Joshua · chapter 10 · verse 40
Joshua 10:40 in Kannada
ಹೀಗೆ ಯೆಹೋಶುವನು ಸಮಸ್ತ ಬೆಟ್ಟಗಳ ದೇಶವನ್ನೂ ತೆಂಕಣ ದೇಶವನ್ನೂ ತಗ್ಗಿನ ದೇಶವನ್ನೂ ನೀರು ಬುಗ್ಗೆಗಳ ದೇಶವನ್ನೂ ಅವುಗಳ ಅರಸು ಗಳೆಲ್ಲರನ್ನೂ ಒಬ್ಬನನ್ನಾದರೂ ಉಳಿಸದೆ ಹೊಡೆದು ಇಸ್ರಾಯೇಲಿನ ದೇವರಾದ ಕರ್ತನು ಆಜ್ಞಾಪಿಸಿದ ಹಾಗೆಯೇ ಶ್ವಾಸವುಳ್ಳದ್ದನ್ನೆಲ್ಲಾ ಸಂಪೂರ್ಣವಾಗಿ ನಾಶ ಮಾಡಿದನು.
Heege yehoshuvanu samasta bettagala deshavannoo tenkana deshavannoo taggina deshavannoo neeru buggegala deshavannoo avugala arasu galellarannoo obbanannaadaroo ulisade hodedu israayelina devaraada kartanu aajnyaapisida haageye shvaasavulladdannellaa sampoornavaagi naasha maadidanu.
Joshua 10:40 in English
- King James Version (KJV)
- So Joshua smote all the country of the hills, and of the south, and of the vale, and of the springs, and all their kings: he left none remaining, but utterly destroyed all that breathed, as the LORD God of Israel commanded.
- World English Bible (WEB)
- So Joshua struck all the land, the hill country, the South, the lowland, the slopes, and all their kings. He left no one remaining, but he utterly destroyed all that breathed, as the LORD, the God of Israel, commanded.
- American Standard Version (ASV)
- So Joshua smote all the land, the hill-country, and the South, and the lowland, and the slopes, and all their kings: he left none remaining, but he utterly destroyed all that breathed, as Jehovah, the God of Israel, commanded.
- Bible in Basic English (BBE)
- So Joshua overcame all the land, the hill-country and the South and the lowland and the mountain slopes, and all their kings; all were put to death: and every living thing he gave up to the curse, as the Lord, the God of Israel, had given him orders.
- Darby Translation (DBY)
- And Joshua smote the whole country, the mountain, and the south, and the lowland, and the hill-slopes, and all their kings: he let none remain, but he utterly destroyed all that breathed, as Jehovah the God of Israel had commanded.
- Webster's Bible (WBS)
- So Joshua smote all the country of the hills, and of the south, and of the vale, and of the springs, and all their kings: he left none remaining, but utterly destroyed all that breathed, as the LORD God of Israel commanded.
- Young's Literal Translation (YLT)
- And Joshua smiteth all the land of the hill-country, and of the south, and of the low-country, and of the springs, and all their kings — he hath not left a remnant, and all that doth breathe he hath devoted, as Jehovah, God of Israel, commanded.
Read in context
- 38ಯೆಹೋಶುವನು ಸಮಸ್ತ ಇಸ್ರಾಯೇಲಿನ ಕೂಡ ದೆಬೀರಕ್ಕೆ ತಿರುಗಿಕೊಂಡು ಅದರ ಮೇಲೆ ಯುದ್ಧಮಾಡಿ
- 39ಅದನ್ನೂ ಅದರ ಅರಸನನ್ನೂ ಸಮಸ್ತ ಪಟ್ಟಣ ಗಳನ್ನೂ ಹಿಡಿದು ಅವುಗಳನ್ನು ಕತ್ತಿಯಿಂದ ಹೊಡೆದು ಅದರಲ್ಲಿರುವ ಸಮಸ್ತ ಪ್ರಾಣಗಳನ್ನು ಒಬ್ಬನನ್ನಾ ದರೂ ಉಳಿಸದೆ ಸಂಪೂರ್ಣ ನಾಶಮಾಡಿದನು. ಹೆಬ್ರೋನಿಗೂ ಲಿಬ್ನಕ್ಕೂ ಅದರ ಅರಸನಿಗೂ ಮಾಡಿದ ಹಾಗೆಯೇ ದೆಬೀರಕ್ಕೂ ಅದರ ಅರಸನಿಗೂ ಮಾಡಿದನು.
- 40ಹೀಗೆ ಯೆಹೋಶುವನು ಸಮಸ್ತ ಬೆಟ್ಟಗಳ ದೇಶವನ್ನೂ ತೆಂಕಣ ದೇಶವನ್ನೂ ತಗ್ಗಿನ ದೇಶವನ್ನೂ ನೀರು ಬುಗ್ಗೆಗಳ ದೇಶವನ್ನೂ ಅವುಗಳ ಅರಸು ಗಳೆಲ್ಲರನ್ನೂ ಒಬ್ಬನನ್ನಾದರೂ ಉಳಿಸದೆ ಹೊಡೆದು ಇಸ್ರಾಯೇಲಿನ ದೇವರಾದ ಕರ್ತನು ಆಜ್ಞಾಪಿಸಿದ ಹಾಗೆಯೇ ಶ್ವಾಸವುಳ್ಳದ್ದನ್ನೆಲ್ಲಾ ಸಂಪೂರ್ಣವಾಗಿ ನಾಶ ಮಾಡಿದನು.
- 41ಯೆಹೋಶುವನು ಕಾದೇಶ್ ಬರ್ನೇಯದಿಂದ ಗಾಜದ ವರೆಗೂ ಇರುವವರನ್ನೂ ಗೋಷೆನಿನ ಸಮಸ್ತ ದೇಶವನ್ನೂ ಗಿಬ್ಯೋನಿನ ವರೆಗೆ ಹೊಡೆದುಬಿಟ್ಟನು.
- 42ಯೆಹೋಶುವನು ಈ ಸಮಸ್ತ ಅರಸುಗಳನ್ನೂ ಅವರ ದೇಶವನ್ನೂ ಒಂದೇ ಸಾರಿ ತೆಗೆದುಕೊಂಡನು. ಯಾಕಂದರೆ ಇಸ್ರಾಯೇಲಿನ ದೇವ ರಾದ ಕರ್ತನು ಇಸ್ರಾಯೇಲಿಗೋಸ್ಕರ ಯುದ್ಧ ಮಾಡಿದನು.ಆಗ ಯೆಹೋಶುವನು ಇಸ್ರಾಯೇಲ್ಯ ರೆಲ್ಲರ ಸಂಗಡ ಗಿಲ್ಗಾಲಿನಲ್ಲಿರುವ ಪಾಳೆಯಕ್ಕೆ ಹಿಂತಿರುಗಿ ಬಂದನು.
Cross references
- Deuteronomy 7:2–16 ಧರ್ಮೋಪದೇಶಕಾಂಡ 7:2–16ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ಒಪ್ಪಿಸಲು ನೀನು ಅವರನ್ನು ಹೊಡೆದು ಸಂಪೂರ್ಣವಾಗಿ ನಿರ್ಮೂಲ ಮಾಡಬೇಕು. ಅವರ ಸಂಗಡ ಒಡಂಬಡಿಕೆ ಮಾಡಿ ಕೊಳ್ಳಬಾರದು. ಇಲ್ಲವೆ ಅವರಿಗೆ ದಯೆತೋರಿಸ ಬಾರದು. ಇಲ್ಲವೆ ಅವರ ಸಂಗಡ ಮದುವೆಮಾಡಿ ಕೊಳ್ಳಬಾರದು; ನಿನ್ನ ಕುಮಾರ್ತೆಯನ್ನು ಅವನ ಮಗ ನಿಗೆ ಕೊಡಬಾರದು. ನಿನ್ನ ಕುಮಾರನಿಗೆ ಅವನ ಕುಮಾರ್ತೆಯನ್ನು ತಕ್ಕೊಳ್ಳಬಾರದು. ಯಾಕಂದರೆ ಅವರು ಬೇರೆ ದೇವರುಗಳನ್ನು ನಿನ್ನ ಕುಮಾರರು ಸೇವಿಸುವ ಹಾಗೆ ನನ್ನಿಂದ ತೊಲಗಿಸಾರು. ಆಗ ಕರ್ತನ ಕೋಪವು ನಿಮ್ಮ ಮೇಲೆ ಉರಿಯಲು ಆತನು ನಿನ್ನನ್ನು ಬೇಗ ನಾಶಮಾಡಿಯಾನು. ಅವರಿಗೆ ಮಾಡಬೇಕಾದ ದ್ದೇನಂದರೆ ಅವರ ಬಲಿಪೀಠಗಳನ್ನು ಒಡೆದುಹಾಕ ಬೇಕು; ಅವರ ವಿಗ್ರಹಗಳನ್ನು ಮುರಿದುಹಾಕಬೇಕು; ಅವರ ತೋಪುಗಳನ್ನು ಕಡಿದುಹಾಕಬೇಕು; ಅವರು ಕೆತ್ತಿದ ವಿಗ್ರಹಗಳನ್ನು ಬೆಂಕಿಯಿಂದ ಸುಡಬೇಕು. ಯಾಕಂದರೆ ನೀನು ನಿನ್ನ ದೇವರಾದ ಕರ್ತನಿಗೆ ಪರಿಶುದ್ಧ ಜನವೇ; ನಿನ್ನ ದೇವರಾದ ಕರ್ತನು ನಿನ್ನನ್ನು ಭೂಮಿಯ ಮೇಲಿರುವ ಎಲ್ಲಾ ಜನಗಳೊಳಗಿಂದ ತನಗೆ ಸ್ವಕೀಯ ಜನವಾಗುವ ಹಾಗೆ ಆರಿಸಿಕೊಂಡಿ ದ್ದಾನೆ. ನೀವು ಎಲ್ಲಾ ಜನಗಳಿಗಿಂತ ಹೆಚ್ಚಾಗಿರುವ ಕಾರಣ ಕರ್ತನು ನಿಮ್ಮನ್ನು ಪ್ರೀತಿಸಿ ಆರಿಸಿಕೊಳ್ಳಲಿಲ್ಲ; ನೀವು ಎಲ್ಲಾ ಜನಗಳಿಗಿಂತ ಬಹಳ ಸ್ವಲ್ಪ. ಕರ್ತನು ನಿಮ್ಮನ್ನು ಪ್ರೀತಿಸಿದ್ದರಿಂದಲೂ ನಿಮ್ಮ ಪಿತೃಗಳಿಗೆ ಮಾಡಿದ ಪ್ರಮಾಣವನ್ನು ಕಾಪಾಡುವದರಿಂದಲೂ ಕರ್ತನು ನಿಮ್ಮನ್ನು ಬಲವಾದ ಕೈಯಿಂದ ಹೊರಗೆ ಬರಮಾಡಿ ನಿನ್ನನ್ನು ದಾಸತ್ವದ ಮನೆಯಿಂದಲೂ ಐಗುಪ್ತದ ಅರಸನಾದ ಫರೋಹನ ಕೈಯಿಂದಲೂ ವಿಮೋಚಿಸಿದನು. ಹೀಗಿರುವದರಿಂದ ನಿನ್ನ ದೇವರಾದ ಕರ್ತನು ಆತನೇ ದೇವರು; ಆತನೇ ನಂಬಿಗಸ್ತನಾದ ದೇವರು; ಆತನು ತನ್ನನ್ನು ಪ್ರೀತಿಮಾಡಿ ತನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ಒಡಂಬಡಿಕೆಯನ್ನೂ ಕರುಣೆಯನ್ನೂ ಸಾವಿರ ತಲೆಗಳ ವರೆಗೂ ಕಾಪಾಡಿ ತನ್ನನ್ನು ಹಗೆ ಮಾಡುವವರಿಗೆ ಮುಖಾಮುಖಿಯಾಗಿ ಮುಯ್ಯಿಗೆ ಮುಯ್ಯಿ ತೀರಿಸಿ ಅವರನ್ನು ನಾಶಮಾಡುತ್ತಾನೆ; ಆತನು ತನ್ನನ್ನು ಹಗೆಮಾಡುವವರಿಗೆ ತಡಮಾಡದೆ ಮುಖಾ ಮುಖಿಯಾಗಿ ಮುಯ್ಯಿಗೆ ಮುಯ್ಯಿ ತೀರಿಸುತ್ತಾನೆ ಎಂದು ತಿಳಿದುಕೋ. ಹೀಗಿರುವದರಿಂದ ನಾನು ಈ ಹೊತ್ತು ನಿನಗೆ ಆಜ್ಞಾಪಿಸುವ ಆಜ್ಞೆ ನಿಯಮ ನ್ಯಾಯಗಳನ್ನು ಕೈಕೊಳ್ಳಬೇಕು. ನೀವು ಈ ನ್ಯಾಯಗಳನ್ನು ಕೇಳಿ ಕಾಪಾಡಿ ನಡೆದು ಕೊಂಡರೆ ನಿನ್ನ ದೇವರಾದ ಕರ್ತನು ನಿನ್ನ ಪಿತೃಗ ಳಿಗೆ ಪ್ರಮಾಣಮಾಡಿದ ಒಡಂಬಡಿಕೆಯನ್ನೂ ಕರುಣೆ ಯನ್ನೂ ನಿನಗೋಸ್ಕರ ನೆರವೇರಿಸುವನು. ಆತನು ನಿನ್ನನ್ನು ಪ್ರೀತಿಮಾಡಿ ಆಶೀರ್ವದಿಸಿ ಹೆಚ್ಚಿಸುವನು; ನಿನಗೆ ಕೊಡುತ್ತೇನೆಂದು ಆತನು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದ ದೇಶದಲ್ಲಿ ನಿನ್ನ ಗರ್ಭದ ಫಲ ವನ್ನೂ ಭೂಮಿಯ ಹುಟ್ಟುವಳಿಯನ್ನೂ ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಪಶುಗಳನ್ನೂ ನಿನ್ನ ಕುರಿಮಂದೆಗಳನ್ನೂ ಆಶೀರ್ವದಿಸುವನು. ಎಲ್ಲಾ ಜನಗಳಿಗಿಂತಲೂ ನೀನು ಆಶೀರ್ವದಿಸಲ್ಪಟ್ಟವನಾ ಗಿರುವಿ; ನಿಮ್ಮೊಳಗೆ ಸ್ತ್ರೀಯರಲ್ಲಾಗಲಿ ಪುರುಷರ ಲ್ಲಾಗಲಿ ಪಶುಗಳಲ್ಲಾಗಲಿ ಬಂಜೆತನವು ಇರುವದಿಲ್ಲ. ಕರ್ತನು ಎಲ್ಲಾ ರೋಗಗಳನ್ನು ನಿನ್ನಿಂದ ತೆಗೆದು ಬಿಡುವನು; ನಿನಗೆ ತಿಳಿದಿರುವ ಐಗುಪ್ತದ ಕೆಟ್ಟ ರೋಗಗಳನ್ನೆಲ್ಲಾ ನಿನ್ನ ಮೇಲೆ ಬರಮಾಡದೆ ನಿನ್ನನ್ನು ಹಗೆಮಾಡುವವರೆಲ್ಲರ ಮೇಲೆ ಅವುಗಳನ್ನು ಬರ ಮಾಡುವನು. ನಿನ್ನ ದೇವರಾದ ಕರ್ತನು ನಿನಗೆ ಒಪ್ಪಿಸುವ ಜನಗಳನ್ನೆಲ್ಲಾ ನೀನು ಸಂಹರಿಸಿಬಿಡುವಿ; ಅವರ ಮೇಲೆ ನೀನು ಕಟಾಕ್ಷವಿಡಬಾರದು; ಇಲ್ಲವೆ ಅವರ ದೇವರು ಗಳನ್ನು ಸೇವಿಸಬಾರದು; ಅದು ನಿನಗೆ ಉರುಲಾ ಗುವದು.
- Psalm 9:17 ಕೀರ್ತನೆಗಳು 9:17ದುಷ್ಟರೂ ದೇವರನ್ನು ಮರೆಯುವ ಎಲ್ಲಾ ಜನಾಂಗಗಳೂ ನರಕಕ್ಕೆ ಇಳಿಯುವರು.
- 1 Kings 15:29 1 ಅರಸುಗಳು 15:29ಅವನು ಆಳುತ್ತಿರುವಾಗ ಏನಾಯಿತಂದರೆ, ಯಾರೊಬ್ಬಾಮನ ಮನೆಯನ್ನೆಲ್ಲಾ ಹೊಡೆದುಬಿಟ್ಟನು.
- Joshua 10:35 ಯೆಹೋಶುವ 10:35ಅದೇ ದಿನದಲ್ಲಿ ಅದನ್ನು ಹಿಡಿದು ಅದನ್ನು ಕತ್ತಿಯಿಂದ ಹೊಡೆದರು. ಅವನು ಲಾಕೀಷಿಗೆ ಮಾಡಿದ್ದೆಲ್ಲಾದರ ಹಾಗೆ ಅದಕ್ಕೆ ಮಾಡಿ ಅದೇ ದಿನದಲ್ಲಿ ಅದರಲ್ಲಿರುವ ಸಕಲ ಪ್ರಾಣಗಳನ್ನು ಸಂಪೂರ್ಣವಾಗಿ ನಾಶಮಾಡಿದನು.
- Deuteronomy 20:16–17 ಧರ್ಮೋಪದೇಶಕಾಂಡ 20:16–17ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಈ ಜನಗಳ ಪಟ್ಟಣಗಳಲ್ಲಿ ಮಾತ್ರ ಶ್ವಾಸ ವುಳ್ಳ ಯಾವದನ್ನಾದರೂ ಉಳಿಸಬಾರದು. ಆದರೆ ಹಿತ್ತಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ ಪೆರಿ ಜ್ಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ
- 2 Thessalonians 1:7–9 2 ಥೆಸಲೊನೀಕದವರಿಗೆ 1:7–9ರ್ತನಾದ ಯೇಸು ತನ್ನ ಬಲವುಳ್ಳ ದೂತರೊಂದಿಗೆ ಪರಲೋಕ ದಿಂದ ಪ್ರತ್ಯಕ್ಷನಾಗುವಾಗ ಸಂಕಟಪಡುವವರಾದ ನಿಮಗೆ ನಮ್ಮೊಡನೆ ಉಪಶಮನ ಮಾಡುವದೂ ಆತನು (ಕರ್ತನಾದ ಯೇಸು) ದೇವರನ್ನರಿಯ ದವರಿಗೆ ಮತ್ತು ಕರ್ತನಾದ ಯೇಸು ಕ್ರಿಸ್ತನ ಸುವಾರ್ತೆಗೆ ವಿಧೇಯರಾಗದವರಿಗೆ ಉರಿಯುವ ಬೆಂಕಿಯ ಮೂಲಕ ಪ್ರತೀಕಾರ ಮಾಡುವದೂ ದೇವರಿಗೆ ನ್ಯಾಯವಾಗಿದೆ; ಅಂಥವರು ಕರ್ತನ ಸಾನಿಧ್ಯದಿಂದಲೂ ಬಲವುಳ್ಳ ಆತನ ಮಹಿಮೆಯಿಂದಲೂ ನಿತ್ಯ ನಾಶನವೆಂಬ ಶಿಕ್ಷೆ ಯನ್ನು ಹೊಂದುವರು.
- Joshua 6:17 ಯೆಹೋಶುವ 6:17ಇದಲ್ಲದೆ ಈ ಪಟ್ಟಣವೂ ಅದರಲ್ಲಿರುವ ಸಮಸ್ತವೂ ಕರ್ತನ ಶಾಪಕ್ಕೊಳಗಾಗುವದು; ರಾಹಾಬಳೆಂಬ ಸೂಳೆಯೂ ಆಕೆಯ ಮನೆಯಲ್ಲಿ ಇರುವವರೆಲ್ಲರೂ ಮಾತ್ರ ಉಳಿಯಲಿ. ಯಾಕಂದರೆ ನಾವು ಕಳುಹಿಸಿದ ದೂತರನ್ನು ಆಕೆಯು ಬಚ್ಚಿಟ್ಟಳು.
- Deuteronomy 7:24 ಧರ್ಮೋಪದೇಶಕಾಂಡ 7:24ಅವರ ಅರಸುಗಳನ್ನು ನಿನಗೆ ಒಪ್ಪಿಸುವನು. ನೀನು ಅವರ ಹೆಸರನ್ನು ಆಕಾಶದ ಕೆಳಗೆ ಇಲ್ಲದ ಹಾಗೆ ನಾಶಮಾಡುವಿ; ನೀನು ಅವರನ್ನು ನಿರ್ಮೂಲ ಮಾಡುವ ತನಕ ಒಬ್ಬನಾದರೂ ನಿನ್ನ ಮುಂದೆ ನಿಲ್ಲಲಾರನು.
- Exodus 23:31–33 ವಿಮೋಚನಕಾಂಡ 23:31–33ಕೆಂಪು ಸಮುದ್ರದಿಂದ ಫಿಲಿಷ್ಟಿಯರ ಸಮುದ್ರದ ವರೆಗೂ ಅರಣ್ಯದಿಂದ ನದಿಯ ವರೆಗೂ ನಿಮ್ಮ ಮೇರೆ ಗಳನ್ನು ನೇಮಿಸುವೆನು; ದೇಶದ ನಿವಾಸಿಗಳನ್ನು ನಿಮ್ಮ ಕೈಗಳಿಗೆ ಒಪ್ಪಿಸುವೆನು. ನೀವು ಅವರನ್ನು ನಿಮ್ಮ ಎದುರಿ ನಿಂದ ಓಡಿಸಿಬಿಡುವಿರಿ. ಅವರ ಸಂಗಡಲೂ ಅವರ ದೇವರುಗಳ ಸಂಗಡಲೂ ಯಾವ ಒಡಂಬಡಿಕೆಯನ್ನೂ ಮಾಡಬಾರದು.ನನಗೆ ವಿರೋಧವಾಗಿ ನೀವು ಪಾಪಮಾಡದಂತೆ ಅವರು ನಿಮ್ಮ ದೇಶದಲ್ಲಿ ವಾಸವಾ ಗಿರಬಾರದು. ನೀವು ಅವರ ದೇವರುಗಳನ್ನು ಸೇವಿಸಿದರೆ ಅದು ನಿಮಗೆ ಖಂಡಿತವಾಗಿ ಉರುಲಾಗಿರುವದು. ನನಗೆ ವಿರೋಧವಾಗಿ ನೀವು ಪಾಪಮಾಡದಂತೆ ಅವರು ನಿಮ್ಮ ದೇಶದಲ್ಲಿ ವಾಸವಾ ಗಿರಬಾರದು. ನೀವು ಅವರ ದೇವರುಗಳನ್ನು ಸೇವಿಸಿದರೆ ಅದು ನಿಮಗೆ ಖಂಡಿತವಾಗಿ ಉರುಲಾಗಿರುವದು.
- Joshua 8:27 ಯೆಹೋಶುವ 8:27ಆದರೆ ಕರ್ತನು ಯೆಹೋಶುವನಿಗೆ ಆಜ್ಞಾಪಿಸಿದ ಮಾತಿನ ಪ್ರಕಾರವೇ ಇಸ್ರಾಯೇ ಲ್ಯರು ಆ ಪಟ್ಟಣದ ಪಶುಗಳನ್ನೂ ಕೊಳ್ಳೆಯನ್ನೂ ತಮಗೋಸ್ಕರ ಸುಲುಕೊಂಡರು.
- Joshua 10:37 ಯೆಹೋಶುವ 10:37ಅದನ್ನು ಹಿಡಿದು ಅದನ್ನೂ ಅದರ ಅರಸನನ್ನೂ ಅದರ ಸಮಸ್ತ ಪಟ್ಟಣ ಗಳನ್ನೂ ಅವುಗಳಲ್ಲಿರುವ ಸಮಸ್ತ ಪ್ರಾಣಗಳನ್ನೂ ಕತ್ತಿಯಿಂದ ಹೊಡೆದು ಎಗ್ಲೋನಿಗೆ ಮಾಡಿದ್ದೆಲ್ಲಾ ದರ ಹಾಗೆ ಒಬ್ಬನನ್ನಾದರೂ ಉಳಿಸದೆ ಅದನ್ನೂ ಅದರಲ್ಲಿರುವ ಎಲ್ಲಾ ಪ್ರಾಣಗಳನ್ನೂ ಸಂಪೂರ್ಣ ನಾಶಮಾಡಿದನು.
- Joshua 9:24 ಯೆಹೋಶುವ 9:24ಅದಕ್ಕವರು ಯೆಹೋಶುವ ನಿಗೆ--ನಿಮಗೆ ದೇಶವನ್ನೆಲ್ಲಾ ಒಪ್ಪಿಸಿಕೊಡುವದಕ್ಕೂ ದೇಶದ ನಿವಾಸಿಗಳನ್ನೆಲ್ಲಾ ನಿಮ್ಮ ಮುಂದೆ ನಾಶಮಾಡು ವದಕ್ಕೂ ನಿಮ್ಮ ದೇವರಾದ ಕರ್ತನು ತನ್ನ ಸೇವಕನಾದ ಮೋಶೆಗೆ ಆಜ್ಞಾಪಿಸಿದ್ದು ನಿಮ್ಮ ಸೇವಕರಿಗೆ ನಿಶ್ಚಯವಾಗಿ ತಿಳಿಸಲ್ಪಟ್ಟದ್ದರಿಂದ ನಾವು ನಮ್ಮ ಪ್ರಾಣಗಳಿಗೋಸ್ಕರ ನಿಮಗೆ ಬಹಳ ಭಯಪಟ್ಟು ಈ ಕಾರ್ಯವನ್ನು ಮಾಡಿದೆವು.
Original words (Hebrew)
- Joshua · H3091יְהוֹשׁוּעַ Yᵉhôwshûwaʻ
- smote · H5221נָכָה nâkâh
- country · H776אֶרֶץ ʼerets
- hills · H2022הַר har
- south · H5045נֶגֶב negeb
- vale · H8219שְׁפֵלָה shᵉphêlâh
- springs · H794אֲשֵׁדָה ʼăshêdâh
- kings · H4428מֶלֶךְ melek
- left · H7604שָׁאַר shâʼar
- remaining · H8300שָׂרִיד sârîyd
- destroyed · H2763חָרַם châram
- breathed · H5397נְשָׁמָה nᵉshâmâh
- God · H430אֱלֹהִים ʼĕlôhîym
- Israel · H3478יִשְׂרָאֵל Yisrâʼêl
- commanded · H6680צָוָה tsâvâh