Joshua · chapter 13 · verse 7
Joshua 13:7 in Kannada
ಈಗ ಈ ದೇಶವನ್ನು ಒಂಭತ್ತು ಗೋತ್ರಗಳಿಗೂ ಮನಸ್ಸೆಯ ಅರ್ಧಗೋತ್ರಕ್ಕೂ ಬಾಧ್ಯತೆಗಾಗಿ ಪಾಲು ಮಾಡಿಕೊಡು.
Eega ee deshavannu ombhattu gotragaligoo manasseya ardhagotrakkoo baadhyategaagi paalu maadikodu.
Joshua 13:7 in English
- King James Version (KJV)
- Now therefore divide this land for an inheritance unto the nine tribes, and the half tribe of Manasseh,
- World English Bible (WEB)
- Now therefore divide this land for an inheritance to the nine tribes and the half-tribe of Manasseh.”
- American Standard Version (ASV)
- Now therefore divide this land for an inheritance unto the nine tribes, and the half-tribe of Manasseh.
- Bible in Basic English (BBE)
- So now make division of this land for a heritage to the nine tribes, and the half-tribe of Manasseh.
- Darby Translation (DBY)
- And now divide this land for an inheritance to the nine tribes, and to half the tribe of Manasseh;
- Webster's Bible (WBS)
- Now therefore divide this land for an inheritance to the nine tribes, and the half tribe of Manasseh,
- Young's Literal Translation (YLT)
- 'And now, apportion this land for an inheritance to the nine tribes, and the half of the tribe of Manasseh,' —
Read in context
- 5ಗೆಬಾಲ್ಯರ ಪ್ರಾಂತ್ಯ; ಸೂರ್ಯನು ಉದಯಿಸುವ ದಿಕ್ಕಿನಲ್ಲಿ ಹೆರ್ಮೋನ್ ಬೆಟ್ಟದ ಕೆಳಗೆ ಇರುವ ಬಾಳ್ಗಾದಿನಿಂದ ಹಾಮಾತಿನಲ್ಲಿ ಪ್ರವೇಶಿಸುವ ಸ್ಥಳದ ವರೆಗೂ ಇರುವ ಲೆಬನೋನೆಲ್ಲಾ ಇವುಗಳೇ.
- 6ಲೆಬನೋನಿನಿಂದ ಮಿಸ್ರೆಫೋತ್ಮಯಿಮಿನ ವರೆಗೂ ಬೆಟ್ಟದ ದೇಶದ ಎಲ್ಲಾ ನಿವಾಸಿಗಳನ್ನೂ ಎಲ್ಲಾ ಚೀದೋನ್ಯರನ್ನೂ ನಾನು ಇಸ್ರಾಯೇಲ್ ಮಕ್ಕಳ ಎದುರಿನಿಂದ ಹೊರಡಿಸಿ ಬಿಡುವೆನು. ಆದರೆ ನಾನು ನಿನಗೆ ಹೇಳಿದ ಹಾಗೆಯೇ ನೀನು ಚೀಟುಗಳನ್ನು ಹಾಕಿ ಇಸ್ರಾಯೇಲಿಗೆ ಬಾಧ್ಯತೆಯಾಗಿ ಪಾಲಿಡಬೇಕು.
- 7ಈಗ ಈ ದೇಶವನ್ನು ಒಂಭತ್ತು ಗೋತ್ರಗಳಿಗೂ ಮನಸ್ಸೆಯ ಅರ್ಧಗೋತ್ರಕ್ಕೂ ಬಾಧ್ಯತೆಗಾಗಿ ಪಾಲು ಮಾಡಿಕೊಡು.
- 8ಅವರ ಸಂಗಡ ರೂಬೇನ್ಯರೂ ಗಾದ್ಯರೂ ತಮ್ಮ ಬಾಧ್ಯತೆಯನ್ನು ಹೊಂದಿದರು. ಏನಂದರೆ ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಆಚೆ ಸೂರ್ಯೋದಯದ ದಿಕ್ಕಿನಲ್ಲಿ ಅವರಿಗೆ ಕೊಡಲ್ಪಟ್ಟಿತು. ಅವುಗಳು ಯಾವವೆಂದರೆ:
- 9ಅರ್ನೋನ್ ನದೀ ತೀರದಲ್ಲಿರುವ ಅರೋಯೇರ್ ನದಿಯ ಮಧ್ಯಭಾಗ ದಲ್ಲಿರುವ ಪಟ್ಟಣವು ಮೊದಲುಗೊಂಡು ದಿಬೋನಿನ ವರೆಗೆ ಮೇದೆಬದ ಸಮನಾದ ಭೂಮಿಯೂ
Cross references
- Numbers 26:53–56 ಅರಣ್ಯಕಾಂಡ 26:53–56ಇವರಿಗೆ ದೇಶವನ್ನು ಹೆಸರುಗಳ ಲೆಕ್ಕದ ಪ್ರಕಾರ ಸ್ವಾಸ್ತ್ಯವಾಗಿ ಹಂಚಿಕೊಡಬೇಕು. ಬಹು ಜನರಿಗೆ ಬಹು ಸ್ವಾಸ್ತ್ಯವನ್ನು ಕೊಡಬೇಕು, ಸ್ವಲ್ಪ ಜನರಿಗೆ ಸ್ವಲ್ಪ ಸ್ವಾಸ್ತ್ಯವನ್ನು ಕೊಡಬೇಕು. ಒಬ್ಬೊಬ್ಬನಿಗೆ ತನ್ನ ಲೆಕ್ಕದ ಪ್ರಕಾರ ಅವನವನ ಸ್ವಾಸ್ತ್ಯವನ್ನು ಕೊಡಬೇಕು. ಇದಲ್ಲದೆ ಚೀಟು ಹಾಕುವದರಿಂದ ದೇಶವನ್ನು ಪಾಲು ಮಾಡಬೇಕು; ತಮ್ಮ ತಂದೆಗಳ ಕುಟುಂಬಗಳ ಹೆಸರುಗಳ ಪ್ರಕಾರ ಅವರು ಸ್ವತಂತ್ರಿಸಿಕೊಳ್ಳಬೇಕು. ಹೆಚ್ಚಾದ ಜನಕ್ಕೂ ಕಡಿಮೆಯಾದ ಜನಕ್ಕೂ ಅವರ ಸ್ವಾಸ್ತ್ಯವು ಚೀಟಿನ ಪ್ರಕಾರ ಪಾಲಾಗಬೇಕು.
- Ezekiel 47:13–23 ಯೆಹೆಜ್ಕೇಲನು 47:13–23ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀವು ಇಸ್ರಾಯೇಲಿನ ಹನ್ನೆರಡು ಗೋತ್ರಗಳ ಪ್ರಕಾರ ದೇಶ ವನ್ನು ಬಾಧ್ಯವಾಗಿ ಹೊಂದುವ ಹಾಗೆ ಇದು ಮೇರೆಯಾ ಗಿದೆ; ಯೋಸೇಫನಿಗೆ ಎರಡು ಪಾಲುಗಳು ಕೊಡಲ್ಪ ಟ್ಟಿದೆ. ನೀವು ಒಬ್ಬೊಬ್ಬರೂ ಸರಿಯಾಗಿ ಅದನ್ನು ಬಾಧ್ಯವಾಗಿ ಹೊಂದಬೇಕು; ಅದನ್ನು ನಿಮ್ಮ ಪಿತೃಗಳಿಗೆ ಕೊಡುವ ಹಾಗೆ ನಾನು ಕೈ ಎತ್ತಿದ್ದೇನೆ; ಈ ದೇಶವು ನಿಮಗೆ ಬಾಧ್ಯವಾಗಿ ಬರುವದು. ಇದೇ ದೇಶದ ಮೇರೆಯು ಉತ್ತರದ ಕಡೆಗೆ ಮಹಾಸಮುದ್ರದ ಮೊದಲುಗೊಂಡು ಹೆತ್ಲೋನಿನ ಮಾರ್ಗವಾಗಿ ಚೆದಾ ದಿಗೆ ಸೇರುವ ವರೆಗೂ; ಹಮಾತ್ ಬೇರೋತವು, ದಮಸ್ಕದ ವರೆಗೂ ಹಮಾತಿನ ಮೇರೆಗೂ ಮಧ್ಯವಾಗಿ ರುವ ಸಿಬ್ರಯಿಮ್ ಹವ್ರಾನಿನ ಮೇರೆಯಲ್ಲಿರುವ ಹಾಚೇರ್ ಹತ್ತೀಕೋನನ್ನೂ ಮತ್ತು ಸಮುದ್ರದಂತಿ ರುವ ಮೇರೆ ಏನಂದರೆ ಹಾಚರೇನೂ ದಮಸ್ಕದ ಮೇರೆಯೂ ಉತ್ತರದ ಕಡೆಗಿರುವ ಹಮಾತ್ಯರದು ಹಮಾತಿನ ಮೇರೆಯೂ ಉತ್ತರದ ಕಡೆಯದಾಗಿದೆ. ಪೂರ್ವದಲ್ಲಿ ಹವ್ರಾನ್, ದಮಸ್ಕ, ಗಿಲ್ಯಾದ್ ಇವು ಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯೆ ಯೊರ್ದನ್ ಹೊಳೆಯ ಮೇರೆಯಿಂದ ಮೂಡಣ ಸಮುದ್ರದಿಂದ ನೀವು ಅಳೆಯಬೇಕು; ಇದೇ ಮೂಡಣ ಮೇರೆಯಾ ಗಿದೆ. ದಕ್ಷಿಣದ ಕಡೆಗಿರುವ ದಕ್ಷಿಣದ ಮೇರೆಯೂ ತಾಮಾರ್ ಮೊದಲುಗೊಂಡು ಕಾದೇಶಿನ ವಾಗ್ವಾದದ ನೀರಿನ ವರೆಗೂ ನದಿ ಮೊದಲುಗೊಂಡು ಮಹಾಸಮು ದ್ರದ ವರೆಗೂ ಇರುವದು. ಇದೇ ದಕ್ಷಿಣ ಭಾಗದ ದಕ್ಷಿಣದ ಮೇರೆ. ಪಶ್ಚಿಮದ ಕಡೆಗೂ ಸಹ ಮೇರೆ ಯಿಂದ ಮೊದಲುಗೊಂಡು ಹಮಾತಿನ ಪ್ರದೇಶದ ವರೆಗೂ ಇರುವ ಮಹಾಸಮುದ್ರವು ಪಶ್ಚಿಮದ ಕಡೆ ಗಿದೆ, ಇದೇ ಪಶ್ಚಿಮದ ಮೇರೆ. ಹೀಗೆ ನೀವು ಈ ದೇಶವನ್ನು ಇಸ್ರಾಯೇಲ್ಯರ ಕುಲಗಳ ಪ್ರಕಾರ ಪಾಲುಮಾಡಿ ಕೊಳ್ಳಬೇಕು. ನೀವು ಅದನ್ನು ನಿಮಗೂ ನಿಮ್ಮ ಮಧ್ಯದಲ್ಲಿ ತಂಗುವಂತವರಿಗೂ ನಿಮ್ಮ ಮಧ್ಯದಲ್ಲಿ ಮಕ್ಕಳನ್ನು ಪಡೆದಂತ ಅನ್ಯಜನರಿಗೂ ಚೀಟುಹಾಕಿ ಬಾಧ್ಯವಾಗಿ ವಿಭಾಗಿಸಿ ಹಂಚಬೇಕು; ಅವರು ನಿಮಗೆ ಇಸ್ರಾಯೇಲಿನ ಮಕ್ಕಳೊಳಗೆ ಹುಟ್ಟಿದ ವರಾಗಿರಬೇಕು; ಅವರಿಗೆ ಇಸ್ರಾಯೇಲಿನ ಗೋತ್ರಗ ಳೊಳಗೆ ಬಾಧ್ಯತೆಯಾಗಬೇಕು.ಅನ್ಯರು ಯಾವಗೋತ್ರದ ಸಂಗಡ ತಂಗುತ್ತಾರೋ ಅದರಲ್ಲಿಯೇ ನೀವು ಬಾಧ್ಯತೆ ಕೊಡಬೇಕೆಂದು ದೇವರಾದ ಕರ್ತನು ಹೇಳುತ್ತಾನೆ. ಅನ್ಯರು ಯಾವಗೋತ್ರದ ಸಂಗಡ ತಂಗುತ್ತಾರೋ ಅದರಲ್ಲಿಯೇ ನೀವು ಬಾಧ್ಯತೆ ಕೊಡಬೇಕೆಂದು ದೇವರಾದ ಕರ್ತನು ಹೇಳುತ್ತಾನೆ.
- Ezekiel 48:23–29 ಯೆಹೆಜ್ಕೇಲನು 48:23–29ಮಿಕ್ಕ ಗೋತ್ರಗಳ ವಿಷಯವೇನಂದರೆ, ಪೂರ್ವ ದ ಕಡೆಯಿಂದ ಪಶ್ಚಿಮದ ವರೆಗೂ ಬೆನ್ಯಾವಿಾನನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ವರೆಗೂ ಸಿಮೆಯೋನ್ನ ಒಂದು ಭಾಗ ವಾಗಿದೆ. ಸಿಮೆಯೋನ್ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೂ ಇಸ್ಸಾಕಾರನ ಒಂದು ಭಾಗವಾಗಿದೆ; ಇಸ್ಸಾಕಾರ ಮೇರೆಯ ಬಳಿ ಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೂ ಜೆಬುಲೋನನ ಒಂದು ಭಾಗವದೆ; ಜೆಬು ಲೋನ್ನ ಮೇರೆಯ ಬಳಿಯಲ್ಲಿ ಪೂರ್ವದ ಕಡೆ ಯಿಂದ ಪಶ್ಚಿಮದ ಕಡೆಯ ವರೆಗೂ ಗಾದನ ಒಂದು ಭಾಗವಾಗಿದೆ. ಗಾದನ ಮೇರೆಯ ಬಳಿಯಲ್ಲಿ ದಕ್ಷಿಣದ ಕಡೆಯಲ್ಲಿ ದಕ್ಷಿಣದ ಮೇರೆಯು ತಾಮಾರ್ ಮೊದಲುಗೊಂಡು ಕಾದೇಶಿನ ವಾಗ್ವಾದದ ನೀರುಗಳ ವರೆಗೂ ಮಹಾ ಸಮುದ್ರಕ್ಕೆ ಹೋಗುವ ನದಿಯ ವರೆಗೂ ಇರಬೇಕು. ನೀವು ಇಸ್ರಾಯೇಲಿನ ಗೋತ್ರ ಗಳಿಗೆ ಚೀಟು ಹಾಕಿ ಬಾಧ್ಯವಾಗಿ ಹಂಚಿಕೊಡಬೇಕಾದ ದೇಶವು ಇದೇ; ಅದರ ಭಾಗಗಳು ಇವೆ. ಎಂದು ದೇವರಾದ ಕರ್ತನು ಹೇಳುತ್ತಾನೆ.
- Numbers 32:2–14 ಅರಣ್ಯಕಾಂಡ 32:2–14ಆದದರಿಂದ ಗಾದನ ಮಕ್ಕಳೂ ರೂಬೇನನ ಮಕ್ಕಳೂ ಬಂದು ಮಾತನಾಡಿ ಮೋಶೆಗೂ ಯಾಜಕನಾದ ಎಲ್ಲಾಜಾರನಿಗೂ ಸಭೆಯ ಪ್ರಧಾನ ರಿಗೂ-- ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬವುಗಳೂ ಕರ್ತನು ಇಸ್ರಾಯೇಲ್ಯರ ಸಭೆಯ ಮುಂದೆ ಹೊಡೆದ ದೇಶವೂ ಪಶುಗಳ ದೇಶವಾಗಿದೆ; ನಿನ್ನ ಸೇವಕರಿಗೆ ಪಶುಗಳು ಉಂಟು. ಆದದರಿಂದ ನಮಗೆ ನಿಮ್ಮ ದೃಷ್ಟಿಯಲ್ಲಿ ದಯವು ಸಿಕ್ಕಿದ್ದಾದರೆ ಈ ದೇಶವನ್ನು ನಿಮ್ಮ ಸೇವಕರಿಗೆ ಸ್ವಾಸ್ತ್ಯಕ್ಕಾಗಿ ಕೊಡಬೇಕು; ನಮ್ಮನ್ನು ಯೊರ್ದನ್ ನದಿಯ ಆಚೆಗೆ ತಕ್ಕೊಂಡು ಹೋಗಬೇಡಿರಿ ಎಂದು ಹೇಳಿದರು. ಆಗ ಮೋಶೆಯು ಗಾದನ ಮಕ್ಕಳಿಗೂ ರೂಬೇನನ ಮಕ್ಕಳಿಗೂ--ನಿಮ್ಮ ಸಹೋದರರು ಯುದ್ಧಕ್ಕೆ ಹೋಗ ಲಾಗಿ ನೀವು ಇಲ್ಲಿ ಕೂತಿರಬೇಕೋ? ಕರ್ತನು ಅವ ರಿಗೆ ಕೊಟ್ಟ ದೇಶಕ್ಕೆ ಹೋಗುವದಕ್ಕೆ ನೀವು ಇಸ್ರಾ ಯೇಲ್ ಮಕ್ಕಳ ಹೃದಯಗಳನ್ನು ಅಧೈರ್ಯಪಡಿಸು ವದು ಯಾಕೆ? ನಾನು ದೇಶವನ್ನು ನೋಡುವದಕ್ಕೆ ಕಾದೇಶ್ಬರ್ನೇಯದಿಂದ ಅವರನ್ನು ಕಳುಹಿಸಿದಾಗ ನಿಮ್ಮ ಪಿತೃಗಳು ಹಾಗೆಯೇ ಮಾಡಿದರು. ಹೇಗಂದರೆ ಅವರು ಎಷ್ಕೋಲೆಂಬ ತಗ್ಗಿನ ವರೆಗೆ ಬಂದು ದೇಶವನ್ನು ನೋಡಿದಾಗ ಇಸ್ರಾಯೇಲ್ ಮಕ್ಕಳ ಹೃದಯವನ್ನು ಕರ್ತನು ಅವರಿಗೆ ಕೊಟ್ಟ ದೇಶದೊಳಗೆ ಹೋಗದ ಹಾಗೆ ಅಧೈರ್ಯಪಡಿಸಿದರು. ಕರ್ತನು ಅದೇ ಸಮಯದಲ್ಲಿ ಕೋಪೋದ್ರೇಕವುಳ್ಳವನಾಗಿ ಪ್ರಮಾಣಮಾಡಿ-- ಅವರು ನನ್ನನ್ನು ಪೂರ್ಣವಾಗಿ ಹಿಂಬಾಲಿ ಸದೆ ಇರುವದರಿಂದ ನಾನು ಅಬ್ರಹಾಮ್ ಇಸಾಕ್ ಯಾಕೋಬರಿಗೆ ಪ್ರಮಾಣಮಾಡಿದ ದೇಶವನ್ನು ಐಗುಪ್ತದೊಳಗಿಂದ ಏರಿಬಂದ ಇಪ್ಪತ್ತು ವರುಷವೂ ಅದಕ್ಕಿಂತ ಅಧಿಕವಾದ ಪ್ರಾಯವುಳ್ಳ ಜನರಲ್ಲಿ ಕೆನಿಜ್ಜೀಯನಾದ ಯೆಫುನ್ನೆಯ ಮಗನಾಗಿರುವ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಹೊರತು ಒಬ್ಬನಾದರೂ ನೋಡುವದಿಲ್ಲ; ಯಾಕಂದರೆ ಇವರೇ ಕರ್ತನನ್ನು ಪೂರ್ಣವಾಗಿ ಹಿಂಬಾಲಿಸಿದ್ದಾರೆ. ಹಾಗೆ ಕರ್ತನು ಇಸ್ರಾಯೇಲ್ಯರ ಮೇಲೆ ಕೋಪೋ ದ್ರೇಕಗೊಂಡದ್ದರಿಂದ ಆತನ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದ ಸಮಸ್ತ ಸಂತತಿಯು ನಾಶವಾಗುವ ವರೆಗೆ ಅವರನ್ನು ಅರಣ್ಯದಲ್ಲಿ ನಾಲ್ವತ್ತು ವರುಷ ಅಲೆದಾಡು ವಂತೆ ಮಾಡಿದನು. ಇಗೋ, ಕರ್ತನ ಕೋಪವು ಇಸ್ರಾಯೇಲ್ ಕಡೆಗೆ ಇನ್ನೂ ಹೆಚ್ಚಾಗುವ ಹಾಗೆ ನೀವು ನಿಮ್ಮ ಪಿತೃಗಳಿಗೆ ಬದಲಾಗಿ ಪಾಪಿಗಳಾದ ಮನುಷ್ಯರ ಅಭಿವೃದ್ಧಿಯಾಗಿ ನಿಂತಿದ್ದೀರಿ.
- Numbers 33:54 ಅರಣ್ಯಕಾಂಡ 33:54ನೀವು ದೇಶವನ್ನು ನಿಮ್ಮ ಗೋತ್ರಗಳ ಪ್ರಕಾರ ಚೀಟಿನಿಂದ ಸ್ವಾಧೀನಮಾಡಿ ಹಂಚಿಕೊಳ್ಳಬೇಕು; ಹೆಚ್ಚಾದವರಿಗೆ ಸ್ವಾಸ್ತ್ಯವನ್ನು ಹೆಚ್ಚಿಸಿ ಕಡಿಮೆಯಾದ ವರಿಗೆ ಸ್ವಾಸ್ತ್ಯವನ್ನು ಕಡಿಮೆಮಾಡಬೇಕು; ಒಬ್ಬೊಬ್ಬ ನಿಗೆ ಚೀಟು ಎಲ್ಲಿ ಬೀಳುವದೋ ಅದೇ ಅವನಿಗಾಗ ಬೇಕು; ನಿಮ್ಮ ಪಿತೃಗಳ ಗೋತ್ರದ ಪ್ರಕಾರ ನೀವು ಸ್ವಾಧೀನಮಾಡಿಕೊಳ್ಳಬೇಕು.