John · chapter 18 · verse 32
John 18:32 in Kannada
ಹೀಗೆ ಯೇಸು ತಾನು ಎಂಥಾ ಸಾವು ಸಾಯುವನೆಂದು ಸೂಚಿಸಿ ಹೇಳಿದ ಮಾತು ಈಡೇರಿತು.
Heege yesu taanu enthaa saavu saayuvanendu soochisi helida maatu eederitu.
John 18:32 in English
- King James Version (KJV)
- That the saying of Jesus might be fulfilled, which he spake, signifying what death he should die.
- World English Bible (WEB)
- that the word of Jesus might be fulfilled, which he spoke, signifying by what kind of death he should die.
- American Standard Version (ASV)
- that the word of Jesus might be fulfilled, which he spake, signifying by what manner of death he should die.
- Bible in Basic English (BBE)
- (That the word of Jesus might come true, pointing to the sort of death he would have.)
- Darby Translation (DBY)
- that the word of Jesus might be fulfilled which he spoke, signifying what death he should die.
- Webster's Bible (WBS)
- That the saying of Jesus might be fulfilled, which he spoke, signifying what death he should die.
- Young's Literal Translation (YLT)
- that the word of Jesus might be fulfilled which he said, signifying by what death he was about to die.
Read in context
- 30ಅವರು ಪ್ರತ್ಯುತ್ತರವಾಗಿ ಅವನಿಗೆ--ಇವನು ದುಷ್ಕರ್ಮಿಯಲ್ಲ ದಿದ್ದರೆ ನಾವು ಇವನನ್ನು ನಿನಗೆ ಒಪ್ಪಿಸಿಕೊಡುತ್ತಿರಲಿಲ ಎಂದು ಹೇಳಿದರು.
- 31ಆಗ ಪಿಲಾತನು ಅವರಿಗೆ--ನೀವೇ ಆತನನ್ನು ತಕ್ಕೊಂಡು ನಿಮ್ಮ ನ್ಯಾಯಪ್ರಮಾಣದ ಪ್ರಕಾರ ಆತನಿಗೆ ನ್ಯಾಯತೀರಿಸಿರಿ ಅಂದನು. ಅದಕ್ಕೆ ಯೆಹೂದ್ಯರು ಅವನಿಗೆ--ನಾವು ಯಾವ ಮನುಷ್ಯ ನನ್ನೂ ಕೊಲ್ಲಿಸುವದಕ್ಕೆ ನಮಗೆ ನ್ಯಾಯವಲ್ಲ ಎಂದು ಹೇಳಿದರು.
- 32ಹೀಗೆ ಯೇಸು ತಾನು ಎಂಥಾ ಸಾವು ಸಾಯುವನೆಂದು ಸೂಚಿಸಿ ಹೇಳಿದ ಮಾತು ಈಡೇರಿತು.
- 33ತರುವಾಯ ಪಿಲಾತನು ತಿರಿಗಿ ನ್ಯಾಯಾಲಯ ದೊಳಗೆ ಪ್ರವೇಶಿಸಿ ಯೇಸುವನ್ನು ಕರೆದು ಆತ ನಿಗೆ--ನೀನು ಯೆಹೂದ್ಯರ ಅರಸನೋ ಎಂದು ಕೇಳಿದನು.
- 34ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಿನ್ನಷ್ಟಕ್ಕೆ ನೀನೇ ಇದನ್ನು ಹೇಳುತ್ತೀಯೋ? ಇಲ್ಲವೆ ಬೇರೆಯವರು ನನ್ನ ವಿಷಯದಲ್ಲಿ ನಿನಗೆ ಹೇಳಿ ದ್ದಾರೋ? ಅಂದನು.
Cross references
- Matthew 26:2 ಮತ್ತಾಯನು 26:2ಎರಡು ದಿವಸಗಳಾದ ಮೇಲೆ ಪಸ್ಕ ಹಬ್ಬ ಇರುವ ದೆಂದು ನೀವು ಬಲ್ಲಿರಿ. ಆಗ ಮನುಷ್ಯಕುಮಾರನು ಶಿಲುಬೆಗೆ ಹಾಕಲ್ಪಡುವದಕ್ಕಾಗಿ ಹಿಡಿದುಕೊಡಲ್ಪಡು ವನು ಅಂದನು.
- John 3:14 ಯೋಹಾನನು 3:14ಇದಲ್ಲದೆ ಮೋಶೆಯು ಅರಣ್ಯದಲ್ಲಿ ಸರ್ಪವನ್ನು ಎತ್ತಿದ ಹಾಗೆಯೇ ಮನುಷ್ಯ ಕುಮಾರನು ಸಹ ಎತ್ತಲ್ಪಡತಕ್ಕದ್ದು.
- Matthew 20:19 ಮತ್ತಾಯನು 20:19ಇದಲ್ಲದೆ ಆತನನ್ನು ಹಾಸ್ಯ ಮಾಡು ವದಕ್ಕೂ ಕೊರಡೆಗಳಿಂದ ಹೊಡೆಯುವದಕ್ಕೂ ಶಿಲುಬೆಗೆ ಹಾಕುವದಕ್ಕೂ ಆತನನ್ನು ಅನ್ಯಜನರಿಗೆ ಒಪ್ಪಿಸಿಕೊಡುವರು; ಮತ್ತು ಮೂರನೆಯ ದಿನದಲ್ಲಿ ಆತನು ತಿರಿಗಿ ಎದ್ದು ಬರುವನು ಎಂದು ಹೇಳಿದನು.
- John 12:32–33 ಯೋಹಾನನು 12:32–33ನಾನು ಭೂಮಿಯಿಂದ ಮೇಲಕ್ಕೆ ಎತ್ತಲ್ಪಟ್ಟರೆ ಎಲ್ಲ ರನ್ನೂ ನನ್ನ ಬಳಿಗೆ ಎಳಕೊಳ್ಳುವೆನು ಅಂದನು. ತಾನು ಎಂಥಾ ಮರಣದಿಂದ ಸಾಯಬೇಕಾಗಿತ್ತೆಂದು ಸೂಚಿಸಿ ಇದನ್ನು ಹೇಳಿದನು.
- Luke 18:32–33 ಲೂಕನು 18:32–33ಆತನು ಅನ್ಯಜನಗಳಿಗೆ ಒಪ್ಪಿಸಲ್ಪ ಡುವನು; ಅವರು ಆತನನ್ನು ಹಾಸ್ಯಮಾಡುವವರಾಗಿ ಅವಮಾನ ಮಾಡುತ್ತಾ ಆತನ ಮೇಲೆ ಉಗುಳುವರು. ಇದಲ್ಲದೆ ಅವರು ಆತನನ್ನು ಕೊರಡೆಗಳಿಂದ ಹೊಡೆದು ಕೊಲ್ಲುವರು. ಮೂರನೆಯ ದಿನದಲ್ಲಿ ಆತನು ತಿರಿಗಿ ಏಳುವನು ಅಂದನು.
- Deuteronomy 21:23 ಧರ್ಮೋಪದೇಶಕಾಂಡ 21:23ಅವನ ಹೆಣವು ರಾತ್ರಿಯಲ್ಲಿ ಮರದ ಮೇಲಿರಬಾರದು; ಅವನನ್ನು ಹೇಗಾದರೂ ಅದೇ ದಿವಸದಲ್ಲಿ ಹೂಣಿಡ ಬೇಕು; (ಯಾಕಂದರೆ ತೂಗಾಡುವವನು ದೇವರಿಂದ ಶಾಪಗ್ರಸ್ತನಾಗಿದ್ದಾನೆ); ಆದರೆ ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಭೂಮಿಯು ಅಶುದ್ಧವಾಗಬಾರದು.
- Mark 10:33 ಮಾರ್ಕನು 10:33ಇಗೋ, ನಾವು ಯೆರೂಸಲೇ ಮಿಗೆ ಹೋಗುತ್ತೇವೆ; ಮತ್ತು ಮನುಷ್ಯಕುಮಾರನು ಪ್ರಧಾನಯಾಜಕರಿಗೂ ಶಾಸ್ತ್ರಿಗಳಿಗೂ ಒಪ್ಪಿಸಲ್ಪಡು ವನು; ಅವರು ಆತನಿಗೆ ಮರಣದಂಡನೆಯನ್ನು ವಿಧಿಸಿ ಆತನನ್ನು ಅನ್ಯಜನಗಳಿಗೆ ಒಪ್ಪಿಸುವರು.
- John 8:28 ಯೋಹಾನನು 8:28ಆಮೇಲೆ ಯೇಸು ಅವ ರಿಗೆ--ಮನುಷ್ಯಕುಮಾರನನ್ನು ನೀವು ಮೇಲಕ್ಕೆತ್ತಿದಾಗ ನಾನೇ ಆತನೆಂದೂ ನನ್ನಷ್ಟಕ್ಕೆ ನಾನೇ ಏನೂ ಮಾಡದೆ ನನ್ನ ತಂದೆಯು ನನಗೆ ತಿಳಿಸಿದ ಹಾಗೆ ಈ ಸಂಗತಿ ಗಳನ್ನು ಹೇಳುತ್ತೇನೆಂದೂ ನೀವು ತಿಳಿದುಕೊಳ್ಳುವಿರಿ.
- Luke 24:7–8 ಲೂಕನು 24:7–8ಮನುಷ್ಯಕುಮಾರನು ಪಾಪಿಷ್ಠರ ಕೈಗಳಿಗೆ ಹೇಗೆ ಒಪ್ಪಿಸಲ್ಪಟ್ಟವನಾಗಿ ಶಿಲುಬೆಗೆ ಹಾಕಲ್ಪಟ್ಟು ಮೂರನೆಯ ದಿನದಲ್ಲಿ ತಿರಿಗಿ ಏಳುವನು ಎಂದು ನಿಮಗೆ ಹೇಳಿದ್ದನ್ನು ನೀವು ನೆನಪು ಮಾಡಿಕೊಳ್ಳಿರಿ ಅಂದರು. ಆಗ ಅವರು ಆತನ ಮಾತುಗಳನ್ನು ನೆನಪು ಮಾಡಿಕೊಂಡು
- Psalm 22:16 ಕೀರ್ತನೆಗಳು 22:16ನಾಯಿ ಗಳು ನನ್ನನ್ನು ಸುತ್ತಿಕೊಂಡಿವೆ; ದುರ್ಮಾರ್ಗಿಗಳ ಸಭೆಯು ನನ್ನನ್ನು ಮುತ್ತಿಕೊಂಡಿದೆ; ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ.
- Galatians 3:13 ಗಲಾತ್ಯದವರಿಗೆ 3:13ಕ್ರಿಸ್ತನು ನಮ್ಮ ನಿಮಿತ್ತ ಶಾಪವಾಗಿ ಮಾಡಲ್ಪಟ್ಟು ನ್ಯಾಯಪ್ರಮಾಣದ ಶಾಪದೊಳಗಿಂದ ನಮ್ಮನ್ನು ಬಿಡಿಸಿದನು. ಯಾಕಂದರೆ--ಮರಕ್ಕೆ ತೂಗಹಾಕಲ್ಪಟ್ಟ ಪ್ರತಿಯೊಬ್ಬನು ಶಾಪಗ್ರಸ್ತನು ಎಂದು ಬರೆದದೆಯಲ್ಲಾ.
- John 10:31 ಯೋಹಾನನು 10:31ಆಗ ಯೆಹೂದ್ಯರು ತಿರಿಗಿ ಆತನನ್ನು ಕೊಲ್ಲುವ ದಕ್ಕಾಗಿ ಕಲ್ಲುಗಳನ್ನು ತಕ್ಕೊಂಡರು.