John · chapter 6 · verse 27
John 6:27 in Kannada
ನಾಶವಾಗುವ ಆಹಾರಕ್ಕಾಗಿ ಅಲ್ಲ, ನಿತ್ಯಜೀವ ವನ್ನುಂಟು ಮಾಡುವ ಆಹಾರಕ್ಕೋಸ್ಕರ ದುಡಿಯಿರಿ; ಅದನ್ನು ಮನುಷ್ಯಕುಮಾರನು ನಿಮಗೆ ಕೊಡುವನು; ತಂದೆಯಾದ ದೇವರು (ಇದಕ್ಕಾಗಿ) ಆತನಿಗೆ ಮುದ್ರೆ ಹಾಕಿದ್ದಾನೆ ಅಂದನು.
Naashavaaguva aahaarakkaagi alla, nityajeeva vannuntu maaduva aahaarakkoskara dudiyiri; adannu manushyakumaaranu nimage koduvanu; tandeyaada devaru (idakkaagi) aatanige mudre haakiddaane andanu.
John 6:27 in English
- King James Version (KJV)
- Labour not for the meat which perisheth, but for that meat which endureth unto everlasting life, which the Son of man shall give unto you: for him hath God the Father sealed.
- World English Bible (WEB)
- Don’t work for the food which perishes, but for the food which remains to eternal life, which the Son of Man will give to you. For God the Father has sealed him.”
- American Standard Version (ASV)
- Work not for the food which perisheth, but for the food which abideth unto eternal life, which the Son of man shall give unto you: for him the Father, [even] God, hath sealed.
- Bible in Basic English (BBE)
- Let your work not be for the food which comes to an end, but for the food which goes on for eternal life, which the Son of man will give to you, for on him has God the Father put his mark.
- Darby Translation (DBY)
- Work not [for] the food which perishes, but [for] the food which abides unto life eternal, which the Son of man shall give to you; for him has the Father sealed, [even] God.
- Webster's Bible (WBS)
- Labor not for the food which perisheth, but for that food which endureth to everlasting life, which the Son of man will give to you: for him hath God the Father sealed.
- Young's Literal Translation (YLT)
- work not for the food that is perishing, but for the food that is remaining to life age-during, which the Son of Man will give to you, for him did the Father seal — [even] God.'
Read in context
- 25ಅವರು ಆತನನ್ನು ಸಮು ದ್ರದ ಆಚೇಕಡೆಯಲ್ಲಿ ಕಂಡು ಆತನಿಗೆ--ರಬ್ಬಿಯೇ, ನೀನು ಇಲ್ಲಿಗೆ ಯಾವಾಗ ಬಂದಿ ಅಂದರು.
- 26ಯೇಸು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜನಿಜ ವಾಗಿ ಹೇಳುತ್ತೇನೆ, ನೀವು ನನ್ನನ್ನು ಹುಡುಕುವದು ಅದ್ಭುತಕಾರ್ಯಗಳನ್ನು ನೋಡಿದ್ದರಿಂದಲ್ಲ, ಆದರೆ ರೊಟ್ಟಿಗಳನ್ನು ತಿಂದು ತೃಪ್ತಿ ಹೊಂದಿದ್ದರಿಂದಲೇ.
- 27ನಾಶವಾಗುವ ಆಹಾರಕ್ಕಾಗಿ ಅಲ್ಲ, ನಿತ್ಯಜೀವ ವನ್ನುಂಟು ಮಾಡುವ ಆಹಾರಕ್ಕೋಸ್ಕರ ದುಡಿಯಿರಿ; ಅದನ್ನು ಮನುಷ್ಯಕುಮಾರನು ನಿಮಗೆ ಕೊಡುವನು; ತಂದೆಯಾದ ದೇವರು (ಇದಕ್ಕಾಗಿ) ಆತನಿಗೆ ಮುದ್ರೆ ಹಾಕಿದ್ದಾನೆ ಅಂದನು.
- 28ಆಗ ಅವರು ಆತನಿಗೆ--ನಾವು ದೇವರ ಕ್ರಿಯೆ ಗಳನ್ನು ಮಾಡುವಂತೆ ಏನು ಮಾಡಬೇಕು ಎಂದು ಕೇಳಿದ್ದಕ್ಕೆ
- 29ಯೇಸು ಪ್ರತ್ಯುತ್ತರವಾಗಿ ಅವರಿಗೆ--ದೇವರಕ್ರಿಯೆ ಯಾವದಂದರೆ, ಆತನು ಕಳುಹಿಸಿ ಕೊಟ್ಟಾತನನ್ನು ನೀವು ನಂಬುವದೇ ಅಂದನು.
Cross references
- Colossians 3:2 ಕೊಲೊಸ್ಸೆಯವರಿಗೆ 3:2ಮೇಲಿರು ವಂಥವುಗಳ ಮೇಲೆ ನಿಮ್ಮ ಮನಸ್ಸಿಡಿರಿ. ಭೂಸಂಬಂಧ ವಾದವುಗಳ ಮೇಲೆ ಇಡಬೇಡಿರಿ.
- Isaiah 55:2 ಯೆಶಾಯ 55:2ಆಹಾರವಲ್ಲದ್ದಕ್ಕೆ ಹಣವನ್ನೂ ತೃಪ್ತಿಪಡಿಸ ದಕ್ಕೆ ನಿಮ್ಮ ದುಡಿತವನ್ನೂ ವ್ಯಯಮಾಡುವದು ಯಾಕೆ? ಶ್ರದ್ಧೆಯಿಂದ ನನ್ನ ಕಡೆಗೆ ಕಿವಿಗೊಡಿರಿ ಮತ್ತು ಒಳ್ಳೆಯ ದನ್ನು ನೀವು ಉಣ್ಣಿರಿ, ನಿಮ್ಮ ಪ್ರಾಣವು ಕೊಬ್ಬಿನಲ್ಲಿ ಆನಂದಿಸಲಿ!
- John 6:54 ಯೋಹಾನನು 6:54ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನಿತ್ಯಜೀವವನ್ನು ಹೊಂದಿದ್ದಾನೆ; ನಾನು ಅವ ನನ್ನು ಕಡೇ ದಿನದಲ್ಲಿ ಎಬ್ಬಿಸುವೆನು.
- 2 Timothy 2:19 2 ತಿಮೊಥೆಯನಿಗೆ 2:19ಆದರೂ ದೇವರ ಅಸ್ತಿವಾರವು ಖಂಡಿತವಾಗಿ ನಿಲ್ಲುತ್ತದೆ. ಅದರ ಮೇಲೆ--ತನ್ನವರು ಯಾರಾರೆಂಬದನ್ನು ಕರ್ತನು ತಿಳಿದಿದ್ದಾನೆಂತಲೂ ಮತ್ತು ಕ್ರಿಸ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುಷ್ಟತ್ವವನ್ನು ಬಿಟ್ಟುಬಿಡ ಬೇಕೆಂತಲೂ ಮುದ್ರೆ ಉಂಟು.
- Matthew 6:19 ಮತ್ತಾಯನು 6:19ಭೂಲೋಕದಲ್ಲಿ ನಿಮಗೋಸ್ಕರ ಸಂಪತ್ತನ್ನು ಕೂಡಿಸಿಟ್ಟುಕೊಳ್ಳಬೇಡಿರಿ; ಇಲ್ಲಿ ನುಸಿಯೂ ಕಿಲುಬೂ ಅದನ್ನು ಹಾಳುಮಾಡುವದು; ಮತ್ತು ಕಳ್ಳರು ಕನ್ನಾ ಕೊರೆದು ಕದಿಯುವರು.
- John 6:40 ಯೋಹಾನನು 6:40ನನ್ನನ್ನು ಕಳುಹಿಸದಾತನ ಚಿತ್ತವೇನಂದರೆ, ಮಗನನ್ನು ನೋಡಿ ಆತನ ಮೇಲೆ ನಂಬಿಕೆ ಇಡುವ ಪ್ರತಿಯೊಬ್ಬನು ನಿತ್ಯ ಜೀವವನ್ನು ಹೊಂದುವದೇ; ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು ಎಂದು ಹೇಳಿದನು.
- Romans 6:23 ರೋಮಾಪುರದವರಿಗೆ 6:23ಯಾಕಂದರೆ ಪಾಪದ ಸಂಬಳ ಮರಣ. ಆದರೆ ದೇವರ ದಾನವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮುಖಾಂತರ ನಿತ್ಯಜೀವವು.
- John 6:51 ಯೋಹಾನನು 6:51ಪರಲೋಕದಿಂದ ಇಳಿದುಬಂದ ಜೀವದ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಎಂದೆಂದಿಗೂ ಬದುಕುವನು; ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ; ಅದನ್ನು ನಾನು ಲೋಕದ ಜೀವಕ್ಕಾಗಿ ಕೊಡುವೆನು ಅಂದನು.
- Acts 10:38 ಅಪೊಸ್ತಲರ ಕೃತ್ಯಗಳು 10:38ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮನಿಂದಲೂ ಬಲದಿಂದಲೂ ಅಭಿಷೇಕಿಸಿದ ನೆಂಬದನ್ನೂ ಹೇಗೆ ಆತನು ಒಳ್ಳೇದನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣ ಮಾಡುತ್ತಾ ಸಂಚರಿಸಿದನೆಂಬದನ್ನು ನೀವು ತಿಳಿದಿದ್ದೀರಿ; ಯಾಕಂದರೆ ದೇವರು ಆತನ ಸಂಗಡ ಇದ್ದನು.
- Jeremiah 15:16 ಯೆರೆಮೀಯ 15:16ನಿನ್ನ ವಾಕ್ಯಗಳು ಸಿಕ್ಕಿದವು, ಅವುಗಳನ್ನು ತಿಂದೆನು. ನಿನ್ನ ವಾಕ್ಯವು ನನ್ನ ಹೃದಯಕ್ಕೆ ಉಲ್ಲಾಸವೂ ಸಂತೋಷವೂ ಆಗಿತ್ತು; ಓ ಸೈನ್ಯಗಳ ದೇವರಾದ ಕರ್ತನೇ, ನಿನ್ನ ಹೆಸರಿನಿಂದ ಕರೆಯಲ್ಪಟ್ಟಿದ್ದೇನೆ.
- John 17:2 ಯೋಹಾನನು 17:2ನೀನು ಆತನಿಗೆ ಯಾರಾರನ್ನು ಕೊಟ್ಟಿದ್ದೀಯೋ ಅವರಿಗೆ ಆತನು ನಿತ್ಯಜೀವವನ್ನು ಕೊಡಬೇಕೆಂದು ಆತನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿದ್ದೀ.
- Proverbs 2:2–6 ಜ್ಞಾನೋಕ್ತಿಗಳು 2:2–6ನೀನು ಜ್ಞಾನಕ್ಕೆ ಕಿವಿಗೊಡು ವಂತೆಯೂ ತಿಳುವಳಿಕೆಗೆ ನಿನ್ನ ಹೃದಯವನ್ನು ತಿರು ಗಿಸುವಂತೆಯೂ ಹೌದು, ತಿಳುವಳಿಕೆಗಾಗಿ ಮೊರೆ ಯಿಟ್ಟು ವಿವೇಕಕ್ಕಾಗಿ ನಿನ್ನ ಸ್ವರವನ್ನು ಎತ್ತಿ ಬೆಳ್ಳಿ ಯಂತೆ ನೀನು ಅದನ್ನು ಹುಡುಕಿ ಬಚ್ಚಿಡಲ್ಪಟ್ಟ ಸಂಪ ತ್ತಿನಂತೆ ಅದಕ್ಕಾಗಿ ಹುಡುಕಿದರೆ, ನೀನು ಕರ್ತನ ಭಯವನ್ನು ತಿಳಿದುಕೊಳ್ಳುವಿ. ದೇವರ ಜ್ಞಾನವನ್ನು ಕಂಡುಕೊಳ್ಳುವಿ. ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.