Joshua · chapter 11 · verse 20
Joshua 11:20 in Kannada
ಅವರು ಯುದ್ಧಮಾಡಲು ಇಸ್ರಾಯೇಲಿಗೆ ಎದುರಾಗಿ ಬರುವ ಹಾಗೆ ಅವರ ಹೃದಯವನ್ನು ಕಠಿಣಮಾಡಿ ಅವರನ್ನು ಸಂಪೂರ್ಣ ನಾಶಮಾಡುವ ಹಾಗೆ ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವರಿಗೆ ದಯೆತೋರಿಸದೆ ಅವರನ್ನು ನಾಶಮಾಡುವ ಹಾಗೆ ಕರ್ತನಿಂದ ಅಪ್ಪಣೆ ಆಗಿತ್ತು.
Avaru yuddhamaadalu israayelige eduraagi baruva haage avara hrudayavannu kathinamaadi avarannu sampoorna naashamaaduva haage kartanu moshege aajnyaapisida prakaara avarige dayetorisade avarannu naashamaaduva haage kartaninda appane aagittu.
Joshua 11:20 in English
- King James Version (KJV)
- For it was of the LORD to harden their hearts, that they should come against Israel in battle, that he might destroy them utterly, [and] that they might have no favour, but that he might destroy them, as the LORD commanded Moses.
- World English Bible (WEB)
- For it was of the LORD to harden their hearts, to come against Israel in battle, that he might utterly destroy them, that they might have no favor, but that he might destroy them, as the LORD commanded Moses.
- American Standard Version (ASV)
- For it was of Jehovah to harden their hearts, to come against Israel in battle, that he might utterly destroy them, that they might have no favor, but that he might destroy them, as Jehovah commanded Moses.
- Bible in Basic English (BBE)
- For the Lord made them strong in heart to go to war against Israel, so that he might give them up to the curse without mercy, and that destruction might come on them, as the Lord had given orders to Moses.
- Darby Translation (DBY)
- For it was of Jehovah that their heart was hardened, to meet Israel in battle, that they might be utterly destroyed, and that there might be no favour shewn to them, but that they might be destroyed, as Jehovah had commanded Moses.
- Webster's Bible (WBS)
- For it was of the LORD to harden their hearts, that they should come against Israel in battle, that he might destroy them utterly, [and] that they might have no favor, but that he might destroy them, as the LORD commanded Moses.
- Young's Literal Translation (YLT)
- for from Jehovah it hath been to strengthen their heart, to meet in battle with Israel, in order to devote them, so that they have no grace, but in order to destroy them, as Jehovah commanded Moses.
Read in context
- 18ಯೆಹೋಶುವನು ಬಹಳಕಾಲ ಈ ಅರಸುಗಳೆಲ್ಲರ ಸಂಗಡ ಯುದ್ಧಮಾಡುತ್ತಿದ್ದನು.
- 19ಗಿಬ್ಯೋನಿನ ನಿವಾಸಿಗಳಾದ ಹಿವ್ವಿಯರ ಹೊರತಾಗಿ ಇಸ್ರಾಯೇಲ್ ಮಕ್ಕಳ ಸಂಗಡ ಸಮಾಧಾನಮಾಡಿಕೊಂಡ ಬೇರೆ ಒಂದು ಪಟ್ಟಣವಾದರೂ ಇರಲಿಲ್ಲ; ಅವರು ಬೇರೆ ಎಲ್ಲವು ಗಳನ್ನು ಯುದ್ಧಮಾಡಿ ತೆಗೆದುಕೊಂಡರು.
- 20ಅವರು ಯುದ್ಧಮಾಡಲು ಇಸ್ರಾಯೇಲಿಗೆ ಎದುರಾಗಿ ಬರುವ ಹಾಗೆ ಅವರ ಹೃದಯವನ್ನು ಕಠಿಣಮಾಡಿ ಅವರನ್ನು ಸಂಪೂರ್ಣ ನಾಶಮಾಡುವ ಹಾಗೆ ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವರಿಗೆ ದಯೆತೋರಿಸದೆ ಅವರನ್ನು ನಾಶಮಾಡುವ ಹಾಗೆ ಕರ್ತನಿಂದ ಅಪ್ಪಣೆ ಆಗಿತ್ತು.
- 21ಆ ಕಾಲದಲ್ಲಿ ಯೆಹೋಶುವನು ಬಂದು ಬೆಟ್ಟದ ದೇಶವಾದ ಹೆಬ್ರೋನಿನಲ್ಲಿಯೂ ದೆಬೀರಿನಲ್ಲಿಯೂ ಅನಾಬಿನಲ್ಲಿಯೂ ಯೂದನ ಸಕಲ ಬೆಟ್ಟಗಳಲ್ಲಿಯೂ ಇಸ್ರಾಯೇಲಿನ ಸಕಲ ಬೆಟ್ಟಗಳಲ್ಲಿಯೂ ಇದ್ದ ಅನಾಕ್ಯ ರನ್ನು ಕಡಿದುಬಿಟ್ಟು ಅವರನ್ನೂ ಅವರ ಪಟ್ಟಣ ಗಳನ್ನೂ ಸಂಪೂರ್ಣ ನಾಶಮಾಡಿದನು.
- 22ಅನಾಕ್ಯರು ಇಸ್ರಾಯೇಲ್ ಮಕ್ಕಳ ದೇಶದಲ್ಲಿ ಒಬ್ಬನೂ ಉಳಿಯ ಲಿಲ್ಲ. ಗಾಜಾದಲ್ಲಿಯೂ ಗತ್ನಲ್ಲಿಯೂ ಅಷ್ಡೋದಿ ನಲ್ಲಿಯೂ ಮಾತ್ರ ಉಳಿದರು.ಹೀಗೆಯೇ ಯೆಹೋಶುವನು ದೇಶವನ್ನೆಲ್ಲಾ ಕರ್ತನು ಮೋಶೆಗೆ ಹೇಳಿದ ಪ್ರಕಾರವೇ ಹಿಡಿದು ಅದನ್ನು ಇಸ್ರಾಯೇಲಿಗೆ ಅವರ ಗೋತ್ರಗಳ ಭಾಗಗಳಿಗನುಸಾರ ಬಾಧ್ಯತೆಯಾಗಿ ಕೊಟ್ಟನು. ಆಗ ದೇಶವು ಯುದ್ಧವಿಲ್ಲದೆ ವಿಶ್ರಮಿಸಿ ಕೊಂಡಿತು.
Cross references
- Romans 9:18 ರೋಮಾಪುರದವರಿಗೆ 9:18ಆದದರಿಂದ ಆತನು ಯಾವನನ್ನು ಕರುಣಿಸಬೇಕೆಂದಿ ರುವನೋ ಅವನನ್ನು ಕರುಣಿಸುವನು; ಯಾವನನ್ನು ಕಠಿಣಪಡಿಸಬೇಕೆಂದಿರುವನೋ ಅವನನ್ನು ಕಠಿಣ ಪಡಿಸುವನು.
- Deuteronomy 20:16–17 ಧರ್ಮೋಪದೇಶಕಾಂಡ 20:16–17ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಈ ಜನಗಳ ಪಟ್ಟಣಗಳಲ್ಲಿ ಮಾತ್ರ ಶ್ವಾಸ ವುಳ್ಳ ಯಾವದನ್ನಾದರೂ ಉಳಿಸಬಾರದು. ಆದರೆ ಹಿತ್ತಿಯರನ್ನೂ ಅಮೋರಿಯರನ್ನೂ ಕಾನಾನ್ಯರನ್ನೂ ಪೆರಿ ಜ್ಜೀಯರನ್ನೂ ಹಿವ್ವಿಯರನ್ನೂ ಯೆಬೂಸಿಯರನ್ನೂ
- Exodus 4:21 ವಿಮೋಚನಕಾಂಡ 4:21ಆಗ ಕರ್ತನು ಮೋಶೆಗೆ--ನೀನು ಐಗುಪ್ತದೇಶಕ್ಕೆ ಹಿಂತಿರುಗಿ ಹೋಗು ವಾಗ ನಾನು ನಿನ್ನ ಕೈಯಿಂದ ಮಾಡಿಸಿದ ಎಲ್ಲಾ ಸೂಚಕ ಕಾರ್ಯಗಳನ್ನು ಫರೋಹನ ಮುಂದೆ ಮಾಡು. ಆದರೆ ನಾನು ಅವನ ಹೃದಯವನ್ನು ಕಠಿಣಪಡಿಸುವೆನು. ಅವನು ಜನರನ್ನು ಹೋಗಗೊಡಿಸುವದಿಲ್ಲ.
- Deuteronomy 2:30 ಧರ್ಮೋಪದೇಶಕಾಂಡ 2:30ಆದರೆ ಹೆಷ್ಬೋನಿನ ಅರಸ ನಾದ ಸೀಹೋನನು ನಮ್ಮನ್ನು ತನ್ನ ಬಳಿಯಿಂದ ದಾಟಿಹೋಗಲು ಮನಸ್ಸು ಮಾಡಲಿಲ್ಲ; ಯಾಕಂದರೆ ಅವನನ್ನು ನಿನ್ನ ಕೈಯಲ್ಲಿ ಒಪ್ಪಿಸುವ ಹಾಗೆ ನಿನ್ನ ದೇವರಾದ ಕರ್ತನು ಅವನ ಬುದ್ಧಿಯನ್ನು ಮಂಕು ಮಾಡಿ ಹೃದಯವನ್ನು ಕಠಿಣಪಡಿಸಿದನೆಂದು ಈಗಾ ಗಲೇ ಪ್ರಸಿದ್ಧವಾಗಿದೆ.
- Deuteronomy 7:16 ಧರ್ಮೋಪದೇಶಕಾಂಡ 7:16ನಿನ್ನ ದೇವರಾದ ಕರ್ತನು ನಿನಗೆ ಒಪ್ಪಿಸುವ ಜನಗಳನ್ನೆಲ್ಲಾ ನೀನು ಸಂಹರಿಸಿಬಿಡುವಿ; ಅವರ ಮೇಲೆ ನೀನು ಕಟಾಕ್ಷವಿಡಬಾರದು; ಇಲ್ಲವೆ ಅವರ ದೇವರು ಗಳನ್ನು ಸೇವಿಸಬಾರದು; ಅದು ನಿನಗೆ ಉರುಲಾ ಗುವದು.
- Joshua 11:12–15 ಯೆಹೋಶುವ 11:12–15ಇದಲ್ಲದೆ ಯೆಹೋಶುವನು ಆ ಅರಸುಗಳ ಸಮಸ್ತ ಪಟ್ಟಣಗಳನ್ನೂ ಅವುಗಳ ಸಮಸ್ತ ಅರಸುಗಳನ್ನೂ ಹಿಡಿದು ಕತ್ತಿಯಿಂದ ಹೊಡೆದು ಕರ್ತನ ಸೇವಕನಾದ ಮೋಶೆಯು ಆಜ್ಞಾಪಿಸಿದ ಹಾಗೆಯೇ ಅವರನ್ನು ಸಂಪೂರ್ಣ ನಾಶಮಾಡಿಬಿಟ್ಟನು. ಆದರೆ ತಮ್ಮ ದಿನ್ನೆಯ ಮೇಲೆ ನಿಂತಿರುವ ಪಟ್ಟಣ ಗಳನ್ನೆಲ್ಲಾ ಇಸ್ರಾಯೇಲ್ ಸುಟ್ಟು ಬಿಡಲಿಲ್ಲ. ಹಾಚೋರನ್ನು ಮಾತ್ರ ಯೆಹೋಶುವನು ಸುಟ್ಟು ಬಿಟ್ಟನು. ಆ ಪಟ್ಟಣಗಳ ಕೊಳ್ಳೆಯನ್ನೆಲ್ಲಾ ಪಶು ಗಳನ್ನೆಲ್ಲಾ ಇಸ್ರಾಯೇಲ್ ಮಕ್ಕಳು ತಮಗೋಸ್ಕರ ಸುಲುಕೊಂಡರು; ಆದರೆ ಮನುಷ್ಯರೆಲ್ಲರನ್ನು ಕತ್ತಿಯಿಂದ ನಾಶಮಾಡುವ ವರೆಗೂ ಹೊಡೆದುಬಿಟ್ಟರು. ಶ್ವಾಸವುಳ್ಳ ಒಂದನ್ನೂ ಅವರು ಉಳಿಯಗೊಡಿಸಲಿಲ್ಲ. ಕರ್ತನು ತನ್ನ ಸೇವಕನಾದ ಮೋಶೆಗೆ ಹೇಗೆ ಆಜ್ಞಾಪಿಸಿದನೋ ಹಾಗೆಯೇ ಮೋಶೆಯು ಯೆಹೋಶುವನಿಗೆ ಆಜ್ಞಾಪಿಸಿ ದನು. ಯೆಹೋಶುವನು ಹಾಗೆಯೇ ಮಾಡಿದನು. ಕರ್ತನು ಮೋಶೆಗೆ ಆಜ್ಞಾಪಿಸಿದ್ದರಲ್ಲಿ ಒಂದನ್ನೂ ಅವನು ಮಾಡದೆ ಉಳಿಸಲಿಲ್ಲ.
- Exodus 14:17 ವಿಮೋಚನಕಾಂಡ 14:17ಇಗೋ, ನಾನು ಐಗುಪ್ತ್ಯರ ಹೃದಯವನ್ನು ಕಠಿಣಮಾಡುತ್ತೇನೆ; ಅವರು ಇವರನ್ನು ಹಿಂದಟ್ಟುವರು. ಇದಲ್ಲದೆ ಫರೋಹನ ಮೇಲೆಯೂ ಅವನ ಎಲ್ಲಾ ಸೈನ್ಯದ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿಕೊಳ್ಳುವೆನು.
- Exodus 9:16 ವಿಮೋಚನಕಾಂಡ 9:16ಆದರೆ ನಿಶ್ಚಯವಾಗಿ ನನ್ನ ಬಲವನ್ನು ನಿನಗೆ ತೋರಿಸುವ ಹಾಗೆಯೂ ನನ್ನ ಹೆಸರು ಭೂಲೋಕದಲ್ಲೆಲ್ಲಾ ತಿಳಿಸಲ್ಪಡುವಂತೆಯೂ ನಿನ್ನನ್ನು ಎಬ್ಬಿಸಿದ್ದೇನೆ.
- Judges 14:4 ನ್ಯಾಯಸ್ಥಾಪಕರು 14:4ಇದು ಕರ್ತನಿಂದ ಉಂಟಾಯಿತೆಂದು ಅವನ ತಂದೆ ತಾಯಂದಿರು ಅರಿ ಯದೆ ಇದ್ದರು. ಏನಂದರೆ ಫಿಲಿಷ್ಟಿಯರಿಗೆ ವಿರೋಧ ವಾಗಿ ಅವನು ಕಾರಣವನ್ನು ಹುಡುಕಿದನು. ಆ ಕಾಲ ದಲ್ಲಿ ಫಿಲಿಷ್ಟಿಯರು ಇಸ್ರಾಯೇಲ್ಯರನ್ನೂ ಆಳುತ್ತಿದ್ದರು.
- 1 Kings 22:20–23 1 ಅರಸುಗಳು 22:20–23ಆಗ ಕರ್ತನು--ಅಹಾಬನು ಹೋಗಿ ಗಿಲ್ಯಾದಿನ ರಾಮೋ ತಿನ ಬಳಿಯಲ್ಲಿ ಬೀಳುವ ಹಾಗೆ ಅವನನ್ನು ಮರುಳು ಗೊಳಿಸುವವನು ಯಾರು ಅಂದನು. ಒಬ್ಬನು ಹೀಗೆಯೂ ಮತ್ತೊಬ್ಬನು ಹಾಗೆಯೂ ಹೇಳುತ್ತಿರುವಾಗ ಒಂದು ಆತ್ಮವು ಹೊರಟು ಬಂದು ಕರ್ತನ ಮುಂದೆ ನಿಂತು--ನಾನು ಅವನನ್ನು ಮರುಳುಗೊಳಿಸುತ್ತೇನೆ ಅಂದಿತು. ಆಗ ಕರ್ತನು ಅದಕ್ಕೆ--ಯಾವದರಿಂದ ಅಂದನು. ಅದಕ್ಕದು-- ನಾನು ಹೊರಟು ಅವನ ಎಲ್ಲಾ ಪ್ರವಾದಿಗಳ ಬಾಯಿಯಲ್ಲಿ ಸುಳ್ಳಾದ ಆತ್ಮನಾಗಿ ರುವೆನು ಅಂದಿತು. ಅದಕ್ಕೆ ಆತನು--ನೀನು ಅವ ನನ್ನು ಮರುಳುಗೊಳಿಸುವಿ ಮತ್ತು ಜಯಿಸುವಿ. ನೀನು ಹೋಗಿ ಹಾಗೆ ಮಾಡು ಅಂದನು. ಆದದರಿಂದ ಇಗೋ, ಈಗ ಕರ್ತನು ಈ ಎಲ್ಲಾ ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳಾದ ಆತ್ಮವನ್ನು ಇಟ್ಟಿದ್ದಾನೆ; ಇದ ಲ್ಲದೆ ಕರ್ತನು ನಿನ್ನನ್ನು ಕುರಿತು ಕೇಡನ್ನು ಹೇಳಿದ್ದಾನೆ ಅಂದನು.
- 1 Samuel 2:25 1 ಸಮುವೇಲನು 2:25ಮನು ಷ್ಯನಿಗೆ ವಿರೋಧವಾಗಿ ಮನುಷ್ಯನು ಪಾಪಮಾಡಿದರೆ ನ್ಯಾಯಾಧಿಪತಿಗಳು ಅವನಿಗೆ ನ್ಯಾಯತೀರಿಸುವರು.ಒಬ್ಬನು ಕರ್ತನಿಗೆ ವಿರೋಧವಾಗಿ ಪಾಪಮಾಡಿದರೆ ಅವನಿಗೋಸ್ಕರ ಪ್ರಾರ್ಥನೆ ಮಾಡತಕ್ಕವನು ಯಾರು ಅಂದನು. ಆದರೆ ಕರ್ತನು ಅವರನ್ನು ಕೊಂದುಹಾಕ ಬೇಕೆಂದಿದ್ದನಷ್ಟೆ, ಅವರು ತಮ್ಮ ತಂದೆಯ ಮಾತನ್ನು ಕೇಳದೆಹೋದರು.
- 2 Chronicles 25:16 2 ಪೂರ್ವಕಾಲವೃತ್ತಾಂತ 25:16ಅವನು ಅರ ಸನ ಸಂಗಡ ಮಾತನಾಡುತ್ತಿರುವಾಗ ಅರಸನು ಅವ ನಿಗೆ--ಅರಸನ ಯೋಚನಾಕರ್ತರಲ್ಲಿ ನೀನು ಒಬ್ಬ ನಾಗಿದ್ದೀಯೋ? ನೀನು ಯಾಕೆ ಹೊಡೆಯಲ್ಪಡಬೇಕು ಅಂದನು. ಆಗ ಪ್ರವಾದಿಯು--ನೀನು ನನ್ನ ಯೋಚನೆ ಯನ್ನು ಕೇಳದೆ ಇದನ್ನು ಮಾಡಿದ್ದರಿಂದ ದೇವರು ನಿನ್ನನ್ನು ನಾಶಮಾಡಲು ತೀರ್ಮಾನಿಸಿದ್ದಾನೆಂದು ನಾನು ಬಲ್ಲೆನು ಎಂದು ಹೇಳಿಬಿಟ್ಟನು.