John · chapter 5 · verse 36
John 5:36 in Kannada
ಆದರೆ ಯೋಹಾನನಿಗಿಂತಲೂ ಹೆಚ್ಚಿನ ಸಾಕ್ಷಿ ನನಗುಂಟು; ಹೇಗೆಂದರೆ ಪೂರೈಸುವದಕ್ಕಾಗಿ ತಂದೆಯು ನನಗೆ ಕೊಟ್ಟ ಕೆಲಸಗಳು ಅಂದರೆ ನಾನು ಮಾಡುತ್ತಿರುವ ಈ ಕೆಲಸಗಳೇ ತಂದೆಯು ನನ್ನನ್ನು ಕಳುಹಿಸಿದ್ದಾನೆಂದು ನನ್ನ ವಿಷಯವಾಗಿ ಸಾಕ್ಷಿ ಕೊಡುತ್ತವೆ.
Aadare yohaananigintaloo hechchina saakshi nanaguntu; hegendare pooraisuvadakkaagi tandeyu nanage kotta kelasagalu andare naanu maaduttiruva ee kelasagale tandeyu nannannu kaluhisiddaanendu nanna vishayavaagi saakshi koduttave.
John 5:36 in English
- King James Version (KJV)
- But I have greater witness than that of John: for the works which the Father hath given me to finish, the same works that I do, bear witness of me, that the Father hath sent me.
- World English Bible (WEB)
- But the testimony which I have is greater than that of John; for the works which the Father gave me to accomplish, the very works that I do, testify about me, that the Father has sent me.
- American Standard Version (ASV)
- But the witness which I have is greater than [that of] John; for the works which the Father hath given me to accomplish, the very works that I do, bear witness of me, that the Father hath sent me.
- Bible in Basic English (BBE)
- But the witness which I have is greater than that of John: the work which the Father has given me to do, the very work which I am now doing, is a witness that the Father has sent me.
- Darby Translation (DBY)
- But I have the witness [that is] greater than [that] of John; for the works which the Father has given me that I should complete them, the works themselves which I do, bear witness concerning me that the Father has sent me.
- Webster's Bible (WBS)
- But I have greater testimony than [that] of John: for the works which the Father hath given me to finish, the same works that I do, bear testimony concerning me, that the Father hath sent me.
- Young's Literal Translation (YLT)
- 'But I have the testimony greater than John's, for the works that the Father gave me, that I might finish them, the works themselves that I do, they testify concerning me, that the Father hath sent me.
Read in context
- 34ನಾನು ಮನುಷ್ಯನಿಂದ ಸಾಕ್ಷಿ ಅಂಗೀಕರಿಸುವದಿಲ್ಲ; ಆದರೆ ನೀವು ರಕ್ಷಣೆ ಹೊಂದುವಂತೆ ನಾನು ಇವು ಗಳನ್ನು ಹೇಳುತ್ತೇನೆ.
- 35ಅವನು ಉರಿದು ಪ್ರಕಾಶಿಸುವ ದೀಪವಾಗಿದ್ದನು; ನೀವು ಸ್ವಲ್ಪಕಾಲ ಅವನ ಬೆಳಕಿನಲ್ಲಿ ಸಂತೋಷಿಸುವದಕ್ಕೆ ಮನಸ್ಸುಳ್ಳವರಾಗಿದ್ದೀರಿ;
- 36ಆದರೆ ಯೋಹಾನನಿಗಿಂತಲೂ ಹೆಚ್ಚಿನ ಸಾಕ್ಷಿ ನನಗುಂಟು; ಹೇಗೆಂದರೆ ಪೂರೈಸುವದಕ್ಕಾಗಿ ತಂದೆಯು ನನಗೆ ಕೊಟ್ಟ ಕೆಲಸಗಳು ಅಂದರೆ ನಾನು ಮಾಡುತ್ತಿರುವ ಈ ಕೆಲಸಗಳೇ ತಂದೆಯು ನನ್ನನ್ನು ಕಳುಹಿಸಿದ್ದಾನೆಂದು ನನ್ನ ವಿಷಯವಾಗಿ ಸಾಕ್ಷಿ ಕೊಡುತ್ತವೆ.
- 37ನನ್ನನ್ನು ಕಳುಹಿಸಿದ ತಂದೆಯು ತಾನೇ ನನ್ನ ವಿಷಯದಲ್ಲಿ ಸಾಕ್ಷಿ ಹೇಳಿದ್ದಾನೆ; ನೀವು ಎಂದಾದರೂ ಆತನ ಧ್ವನಿಯನ್ನು ಕೇಳಲಿಲ್ಲ ಇಲ್ಲವೆ ಆತನ ರೂಪವನ್ನು ನೋಡಲಿಲ್ಲ.
- 38ಆತನ ವಾಕ್ಯವು ನಿಮ್ಮಲ್ಲಿ ನೆಲೆಯಾಗಿರುವದಿಲ್ಲ; ಯಾಕಂದರೆ ಆತನು ಕಳುಹಿಸಿದಾತನನ್ನು ನೀವು ನಂಬು ವದಿಲ್ಲ.
Cross references
- John 10:25 ಯೋಹಾನನು 10:25ಯೇಸು ಅವರಿಗೆ--ನಾನು ನಿಮಗೆ ಹೇಳಿದೆನು, ಆದರೆ ನೀವು ನಂಬಲಿಲ್ಲ; ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನ್ನ ವಿಷಯವಾಗಿ ಸಾಕ್ಷಿಕೊಡುತ್ತವೆ.
- John 10:37–38 ಯೋಹಾನನು 10:37–38ನನ್ನ ತಂದೆಯ ಕಾರ್ಯಗಳನ್ನು ನಾನು ಮಾಡದೆ ಹೋದರೆ ನನ್ನನ್ನು ನಂಬಬೇಡಿರಿ. ನಾನು ಮಾಡಿ ದರೂ ನೀವು ನನ್ನನ್ನು ನಂಬದಿದ್ದರೆ ತಂದೆಯು ನನ್ನ ಲ್ಲಿಯೂ ನಾನು ಆತನಲ್ಲಿಯೂ ಇರುವದನ್ನು ನೀವು ತಿಳಿದುಕೊಂಡು ನಂಬುವಂತೆ ಈ ಕಾರ್ಯಗಳನ್ನಾ ದರೂ ನಂಬಿರಿ ಅಂದನು.
- John 15:24 ಯೋಹಾನನು 15:24ಬೇರೆ ಯಾರೂ ಮಾಡದಿರುವ ಕ್ರಿಯೆಗಳನ್ನು ನಾನು ಅವರೊಳಗೆ ಮಾಡದಿದ್ದರೆ ಅವರಿಗೆ ಪಾಪವು ಇರು ತ್ತಿರಲಿಲ್ಲ; ಆದರೆ ಈಗ ಅವರು ನನ್ನನ್ನು ಮತ್ತು ನನ್ನ ತಂದೆಯನ್ನು ನೋಡಿ ದ್ವೇಷಮಾಡಿದ್ದಾರೆ.
- John 2:23 ಯೋಹಾನನು 2:23ಆತನು ಪಸ್ಕಹಬ್ಬದ ದಿನದಲ್ಲಿ ಯೆರೂಸಲೇಮಿ ನಲ್ಲಿದ್ದಾಗ ಆತನು ಮಾಡಿದ ಅದ್ಭುತ ಕಾರ್ಯಗಳನ್ನು ಅನೇಕರು ನೋಡಿ ಆತನ ಹೆಸರಿನಲ್ಲಿ ನಂಬಿಕೆ ಇಟ್ಟರು.
- John 9:30–33 ಯೋಹಾನನು 9:30–33ಆಗ ಆ ಮನುಷ್ಯನು ಪ್ರತ್ಯುತ್ತರವಾಗಿ ಅವರಿಗೆ--ಆತನು ನನ್ನ ಕಣ್ಣುಗಳನ್ನು ತೆರೆದರೂ ಆತನು ಎಲ್ಲಿಯ ವನೆಂದು ನಿಮಗೆ ತಿಳಿಯದೆ ಇರುವದು ಆಶ್ಚರ್ಯವಾದ ವಿಷಯವಲ್ಲವೇ? ದೇವರು ಪಾಪಿಗಳ ಪ್ರಾರ್ಥನೆ ಯನ್ನು ಕೇಳುವದಿಲ್ಲ; ಆದರೆ ಯಾವನಾದರೂ ದೇವ ರನ್ನು ಆರಾಧಿಸುವವನಾಗಿದ್ದು ಆತನ ಚಿತ್ತದಂತೆ ನಡೆದರೆ ಅವನ ಪ್ರಾರ್ಥನೆಯನ್ನು ಆತನು ಕೇಳು ತ್ತಾನೆಂದು ನಾವು ಬಲ್ಲೆವು. ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾವನಾದರೂ ತೆರೆದಿ ದ್ದದ್ದನ್ನು ಲೋಕಾದಿಯಿಂದ ಕೇಳಿರಲಿಲ್ಲ. ಈ ಮನುಷ್ಯನು ದೇವರ ಕಡೆಯಿಂದ ಬಂದವನಲ್ಲ ದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು ಅಂದನು.
- 1 John 5:9 1 ಯೋಹಾನನು 5:9ನಾವು ಮನುಷ್ಯರ ಸಾಕ್ಷಿಯನ್ನು ತೆಗೆದುಕೊಳ್ಳುವದಾದರೆ ದೇವರ ಸಾಕ್ಷಿಯು ಅದಕ್ಕಿಂತ ದೊಡ್ಡದಾಗಿದೆಯಲ್ಲಾ. ಯಾಕಂದರೆ ತನ್ನ ಮಗನ ವಿಷಯದಲ್ಲಿ ದೇವರು ಕೊಟ್ಟ ಸಾಕ್ಷಿಯು ಇದೇ ಆಗಿದೆ.
- John 3:2 ಯೋಹಾನನು 3:2ಇವನು ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದು ಆತನಿಗೆ--ರಬ್ಬಿಯೇ (ಗುರುವು), ನೀನು ದೇವರ ಬಳಿಯಿಂದ ಬಂದ ಬೋಧಕನೆಂದು ನಾವು ಬಲ್ಲೆವು, ಯಾಕಂದರೆ ದೇವರು ಒಬ್ಬನ ಕೂಡ ಇಲ್ಲದ ಹೊರತು ನೀನು ಮಾಡುವ ಅದ್ಭುತಕಾರ್ಯಗಳನ್ನು ಯಾವ ಮನುಷ್ಯನೂ ಮಾಡಲಾರನು ಅಂದನು.
- John 3:17 ಯೋಹಾನನು 3:17ದೇವರು ಲೋಕಕ್ಕೆ ತೀರ್ಪು ಮಾಡುವದಕ್ಕಾಗಿ ಅಲ್ಲ; ಆದರೆ ತನ್ನ ಮಗನ ಮುಖಾಂತರ ಲೋಕವನ್ನು ರಕ್ಷಿಸುವದಕ್ಕಾಗಿ ಆತನನ್ನು ಕಳುಹಿಸಿದನು.
- Acts 2:22 ಅಪೊಸ್ತಲರ ಕೃತ್ಯಗಳು 2:22ಇಸ್ರಾಯೇಲ್ ಜನರೇ, ಈ ಮಾತುಗಳನ್ನು ಕೇಳಿರಿ; ನಿಮಗೂ ತಿಳಿದಿರುವಂತೆ ನಜರೇತಿನ ಯೇಸುವು ದೇವರಿಗೆ ಮೆಚ್ಚಿಕೆಯಾದ ನೆಂಬದಕ್ಕೆ ದೇವರು ಆತನಿಂದ ಮಹತ್ಕಾರ್ಯ ಗಳನ್ನೂ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯ ಗಳನ್ನೂ ನಿಮ್ಮ ಮಧ್ಯದಲ್ಲಿ ನಡಿಸಿದನು.
- Matthew 11:4 ಮತ್ತಾಯನು 11:4ಯೇಸು ಪ್ರತ್ಯುತ್ತರವಾಗಿ ಅವರಿಗೆ-- ನೀವು ಹೋಗಿ ಕೇಳುವವುಗಳನ್ನೂ ನೋಡುವವು ಗಳನ್ನೂ ಯೋಹಾನನಿಗೆ ತಿಳಿಸಿರಿ;
- 1 John 5:11–12 1 ಯೋಹಾನನು 5:11–12ಆ ಸಾಕ್ಷಿ ಯಾವದಂದರೆ ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದನು.ಈ ಜೀವವು ಆತನ ಮಗನಲ್ಲಿ ಅದೆ ಎಂಬದೇ. ಯಾವನಲ್ಲಿ (ದೇವರ) ಮಗನು ಇದ್ದಾನೋ ಅವನಿಗೆ ಜೀವ ಉಂಟು; ಯಾವನಲ್ಲಿ ದೇವರ ಮಗನು ಇರುವ ದಿಲ್ಲವೋ ಅವನಿಗೆ ಜೀವವಿಲ್ಲ.
- John 14:10–11 ಯೋಹಾನನು 14:10–11ನಾನು ತಂದೆಯಲ್ಲಿ ಇದ್ದೇನೆ ಮತ್ತು ತಂದೆಯು ನನ್ನಲ್ಲಿ ಇದ್ದಾನೆ ಎಂದು ನೀನು ನಂಬುವದಿಲ್ಲವೋ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಮಾತನಾಡುವದಿಲ್ಲ; ಆದರೆ ನನ್ನಲ್ಲಿ ವಾಸಿಸುತ್ತಿರುವ ತಂದೆಯೇ ಆ ಕಾರ್ಯಗಳನ್ನು ಮಾಡುತ್ತಾನೆ. ನಾನು ತಂದೆ ಯಲ್ಲಿದ್ದೇನೆಂತಲೂ ತಂದೆಯು ನನ್ನಲ್ಲಿದ್ದಾನೆಂತಲೂ ನನ್ನನ್ನು ನಂಬಿರಿ. ಇಲ್ಲದಿದ್ದರೆ ಆ ಕ್ರಿಯೆಗಳ ನಿಮಿತ್ತವಾದರೂ ನನ್ನನ್ನು ನಂಬಿರಿ.