Jonah · chapter 3 · verse 8
Jonah 3:8 in Kannada
ಹೌದು, ಅವರು ತಮ್ಮ ತಮ್ಮ ದುರ್ಮಾರ್ಗ ಗಳನ್ನೂ ತಾವು ನಡಿಸುತ್ತಿರುವ ಹಿಂಸೆಯನ್ನು ಬಿಟ್ಟು ತಿರುಗಲಿ.
Haudu, avaru tamma tamma durmaarga galannoo taavu nadisuttiruva hinseyannu bittu tirugali.
Jonah 3:8 in English
- King James Version (KJV)
- But let man and beast be covered with sackcloth, and cry mightily unto God: yea, let them turn every one from his evil way, and from the violence that [is] in their hands.
- World English Bible (WEB)
- but let them be covered with sackcloth, both man and animal, and let them cry mightily to God. Yes, let them turn everyone from his evil way and from the violence that is in his hands.
- American Standard Version (ASV)
- but let them be covered with sackcloth, both man and beast, and let them cry mightily unto God: yea, let them turn every one from his evil way, and from the violence that is in his hands.
- Bible in Basic English (BBE)
- And let man and beast be covered with haircloth, and let them make strong prayers to God: and let everyone be turned from his evil way and the violent acts of their hands.
- Darby Translation (DBY)
- and let man and beast be covered with sackcloth, and cry mightily unto God; and let them turn every one from his evil way, and from the violence that is in their hands.
- Webster's Bible (WBS)
- But let man and beast be covered with sackcloth, and cry mightily to God: yes, let them turn every one from his evil way, and from the violence that [is] in their hands.
- Young's Literal Translation (YLT)
- and cover themselves [with] sackcloth let man and beast, and let them call unto God mightily, and let them turn back each from his evil way, and from the violence that [is] in their hands.
Read in context
- 6ಆ ಮಾತು ನಿನೆವೆಯ ಅರಸನಿಗೆ ಮುಟ್ಟಿದಾಗ ಅವನು ತನ್ನ ಸಿಂಹಾಸನದಿಂದ ಎದ್ದು ತನ್ನ ನಿಲುವಂಗಿಯನ್ನು ತೆಗೆದಿಟ್ಟು ಗೋಣೀತಟ್ಟನ್ನು ಉಟ್ಟುಕೊಂಡು ಬೂದಿ ಯಲ್ಲಿ ಕೂತು ಕೊಂಡನು.
- 7ಅವನು ಅರಸನಿಂದಲೂ ತನ್ನ ಶ್ರೇಷ್ಠರಿಂದಲೂ ಆದ ನಿರ್ಣಯವನ್ನು ನಿನೆವೆ ಯಲ್ಲಿ ಸಾರಿ ಹೇಳಿದ್ದೇನಂದರೆ--ಮನುಷ್ಯರಾಗಲಿ, ಮೃಗಗಳಾಗಲಿ, ದನಗಳಾಗಲಿ, ಕುರಿಗಳಾಗಲಿ, ಏನಾ ದರೂ ರುಚಿ ನೋಡದಿರಲಿ, ಮೇಯ ದಿರಲಿ, ನೀರನ್ನು ಕುಡಿಯದಿರಲಿ, ಮನುಷ್ಯರೂ ಮೃಗಗಳೂ ಗೋಣೀ ತಟ್ಟು ಹಾಕಿಕೊಂಡು ಬಲವಾಗಿ ದೇವರಿಗೆ ಮೊರೆಯಿ ಡಲಿ;
- 8ಹೌದು, ಅವರು ತಮ್ಮ ತಮ್ಮ ದುರ್ಮಾರ್ಗ ಗಳನ್ನೂ ತಾವು ನಡಿಸುತ್ತಿರುವ ಹಿಂಸೆಯನ್ನು ಬಿಟ್ಟು ತಿರುಗಲಿ.
- 9ದೇವರು ತಿರುಗಿ ಕೊಂಡು ಪಶ್ಚಾತ್ತಾಪಪಟ್ಟು ನಾವು ನಾಶವಾಗದ ಹಾಗೆ ತನ್ನ ಕೋಪದ ಉರಿಯನ್ನು ಬಿಟ್ಟಾನೇನೋ ಯಾರು ಬಲ್ಲರು ಅಂದನು.ಆಗ ದೇವರು ಅವರ ಕ್ರಿಯೆಗಳನ್ನೂ ಅವರು ತಮ್ಮ ಕೆಟ್ಟ ಮಾರ್ಗವನ್ನೂ ಬಿಟ್ಟು ತಿರುಗಿದರೆಂದು ನೋಡಿದನು; ದೇವರು ಅವರಿಗೆ ಮಾಡುತ್ತೇನೆಂದು ಹೇಳಿದ ಕೇಡಿನ ವಿಷಯವಾಗಿ ಪಶ್ಚಾತ್ತಾಪಪಟ್ಟು ಅದನ್ನು ಮಾಡಲಿಲ್ಲ.
- 10ಆಗ ದೇವರು ಅವರ ಕ್ರಿಯೆಗಳನ್ನೂ ಅವರು ತಮ್ಮ ಕೆಟ್ಟ ಮಾರ್ಗವನ್ನೂ ಬಿಟ್ಟು ತಿರುಗಿದರೆಂದು ನೋಡಿದನು; ದೇವರು ಅವರಿಗೆ ಮಾಡುತ್ತೇನೆಂದು ಹೇಳಿದ ಕೇಡಿನ ವಿಷಯವಾಗಿ ಪಶ್ಚಾತ್ತಾಪಪಟ್ಟು ಅದನ್ನು ಮಾಡಲಿಲ್ಲ.
Cross references
- Isaiah 59:6 ಯೆಶಾಯ 59:6ಅವರ ನೂಲು ವಸ್ತ್ರಕ್ಕಾಗದು; ತಮ್ಮ ಕೆಲಸಗಳಿಂದ ತಮ್ಮನ್ನು ಹೊದ್ದು ಕೊಳ್ಳರು; ಅವರ ಕೆಲಸಗಳು ಅಕ್ರಮದ ಕೆಲಸಗಳೇ; ಅವರ ಕೈಗಳಲ್ಲಿ ಹಿಂಸೆಯ ಕ್ರಿಯೆಗಳು ಅವೆ.
- Isaiah 55:6–7 ಯೆಶಾಯ 55:6–7ಕರ್ತನು ಸಿಕ್ಕುವ ಕಾಲದಲ್ಲಿ ಆತನನ್ನು ಹುಡುಕಿರಿ; ಆತನು ಸವಿಾಪವಾಗಿರುವಾಗಲೇ ಆತನನ್ನು ಕರೆಯಿರಿ. ದುಷ್ಟನು ತನ್ನ ಮಾರ್ಗವನ್ನೂ ಅನೀತಿವಂತನು ತನ್ನ ಆಲೋಚನೆಗಳನ್ನೂ ತೊರೆದುಬಿಟ್ಟು ಕರ್ತನ ಕಡೆಗೆ ಹಿಂತಿರುಗಲಿ; ಆತನು ಅವನ ಮೇಲೆ ಕರುಣೆಯಿಡು ವನು; ನಮ್ಮ ದೇವರ ಬಳಿಗೂ ಹಿಂತಿರುಗಲಿ, ಆತನು ಹೇರಳವಾಗಿ ಕ್ಷಮಿಸುವನು.
- Jonah 1:6 ಯೋನ 1:6ಆಗ ಹಡಗಿನ ಯಜಮಾನನು ಅವನ ಬಳಿಗೆ ಬಂದು--ನಿದ್ರೆಮಾಡುವವನೇ, ನಿನಗೆ ಏನಾಯಿತು? ಎದ್ದು ನಿನ್ನ ದೇವರನ್ನು ಕೂಗು; ಒಂದು ವೇಳೆ ನಾವು ನಾಶವಾಗದ ಹಾಗೆ ದೇವರು ನಮ್ಮನ್ನು ಜ್ಞಾಪಕ ಮಾಡ್ಯಾನು ಅಂದನು.
- Isaiah 1:16–19 ಯೆಶಾಯ 1:16–19ನಿಮ್ಮನ್ನು ತೊಳೆದುಕೊಂಡು ಶುದ್ಧ ಮಾಡಿಕೊಳ್ಳಿರಿ; ನನ್ನ ಕಣ್ಣೆದುರಿನಿಂದ ನಿಮ್ಮ ದುಷ್ಟ ಕೃತ್ಯಗಳನ್ನು ತೆಗೆದುಹಾಕಿರಿ, ಕೆಟ್ಟದ್ದನ್ನು ನಿಲ್ಲಿಸಿಬಿಡಿರಿ; ಒಳ್ಳೆಯದನ್ನು ಮಾಡಲು ಕಲಿತುಕೊಳ್ಳಿರಿ; ನ್ಯಾಯ ವನ್ನು ಹುಡುಕಿರಿ, ಹಿಂಸೆಪಡುವವರನ್ನು ಉಪಚರಿಸಿರಿ, ಅನಾಥರಿಗೆ ನ್ಯಾಯತೀರಿಸಿರಿ, ವಿಧವೆಯರ ಪರವಾಗಿವಾದಿಸಿರಿ. ಈಗ ಬನ್ನಿರಿ, ನಾವು ಒಟ್ಟಾಗಿ ವಾದಿಸೋಣ ಎಂದು ಕರ್ತನು ಹೇಳುತ್ತಾನೆ; ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದಂತೆ ಬಿಳುಪಾಗುವವು; ಕಡು ಕೆಂಪಿನಂತೆ ಕೆಂಪಾಗಿದ್ದರೂ ಉಣ್ಣೆಯಂತೆ ಆಗುವವು. ನೀವು ಒಪ್ಪಿ ವಿಧೇಯರಾದರೆ ದೇಶದ ಮೇಲನ್ನು ಅನುಭವಿಸುವಿರಿ;
- Ezekiel 18:21–24 ಯೆಹೆಜ್ಕೇಲನು 18:21–24ಆದರೆ ದುಷ್ಟನು ತಾನು ಮಾಡಿದ ಪಾಪಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು ನನ್ನ ನಿಯಮಗಳನ್ನೆಲ್ಲಾ ಕೈಕೊಂಡು ನ್ಯಾಯವನ್ನೂ ನೀತಿಯನ್ನೂ ನಡೆಸಿದರೆ ಅವನು ಸಾಯದೆ ನಿಶ್ಚಯವಾಗಿ ಬದುಕುವನು. ಅವನು ಮಾಡಿದ ಅಪರಾಧಗಳೆಲ್ಲಾ ಅವನಿಗೆ ವಿರುದ್ದವಾಗಿ ಜ್ಞಾಪಕಮಾಡಲ್ಪಡುವದಿಲ್ಲ; ಅವನು ಮಾಡಿದ ನೀತಿಯಿಂದಲೇ ಅವನು ಬದುಕುವನು. ದುಷ್ಟನು ಸಾಯುವದರಲ್ಲಿ ನನಗೆ ಸ್ವಲ್ಪವಾದರೂ ಸಂತೋಷವಿ ರುವದೋ ಎಂದು ದೇವರಾದ ಕರ್ತನು ಹೇಳುತ್ತಾನೆ; ಅವನು ತನ್ನ ನಡತೆಗಳಿಂದ ಹಿಂತಿರುಗಿಕೊಂಡು ಬದು ಕಿದರೆ ನನಗೆ ಸಂತೋಷವಲ್ಲವೇ? ಆದರೆ ನೀತಿ ವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡಿ ದುಷ್ಟನು ಮಾಡುವ ಎಲ್ಲಾ ಅಸಹ್ಯವಾದವುಗಳ ಹಾಗೆ ಮಾಡಿದರೆ ಅವನು ಬದುಕುವನೇ? ಅವನು ಮಾಡಿ ರುವ ಎಲ್ಲಾ ನೀತಿಯು ಜ್ಞಾಪಕಮಾಡಲ್ಪಡುವದಿಲ್ಲ; ಅವನು ಮಾಡಿರುವ ಅಪರಾಧದಿಂದಲೂ ಪಾಪ ದಿಂದಲೂ ಅವುಗಳಲ್ಲಿ ಸಾಯುವನು.
- Acts 3:19 ಅಪೊಸ್ತಲರ ಕೃತ್ಯಗಳು 3:19ಆದದರಿಂದ ನಿಮ್ಮ ಪಾಪಗಳು ಅಳಿಸಲ್ಪಡು ವಂತೆ ನೀವು ಮಾನಸಾಂತರಪಟ್ಟು ತಿರುಗಿಕೊಳ್ಳಿರಿ; ಆಗ ಕರ್ತನ ಸನ್ನಿಧಾನದಿಂದ ನಿಮಗೆ ವಿಶ್ರಾಂತಿಕಾಲಗಳು ಒದಗುವವು.
- Jonah 1:14 ಯೋನ 1:14ಆದದರಿಂದ ಅವರು ಕರ್ತನಿಗೆ ಕೂಗಿ ಹೇಳಿದ್ದೇನಂದರೆ--ಓ ಕರ್ತನೇ, ನಾವು ಈ ಮನುಷ್ಯನ ಜೀವದ ನಿಮಿತ್ತ ನಾಶವಾಗದಿರಲಿ; ಅಪರಾಧವಿಲ್ಲದ ರಕ್ತವನ್ನು ನಮ್ಮ ಮೇಲೆ ಹೊರಿಸಬೇಡ; ಓ ಕರ್ತನೇ, ನೀನು ನಿನ್ನ ಚಿತ್ತಕ್ಕೆ ಬಂದ ಹಾಗೆ ಮಾಡಿದ್ದೀ ಅಂದರು.
- Ezekiel 18:27–28 ಯೆಹೆಜ್ಕೇಲನು 18:27–28ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು ನ್ಯಾಯವನ್ನೂ ನೀತಿಯನ್ನೂ ಅನುಸರಿಸಿದರೆ ತನ್ನ ಪ್ರಾಣವನ್ನು ಉಳಿಸಿಕೊಂಡು ಬದುಕುವನು. ತಾನು ಆಲೋಚಿಸಿ ತಾನು ಮಾಡುವ ಎಲ್ಲಾ ದುಷ್ಕೃತ್ಯಗಳನ್ನು ಬಿಟ್ಟು ತಿರುಗಿ ಕೊಳ್ಳುವದರಿಂದ ಸಾಯದೆ ನಿಶ್ಚಯವಾಗಿ ಬದುಕು ವನು.
- Psalm 130:1–2 ಕೀರ್ತನೆಗಳು 130:1–2ಓ ಕರ್ತನೇ, ಆಗಾಧಗಳೊಳಗಿಂದ ನಿನಗೆ ಕೂಗುತ್ತೇನೆ. ಕರ್ತನೇ, ನನ್ನ ಸ್ವರವನ್ನು ಕೇಳು; ನಿನ್ನ ಕಿವಿಗಳು ನನ್ನ ವಿಜ್ಞಾಪನೆಗಳ ಮೊರೆಯನ್ನು ಆಲೈಸುತ್ತಾ ಇರಲಿ.
- Acts 26:20 ಅಪೊಸ್ತಲರ ಕೃತ್ಯಗಳು 26:20ಆದರೆ ಅವರು ಮಾನಸಾಂತರಪಟ್ಟು ದೇವರ ಕಡೆಗೆ ತಿರುಗಿ ಕೊಂಡು ಮಾನಸಾಂತರಪಟ್ಟದ್ದಕ್ಕಾಗಿ ಯೋಗ್ಯವಾದ ಕ್ರಿಯೆಗಳನ್ನು ಮಾಡಬೇಕೆಂದು ಮೊದಲನೆಯದಾಗಿ ದಮಸ್ಕದವರಿಗೂ ಯೆರೂಸಲೇಮಿನಲ್ಲಿಯೂ ಯೂದಾಯದ ಎಲ್ಲಾ ಕಡೆಯ ತೀರಗಳಲ್ಲಿಯೂ ಅನ್ಯಜನಾಂಗದವರಿಗೂ ಪ್ರಕಟಿಸಿದೆನು.
- Daniel 4:27 ದಾನಿಯೇಲನು 4:27ಆದದರಿಂದ ಓ ಅರಸನೇ, ನನ್ನ ಆಲೋಚನೆಯು ನಿನಗೆ ಸಮ್ಮತಿ ಯಾಗಿ ನಿನ್ನ ಪಾಪಗಳನ್ನು ನೀತಿಯಿಂದ ಅಳಿಸಿ ನಿನ್ನ ಅನ್ಯಾಯಗಳನ್ನು ಬಡವರಿಗೆ ದಯೆ ತೋರಿಸುವದ ರಿಂದ ಬಿಟ್ಟುಬಿಡು. ಒಂದು ವೇಳೆ ಇದರಿಂದ ನಿನ್ನ ನೆಮ್ಮದಿಯು ಹೆಚ್ಚಾಗಬಹುದು.
- Ezekiel 18:30–32 ಯೆಹೆಜ್ಕೇಲನು 18:30–32ಆದದರಿಂದ ಇಸ್ರಾಯೇಲಿನ ಮನೆತನದವರೇ, ನಿಮ್ಮ ನಿಮ್ಮ ಮಾರ್ಗಗಳ ಪ್ರಕಾರ ನ್ಯಾಯತೀರಿಸುವೆನಂದು ದೇವ ರಾದ ಕರ್ತನು ಹೇಳುತ್ತಾನೆ; ನಿಮ್ಮ ದುಷ್ಟತ್ವಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು ಪಶ್ಚಾತ್ತಾಪಪಡಿರಿ; ಆಗ ಅಕ್ರಮ ಗಳು ನಿಮ್ಮನ್ನು ಆಳುವದಿಲ್ಲ. ನೀವು ಮಾಡುವ ದುಷ್ಟತ್ವಗಳನ್ನೆಲ್ಲಾ ನಿಮ್ಮಿಂದ ಬಿಟ್ಟುಬಿಡಿರಿ; ಹೊಸ ಹೃದಯವನ್ನೂ ಹೊಸ ಆತ್ಮವನ್ನೂ ನೀವು ಪಡಕೊಳ್ಳಿರಿ; ಯಾಕಂದರೆ ಓ ಇಸ್ರಾಯೇಲಿನ ಮನೆತನದವರೇ, ನೀವು ಸಾಯುವದೇಕೆ?ಸಾಯುವವನ ಸಾವಿನಲ್ಲಿ ನನಗೆ ಸಂತೋಷವಿಲ್ಲವೆಂದು ದೇವರಾದ ಕರ್ತನು ಹೇಳುತ್ತಾನೆ; ಆದಕಾರಣ ತಿರುಗಿಕೊಂಡು ಬಾಳಿರಿ. ಸಾಯುವವನ ಸಾವಿನಲ್ಲಿ ನನಗೆ ಸಂತೋಷವಿಲ್ಲವೆಂದು ದೇವರಾದ ಕರ್ತನು ಹೇಳುತ್ತಾನೆ; ಆದಕಾರಣ ತಿರುಗಿಕೊಂಡು ಬಾಳಿರಿ.
Original words (Hebrew)
- man · H120אָדָם ʼâdâm
- beast · H929בְּהֵמָה bᵉhêmâh
- covered · H3680כָּסָה kâçâh
- sackcloth · H8242שַׂק saq
- cry · H7121קָרָא qârâʼ
- mightily · H2394חׇזְקָה chozqâh
- God · H430אֱלֹהִים ʼĕlôhîym
- turn · H7725שׁוּב shûwb
- one · H376אִישׁ ʼîysh
- evil · H7451רַע raʻ
- way · H1870דֶּרֶךְ derek
- violence · H2555חָמָס châmâç
- hands · H3709כַּף kaph