John · chapter 6 · verse 51
John 6:51 in Kannada
ಪರಲೋಕದಿಂದ ಇಳಿದುಬಂದ ಜೀವದ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಎಂದೆಂದಿಗೂ ಬದುಕುವನು; ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ; ಅದನ್ನು ನಾನು ಲೋಕದ ಜೀವಕ್ಕಾಗಿ ಕೊಡುವೆನು ಅಂದನು.
Paralokadinda ilidubanda jeevada rottiyu naane; ee rottiyannu yaavanaadaroo tindare avanu endendigoo badukuvanu; naanu koduva rottiyu nanna maansave; adannu naanu lokada jeevakkaagi koduvenu andanu.
John 6:51 in English
- King James Version (KJV)
- I am the living bread which came down from heaven: if any man eat of this bread, he shall live for ever: and the bread that I will give is my flesh, which I will give for the life of the world.
- World English Bible (WEB)
- I am the living bread which came down out of heaven. If anyone eats of this bread, he will live forever. Yes, the bread which I will give for the life of the world is my flesh.”
- American Standard Version (ASV)
- I am the living bread which came down out of heaven: if any man eat of this bread, he shall live for ever: yea and the bread which I will give is my flesh, for the life of the world.
- Bible in Basic English (BBE)
- I am the living bread which has come from heaven: if any man takes this bread for food he will have life for ever: and more than this, the bread which I will give is my flesh which I will give for the life of the world.
- Darby Translation (DBY)
- I am the living bread which has come down out of heaven: if any one shall have eaten of this bread he shall live for ever; but the bread withal which I shall give is my flesh, which I will give for the life of the world.
- Webster's Bible (WBS)
- I am the living bread which came down from heaven: if any man shall eat of this bread, he shall live for ever: and the bread that I will give is my flesh, which I will give for the life of the world.
- Young's Literal Translation (YLT)
- 'I am the living bread that came down out of the heaven; if any one may eat of this bread he shall live — to the age; and the bread also that I will give is my flesh, that I will give for the life of the world.'
Read in context
- 49ನಿಮ್ಮ ಪಿತೃಗಳು ಅಡವಿಯಲ್ಲಿ ಮನ್ನಾ ತಿಂದಾಗ್ಯೂ ಸತ್ತು ಹೋದರು.
- 50ಮನುಷ್ಯನು ತಿಂದು ಸಾಯದೇ ಇರು ವಂತೆ ಪರಲೋಕದಿಂದ ಕೆಳಗೆ ಇಳಿದು ಬಂದ ರೊಟ್ಟಿ ಇದೇ.
- 51ಪರಲೋಕದಿಂದ ಇಳಿದುಬಂದ ಜೀವದ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಎಂದೆಂದಿಗೂ ಬದುಕುವನು; ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ; ಅದನ್ನು ನಾನು ಲೋಕದ ಜೀವಕ್ಕಾಗಿ ಕೊಡುವೆನು ಅಂದನು.
- 52ಇದರಿಂದ ಯೆಹೂದ್ಯರು ತಮ್ಮತಮ್ಮೊಳಗೆ ವಾಗ್ವಾದ ಮಾಡುತ್ತಾ--ಈ ಮನುಷ್ಯನು ತನ್ನ ಮಾಂಸ ವನ್ನು ತಿನ್ನುವದಕ್ಕೆ ನಮಗೆ ಹೇಗೆ ಕೊಡುತ್ತಾನೆ ಅಂದರು.
- 53ಆಗ ಯೇಸು ಅವರಿಗೆ--ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿಂದು ಆತನ ರಕ್ತವನ್ನು ಕುಡಿಯದ ಹೊರತು ನಿಮ್ಮೊಳಗೆ ಜೀವವಿಲ್ಲ.
Cross references
- John 6:33 ಯೋಹಾನನು 6:33ಪರಲೋಕದಿಂದ ಕೆಳಗೆ ಬಂದು ಲೋಕಕ್ಕೆ ಜೀವವನ್ನು ಕೊಡುವಾತನೇ ದೇವರ ರೊಟ್ಟಿಯಾಗಿದ್ದಾನೆ ಅಂದನು.
- Luke 22:19 ಲೂಕನು 22:19ಆತನು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅದನ್ನು ಮುರಿದು ಅವರಿಗೆ ಕೊಟ್ಟು--ಇದು ನಿಮಗೋಸ್ಕರ ಕೊಡಲ್ಪಟ್ಟ ನನ್ನ ದೇಹ; ನನ್ನ ನೆನಪಿ ಗಾಗಿ ನೀವು ಇದನ್ನು ಮಾಡಿರಿ ಅಂದನು.
- Titus 2:14 ತೀತನಿಗೆ 2:14ಆತನು ನಮ್ಮನ್ನು ಸಕಲ ದುಷ್ಟತನದಿಂದ ವಿಮೋಚಿಸುವದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಅಸಮಾನ್ಯ ಜನರನ್ನು ತನಗಾಗಿ ಪರಿಶುದ್ಧ ಮಾಡುವದಕ್ಕೂ ನಮಗೋಸ್ಕರ ತನ್ನನ್ನು ತಾನೇ ಒಪ್ಪಿಸಿ ಕೊಟ್ಟನು.ಈ ಕಾರ್ಯಗಳ ವಿಷಯದಲ್ಲಿ ಮಾತನಾಡುತ್ತಾ ಎಚ್ಚರಿಸುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದಿರಲಿ.
- Hebrews 10:5–12 ಇಬ್ರಿಯರಿಗೆ 10:5–12ಆದದರಿಂದ ಆತನು ಭೂಲೋಕದೊಳಗೆ ಬರುವಾಗ--(ದೇವರೇ,) ಯಜ್ಞವೂ ಅರ್ಪಣೆಯೂ ನಿನಗೆ ಇಷ್ಟವಾಗಿರಲಿಲ್ಲ, ಆದರೆ ನನಗೆ ದೇಹವನ್ನು ಸಿದ್ಧಮಾಡಿಕೊಟ್ಟೀ; ದಹನ ಬಲಿಗಳಲ್ಲಿಯೂ ಪಾಪಪರಿಹಾರಕ ಯಜ್ಞಗಳಲ್ಲಿಯೂ ನೀನು ಸಂತೋಷಪಡಲಿಲ್ಲ; ಆಗ ನಾನು--ಇಗೋ, ಓ ದೇವರೇ, ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ; ನಿನ್ನ ಚಿತ್ತವನ್ನು ನೇರವೇರಿಸುವದಕ್ಕೆ ಬಂದಿ ದ್ದೇನೆ ಎಂದು ಹೇಳಿದೆನು ಅನ್ನುತ್ತಾನೆ. ಆಮೇಲೆ ಆತನು--ನ್ಯಾಯಪ್ರಮಾಣದಂತೆ ಅರ್ಪಿಸಲ್ಪಡುವಂಥ ಯಜ್ಞವೂ ಅರ್ಪಣೆಯೂ ದಹನ ಬಲಿಗಳೂ ಪಾಪ ಕ್ಕಾಗಿ ಅರ್ಪಣೆಯೂ ನಿನಗೆ ಇಷ್ಟವಾಗಿರಲಿಲ್ಲ ಇಲ್ಲವೆ ಅವುಗಳಲ್ಲಿ ನಿನಗೆ ಸಂತೋಷವಿರಲಿಲ್ಲ ಎಂದು ಹೇಳಿ ದ್ದಾನೆ. ತರು ವಾಯ--ಇಗೋ, ಓ ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವದಕ್ಕೆ ಬಂದಿದ್ದೇನೆ ಎಂತಲೂ ಹೇಳಿದ್ದಾನೆ. ಆತನು ಎರಡನೆಯದನ್ನು ಸ್ಥಾಪಿಸುವ ದಕ್ಕಾಗಿ ಮೊದಲನೆಯದನ್ನು ತೆಗೆದುಹಾಕುತ್ತಾನೆ. ಯೇಸು ಕ್ರಿಸ್ತನು ಒಂದೇ ಸಾರಿ ಎಂದೆಂದಿಗೂ ಅರ್ಪಿಸಿದ ತನ್ನ ದೇಹದ ಮೂಲಕ ಆತನ ಚಿತ್ತದಿಂದ ನಾವು ಶುದ್ಧರಾದೆವು. ಇದಲ್ಲದೆ ಪ್ರತಿ ಯಾಜಕನು ದಿನಾಲು ಸೇವೆ ಮಾಡುತ್ತಾ ಎಂದಿಗೂ ಪಾಪವನ್ನು ತೆಗೆದು ಹಾಕಲಾರ ದಂಥ ಒಂದೇ ವಿಧವಾದ ಯಜ್ಞಗಳನ್ನು ಪದೇ ಪದೇ ಅರ್ಪಿಸುತ್ತಾ ನಿಂತುಕೊಂಡಿರುವನು. ಆದರೆ ಈ ಮನುಷ್ಯನು ಪಾಪಗಳಿಗೋಸ್ಕರ ನಿರಂತರವಾದ ಒಂದೇ ಯಜ್ಞವನ್ನು ಅರ್ಪಿಸಿದ ಮೇಲೆ ದೇವರ ಬಲ ಗಡೆಯಲ್ಲಿ ಕೂತುಕೊಂಡನು.
- John 3:13 ಯೋಹಾನನು 3:13ಪರಲೋಕದಿಂದ ಇಳಿದು ಬಂದಾತನೇ ಅಂದರೆ ಪರಲೋಕದಲ್ಲಿರುವ ಮನುಷ್ಯ ಕುಮಾರನೇ ಹೊರತು ಯಾವನೂ ಪರಲೋಕಕ್ಕೆ ಏರಿಹೋದವನಲ್ಲ.
- Matthew 20:28 ಮತ್ತಾಯನು 20:28ಮನುಷ್ಯ ಕುಮಾರನು ಸಹ ಸೇವೆ ಮಾಡಿಸಿಕೊಳ್ಳುವದಕ್ಕಾಗಿ ಅಲ್ಲ, ಸೇವೆ ಮಾಡುವದಕ್ಕಾಗಿಯೂ ಅನೇಕರಿಗಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕಾಗಿಯೂ ಬಂದನು ಎಂದು ಹೇಳಿದನು.
- 2 Corinthians 5:21 2 ಕೊರಿಂಥದವರಿಗೆ 5:21ನಾವು ಆತನಲ್ಲಿ ದೇವರ ನೀತಿಯಾಗುವಂತೆ ದೇವರು ಪಾಪವನ್ನರಿಯ ಆತನನ್ನು ನಮಗೋಸ್ಕರ ಪಾಪವಾಗ ಮಾಡಿದನು.
- Hebrews 10:20 ಇಬ್ರಿಯರಿಗೆ 10:20ಹೇಗೆಂದರೆ, ಆತನು ನಮಗೋಸ್ಕರ ಪ್ರತಿಷ್ಠಿಸಿದ ಮತ್ತು ಹೊಸ ಜೀವವುಳ್ಳ ದಾರಿಯಲ್ಲಿ ಆತನ ಶರೀರವೆಂಬ ತೆರೆಯ ಮುಖಾಂತರವೇ ಇದಾಯಿತು.
- John 3:16 ಯೋಹಾನನು 3:16ದೇವರು ಲೋಕವನ್ನು ಎಷ್ಟೋ ಪ್ರೀತಿಮಾಡಿ ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಯಾವನಾದರೂ ನಾಶವಾಗದೆ ನಿತ್ಯಜೀವ ವನ್ನು ಪಡೆದವನಾಗಿರುವನು.
- Ephesians 5:2 ಎಫೆಸದವರಿಗೆ 5:2ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತನ್ನನ್ನೇ ದೇವರಿಗೆ ಸುಗಂಧವಾಸನೆಯಾದ ಕಾಣಿಕೆ ಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.
- John 1:29 ಯೋಹಾನನು 1:29ಮರುದಿನ ಯೋಹಾನನು ತನ್ನ ಕಡೆಗೆ ಬರುತ್ತಿದ್ದ ಯೇಸುವನ್ನು ನೋಡಿ--ಇಗೋ, ಲೋಕದ ಪಾಪ ವನ್ನು ತೆಗೆದುಹಾಕುವ ದೇವರ ಕುರಿಮರಿ ಎಂದು ಹೇಳಿದನು.
- John 6:52–58 ಯೋಹಾನನು 6:52–58ಇದರಿಂದ ಯೆಹೂದ್ಯರು ತಮ್ಮತಮ್ಮೊಳಗೆ ವಾಗ್ವಾದ ಮಾಡುತ್ತಾ--ಈ ಮನುಷ್ಯನು ತನ್ನ ಮಾಂಸ ವನ್ನು ತಿನ್ನುವದಕ್ಕೆ ನಮಗೆ ಹೇಗೆ ಕೊಡುತ್ತಾನೆ ಅಂದರು. ಆಗ ಯೇಸು ಅವರಿಗೆ--ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿಂದು ಆತನ ರಕ್ತವನ್ನು ಕುಡಿಯದ ಹೊರತು ನಿಮ್ಮೊಳಗೆ ಜೀವವಿಲ್ಲ. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನಿತ್ಯಜೀವವನ್ನು ಹೊಂದಿದ್ದಾನೆ; ನಾನು ಅವ ನನ್ನು ಕಡೇ ದಿನದಲ್ಲಿ ಎಬ್ಬಿಸುವೆನು. ಯಾಕಂದರೆ ನನ್ನ ಮಾಂಸವು ನಿಜವಾದ ಆಹಾರವೂ ನನ್ನ ರಕ್ತವು ನಿಜವಾದ ಪಾನವೂ ಆಗಿದೆ. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನನ್ನಲ್ಲಿ ವಾಸಿಸುತ್ತಾನೆ; ನಾನು ಅವನಲ್ಲಿ ವಾಸಿ ಸುತ್ತೇನೆ. ಜೀವವುಳ್ಳ ತಂದೆಯು ನನ್ನನ್ನು ಕಳುಹಿಸಿ ರಲಾಗಿ ನಾನು ತಂದೆಯ ಮೂಲಕ ಜೀವಿಸುವಂತೆಯೇ ನನ್ನನ್ನು ತಿನ್ನುವವನು ನನ್ನ ಮೂಲಕವಾಗಿಯೇ ಜೀವಿ ಸುವನು. ಪರಲೋಕದಿಂದ ಇಳಿದು ಬಂದ ರೊಟ್ಟಿಯು ಇದೆ; ನಿಮ್ಮ ಪಿತೃಗಳು ಮನ್ನಾ ತಿಂದಾಗ್ಯೂ ಸತ್ತುಹೋದಂತೆ ಅಲ್ಲ; ಆದರೆ ಈ ರೊಟ್ಟಿಯನ್ನು ತಿನ್ನುವವನು ಎಂದೆಂದಿಗೂ ಜೀವಿಸುವನು ಅಂದನು.