವನು ತನ್ನ ಪ್ರಾಣವನ್ನು ಕಳ ಕೊಳ್ಳುವನೋ ಅವನು ಅದನ್ನು ಉಳಿಸಿಕೊಳ್ಳುವನು. ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿ ಕೊಂಡರೂ ತನ್ನ ಸ್ವಂತ ಆತ್ಮವನ್ನು ನಷ್ಟಪಡಿಸಿಕೊಂಡರೆ ಅವನಿಗೆ ಲಾಭವೇನು? ಇಲ್ಲವೆ ಒಬ್ಬನು ತನ್ನ ಆತ್ಮಕ್ಕೆ ಬದಲಾಗಿ ಏನು ಕೊಡುವನು?ಆದದರಿಂದ ಯಾವನಾದರೂ ವ್ಯಭಿಚಾರಿಣಿಯಾದ ಈ ಪಾಪಿಷ್ಠ ಸಂತತಿಯಲ್ಲಿ ನನ್ನ ಮತ್ತು ನನ್ನ ಮಾತುಗಳ ವಿಷಯ ವಾಗಿ ನಾಚಿಕೊಳ್ಳುವನೋ ಅವನ ವಿಷಯದಲ್ಲಿ ಮನುಷ್ಯಕುಮಾರನು ಸಹ ತನ್ನ ತಂದೆಯ ಮಹಿಮೆ ಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿ ಕೊಳ್ಳುವನು ಎಂದು ಹೇಳಿದನು. ಆದದರಿಂದ ಯಾವನಾದರೂ ವ್ಯಭಿಚಾರಿಣಿಯಾದ ಈ ಪಾಪಿಷ್ಠ ಸಂತತಿಯಲ್ಲಿ ನನ್ನ ಮತ್ತು ನನ್ನ ಮಾತುಗಳ ವಿಷಯ ವಾಗಿ ನಾಚಿಕೊಳ್ಳುವನೋ ಅವನ ವಿಷಯದಲ್ಲಿ ಮನುಷ್ಯಕುಮಾರನು ಸಹ ತನ್ನ ತಂದೆಯ ಮಹಿಮೆ ಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿ ಕೊಳ್ಳುವನು ಎಂದು ಹೇಳಿದನು.
- Numbers 14:24 ಅರಣ್ಯಕಾಂಡ 14:24ಆದರೆ ನನ್ನ ಸೇವಕನಾದ ಕಾಲೇಬನಲ್ಲಿ ನನ್ನ ಆತ್ಮವಿದದ್ದರಿಂದಲೂ ಅವನು ನನ್ನನ್ನು ಪೂರ್ಣ ವಾಗಿ ಹಿಂಬಾಲಿಸಿದ್ದರಿಂದಲೂ ಅವನು ಸಂಚರಿಸಿದ ದೇಶಕ್ಕೆ ಅವನನ್ನು ತರುವೆನು; ಅವನ ಸಂತಾನವು ಅದನ್ನು ಸ್ವತಂತ್ರಿಸಿಕೊಳ್ಳುವದು.
- John 18:32 ಯೋಹಾನನು 18:32ಹೀಗೆ ಯೇಸು ತಾನು ಎಂಥಾ ಸಾವು ಸಾಯುವನೆಂದು ಸೂಚಿಸಿ ಹೇಳಿದ ಮಾತು ಈಡೇರಿತು.
- Matthew 19:28 ಮತ್ತಾಯನು 19:28ಯೇಸು ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನ ದಲ್ಲಿ ಕೂತುಕೊಂಡಿರಲು ನನ್ನನ್ನು ಹಿಂಬಾಲಿಸಿದವರಾದ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಗೋತ್ರ ಗಳವರಿಗೆ ನ್ಯಾ
- Luke 9:22–26 ಲೂಕನು 9:22–26ಮನುಷ್ಯಕುಮಾ ರನು ಬಹಳ ಕಷ್ಟಗಳನ್ನನುಭವಿಸಿ ಹಿರಿಯರಿಂದಲೂ ಪ್ರಧಾನಯಾಜಕರಿಂದಲೂ ಶಾಸ್ತ್ರಿಗಳಿಂದಲೂ ತಿರಸ್ಕರಿ ಲ್ಪಟ್ಟವನಾಗಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಎಬ್ಬಿಸಲ್ಪಡುವದು ಅಗತ್ಯವಾಗಿದೆ ಎಂದು ಆಜ್ಞಾಪಿಸಿ ದನು. ಆತನು ಅವರೆಲ್ಲರಿಗೆ--ಯಾವನಾದರೂ ನನ್ನ ಹಿಂದೆ ಬರುವದಾದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಪ್ರತಿದಿನ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ; ಯಾವನಾದರೂ ತನ್ನ ಪ್ರಾಣವನ್ನು ಉಳಿಸಿಕೊಳ್ಳುವದಾದರೆ ಅದನ್ನು ಕಳಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿ ಯಾವನಾದರೂ ತನ್ನ ಪ್ರಾಣವನ್ನು ಕಳಕೊಂಡರೆ ಅದನ್ನು ಉಳಿಸಿಕೊಳ್ಳುವನು. ಇದಲ್ಲದೆ ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡು ತನ್ನನ್ನು ತಾನೇ ಹಾಳು ಮಾಡಿ ಕೊಂಡರೆ ಇಲ್ಲವೆ ನಷ್ಟಪಡಿಸಿಕೊಂಡರೆ ಅವನಿಗೆ ಪ್ರಯೋಜನವೇನು? ಯಾವನಾದರೂ ನನ್ನ ಮತ್ತು ನನ್ನ ವಾಕ್ಯಗಳ ವಿಷಯದಲ್ಲಿ ನಾಚಿಕೊಳ್ಳುವದಾದರೆ ಮನುಷ್ಯಕುಮಾರನು ತನ್ನ ಮತ್ತು ತನ್ನ ತಂದೆಯ ಪ್ರಭಾವದೊಡನೆಯೂ ಪರಿಶುದ್ಧದೂತರೊಂದಿಗೂ ಬರುವಾಗ ಅವನ ವಿಷಯದಲ್ಲಿ ಆತನು ನಾಚಿಕೊಳ್ಳು ವನು.
- Matthew 16:21–25 ಮತ್ತಾಯನು 16:21–25ತಾನು ಯೆರೂಸಲೇಮಿಗೆ ಹೋಗಿ ಹೇಗೆ ಹಿರಿಯರಿಂದಲೂ ಪ್ರಧಾನ ಯಾಜಕರಿಂದಲೂ ಶಾಸ್ತ್ರಿಗಳಿಂದಲೂ ಬಹು ಶ್ರಮೆಗಳನ್ನು ಅನುಭವಿಸಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ತಿರಿಗಿ ಎದ್ದು ಬರುವದು ಅವಶ್ಯವಾಗಿದೆ ಎಂದು ಯೇಸು ಅಂದಿನಿಂದ ತನ್ನ ಶಿಷ್ಯರಿಗೆ ತಿಳಿಸಲಾರಂಭಿಸಿದನು. ತರುವಾಯ ಪೇತ್ರನು ಆತನ ಕೈಹಿಡಿದು--ಕರ್ತನೇ, ಅದು ನಿನ್ನಿಂದ ದೂರವಿರಲಿ; ಇಂಥದ್ದು ನಿನಗೆ ಆಗಬಾರದು ಎಂದು ಹೇಳಿ ಆತನನ್ನು ಗದರಿಸಲಾರಂಭಿಸಿದನು. ಆದರೆ ಆತನು ತಿರುಗಿಕೊಂಡು ಪೇತ್ರನಿಗೆ--ಸೈತಾನನೇ, ನನ್ನ ಹಿಂದೆ ಹೋಗು; ನೀನು ನನಗೆ ಅಭ್ಯಂತರವಾಗಿದ್ದೀ; ನೀನು ದೇವರವುಗಳನ್ನಲ್ಲ,ಮನುಷ್ಯರ ಆಲೋಚನೆಗಳನ್ನೇ ಮಾಡುತ್ತೀ ಅಂದನು. ತರುವಾಯ ಯೇಸು ತನ್ನ ಶಿಷ್ಯರಿಗೆ--ಯಾವ ನಾದರೂ ನನ್ನ ಹಿಂದೆ ಬರುವದಕ್ಕೆ ಅಪೇಕ್ಷಿಸಿದರೆ ಅವನು ತನ್ನನ್ನು ತಾನೇ ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ಯಾಕಂದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುವವನು ಅದನ್ನು ಕಳ ಕೊಳ್ಳುವನು; ಮತ್ತು ನನ್ನ ನಿಮಿತ್ತವಾಗಿ ತನ್ನ ಪ್ರಾಣ ವನ್ನು ಕಳಕೊಳ್ಳುವವನು ಅದನ್ನು ಕಂಡುಕೊಳ್ಳುವನು.