Joshua · chapter 18 · verse 7
Joshua 18:7 in Kannada
ಆದರೆ ಲೇವಿಯರಿಗೆ ನಿಮ್ಮ ಸಂಗಡ ಪಾಲಿಲ್ಲ; ಅವರಿಗೆ ಕರ್ತನ ಯಾಜಕತ್ವವೇ ಅವರ ಬಾಧ್ಯತೆಯಾಗಿದೆ. ಇದಲ್ಲದೆ ಗಾದನೂ ರೂಬೇನನೂ ಮನಸ್ಸೆಯ ಅರ್ಧ ಗೋತ್ರವೂ ಯೊರ್ದನಿನ ಆಚೆ ಮೂಡಣ ದಿಕ್ಕಿನಲ್ಲಿ ಕರ್ತನ ಸೇವಕನಾದ ಮೋಶೆಯು ಕೊಟ್ಟ ತಮ್ಮ ಬಾಧ್ಯತೆಯನ್ನು ತಕ್ಕೊಂಡಿದ್ದಾರೆ ಅಂದನು.
Aadare leviyarige nimma sangada paalilla; avarige kartana yaajakatvave avara baadhyateyaagide. Idallade gaadanoo roobenanoo manasseya ardha gotravoo yordanina aache moodana dikkinalli kartana sevakanaada mosheyu kotta tamma baadhyateyannu takkondiddaare andanu.
Joshua 18:7 in English
- King James Version (KJV)
- But the Levites have no part among you; for the priesthood of the LORD [is] their inheritance: and Gad, and Reuben, and half the tribe of Manasseh, have received their inheritance beyond Jordan on the east, which Moses the servant of the LORD gave them.
- World English Bible (WEB)
- However, the Levites have no portion among you; for the priesthood of the LORD is their inheritance. Gad, Reuben, and the half-tribe of Manasseh have received their inheritance east of the Jordan, which Moses the servant of the LORD gave them.”
- American Standard Version (ASV)
- For the Levites have no portion among you; for the priesthood of Jehovah is their inheritance: and Gad and Reuben and the half-tribe of Manasseh have received their inheritance beyond the Jordan eastward, which Moses the servant of Jehovah gave them.
- Bible in Basic English (BBE)
- For the Levites have no part among you; to be the Lord's priests is their heritage; and Gad and Reuben and the half-tribe of Manasseh have had their heritage on the east side of Jordan, given to them by Moses, the servant of the Lord.
- Darby Translation (DBY)
- But the Levites have no portion among you, for the priesthood of Jehovah is their inheritance. And Gad, and Reuben, and half the tribe of Manasseh have received their inheritance beyond the Jordan on the east, which Moses the servant of Jehovah gave them.
- Webster's Bible (WBS)
- But the Levites have no part among you; for the priesthood of the LORD [is] their inheritance. And Gad, and Reuben, and half the tribe of Manasseh, have received their inheritance beyond Jordan on the east, which Moses the servant of the LORD gave them.
- Young's Literal Translation (YLT)
- for there is no portion to the Levites in your midst, for the priesthood of Jehovah [is] their inheritance, and Gad, and Reuben, and the half of the tribe of Manasseh received their inheritance beyond the Jordan eastward, which Moses servant of Jehovah gave to them.'
Read in context
- 5ಅದನ್ನು ಅವರು ಏಳು ಪಾಲಾಗಿ ಹಂಚಬೇಕು. ದಕ್ಷಿಣದಲ್ಲಿ ಯೂದಗೋತ್ರದವರೂ ಉತ್ತರದಲ್ಲಿ ಯೋಸೇಫನ ಮನೆತನದವರೂ ನೆಲಸಬೇಕು.
- 6ನೀವು ದೇಶವನ್ನು ಏಳು ಪಾಲಾಗಿ ವಿವರಿಸಬೇಕು ಮತ್ತು ಅದರ ವಿವರಗಳನ್ನು ನನ್ನ ಬಳಿಯಲ್ಲಿ ತರಬೇಕು. ಆಗ ನಾನು ಈ ಸ್ಥಳದಲ್ಲಿ ನಮ್ಮ ದೇವರಾದ ಕರ್ತನ ಮುಂದೆ ನಿಮಗೊಸ್ಕರ ಚೀಟುಗಳನ್ನು ಹಾಕುವೆನು.
- 7ಆದರೆ ಲೇವಿಯರಿಗೆ ನಿಮ್ಮ ಸಂಗಡ ಪಾಲಿಲ್ಲ; ಅವರಿಗೆ ಕರ್ತನ ಯಾಜಕತ್ವವೇ ಅವರ ಬಾಧ್ಯತೆಯಾಗಿದೆ. ಇದಲ್ಲದೆ ಗಾದನೂ ರೂಬೇನನೂ ಮನಸ್ಸೆಯ ಅರ್ಧ ಗೋತ್ರವೂ ಯೊರ್ದನಿನ ಆಚೆ ಮೂಡಣ ದಿಕ್ಕಿನಲ್ಲಿ ಕರ್ತನ ಸೇವಕನಾದ ಮೋಶೆಯು ಕೊಟ್ಟ ತಮ್ಮ ಬಾಧ್ಯತೆಯನ್ನು ತಕ್ಕೊಂಡಿದ್ದಾರೆ ಅಂದನು.
- 8ಆ ಮನುಷ್ಯರು ಹೊರಟುಹೋದರು. ಯೆಹೋಶುವನು ದೇಶವನ್ನು ವಿವರಿಸುವದಕ್ಕಾಗಿ ಹೋದವರಿಗೆ ಅಪ್ಪಣೆ ಕೊಟ್ಟು--ನೀವು ಹೋಗಿ ದೇಶದಲ್ಲೆಲ್ಲಾ ಸಂಚರಿಸಿ ಅದರ ವಿವರಣೆಯನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿ; ನಾನು ಶೀಲೋವಿನಲ್ಲಿ ಕರ್ತನ ಮುಂದೆ ನಿಮಗೊಸ್ಕರ ಚೀಟುಗಳನ್ನು ಹಾಕುವಂತೆ ನನ್ನ ಬಳಿಗೆ ತಿರಿಗಿ ಬರಲಿ ಎಂದು ಹೇಳಿದನು.
- 9ಆ ಮನುಷ್ಯರು ಆ ದೇಶಕ್ಕೆ ಹೋಗಿ ಅದನ್ನು ಅದರ ಪಟ್ಟಣಗಳ ಪ್ರಕಾರ ಏಳು ಪಾಲಾಗಿ ಒಂದು ಪುಸ್ತಕದಲ್ಲಿ ಬರಕೊಂಡು ಶೀಲೋವಿ ನಲ್ಲಿರುವ ಪಾಳೆಯಕ್ಕೆ ಯೆಹೋಶುವನ ಬಳಿಗೆ ತಿರಿಗಿ ಬಂದರು.
Cross references
- Joshua 13:33 ಯೆಹೋಶುವ 13:33ಆದರೆ ಲೇವಿ ಯನ ಗೋತ್ರಕ್ಕೆ ಮೋಶೆಯು ಯಾವ ಬಾಧ್ಯತೆಯನ್ನು ಕೊಡಲಿಲ್ಲ. ಇಸ್ರಾಯೇಲ್ ದೇವರಾದ ಕರ್ತನು ಅವರಿಗೆ ಹೇಳಿದ ಪ್ರಕಾರ ತಾನೇ ಅವರ ಬಾಧ್ಯತೆ.
- Numbers 18:20 ಅರಣ್ಯಕಾಂಡ 18:20ಕರ್ತನು ಆರೋನನಿಗೆ--ನಿನಗೆ ಅವರ ದೇಶದಲ್ಲಿ ಯಾವ ಸ್ವಾಸ್ತ್ಯವೂ ಇರಬಾರದು; ನಿನಗೆ ಅವರ ಮಧ್ಯದಲ್ಲಿ ಯಾವ ಪಾಲೂ ಇರಬಾರದು; ನಾನೇ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ನಿನ್ನ ಪಾಲೂ ಸ್ವಾಸ್ತ್ಯವೂ ಆಗಿದ್ದೇನೆ.
- Joshua 13:8–31 ಯೆಹೋಶುವ 13:8–31ಅವರ ಸಂಗಡ ರೂಬೇನ್ಯರೂ ಗಾದ್ಯರೂ ತಮ್ಮ ಬಾಧ್ಯತೆಯನ್ನು ಹೊಂದಿದರು. ಏನಂದರೆ ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಆಚೆ ಸೂರ್ಯೋದಯದ ದಿಕ್ಕಿನಲ್ಲಿ ಅವರಿಗೆ ಕೊಡಲ್ಪಟ್ಟಿತು. ಅವುಗಳು ಯಾವವೆಂದರೆ: ಅರ್ನೋನ್ ನದೀ ತೀರದಲ್ಲಿರುವ ಅರೋಯೇರ್ ನದಿಯ ಮಧ್ಯಭಾಗ ದಲ್ಲಿರುವ ಪಟ್ಟಣವು ಮೊದಲುಗೊಂಡು ದಿಬೋನಿನ ವರೆಗೆ ಮೇದೆಬದ ಸಮನಾದ ಭೂಮಿಯೂ ಹೆಷ್ಬೋನಿನಲ್ಲಿ ಆಳಿದ ಅಮೋರಿಯರ ಅರಸನಾದ ಸೀಹೋನನಿಗೆ ಅಮ್ಮೋನಿನ ಮಕ್ಕಳ ಮೇರೆಯ ವರೆಗೂ ಇದ್ದ ಸಕಲ ಪಟ್ಟಣಗಳೂ ಗಿಲ್ಯಾದೂ ಗೆಷೂರ್ಯರ ಮಾಕತೀಯರ ಮೇರೆಯೂ ಹೆರ್ಮೋನ್ ಪರ್ವತವೆಲ್ಲವೂ ಅಷ್ಟರೋತಿನಲ್ಲಿಯೂ ಎದ್ರೈಯ ಲ್ಲಿಯೂ ಆಳಿದ ರಾಕ್ಷಸರಲ್ಲಿ ಮಿಕ್ಕಿದ್ದ ಬಾಷಾನಿನ ಅರಸನಾದ ಓಗನ ರಾಜ್ಯವೆಲ್ಲಾ ಸಮಸ್ತ ರಾಜ್ಯವಾದ ಬಾಷಾನೂ ಇವುಗಳೇ. ಮೋಶೆಯು ಇವೆಲ್ಲವುಗಳನ್ನು ಜಯಿಸಿ ಅವರನ್ನು ಹೊಡೆದು ಹೊರಡಿಸಿದ್ದನು. ಆದಾಗ್ಯೂ ಇಸ್ರಾಯೇಲ್ ಮಕ್ಕಳು ಗೆಷೂರ್ಯರನ್ನೂ ಮಾಕತೀಯರನ್ನೂ ಹೊರಡಿಸಿ ಬಿಡಲಿಲ್ಲ; ಯಾಕಂದರೆ ಗೆಷೂರ್ಯರೂ ಮಾಕತೀಯರೂ ಈ ದಿನದ ವರೆಗೆ ಇಸ್ರಾಯೇಲಿನ ಮಧ್ಯದಲ್ಲಿ ವಾಸವಾಗಿದ್ದಾರೆ. ಆದರೆ ಮೋಶೆಯು ಲೇವಿಯರ ಗೋತ್ರಕ್ಕೆ ಮಾತ್ರ ಯಾವ ಬಾಧ್ಯತೆಯನ್ನೂ ಕೊಡಲಿಲ್ಲ; ಯಾಕಂದರೆ ಅವನು ಅವರಿಗೆ ಹೇಳಿದ ಪ್ರಕಾರ ಇಸ್ರಾಯೇಲಿನ ದೇವರಾದ ಕರ್ತನ ದಹನ ಬಲಿಗಳೇ ಅವರ ಬಾಧ್ಯತೆಯಾಗಿವೆ. ಇದಲ್ಲದೆ ಮೋಶೆಯು ರೂಬೇನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ಬಾಧ್ಯತೆ ಯನ್ನು ಕೊಟ್ಟನು. ಅರ್ನೋನ್ ನದಿಯ ತೀರದ ಲ್ಲಿರುವ ಅರೋಯೇರ್ ನದಿಯ ಮಧ್ಯದಲ್ಲಿರುವ ಪಟ್ಟಣವು ಮೊದಲುಗೊಂಡು ಮೇದೆಬದ ಬಳಿ ಯಲ್ಲಿರುವ ಸಕಲ ಸಮನಾದ ಭೂಮಿಯೂ ಸಮನಾದ ಭೂಮಿಯಲ್ಲಿರುವ ಹೆಷ್ಬೋನು ಅದರ ಎಲ್ಲಾ ಪಟ್ಟಣಗಳಾದ ದೀಬೋನು, ಬಾಮೋತ್ಬಾಳ್, ಬೆತ್ಬಾಳ್ಮೆಯೋನ್, ಯಹಚಾ ಕೆದೇಮೋತ್, ಮೇಫಾಯತ್, ಕಿರ್ಯಾತಯಿಮ್, ಸಿಬ್ಮಾ, ತಗ್ಗಿನ ಬೆಟ್ಟದಲ್ಲಿರುವ ಚೆರೆತ್ಶಹರ್, ಬೇತ್ಪಗೋರ್, ಅಷ್ಡೊತ್ಪಿಸ್ಗಾ, ಬೇತ್ಯೆಶಿಮೋತ್, ಹರ್, ಸಮ ನಾದ ಭೂಮಿಯ ಎಲ್ಲಾ ಪಟ್ಟಣಗಳೂ ಹೆಷ್ಬೋನಿನಲ್ಲಿ ಆಳಿದ ಸೀಹೋನನೆಂಬ ಅಮೋರಿಯರ ಅರಸನ ರಾಜ್ಯವೆಲ್ಲವೂ ಅವರ ಮೇರೆಗಳಾದವು. ಮೋಶೆಯು ಅವನನ್ನೂ ದೇಶದಲ್ಲಿ ಅವನ ಅಧಿಪತಿಗಳಾದಂಥ ಮಿದ್ಯಾನಿನ ಪ್ರಧಾನರಾದ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬವರನ್ನೂ ಕೊಂದುಹಾಕಿದನು. ಇದಲ್ಲದೆ ಇಸ್ರಾಯೇಲ್ ಮಕ್ಕಳು ಸಂಹರಿಸಿದ ಇತರರ ಸಂಗಡ ಬೆಯೋರನ ಮಗನಾದ ಬಿಳಾಮ ನೆಂಬ ಕಣಿ ಹೇಳುವವನನ್ನು ಕತ್ತಿಯಿಂದ ಕೊಂದು ಹಾಕಿದರು. ಯೊರ್ದನೂ ಅದರ ಮೇರೆಯೂ ರೂಬೇನನ ಮಕ್ಕಳ ಮೇರೆಯಾಗಿತ್ತು. ಈ ಪಟ್ಟಣಗಳೂ ಇವುಗಳ ಗ್ರಾಮಗಳೂ ರೂಬೇನನ ಮಕ್ಕಳಿಗೆ ಅವರ ಗೋತ್ರಗಳ ಪ್ರಕಾರ ಬಾಧ್ಯತೆಯಾಗಿವೆ. ಇದಲ್ಲದೆ ಮೋಶೆಯು ಗಾದನ ಮಕ್ಕಳ ಗೋತ್ರ ಅವರ ಕುಟುಂಬಗಳ ಪ್ರಕಾರ ಬಾಧ್ಯತೆಯಾಗಿ ಕೊಟ್ಟನು. ಯಗ್ಜೇರ್; ಗಿಲ್ಯಾದಿನ ಸಮಸ್ತ ಪಟ್ಟಣ ಗಳೂ ರಬ್ಬಾಕ್ಕೆ ಎದುರಾಗಿರುವ ಅರೋಯೆರಿನ ವರೆಗೂ ಇರುವ ಅಮ್ಮೋನಿನ ಮಕ್ಕಳ ಅರ್ಧ ದೇಶವು; ಹೆಷ್ಬೋನಿನಿಂದ ರಾಮತ್ಮಿಚ್ಪೆ, ಬೆಟೊನೀಮ್ ಇವುಗಳ ವರೆಗೂ ಮಹನಯಿಮಿನಿಂದ ದೆಬೀರ್ ಮೇರೆಯ ವರೆಗೂ ಇರುವ ದೇಶವು; ತಗ್ಗಿನಲ್ಲಿರುವ ಬೇತ್ಹಾರಾಮ್; ಬೇತ್ನಿಮ್ರಾ, ಸುಕ್ಕೋತ್, ಚಾಫೋನ್; ಹೆಷ್ಬೋನಿನ ಅರಸನಾದ ಸೀಹೋನನ ಉಳಿದ ರಾಜ್ಯವೂ ಯೊರ್ದನಿಗೆ ಆಚೆಯಲ್ಲಿರುವ ಮೂಡಲ ಯೊರ್ದನಿನ ತೀರವಾಗಿ ಕಿನ್ನೆರೆತ್ ಸಮುದ್ರದ ಪರ್ಯಂತರಕ್ಕೂ ಇರುವ ದೇಶವೂ ಅವರ ಮೇರೆಗೆ ಒಳಗಾದವು. ಈ ಪಟ್ಟಣಗಳೂ ಇವುಗಳ ಗ್ರಾಮಗಳೂ ಗಾದನ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಬಾಧ್ಯತೆಯಾಗಿವೆ. ಇದಲ್ಲದೆ ಮನೆಸ್ಸೆಯ ಮಕ್ಕಳ ಅರ್ಧಗೋತ್ರಕ್ಕೆ ಮೋಶೆಯು ಅವರ ಕುಟುಂಬದ ಪ್ರಕಾರ ಸ್ವಾಸ್ತ್ಯವನ್ನು ಕೊಟ್ಟನು. ಅದು ಯಾವದಂದರೆ, ಮಹನಯಾಮಿ ನಿಂದ ಬಾಷಾನಿನ ಅರಸನಾದ ಓಗನ ಸಮಸ್ತ ರಾಜ್ಯವಾಗಿರುವ ಬಾಷಾನೆಲ್ಲವೂ ಬಾಷಾನಿನಲ್ಲಿರುವ ಯಾಯಾರಿನ ಸಮಸ್ತ ಊರುಗಳಾದ ಅರವತ್ತು ಪಟ್ಟಣಗಳೂ ಅವರ ಮೇರೆಗೆ ಒಳಗಾದವು. ಗಿಲ್ಯಾದಿ ನಲ್ಲಿ ಅರ್ಧವನ್ನೂ ಬಾಷಾನಿನಲ್ಲಿ ಅಷ್ಟರೋತ್, ಎದ್ರೈ ಎಂಬ ಓಗನ ರಾಜ್ಯದ ಪಟ್ಟಣಗಳನ್ನೂ ಮನಸ್ಸೆಯ ಮಗನಾದ ಮಾಕೀರನ ಮಕ್ಕಳಿಗೆ, ಅವರ ಕುಟುಂಬಗಳ ಪ್ರಕಾರ ಮಾಕೀರನ ಮಕ್ಕಳಲ್ಲಿ ಅರ್ಧ ಜನಕ್ಕೆ ಕೊಟ್ಟನು.
- Deuteronomy 3:12–17 ಧರ್ಮೋಪದೇಶಕಾಂಡ 3:12–17ಆ ಕಾಲದಲ್ಲಿ ನಾವು ಸ್ವತಂತ್ರಿಸಿಕೊಂಡ ದೇಶವನ್ನು ಅರ್ನೋನ್ ನದಿಯ ಸವಿಾಪದಲ್ಲಿರುವ ಅರೋಯೇರಿನಿಂದ ಮೊದಲ್ಗೊಂಡು ಅರ್ಧ ಗಿಲ್ಯಾದ್ ಬೆಟ್ಟವನ್ನೂ ಅದರ ಪಟ್ಟಣಗಳನ್ನೂ ರೂಬೇನನ ಮನೆಯವರಿಗೂ ಗಾದನ ಮನೆಯವರಿಗೂ ಕೊಟ್ಟೆನು. ಮಿಕ್ಕ ಗಿಲ್ಯಾದನ್ನೂ ಓಗನ ರಾಜ್ಯವಾದ ಎಲ್ಲಾ ಬಾಷಾನನ್ನೂ ಮನಸ್ಸೆಯ ಅರ್ಧ ಕುಲಕ್ಕೆ ಕೊಟ್ಟೆನು; ಅರ್ಗೋಬಿನ ಸಮಸ್ತ ಸೀಮೆಯನ್ನೂ ಮಹಾಶರೀರಗಳ ದೇಶವೆಂದು ಹೇಳ ಲ್ಪಟ್ಟ ಸಮಸ್ತ ಭಾಷಾನನ್ನು ಅವರಿಗೆ ಕೊಟ್ಟೆನು. ಮನಸ್ಸೆಯ ಮಗನಾದ ಯಾಯಾರನು ಅರ್ಗೋ ಬಿನ ದೇಶವನ್ನೆಲ್ಲಾ ಗೆಷೂರ್ಯರ, ಮಾಕಾತ್ಯರ ಮೇರೆಯ ವರೆಗೆ ತಕ್ಕೊಂಡು ಆ ಬಾಷಾನಿಗೆ ತನ್ನ ಹೆಸರಿನ ಪ್ರಕಾರ ಇಂದಿನ ವರೆಗೆ ಹವ್ವೊತ್ ಯಾಯಾ ರೆಂದು ಹೆಸರಿಟ್ಟನು. ಗಿಲ್ಯಾದನ್ನು ಮಾಕೀರನಿಗೆ ಕೊಟ್ಟೆನು. ರೂಬೇನನ ಮನೆಯವರಿಗೂ ಗಾದನ ಮನೆಯವರಿಗೂ ಗಿಲ್ಯಾದ್ ಮೊದಲುಗೊಂಡು ಅರ್ನೋನ್ ನದಿಯ ವರೆಗೆ ಕೊಟ್ಟೆನು. ಬೈಲನ್ನೂ ಯೊರ್ದನನ್ನೂ ಅದರ ಸೀಮೆಯನ್ನೂ ಕಿನ್ನೆರೆತ್ ಮೊದಲುಗೊಂಡು ಪೂರ್ವದಲ್ಲಿರುವ ಅಷ್ಡೋದ್ ಪಿಸ್ಗಾದ ಕೆಳಗಿರುವ ಉಪ್ಪಿನಸಮುದ್ರವಾದ ಬೈಲು ಸಮುದ್ರದ ವರೆಗೆ ಕೊಟ್ಟೆನು.
- Numbers 32:29–41 ಅರಣ್ಯಕಾಂಡ 32:29–41ಮೋಶೆಯು ಅವರಿಗೆ--ಗಾದನ ಮಕ್ಕಳೂ ರೂಬೇನನ ಮಕ್ಕಳೂ ಎಲ್ಲರು ಯುದ್ಧಕ್ಕೆ ಸಿದ್ಧವಾಗಿದ್ದು ನಿಮ್ಮ ಸಂಗಡ ಯೊರ್ದನ್ ನದಿಯನ್ನು ಕರ್ತನ ಮುಂದೆ ದಾಟಿದರೆ ದೇಶವು ನಿಮ್ಮ ಮುಂದೆ ವಶವಾಗಿದ್ದಾಗ ನೀವು ಅವರಿಗೆ ಗಿಲ್ಯಾದ್ ದೇಶವನ್ನು ಸ್ವಾಸ್ತ್ಯಕ್ಕಾಗಿ ಕೊಡಬೇಕು. ಆದರೆ ಅವರು ಯುದ್ಧಕ್ಕೆ ಸಿದ್ಧವಾಗಿ ನಿಮ್ಮ ಸಂಗಡ ದಾಟದಿದ್ದರೆ ಅವರು ನಿಮ್ಮೊಳಗೆ ಕಾನಾನ್ ದೇಶದಲ್ಲಿ ಸ್ವಾಸ್ತ್ಯವನ್ನು ಹೊಂದಬೇಕು ಅಂದನು. ಆಗ ಗಾದನ ಮಕ್ಕಳೂ ರೂಬೇನನ ಮಕ್ಕಳೂ ಪ್ರತ್ಯುತ್ತರವಾಗಿ--ಕರ್ತನು ನಿನ್ನ ಸೇವಕರಿಗೆ ಹೇಳಿ ದ್ದಂತೆಯೇ ನಾವು ಮಾಡುವೆವು. ನಾವು ಯುದ್ಧಕ್ಕೆ ಸಿದ್ಧವಾಗಿ ಕರ್ತನ ಮುಂದೆ ಕಾನಾನ್ ದೇಶಕ್ಕೆ ದಾಟಿ ಹೋಗುವೆವು; ಆದರೆ ಯೊರ್ದನ್ ನದಿಯ ಈಚೆ ಯಲ್ಲಿರುವ ನಮ್ಮ ಸ್ವಾಸ್ತ್ಯದ ಭಾಗವೇ ನಮಗಿರಲಿ ಎಂದು ಹೇಳಿದರು. ಹಾಗೆಯೇ ಮೋಶೆಯು ಗಾದನ ಮಕ್ಕಳಿಗೂ ರೂಬೇನನ ಮಕ್ಕಳಿಗೂ ಯೋಸೇಫನ ಮಗನಾದ ಮನಸ್ಸೆಯ ಅರ್ಧ ಗೋತ್ರಕ್ಕೂ ಅಮೋರಿಯರ ಅರಸ ನಾದ ಸೀಹೋನನ ರಾಜ್ಯವನ್ನೂ ಬಾಷಾನಿನ ಅರಸ ನಾದ ಓಗನ ರಾಜ್ಯವನ್ನೂ ಅದರ ಭೂಮಿಯನ್ನೂ ಅದರ ಮೇರೆಗಳಲ್ಲಿ ಸುತ್ತಮುತ್ತಲಿನ ಪಟ್ಟಣಗಳನ್ನೂ ಕೊಟ್ಟನು. ಆಗ ಗಾದನ ಮಕ್ಕಳು ದೀಬೋನ್, ಅಟಾರೋತ್, ಆರೋಯೇರ್, ಅಟ್ರೋತ್ಪೊ ಫಾನ್, ಯಗ್ಜೇರ್, ಯೊಗ್ಬೆಹಾ, ಬೇತ್ನಿಮ್ರಾ, ಬೇತ್ ಹಾರಾನ್ ಎಂಬ ಭದ್ರವಾದ ಪಟ್ಟಣಗಳನ್ನೂ ಕುರಿಗಳಿಗೆ ಹಟ್ಟಿಗಳನ್ನೂ ಕಟ್ಟಿದ್ದರು. ರೂಬೇನನ ಮಕ್ಕಳು ಹೆಷ್ಬೋನ್, ಎಲೀಯಾಲೆ, ಕಿರ್ಯಾತಯಿಮ್, ನೆಬೋ, ಬಾಳ್ಮೆಯೋನ್ ಎಂದು ಬೇರೆ ಹೆಸರು ಹೊಂದಿದ್ದ ಈ ಪಟ್ಟಣಗಳನ್ನೂ ಸಿಬ್ಮಾವನ್ನೂ ಕಟ್ಟಿ ತಾವು ಕಟ್ಟಿದ ಪಟ್ಟಣಗಳಿಗೆ ಹೆಸರುಗಳನ್ನು ಇಟ್ಟರು. ಮನಸ್ಸೆಯ ಮಗನಾದ ಮಾಕೀರನ ಮಕ್ಕಳು ಗಿಲ್ಯಾದ್ ದೇಶಕ್ಕೆ ಹೋಗಿ ಅದನ್ನು ತಕ್ಕೊಂಡು, ಅದರಲ್ಲಿದ್ದ ಅಮೋರಿಯರನ್ನು ಹೊರಡಿಸಿದರು. ಮೋಶೆಯು ಗಿಲ್ಯಾದನ್ನು ಮನಸ್ಸೆಯ ಮಗನಾದ ಮಾಕೀರನಿಗೆ ಕೊಟ್ಟದ್ದರಿಂದ ಅವನು ಅದರಲ್ಲಿ ವಾಸಿ ಸಿದನು. ಆದರೆ ಮನಸ್ಸೆಯ ಮಗನಾದ ಯಾಯಾ ರನು ಹೋಗಿ, ಅವರ ನಗರಗಳನ್ನು ತಕ್ಕೊಂಡು, ಅವುಗಳಿಗೆ ಯಾಯಾರನ ನಗರಗಳೆಂದು ಹೆಸರಿಟ್ಟನು.ನೋಬಹನು ಹೋಗಿ ಕೇನಾತೆಂಬ ಪಟ್ಟಣವನ್ನು ಅದರ ಗ್ರಾಮಗಳನ್ನು ತಕ್ಕೊಂಡು ಅದಕ್ಕೆ ತನ್ನ ಹೆಸರಿನ ಹಾಗೆ ನೋಬಹ ಎಂದು ಹೆಸರಿಟ್ಟನು.
- Deuteronomy 10:9 ಧರ್ಮೋಪದೇಶಕಾಂಡ 10:9ಆದದ ರಿಂದ ಲೇವಿಯರಿಗೆ ಅವನ ಸಹೋದರರ ಸಂಗಡ ಪಾಲೂ ಸ್ವಾಸ್ತ್ಯವೂ ಉಂಟಾಗಲಿಲ್ಲ; ಅವನ ದೇವ ರಾದ ಕರ್ತನು ಅವನಿಗೆ ವಾಗ್ದಾನಮಾಡಿದಂತೆ ಕರ್ತನೇ ಅವನ ಸ್ವಾಸ್ತ್ಯವು.
- Numbers 18:23 ಅರಣ್ಯಕಾಂಡ 18:23ಆದರೆ ಲೇವಿಯರೇ ಸಭೆಯ ಗುಡಾರದ ಸೇವೆ ಯನ್ನು ಮಾಡಬೇಕು; ಅವರೇ ಅವರ ಅಕ್ರಮವನ್ನು ಹೊತ್ತುಕೊಳ್ಳಬೇಕು; ಇದು ನಿಮ್ಮ ಸಂತತಿಗಳಿಗೆ ನಿತ್ಯ ಕಟ್ಟಳೆಯಾಗಿದೆ; ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವು ಇರಬಾರದು.
- Deuteronomy 18:1–2 ಧರ್ಮೋಪದೇಶಕಾಂಡ 18:1–2ಯಾಜಕರಾದ ಲೇವಿಯರಿಗೂ ಆ ಎಲ್ಲಾ ಲೇವಿಯ ಗೋತ್ರಕ್ಕೂ ಇಸ್ರಾಯೇಲಿನ ಸಂಗಡ ಪಾಲೂ ಸ್ವಾಸ್ತ್ಯವೂ ಇರಬಾರದು; ಅವರು ಕರ್ತನ ಬೆಂಕಿಯಿಂದ ಮಾಡಿದ ಬಲಿಗಳನ್ನೂ ಆತನ ಸ್ವಾಸ್ತ್ಯವನ್ನೂ ತಿನ್ನಬೇಕು. ಆದದರಿಂದ ಅವರಿಗೆ ಅವರ ಸಹೋದರರ ಮಧ್ಯದಲ್ಲಿ ಸ್ವಾಸ್ತ್ಯವಿರಬಾರದು; ಕರ್ತನು ಅವರಿಗೆ ಹೇಳಿದ ಹಾಗೆ ಆತನೇ ಅವರ ಸ್ವಾಸ್ತ್ಯವಾಗಿದ್ದಾನೆ.
- Deuteronomy 4:47–48 ಧರ್ಮೋಪದೇಶಕಾಂಡ 4:47–48ಅವನ ದೇಶವನ್ನೂ ಬಾಷಾ ನಿನ ಅರಸನಾದ ಓಗನ ದೇಶವನ್ನೂ ಯೊರ್ದನಿನ ಈಚೆಯಲ್ಲಿ ಸೂರ್ಯೋದಯದ ಕಡೆಗೆ ಇರುವ ಅಮೋರಿಯರ ಇಬ್ಬರು ಅರಸರ ದೇಶಗಳನ್ನೂ ಅರ್ನೋನ್ ನದಿಯ ತೀರದಲ್ಲಿರುವ ಅರೋ ಯೇರ್ ಮೊದಲುಗೊಂಡು ಹೆರ್ಮೋನೆಂಬ ಸೀಯೋನ್ ಪರ್ವತದ ವರೆಗೆಯೊರ್ದನಿನ ಈಚೆಯಲ್ಲಿರುವ ಮೂಡಣ ದಿಕ್ಕಿನಲ್ಲಿ ಇರುವ ಎಲ್ಲಾ ಬೈಲುಗಳನ್ನು ಸಹ ಪಿಸ್ಗಾದ ಊಟೆಗಳಲ್ಲಿರುವ ಬೈಲಿನ ಸಮುದ್ರದ ವರೆಗೆ ಸ್ವಾಧೀನಮಾಡಿಕೊಂಡರು.
Original words (Hebrew)
- Levites · H3881לֵוִיִּי Lêvîyîy
- part · H2506חֵלֶק chêleq
- among · H7130קֶרֶב qereb
- priesthood · H3550כְּהֻנָּה kᵉhunnâh
- inheritance · H5159נַחֲלָה nachălâh
- Gad · H1410גָּד Gâd
- Reuben · H7205רְאוּבֵן Rᵉʼûwbên
- half · H2677חֵצִי chêtsîy
- tribe · H7626שֵׁבֶט shêbeṭ
- Manasseh · H4519מְנַשֶּׁה Mᵉnashsheh
- received · H3947לָקַח lâqach
- inheritance · H5159נַחֲלָה nachălâh
- beyond · H5676עֵבֶר ʻêber
- Jordan · H3383יַרְדֵּן Yardên
- east · H4217מִזְרָח mizrâch
- Moses · H4872מֹשֶׁה Môsheh
- servant · H5650עֶבֶד ʻebed
- gave · H5414נָתַן nâthan