Joshua · chapter 22 · verse 18
Joshua 22:18 in Kannada
ಈಹೊತ್ತು ಕರ್ತನ ಕಡೆ ಯಿಂದ ತಿರಿಗಿ ಹೋಗುತ್ತೀರಲ್ಲಾ? ಈಹೊತ್ತು ಕರ್ತ ನಿಗೆ ವಿರೋಧವಾಗಿ ತಿರುಗಿ ಬಿದ್ದಾಗ ನಾಳೆ ಆತನು ಇಸ್ರಾಯೇಲ್ ಸಭೆಯಲ್ಲಾದರ ಮೇಲೆ ರೌದ್ರವುಳ್ಳವ ನಾಗುವನು.
Eehottu kartana kade yinda tirigi hogutteerallaa? Eehottu karta nige virodhavaagi tirugi biddaaga naale aatanu israayel sabheyallaadara mele raudravullava naaguvanu.
Joshua 22:18 in English
- King James Version (KJV)
- But that ye must turn away this day from following the LORD? and it will be, [seeing] ye rebel to day against the LORD, that to morrow he will be wroth with the whole congregation of Israel.
- World English Bible (WEB)
- that you must turn away today from following the LORD? It will be, since you rebel today against the LORD, that tomorrow he will be angry with the whole congregation of Israel.
- American Standard Version (ASV)
- that ye must turn away this day from following Jehovah? and it will be, seeing ye rebel to-day against Jehovah, that to-morrow he will be wroth with the whole congregation of Israel.
- Bible in Basic English (BBE)
- That now you are turned back from the Lord? and, because you are false to him today, tomorrow his wrath will be let loose on all the people of Israel.
- Darby Translation (DBY)
- And ye turn away this day from following Jehovah; and it will be, that since ye rebel this day against Jehovah, to-morrow he will be wroth with the whole assembly of Israel.
- Webster's Bible (WBS)
- But that ye must turn away this day from following the LORD? and it will be, [seeing] ye rebel to-day against the LORD, that to-morrow he will be wroth with the whole congregation of Israel.
- Young's Literal Translation (YLT)
- that ye turn back to-day from after Jehovah? and it hath been — ye rebel to-day against Jehovah — and to-morrow against all the company of Israel He is wroth.
Read in context
- 16ಕರ್ತನ ಸಭೆಯೆಲ್ಲಾ ಹೇಳುವದೇನಂದರೆ, ನೀವು ಈ ಹೊತ್ತು ಕರ್ತನ ಕಡೆಗೆ ತಿರುಗದೆ ಆತನಿಗೆ ವಿರೋಧವಾಗಿ ತಿರುಗಿ ಬೀಳುವ ಹಾಗೆ ನಿಮಗೆ ಒಂದು ಯಜ್ಞವೇದಿ ಯನ್ನು ಕಟ್ಟಿಕೊಂಡು ಇಸ್ರಾಯೇಲ್ ದೇವರಿಗೆ ಮಾಡಿದ ಈ ಅಪರಾಧವೇನು?
- 17ಪೆಗೋರದಲ್ಲಿ ಆದ ದುಷ್ಟ ತನವು ನಮಗೆ ಅಲ್ಪವೋ? ಕರ್ತನ ಸಭೆಯ ಮೇಲೆ ವ್ಯಾಧಿ ಬಂದಾಗ್ಯೂ ಈ ದಿನದ ವರೆಗೂ ಅದರಿಂದ ನಾವು ಶುದ್ಧವಾಗಲಿಲ್ಲ.
- 18ಈಹೊತ್ತು ಕರ್ತನ ಕಡೆ ಯಿಂದ ತಿರಿಗಿ ಹೋಗುತ್ತೀರಲ್ಲಾ? ಈಹೊತ್ತು ಕರ್ತ ನಿಗೆ ವಿರೋಧವಾಗಿ ತಿರುಗಿ ಬಿದ್ದಾಗ ನಾಳೆ ಆತನು ಇಸ್ರಾಯೇಲ್ ಸಭೆಯಲ್ಲಾದರ ಮೇಲೆ ರೌದ್ರವುಳ್ಳವ ನಾಗುವನು.
- 19ನಿಮ್ಮ ಸ್ವಾಸ್ತ್ಯದ ದೇಶವು ಅಶುದ್ಧ ವಾಗಿದ್ದರೆ ಕರ್ತನ ಗುಡಾರವಿರುವ ಕರ್ತನ ಸ್ವಾಸ್ತ್ಯದ ದೇಶಕ್ಕೆ ನೀವು ದಾಟಿ ಬಂದು ನಮ್ಮ ಮಧ್ಯದಲ್ಲಿ ಸ್ವಾಸ್ತ್ಯವನ್ನು ತೆಗೆದುಕೊಳ್ಳಿರಿ. ಕರ್ತನ ಬಲಿಪೀಠದ ಹೊರತಾಗಿ ನಿಮಗೋಸ್ಕರ ಒಂದು ಬಲಿಪೀಠವನ್ನು ಕಟ್ಟಿಕೊಳ್ಳುವದರಿಂದ ನೀವು ಕರ್ತನಿಗೂ ನಮಗೂ ವಿರೋಧವಾಗಿ ತಿರುಗಿಬೀಳಬೇಡಿರಿ;
- 20ಜೆರಹನ ಮಗನಾದ ಆಕಾನನು ಶಪಿಸಲ್ಪಟ್ಟದ್ದರಲ್ಲಿ ಅಪರಾಧಮಾಡಿದಾಗ ಈ ರೌದ್ರವು ಎಲ್ಲಾ ಸಭೆಯ ಮೇಲೆ ಬಿತ್ತಲ್ಲವೋ? ಅವನು ಮಾತ್ರ ತನ್ನ ಅಪರಾಧದಲ್ಲಿ ನಾಶವಾಗಲಿಲ್ಲ ಎಂದು ಹೇಳಿದರು.
Cross references
- Numbers 16:22 ಅರಣ್ಯಕಾಂಡ 16:22ಆಗ ಅವರು ಬೋರಲು ಬಿದ್ದು--ಓ ದೇವರೇ, ಎಲ್ಲಾ ಶರೀರಾತ್ಮಗಳ ದೇವರೇ, ಒಬ್ಬ ಮನುಷ್ಯನ ಪಾಪದ ದೆಸೆಯಿಂದ ನೀನು ಸಮಸ್ತ ಸಭೆಯ ಮೇಲೆ ಕೋಪಿಸಿಕೊಳ್ಳು ತ್ತೀಯೋ ಅಂದರು.
- Joshua 22:16 ಯೆಹೋಶುವ 22:16ಕರ್ತನ ಸಭೆಯೆಲ್ಲಾ ಹೇಳುವದೇನಂದರೆ, ನೀವು ಈ ಹೊತ್ತು ಕರ್ತನ ಕಡೆಗೆ ತಿರುಗದೆ ಆತನಿಗೆ ವಿರೋಧವಾಗಿ ತಿರುಗಿ ಬೀಳುವ ಹಾಗೆ ನಿಮಗೆ ಒಂದು ಯಜ್ಞವೇದಿ ಯನ್ನು ಕಟ್ಟಿಕೊಂಡು ಇಸ್ರಾಯೇಲ್ ದೇವರಿಗೆ ಮಾಡಿದ ಈ ಅಪರಾಧವೇನು?
- Joshua 7:11 ಯೆಹೋಶುವ 7:11ಇಸ್ರಾಯೇಲ್ಯರು ಪಾಪಮಾಡಿ ನಾನು ನಿಮಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನು ವಿಾರಿದರು; ಅವರು ವಂಚನೆಮಾಡಿ ಶಾಪಕ್ಕೀಡಾದ ದ್ದರಲ್ಲಿ ಕಳವುಮಾಡಿ ತೆಗೆದುಕೊಂಡು ಅದನ್ನು ತಮ್ಮ ಸಾಮಾನುಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆ.
- Deuteronomy 7:4 ಧರ್ಮೋಪದೇಶಕಾಂಡ 7:4ಯಾಕಂದರೆ ಅವರು ಬೇರೆ ದೇವರುಗಳನ್ನು ನಿನ್ನ ಕುಮಾರರು ಸೇವಿಸುವ ಹಾಗೆ ನನ್ನಿಂದ ತೊಲಗಿಸಾರು. ಆಗ ಕರ್ತನ ಕೋಪವು ನಿಮ್ಮ ಮೇಲೆ ಉರಿಯಲು ಆತನು ನಿನ್ನನ್ನು ಬೇಗ ನಾಶಮಾಡಿಯಾನು.
- 1 Samuel 12:20 1 ಸಮುವೇಲನು 12:20ಆಗ ಸಮು ವೇಲನು ಜನರಿಗೆ--ನೀವು ಭಯಪಡಬೇಡಿರಿ. ಈ ಕೆಟ್ಟತನವನ್ನೆಲ್ಲಾ ಮಾಡಿದ್ದೀರಿ; ಆದರೂ ಕರ್ತನನ್ನು ಬಿಟ್ಟು ತಿರುಗದೆ ನಿಮ್ಮ ಪೂರ್ಣ ಹೃದಯದಿಂದ ಕರ್ತನನ್ನು ಸೇವಿಸಿರಿ. ಲಾಭಕರವಿಲ್ಲದಂಥವುಗಳನ್ನೂ ಬಿಡಿಸಲಾರದವುಗಳನ್ನೂ ವ್ಯರ್ಥವಾದವುಗಳನ್ನೂ ಅನುಸರಿಸುವದಕ್ಕೆ ಹೋಗಬೇಡಿರಿ.
- 1 Chronicles 21:14 1 ಪೂರ್ವಕಾಲವೃತ್ತಾಂತ 21:14ಹಾಗೆಯೇ ಕರ್ತನು ಇಸ್ರಾಯೇಲಿನ ಮೇಲೆ ವ್ಯಾಧಿಯನ್ನು ಕಳುಹಿಸಿದನು; ಆಗ ಇಸ್ರಾಯೇಲಿನಲ್ಲಿ ಎಪ್ಪತ್ತು ಸಾವಿರ ಜನರು ಸತ್ತುಹೋದರು.
- 2 Kings 17:21 2 ಅರಸುಗಳು 17:21ಅವನು ಇಸ್ರಾಯೇಲನ್ನು ದಾವೀದನ ಮನೆಯಿಂದ ಹರಿದುಬಿಟ್ಟನು; ಅವರು ನೆಬಾಟನ ಮಗನಾದ ಯಾರೊಬ್ಬಾಮನನ್ನು ಅರಸನನ್ನಾಗಿ ಮಾಡಿಕೊಂಡರು. ಆಗ ಯಾರೊಬ್ಬಾಮನು ಇಸ್ರಾಯೇಲ್ಯರನ್ನು ಕರ್ತ ನನ್ನು ಹಿಂಬಾಲಿಸುವದರಿಂದ ತಪ್ಪಿಸಿ ಅವರನ್ನು ಮಹಾ ಪಾಪಮಾಡಲು ಪ್ರೇರೇಪಿಸಿದನು.
- Ezra 9:13–14 ಎಜ್ರನು 9:13–14ನಮ್ಮ ದುಷ್ಕರ್ಮಗಳಿಗೋಸ್ಕರವೂ ನಮ್ಮ ಮಹಾ ಅಪರಾಧಕ್ಕೋಸ್ಕರವೂ ನಮ್ಮ ಮೇಲೆ ಬಂದದ್ದೆಲ್ಲ ಬಂದ ತರುವಾಯ ನಮ್ಮ ದೇವರಾಗಿರುವ ನೀನು ನಮ್ಮ ಅಕ್ರಮಗಳಿಗೆ ತಕ್ಕಹಾಗೆ ನಮ್ಮನ್ನು ಶಿಕ್ಷಿಸದೆ ಈಗ ಇರುವ ಪ್ರಕಾರ ನಮಗೆ ವಿಮೋಚನೆಯನ್ನು ಕೊಟ್ಟ ತರುವಾಯ ನಾವು ತಿರಿಗಿ ನಿನ್ನ ಆಜ್ಞೆಗಳನ್ನು ವಿಾರಿ ಈ ಅಸಹ್ಯವಾದವುಗಳನ್ನು ಮಾಡುವ ಜನರ ಸಂಗಡ ಬಂಧುತ್ವ ಮಾಡಬಹುದೋ? ಹಾಗಾದರೆ ಉಳಿದವರೂ ತಪ್ಪಿಸಿಕೊಂಡವರೂ ಇಲ್ಲದೆ ಇರುವ ಹಾಗೆ ಹಾಳಾಗುವ ವರೆಗೂ ನೀನು ನಮ್ಮ ಮೇಲೆ ಕೋಪಮಾಡುವದಿಲ್ಲವೋ?ಇಸ್ರಾಯೇಲ್ ದೇವ ರಾಗಿರುವ ಕರ್ತನೇ, ನೀನು ನೀತಿವಂತನಾಗಿದ್ದೀ; ಇಂದಿನ ಪ್ರಕಾರ ನಾವು ತಪ್ಪಿಸಿಕೊಂಡವರಾಗಿ ಉಳಿ ದಿದ್ದೇವೆ. ಇಗೋ, ನಾವು ನಿನ್ನ ಮುಂದೆ ನಮ್ಮ ಅಪರಾಧಗಳಲ್ಲಿದ್ದೇವೆ. ಇದರ ನಿಮಿತ್ತವಾಗಿ ನಿನ್ನ ಮುಂದೆ ನಿಲ್ಲಲಾರದವರಾಗಿದ್ದೇವೆ.
- 1 Samuel 12:14 1 ಸಮುವೇಲನು 12:14ನೀವು ಕರ್ತನ ಮಾತಿಗೆ ವಿರೋಧವಾಗಿ ತಿರುಗಿ ಬೀಳದೆ ಕರ್ತನಿಗೆ ಭಯಪಟ್ಟು ಆತನನ್ನು ಸೇವಿಸಿ ಆತನ ಮಾತಿಗೆ ವಿಧೇಯರಾದರೆ ನೀವೂ ನಿಮ್ಮ ಮೇಲೆ ಆಳುವ ಅರಸನೂ ನಿಮ್ಮ ದೇವರಾದ ಕರ್ತನನ್ನು ತಪ್ಪದೆ ಹಿಂಬಾಲಿಸುವಿರಿ.
- Joshua 7:1 ಯೆಹೋಶುವ 7:1ಯೆಹೂದ ಗೋತ್ರದ ಜೆರಹನ ಮಗನಾದ ಜಬ್ದೀಯ ಮಗನಾದ ಕರ್ವಿಾಯ ಮಗನಾದ ಆಕಾನನು ಶಾಪಕ್ಕೀಡಾದದ್ದರಲ್ಲಿ ಕೆಲವನ್ನು ತೆಗೆದುಕೊಂಡನು. ಈ ಕಾರಣದಿಂದ ಇಸ್ರಾಯೇಲ್ ಮಕ್ಕಳು ಶಾಪಕ್ಕೀಡಾದವರಲ್ಲಿ ಅಪರಾಧಿಗಳಾದರು. ಆದದರಿಂದ ಕರ್ತನ ಕೋಪವು ಇಸ್ರಾಯೇಲ್ ಮಕ್ಕಳ ಮೇಲೆ ಉರಿಯಹತ್ತಿತ್ತು.
- Joshua 22:20 ಯೆಹೋಶುವ 22:20ಜೆರಹನ ಮಗನಾದ ಆಕಾನನು ಶಪಿಸಲ್ಪಟ್ಟದ್ದರಲ್ಲಿ ಅಪರಾಧಮಾಡಿದಾಗ ಈ ರೌದ್ರವು ಎಲ್ಲಾ ಸಭೆಯ ಮೇಲೆ ಬಿತ್ತಲ್ಲವೋ? ಅವನು ಮಾತ್ರ ತನ್ನ ಅಪರಾಧದಲ್ಲಿ ನಾಶವಾಗಲಿಲ್ಲ ಎಂದು ಹೇಳಿದರು.
- 2 Chronicles 34:33 2 ಪೂರ್ವಕಾಲವೃತ್ತಾಂತ 34:33ಹೀಗೆಯೇ ಯೋಷೀಯನು ಇಸ್ರಾಯೇಲ್ ಮಕ್ಕಳಿಗೆ ಇದ್ದ ಎಲ್ಲಾ ದೇಶಗಳೊಳಗಿಂದ ಸಮಸ್ತ ಅಸಹ್ಯಗಳನ್ನು ತೆಗೆದು ಹಾಕಿ ಇಸ್ರಾಯೇಲಿನಲ್ಲಿ ಉಳಿದಿರುವರೆಲ್ಲರೂ ತಮ್ಮ ದೇವರಾದ ಕರ್ತನನ್ನು ಸೇವಿಸುವ ಹಾಗೆ ಮಾಡಿದನು. ಅವನ ದಿವಸಗಳೆಲ್ಲಾ ಅವರು ತಮ್ಮ ಪಿತೃಗಳ ದೇವ ರಾದ ಕರ್ತನನ್ನು ಹಿಂಬಾಲಿಸುವದನ್ನು ಬಿಡದೆ ಇದ್ದರು.