John · chapter 7 · verse 19
John 7:19 in Kannada
ಮೋಶೆಯು ನಿಮಗೆ ನ್ಯಾಯ ಪ್ರಮಾಣವನ್ನು ಕೊಟ್ಟಾಗ್ಯೂ ನಿಮ್ಮಲ್ಲಿ ಒಬ್ಬನೂ ಆ ನ್ಯಾಯಪ್ರಮಾಣವನ್ನು ಕೈಕೊಳ್ಳಲಿಲ್ಲವಲ್ಲಾ; ನೀವು ಯಾಕೆ ನನ್ನನ್ನು ಕೊಲ್ಲುವದಕ್ಕೆ ನೋಡುತ್ತೀರಿ ಎಂದು ಹೇಳಿದನು.
Mosheyu nimage nyaaya pramaanavannu kottaagyoo nimmalli obbanoo aa nyaayapramaanavannu kaikollalillavallaa; neevu yaake nannannu kolluvadakke nodutteeri endu helidanu.
John 7:19 in English
- King James Version (KJV)
- Did not Moses give you the law, and [yet] none of you keepeth the law? Why go ye about to kill me?
- World English Bible (WEB)
- Didn’t Moses give you the law, and yet none of you keeps the law? Why do you seek to kill me?”
- American Standard Version (ASV)
- Did not Moses give you the law, and [yet] none of you doeth the law? Why seek ye to kill me?
- Bible in Basic English (BBE)
- Did not Moses give you the law? Even so, not one of you keeps the law. Why have you a desire to put me to death?
- Darby Translation (DBY)
- Has not Moses given you the law, and no one of you practises the law? Why do ye seek to kill me?
- Webster's Bible (WBS)
- Did not Moses give you the law, and [yet] none of you keepeth the law? Why go ye about to kill me?
- Young's Literal Translation (YLT)
- hath not Moses given you the law? and none of you doth the law; why me do ye seek to kill?'
Read in context
- 17ಯಾವನಾದರೂ ಆತನ ಚಿತದಂತೆ ಮಾಡಿದರೆ ಈ ಬೋಧನೆಯು ದೇವರದೋ ಅಥವಾ ನನ್ನಷ್ಟಕ್ಕೆ ನಾನೇ ಹೇಳುತ್ತೇನೋ ಎಂಬದು ಅವನಿಗೆ ತಿಳಿಯುವದು.
- 18ತನ್ನ ವಿಷಯವಾಗಿ ತಾನೇ ಮಾತನಾಡುವವನು ತನ್ನ ಸ್ವಂತ ಮಹಿಮೆಯನ್ನು ಹುಡುಕುತ್ತಾನೆ; ಆದರೆ ತನ್ನನ್ನು ಕಳುಹಿಸಿದಾತನ ಮಹಿಮೆಯನ್ನು ಹುಡುಕುವಾತನೇ ಸತ್ಯವಂತನು; ಆತ ನಲ್ಲಿ ಅನೀತಿಯಿಲ್ಲ.
- 19ಮೋಶೆಯು ನಿಮಗೆ ನ್ಯಾಯ ಪ್ರಮಾಣವನ್ನು ಕೊಟ್ಟಾಗ್ಯೂ ನಿಮ್ಮಲ್ಲಿ ಒಬ್ಬನೂ ಆ ನ್ಯಾಯಪ್ರಮಾಣವನ್ನು ಕೈಕೊಳ್ಳಲಿಲ್ಲವಲ್ಲಾ; ನೀವು ಯಾಕೆ ನನ್ನನ್ನು ಕೊಲ್ಲುವದಕ್ಕೆ ನೋಡುತ್ತೀರಿ ಎಂದು ಹೇಳಿದನು.
- 20ಅದಕ್ಕೆ ಜನರು ಪ್ರತ್ಯುತ್ತರವಾಗಿ--ನಿನಗೆ ದೆವ್ವ ಹಿಡಿದಿದೆ; ನಿನ್ನನ್ನು ಕೊಲ್ಲುವದಕ್ಕೆ ನೋಡು ವವರು ಯಾರು ಅಂದರು.
- 21ಯೇಸು ಪ್ರತ್ಯುತ್ತರ ವಾಗಿ ಅವರಿಗೆ--ನಾನು ಒಂದು ಕ್ರಿಯೆಯನ್ನು ಮಾಡಿ ದೆನು; ಅದಕ್ಕೆ ನೀವೆಲ್ಲರು ಆಶ್ಚರ್ಯಪಡುತ್ತೀ
Cross references
- John 1:17 ಯೋಹಾನನು 1:17ನ್ಯಾಯಪ್ರಮಾಣವು ಮೋಶೆಯ ಮುಖಾಂತರ ವಾಗಿ ಕೊಡಲ್ಪಟ್ಟಿತು; ಆದರೆ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರವಾಗಿ ಬಂದವು.
- John 7:1 ಯೋಹಾನನು 7:1ಇವುಗಳಾದ ಮೇಲೆ ಯೇಸು ಗಲಿಲಾ ಯದಲ್ಲಿ ಸಂಚಾರ ಮಾಡಿದನು; ಯೆಹೂದ್ಯರು ಆತನನ್ನು ಕೊಲ್ಲುವದಕ್ಕೆ ಹುಡುಕುತ್ತಿ ದ್ದದರಿಂದ ಯೂದಾಯದಲ್ಲಿ ಸಂಚರಿಸಲು ಆತನಿಗೆ ಮನಸ್ಸಿರಲಿಲ್ಲ.
- Matthew 12:14 ಮತ್ತಾಯನು 12:14ತರುವಾಯ ಫರಿಸಾ ಯರು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧವಾಗಿ ಆಲೋಚಿಸಲು ಹೊರಗೆ ಹೋದರು.
- John 11:53 ಯೋಹಾನನು 11:53ಅವರು ಕೂಡಿ ಕೊಂಡು ಆ ದಿನದಿಂದ ಆತನನ್ನು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು.
- Galatians 6:13 ಗಲಾತ್ಯದವರಿಗೆ 6:13ಸುನ್ನತಿ ಮಾಡಿಸಿಕೊಳ್ಳುವ ತಾವಾದರೊ ನ್ಯಾಯಪ್ರಮಾಣ ವನ್ನು ಕೈಕೊಂಡು ನಡೆಯುವದಿಲ್ಲ. ಆದರೆ ಅವರು ನಿಮ್ಮ ಶರೀರದ ವಿಷಯದಲ್ಲಿ ಹೆಚ್ಚಳ ಪಡುವದಕ್ಕಾಗಿ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ.
- Deuteronomy 1:17 ಧರ್ಮೋಪದೇಶಕಾಂಡ 1:17ನ್ಯಾಯದಲ್ಲಿ ನೀವು ಮುಖದಾಕ್ಷಿಣ್ಯ ನೋಡಬೇಡಿರಿ; ಹಿರಿಯನನ್ನು ಹೇಗೋ, ಹಾಗೆಯೇ ಕಿರಿಯನನ್ನು ಕೇಳಬೇಕು; ಮನುಷ್ಯನ ಮುಖವನ್ನು ನೋಡಿ ಹೆದರಬೇಡಿರಿ; ಯಾಕಂದರೆ ನ್ಯಾಯತೀರ್ಪು ದೇವರದೇ; ನಿಮಗೆ ಕಠಿಣವಾದ ವ್ಯಾಜ್ಯಗಳನ್ನು ನನ್ನ ಮುಂದೆ ತನ್ನಿರಿ; ಆಗ ನಾನು ಅದನ್ನು ತೀರಿಸುವೆನು.
- Exodus 24:2–3 ವಿಮೋಚನಕಾಂಡ 24:2–3ಮೋಶೆ ಒಬ್ಬನೇ ಕರ್ತನ ಸವಿಾಪಕ್ಕೆ ಬರಲಿ; ಆದರೆ ಅವರು ಸವಿಾಪಕ್ಕೆ ಬರಬಾರದು. ಇಲ್ಲವೆ ಜನರು ಅವನ ಸಂಗಡ ಬರಬಾರದು ಎಂದು ಹೇಳಿದನು. ಮೋಶೆಯು ಬಂದು ಕರ್ತನ ಎಲ್ಲಾ ಮಾತುಗಳನ್ನೂ ಎಲ್ಲಾ ನ್ಯಾಯವಿಧಿಗಳನ್ನೂ ಜನರಿಗೆ ತಿಳಿಯಪಡಿ ಸಿದನು; ಆಗ ಜನರೆಲ್ಲಾ ಒಂದೇ ಸ್ವರದಿಂದ--ಕರ್ತನು ಹೇಳಿದ ಎಲ್ಲಾ ಮಾತುಗಳ ಪ್ರಕಾರ ಮಾಡುತ್ತೇವೆ ಎಂದು ಉತ್ತರಕೊಟ್ಟರು.
- Deuteronomy 33:4 ಧರ್ಮೋಪದೇಶಕಾಂಡ 33:4ಮೋಶೆ ನಮಗೆ ನ್ಯಾಯಪ್ರಮಾಣವನ್ನು ಆಜ್ಞಾಪಿ ಸಿದ್ದಾನೆ. ಅದೇ ಯಾಕೋಬನ ಸಭೆಯ ಬಾಧ್ಯತೆಯು.
- Mark 3:4 ಮಾರ್ಕನು 3:4ಆತನು ಅವರಿಗೆ --ಸಬ್ಬತ್ ದಿವಸಗಳಲ್ಲಿ ಒಳ್ಳೇದನ್ನು ಮಾಡುವದು ನ್ಯಾಯವೋ ಇಲ್ಲವೆ ಕೆಟ್ಟದ್ದನ್ನು ಮಾಡುವದು ನ್ಯಾಯವೋ? ಪ್ರಾಣವನ್ನು ಉಳಿಸುವದೋ ಇಲ್ಲವೆ ಕೊಲ್ಲುವದೋ ಎಂದು ಕೇಳಿದನು; ಆದರೆ ಅವರು ಸುಮ್ಮನಿದ್ದರು.
- John 5:45 ಯೋಹಾನನು 5:45ತಂದೆಯ ಮುಂದೆ ನಿಮ್ಮ ಮೇಲೆ ನಾನು ತಪ್ಪು ಹೊರಿಸುವೆನೆಂದು ನೀವು ನೆನಸಬೇಡಿರಿ; ಆದರೆ ನೀವು ನಂಬಿರುವ ಮೋಶೆಯೇ ನಿಮ್ಮ ಮೇಲೆ ತಪ್ಪು ಹೊರಿಸುತ್ತಾನೆ.
- Psalm 2:1–6 ಕೀರ್ತನೆಗಳು 2:1–6ಅನ್ಯಜನರು ಕೋಪೋದ್ರೇಕಗೊಳ್ಳುವದೂ ಪ್ರಜೆಗಳು ವ್ಯರ್ಥವಾದದ್ದನ್ನು ಯೋಚಿಸುವದೂ ಯಾಕೆ? ಕರ್ತನಿಗೆ ವಿರೋಧ ವಾಗಿಯೂ ಆತನ ಅಭಿಷಕ್ತನಿಗೆ ವಿರೋಧವಾಗಿಯೂ ಭೂರಾಜರು ನಿಂತುಕೊಳ್ಳುತ್ತಾರೆ; ಪ್ರಭುಗಳು ಒಟ್ಟಾಗಿ ಆಲೋಚಿಸುತ್ತಾರೆ. ಅವರು--ಅವರ ಬಂಧನಗಳನ್ನು ತುಂಡುತುಂಡಾಗಿ ಮುರಿದು ಅವರ ಕಟ್ಟುಗಳನ್ನು ನಮ್ಮಿಂದ ಬಿಸಾಡೋಣ ಅನ್ನುತ್ತಾರೆ. ಪರಲೋಕದಲ್ಲಿ ಕೂತಿರುವಾತನು ಅದಕ್ಕೆ ನಗು ವನು! ಕರ್ತನು ಅವರನ್ನು ಪರಿಹಾಸ್ಯ ಮಾಡುವನು. ಆಗ ಆತನು ತನ್ನ ಕೋಪದಿಂದ ಅವರ ಸಂಗಡ ಮಾತನಾಡುವನು; ತನ್ನ ಕೋಪಾವೇಶದಿಂದ ಅವ ರನ್ನು ಕಳವಳಪಡಿಸುವನು. ಆದಾಗ್ಯೂ ನಾನು ನನ್ನ ಅರಸನನ್ನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನ ಮೇಲೆ ಸ್ಥಾಪಿಸಿದ್ದೇನೆ.
- Romans 2:12–13 ರೋಮಾಪುರದವರಿಗೆ 2:12–13ನ್ಯಾಯ ಪ್ರಮಾಣವಿಲ್ಲದೆ ಪಾಪ ಮಾಡಿದವರೆಲ್ಲರೂ ನ್ಯಾಯ ಪ್ರಮಾಣವಿಲ್ಲದೆ ನಾಶವಾಗುವರು; ನ್ಯಾಯಪ್ರಮಾಣ ವುಳ್ಳವರಾಗಿದ್ದು ಪಾಪ ಮಾಡಿದವರು ನ್ಯಾಯಪ್ರಮಾ ಣದಿಂದಲೇ ತೀರ್ಪು ಹೊಂದುವರು. (ನ್ಯಾಯ ಪ್ರಮಾಣವನ್ನು ಕೇಳುವವರು ದೇವರ ಸನ್ನಿಧಿಯಲಿ ನೀತಿವಂತರಾಗುವದಿಲ್ಲ; ನ್ಯಾಯಪ್ರಮಾಣವನ್ನು ಕೈ ಕೊಂಡು ನಡೆಯುವವರೇ ನೀತಿವಂತರೆಂದು ಎಣಿಸ ಲ್ಪಡುವರು.